ಆಕ್ಟ್ 1978ಗೆ ಬಹುಪರಾಕ್ ಹೇಳಿದ ಕಿಚ್ಚ! ಚಿತ್ರಕ್ಕೆ ಸಿಗುವ ರೆಸ್ಪಾನ್ಸ್ ಮೇಲೆ ಸ್ಯಾಂಡಲ್ ವುಡ್ ಕಣ್ಣು

ಆಕ್ಟ್ 1978 ಸಿನಿಮಾ ಮೂಲಕ ಹೊಸ ಸಿನಿಮಾ, ಯಾವುದೇ ಫ್ಲಾಟ್ ಫಾರಂನಲ್ಲಿ ದೊರೆಯದ ಎಕ್ಸ್ ಕ್ಲೂಸಿವ್ ಆಗಿ ಥಿಯೇಟರ್ ನಲ್ಲಿ‌ ಮಾತ್ರ ಕಣ್ತುಂಬಿಕೊಳ್ಳಬಹುದಾದ ಸಿನಿಮಾ ಬರುತ್ತಿದೆ. ಈಗಾಗಲೇ ಒಂದು ವರ್ಗದ ಆಡಿಯೆನ್ಸ್ ಈ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದು, ಅವರೆಲ್ಲರೂ ಚಿತ್ರಮಂದಿರಕ್ಕೆ ಬರ್ತಾರಾ? ಮತ್ತೆ ಆ ವೈಭವವನ್ನು ಮರುಕಳಿಸುವಂತೆ ಮಾಡ್ತಾರಾ ಎಂಬ ಆಸೆ ಆಕಾಂಕ್ಷೆ, ಕುತೂಹಲದಲ್ಲಿ ಇಡೀ ಕನ್ನಡ ಚಿತ್ರೋದ್ಯಮವಿದೆ.

ಆ್ಯಕ್ಟ್ 1978 ಸಿನಿಮಾದ ಪೋಸ್ಟರ್.

ಆ್ಯಕ್ಟ್ 1978 ಸಿನಿಮಾದ ಪೋಸ್ಟರ್.

  • Share this:
ಬೆಂಗಳೂರು; ಕೊರೋನಾ ಕಾರಣದಿಂದ ಬಂದ್ ಆಗಿದ್ದ ಚಿತ್ರಮಂದಿರಗಳ ಮರುಆರಂಭಕ್ಕೆ ಸರ್ಕಾರ ಅನುಮತಿ ಕೊಟ್ಟು ಎರಡು ತಿಂಗಳೇ ಆಗುತ್ತಿದೆ. ಆದರೂ ಚಿತ್ರರಂಗದಲ್ಲಿ ಹಳೇ ಉತ್ಸಾಹ ಕಾಣಿಸಿಲ್ಲ. ಕೊರೋನಾ ಮುಂಚಿನ ವೈಭವ ಮರುಕಳಿಸಿರಲಿಲ್ಲ. ಈಗ ಮತ್ತೆ ಅದೇ ಉತ್ಸಾಹ, ಅದೇ ಹುಮ್ಮಸ್ಸು ಕನ್ನಡ ಚಿತ್ರರಂಗಕ್ಕೆ ಆಕ್ಟ್ 1978 ಮೂಲಕ ಮರುಕಳಿಸುವ ವಿಶ್ವಾಸದಲ್ಲಿದೆ ಚಿತ್ರರಂಗ.

ಹೌದು, ಕೊರೋನಾ ನಂತರ ಮೊದಲ ಬಾರಿಗೆ ರಿಲೀಸ್ ಆಗಲಿರುವ ಸಿನಿಮಾ ಆಕ್ಟ್ 1978 ಮೇಲೆ ಸಾಕಷ್ಟು ನಿರೀಕ್ಷೆ, ಕುತೂಹಲ ಮೂಡಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ ಈ ಸಿನಿಮಾ ನವಂಬರ್ 20 ರಂದು ರಾಜ್ಯದಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾಗೆ ಸಿಗುವ ರೆಸ್ಪಾನ್ಸ್ ಮೇಲೆ ಚಿತ್ರರಂಗದ ಭರವಸೆ, ಭವಿಷ್ಯ ನಿಂತಿದೆ.

ಏಕೆಂದರೆ ಈ ಎರಡು ತಿಂಗಳಲ್ಲಿ ಯಾವುದೇ ಹೊಸ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಈಗಾಗಲೇ ರಿಲೀಸ್ ಆಗಿ, ಟಿವಿ, ಓಟಿಟಿ ಫ್ಲಾಟ್ ಫಾರಂನಲ್ಲಿ ದೊರೆಯುವಂತಹ ಸಿನಿಮಾಗಳೇ ರಿ-ರಿಲೀಸ್ ಆಗಿದ್ವು. ಹೀಗಾಗಿ ನೋಡಿರುವ ಸಿನಿಮಾಗಳನ್ನು ಮತ್ತೆ ನೋಡೋ ಆಸಕ್ತಿಯನ್ನು ಪ್ರೇಕ್ಷಕರು ತೋರಿಸಿರಲಿಲ್ಲ.

ಸರ್ಕಾರ ಪ್ರತಿ ಚಿತ್ರಮಂದಿರದಲ್ಲಿ ಶೇಕಡಾ 50ರಷ್ಟು ಮಾತ್ರ ಪ್ರವೇಶಕ್ಕೆ ಅನುಮತಿ ನೀಡಿದೆ.. ಅದರಂತೆ ಸಾವಿರ ಸೀಟ್ ಇರುವ ಕಡೆ 500 ಜನ ಸಿನಿಮಾ ನೋಡಬಹುದು. ಆದರೆ ಕಳೆದ ಎರಡು ತಿಂಗಳಲ್ಲಿ ವಾರವಿಡೀ ಲೆಕ್ಕ ಹಾಕಿದರೂ ಚಿತ್ರಮಂದಿರವೊಂದರಲ್ಲಿ 500 ಜನ ಸಿನಿಮಾ ವೀಕ್ಷಿಸಿದ ಉದಾಹರಣೆ ಸಿಕ್ಕಿಲ್ಲ. ಶೋ ಒಂದಕ್ಕೆ 3 ಜನ, 4ಜನ 10 ಜನ ಹೀಗೆ ಬಂದು ಸಿನಿಮಾ ನೋಡುತ್ತಿದ್ದರು. ಇದು‌ ಚಿತ್ರೋದ್ಯಮಿಗಳ ನಿದ್ದೆಗೆಡಿಸಿತ್ತು.

ಇದನ್ನು ಓದಿ: Sanjay Dutt: ಕೆಜಿಎಫ್​ ಚಾಪ್ಟರ್​ 2 ಅಡ್ಡಾಗೆ ಬಿ-ಟೌನ್ ​ಖಳನಾಯಕ ಸಂಜಯ್​ ದತ್​ ಎಂಟ್ರಿ..!

ಈಗ ಆಕ್ಟ್ 1978 ಸಿನಿಮಾ ಮೂಲಕ ಹೊಸ ಸಿನಿಮಾ, ಯಾವುದೇ ಫ್ಲಾಟ್ ಫಾರಂನಲ್ಲಿ ದೊರೆಯದ ಎಕ್ಸ್ ಕ್ಲೂಸಿವ್ ಆಗಿ ಥಿಯೇಟರ್ ನಲ್ಲಿ‌ ಮಾತ್ರ ಕಣ್ತುಂಬಿಕೊಳ್ಳಬಹುದಾದ ಸಿನಿಮಾ ಬರುತ್ತಿದೆ. ಈಗಾಗಲೇ ಒಂದು ವರ್ಗದ ಆಡಿಯೆನ್ಸ್ ಈ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದು, ಅವರೆಲ್ಲರೂ ಚಿತ್ರಮಂದಿರಕ್ಕೆ ಬರ್ತಾರಾ? ಮತ್ತೆ ಆ ವೈಭವವನ್ನು ಮರುಕಳಿಸುವಂತೆ ಮಾಡ್ತಾರಾ ಎಂಬ ಆಸೆ ಆಕಾಂಕ್ಷೆ, ಕುತೂಹಲದಲ್ಲಿ ಇಡೀ ಕನ್ನಡ ಚಿತ್ರೋದ್ಯಮವಿದೆ.ಅಂದ ಹಾಗೆ ಶುಕ್ರವಾರ ರಿಲೀಸ್ ಆಗಲಿರುವ ಈ ಸಿನಿಮಾವನ್ನು ಇಂದು ಸಂಜೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡಿ ಕಣ್ತುಂಬಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೇ ಕಿಚ್ಚ ಸುದೀಪ್ ಆಕ್ಟ್ 1978 ನೋಡಿ ಖುಷ್ ಆಗಿದ್ದು, ಟ್ವೀಟ್ ಮೂಲಕ ಬಹುಪರಾಕ್ ಹೇಳಿದ್ದಾರೆ. ಹೀಗಾಗಿ ಒಂದು ಮಟ್ಟಕ್ಕೆ ಗೆದ್ದ ಖುಷಿಯಲ್ಲಿ ಚಿತ್ರತಂಡವಿದ್ದರೆ, ಚಿತ್ರರಂಗ ನಾಳಿನ ಮೊದಲ ಪ್ರದರ್ಶನದ ಮೇಲೆ‌ ಕಣ್ಣಿಟ್ಟಿದೆ.
Published by:HR Ramesh
First published: