ಬೆಕ್ಕಿಗೆ ಗಂಟೆ ಕಟ್ಟಿದ ಮಂಸೋರೆ; ಥಿಯೇಟರ್ನಲ್ಲಿ ಭಾರೀ ಪ್ರದರ್ಶನ ಕಾಣುತ್ತಿರುವ Act 1978 ಸಿನಿಮಾ
Act 1978: ಮೊದಲ ದಿನಕ್ಕೆ ಹೋಲಿಸಿದರೆ 3ನೇ ದಿನದ ಹೊತ್ತಿಗೆ ಅದ್ಭುತ ಪಿಕಪ್ ಪಡೆದುಕೊಂಡಿದೆಯಂತೆ ಆಕ್ಟ್ 1978.
news18-kannada Updated:November 24, 2020, 4:52 PM IST

ಆ್ಯಕ್ಟ್ 1978 ಸಿನಿಮಾದ ಪೋಸ್ಟರ್.
- News18 Kannada
- Last Updated: November 24, 2020, 4:52 PM IST
ಕೊರೋನಾ ಲಾಕ್ನ್ಡೌನ್ ಮುಗಿದು, ಥಿಯೇಟರ್ ಗಳು ರಿ-ಓಪನ್ ಆಗಿ ಎರಡು ತಿಂಗಳ ಮೇಲೆ ಆಗಿತ್ತು. ಆದರೆ ಸಿನಿಮಾರಂಗ ಮಾತ್ರ, ಮೊದಲಿನ ಸ್ಥಿತಿಗೆ ಮರಳಿರಲಿಲ್ಲ. ಥಿಯೇಟರ್ ಗಳಲ್ಲಿ ಹೊಸ ಸಿನಿಮಾ ರಿಲೀಸ್ ಮಾಡೋ ಸಾಹಸ ಮಾಡಿರಲಿಲ್ಲ. ಅದರಲ್ಲೂ 30 ಕೋಟಿ, 40 ಕೋಟಿ ಖರ್ಚು ಮಾಡಿರೋರೆಲ್ಲಾ ಇನ್ನೂ ಮೂರು-ನಾಲ್ಕು ತಿಂಗಳು ರಿಲೀಸ್ ಮಾತೇ ಇಲ್ಲ ಅಂತ ಸುಮ್ಮನಾಗಿದ್ರು. ಇಂತಹ ಸಮಯದಲ್ಲಿ ಬೆಕ್ಕಿಗೆ ಗಂಟೆ ಕಟ್ಟೋರು ಯಾರು ಎಂಬಂತೆ ಯಾರು ಮುಂದೆ ಬರ್ತಾರೆ? ಸಿನಿಮಾ ರಿಲೀಸ್ ಮಾಡುತ್ತಾರೆ ಎಂಬ ಕುತೂಹಲ ಇತ್ತು. ಈಗ ಅದಕ್ಕೆಲ್ಲಾ ಉತ್ತರ ಸಿಕ್ಕಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ಬೆಕ್ಕಿಗೆ ಗಂಟೆ ಕಟ್ಟಿದ್ದಾರೆ. ಯೆಸ್ ಮಂಸೋರೆ, ತಮ್ಮ ನಿರ್ದೇಶನದ ಆಕ್ಟ್ 1978 ಚಿತ್ರವನ್ನು ಬಹಳ ಧೈರ್ಯ ಮಾಡಿ ಥಿಯೇಟರ್ ನಲ್ಲಿ ಕಳೆದ ಶುಕ್ರವಾರ ರಿಲೀಸ್ ಮಾಡಿದ್ದಾರೆ. ಬಜೆಟ್, ಸ್ಟಾರ್ ಸ್ಟೇಟಸ್ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಕೇವಲ ಕಂಟೆಂಟ್ ನಂಬಿ ಸಾಹಸಕ್ಕಿಳಿದ ಮಂಸೋರೆ ಸಾಹಸಕ್ಕೆ ಚಿತ್ರೋದ್ಯಮ ಸಲಾಮ್ ಅಂತಿದೆ. ಚಿತ್ರರಸಿಕರು ಸಹ ಉತ್ಸಾಹದಿ ಸಿನಿಮಾ ಮಂದಿರಕ್ಕೆ ಬರೋ ಮೂಲಕ ಜೈ ಅಂತಿದ್ದಾರೆ. ಅಂದಹಾಗೆ, ಮೊದಲಿಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮೂಲಕ ಪವರ್ ಫುಲ್ ಬೆಂಬಲ ಸಿಕ್ತು. ಆ ನಂತರ ಶಿವರಾಜ್ ಕುಮಾರ್ ಒಂದು ಹಾಡು ರಿಲೀಸ್ ಮಾಡಿ ಶುಭ ಹಾರೈಸಿದರು. ಹಾಗೆ ಕಿಚ್ಚ ಸುದೀಪ್ ಸಿನಿಮಾ ರಿಲೀಸ್ ಗೆ ಎರಡು ದಿನಗಳಿರುವಾಗ ಸಿನಿಮಾ ನೋಡಿ ಶಹಬಾಸ್ ಗಿರಿ ಕೊಟ್ಟರು. ಸಾಮಾಜಿಕ ಜಾಲತಾಣದಲ್ಲಿ ಮುಕ್ತ ಕಂಠದಿಂದ ಹೊಗಳಿ ಚಿತ್ರದ ಬಗ್ಗೆ ಬರೆದು ಪೋಸ್ಟ್ ಮಾಡಿದ್ದರು. ಈಗ ದರ್ಶನ್ ಸಹ ಚಿತ್ರತಂಡವನ್ನ ಮನೆಗೆ ಕರೆಸಿಕೊಂಡು ಚಿತ್ರದ ಬಗ್ಗೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.

ಇನ್ನು ಮೊದಲ ದಿನಕ್ಕೆ ಹೋಲಿಸಿದರೆ 3ನೇ ದಿನದ ಹೊತ್ತಿಗೆ ಅದ್ಭುತ ಪಿಕಪ್ ಪಡೆದುಕೊಂಡಿದೆಯಂತೆ ಆಕ್ಟ್ 1978. ನಾಲ್ಕನೇ ದಿನವೂ ಸಹ ಕಲೆಕ್ಷನ್ ನಲ್ಲಿ ಡ್ರಾಪ್ ಆಗಿಲ್ಲ ಎಂಬುದು ನಿರ್ದೇಶಕ, ನಿರ್ಮಾಪಕ, ವಿತರಕರ ಹಾದಿಯಾಗಿ ಇಡೀ ಚಿತ್ರತಂಡ ಹೇಳುತ್ತಿರುವ ಮಾತಾಗಿದೆ.
ಸರ್ಕಾರದ ಕೆಲಸ ದೇವರ ಕೆಲಸ ಅಂತ ಬೋರ್ಡ್ ಹಾಕೊಂಡಿರುವ ಸರ್ಕಾರಿ ಕಛೇರಿಯಲ್ಲಿ ನಡೆಯುವ ಅವ್ಯವಸ್ಥೆ, ಭ್ರಷ್ಟಾಚಾರದ ವಿರುದ್ಧ ಹೆಣ್ಣುಮಗಳೊಬ್ಬಳು ಸಿಡಿದೇಳುವ ಕಥೆಗೆ ಪ್ರತಿಯೊಬ್ಬರು ಫಿದಾ ಆಗಿದ್ದಾರೆ. ಇದು ಪ್ರತಿಯೊಬ್ಬರ ಕಥೆ ಅಂತ ಹೇಳಿಕೊಂಡು ಥಿಯೇಟರ್ ನಿಂದ ಹೊರ ಬರ್ತಿದ್ದಾರೆ. ಹೀಗಾಗಿ ಕನ್ನಡ ಚಿತ್ರರಂಗ ಮಾತ್ರವಲ್ಲ, ತಮಿಳು, ಹಿಂದಿ, ತೆಲುಗು ಎಲ್ಲಾ ಚಿತ್ರರಂಗಕ್ಕೂ ಹೊಸ ಭರವಸೆಯಂತೆ ಕಂಡಿದೆ ಆಕ್ಟ್ 1978ನ ಗೆಲುವು.
ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ಬೆಕ್ಕಿಗೆ ಗಂಟೆ ಕಟ್ಟಿದ್ದಾರೆ. ಯೆಸ್ ಮಂಸೋರೆ, ತಮ್ಮ ನಿರ್ದೇಶನದ ಆಕ್ಟ್ 1978 ಚಿತ್ರವನ್ನು ಬಹಳ ಧೈರ್ಯ ಮಾಡಿ ಥಿಯೇಟರ್ ನಲ್ಲಿ ಕಳೆದ ಶುಕ್ರವಾರ ರಿಲೀಸ್ ಮಾಡಿದ್ದಾರೆ. ಬಜೆಟ್, ಸ್ಟಾರ್ ಸ್ಟೇಟಸ್ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಕೇವಲ ಕಂಟೆಂಟ್ ನಂಬಿ ಸಾಹಸಕ್ಕಿಳಿದ ಮಂಸೋರೆ ಸಾಹಸಕ್ಕೆ ಚಿತ್ರೋದ್ಯಮ ಸಲಾಮ್ ಅಂತಿದೆ. ಚಿತ್ರರಸಿಕರು ಸಹ ಉತ್ಸಾಹದಿ ಸಿನಿಮಾ ಮಂದಿರಕ್ಕೆ ಬರೋ ಮೂಲಕ ಜೈ ಅಂತಿದ್ದಾರೆ.

ಮಂಸೋರೆ ನಿರ್ದೇಶನದ ಆಕ್ಟ್ 1978