Yatharv Video: ಮಗನ ಮುದ್ದಾದ ವಿಡಿಯೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್​..!

ಮಕ್ಕಳ ಜೊತೆಗೆ ಹೇಗೆ ನಮ್ಮ ಅಭ್ಯಾಸಗಳು, ಆಸಕ್ತಿ ವಿಷಯಗಳು ಬದಲಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ರಾಧಿಕಾ ಪಂಡಿತ್​ ಇಂದು ಹಂಚಿಕೊಂಡಿರುವ ಈ ವಿಡಿಯೋ. ಮಗ ಯಥರ್ವ್​ ಹಾಗೂ ಆಯ್ರಾ ಅವರು ಸಂಗೀತಕ್ಕೆ ಹೆಜ್ಜೆ ಹಾಕುವ ವಿಡಿಯೋ ಇದಾಗಿದೆ. 

ಯಥರ್ವ್​ ಹೊಸ ವಿಡಿಯೋ

ಯಥರ್ವ್​ ಹೊಸ ವಿಡಿಯೋ

  • Share this:
ಬಹಳ ಸಮಯದಿಂದ ಸಿನಿಮಾದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ನಟಿ  ರಾಧಿಕಾ ಪಂಡಿತ್ (Radhika Pandit)​ ಈಗ ಸಂಪೂರ್ಣವಾಗಿ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಅವರಿಗಾಗಿಯೇ ತಮ್ಮ ಸಮಯವನ್ನೆಲ್ಲ ಮೀಸಲಿಟ್ಟಿದ್ದಾರೆ. ಆಯ್ರಾ (Ayra) ಹಾಗೂ ಯಥರ್ವ್​ರ (Yatharv) ಮುದ್ದು ಆಟಗಳು, ತೊದಲ ನುಡಿಯ ಜೊತೆ ಕೇಳುತ್ತಾ ಕಾಲ ಕಳೆಯುವ ಅವರು, ಕೆಲವು ವಿಶೇಷ ವಿಡಿಯೋಗಳನ್ನು ಕೂಡ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ವಿಡಿಯೋ ಮತ್ತು ಪೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ, ಅಭಿಮಾನಿಗಳ ಮೆಚ್ಚುಗೆ ಪಡೆಯುತ್ತರುತ್ತವೆ. ಈ ಬಾರಿ ನಟಿ ರಾಧಿಕಾ ಪಂಡಿತ್​, ಮಕ್ಕಳ ಜೊತೆ ಹೇಗೆ ತಮ್ಮ ದಿನ ಪ್ರಾರಂಭವಾಗುತ್ತದೆ ಎಂಬ ಮುದ್ದಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಮಕ್ಕಳ ಜೊತೆಗೆ ಹೇಗೆ ನಮ್ಮ ಅಭ್ಯಾಸಗಳು, ಆಸಕ್ತಿ ವಿಷಯಗಳು ಬದಲಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ರಾಧಿಕಾ ಪಂಡಿತ್​ ಇಂದು ಹಂಚಿಕೊಂಡಿರುವ ಈ ವಿಡಿಯೋ. ಮಗ ಯಥರ್ವ್​ ಹಾಗೂ ಆಯ್ರಾ ಅವರು ಸಂಗೀತಕ್ಕೆ ಹೆಜ್ಜೆ ಹಾಕುವ ವಿಡಿಯೋ ಇದಾಗಿದೆ. ಬೇಬಿ ಶಾರ್ಕ್ ಡೂ ಡೂ ಡೂ ಹಾಡಿಗೆ ಆಯ್ರಾ ಯಥರ್ವ್​ ಕುಣಿದಿದ್ದಾರೆ. ವಿಶೇಷ ಎಂದರೆ ಕಳೆದೆರಡು ವರ್ಷಗಳಿಂದಾಗಿ ಇದೇ ಹಾಡು ನಮ್ಮ ಬಾಯಲ್ಲಿ ಗುನುಗುತ್ತಿದ್ದು, ಇದೇ ಅಭ್ಯಾಸವಾಗಿದೆ ಎಂದಿದ್ದಾರೆ ರಾಮಚಾರಿ ಬೆಡಗಿ.




ಈ ವಿಡಿಯೋ ಅಭಿಮಾನಿಗಳ ಮನಸೆಳೆದಿದ್ದು, ಆಯ್ರಾ  ಬ್ರದರ್​​ ಶಾರ್ಕ್​ ಡೂ ಡೂ ಡೂ ಎನ್ನುವ ಸಾಲು ಮೆಚ್ಚುಗೆ ಪಡೆದಿದೆ. ಈ ಹಿಂದೆ ಕೂಡ ತಮ್ಮ ತಂದೆಯವರ ಭೀಮ್​ ಸೇನ್​ ಜೋಶಿ ಹಾಡಿಗೆ ಮಗ ಹೇಗೆ ದನಿಯಾಗುತ್ತಿದ್ದಾನೆ ಎಂಬ ವಿಡಿಯೋವನ್ನು ನಟಿ ರಾಧಿಕಾ ಹಂಚಿಕೊಂಡಿದ್ದರು.

ಇದನ್ನೂ ಓದಿ: ಮತ್ತೊಂದು ವೆಬ್​ ಸರಣಿಯಲ್ಲಿ ಸಿಂಧೂ ಲೋಕನಾಥ್​: ರಾ ಏಜೆಂಟ್​ ಪಾತ್ರದಲ್ಲಿ ರಂಜಿಸಲಿರುವ ನಟಿ..!

ಮಕ್ಕಳ ಜೊತೆ ಮನೆಯಲ್ಲೇ ಇರುವ ಸ್ಯಾಂಡಲ್​ವುಡ್​ ಸಿಂಡ್ರೆಲಾಗೆ ವಾರಾಂತ್ಯ ಬಂದತೆಂದರೆ ನಿಜಕ್ಕೂ ಖುಷಿ. ಸೋಮವಾರದಿಂದಲೇ ವಾರಾಂತ್ಯಕ್ಕಾಗಿ ಕಾಯುತ್ತಿರುತ್ತಾರಂತೆ. ಒದು ಕಡೆ ಕೋವಿಡ್​, ಮತ್ತೊಂದುಕಡೆ ಮಕ್ಕಳ ಜವಾಬ್ಸಾರಿ, ಈ ಎರಡರ ನಡುವೆ ರಾಧಿಕಾ ಮನೆಯಿಂದ ಹೆಚ್ಚಾಗಿ ಹೊರ ಬರಲು ಆಗುತ್ತಿಲ್ಲ. ಅದಕ್ಕಾಗಿಯೇ ಅವರು ಶುಕ್ರವಾರ ಬಂದ ಕೂಡಲೇ ರೆಕ್ಕಿ ಬಿಚ್ಚಿ ಹಾರುವ ಹಕ್ಕಿಯಂತೆ ಸಂತೋಷ ಪಡುತ್ತಾರೆ. ಕಳೆದ ಶುಕ್ರವಾರ ವಾರಾಂತ್ಯದ ಸಂತಸವನ್ನು ಒಂದು ಈ ಪೋಸ್ಟ್​ ಮಾಡುವ ಮೂಲಕ ವ್ಯಕ್ತಪಡಿಸಿದ್ದರು ರಾಧಿಕಾ ಪಂಡಿತ್​.






ಇನ್ನು ರಾಧಿಕಾ ಪಂಡಿತ್​ ಅವರು ಇತ್ತೀಚೆಗಷ್ಟೆ ತಮ್ಮ ಹೊಸ ಮನೆಗೆ ಶಿಫ್ಟ್​ ಆಗಿದ್ದಾರೆ. ರೇಸ್​ಕೋರ್ಸ್​ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್​ ಅಪಾರ್ಟ್​ಮೆಂಟ್​ನಲ್ಲಿ ಯಶ್​ ಈ ಹಿಂದೆಯೇ ಮನೆ ಖರೀದಿಸಿದ್ದರು. ಈ ಐಷಾರಾಮಿ ಅಪಾರ್ಟ್​ಮೆಂಟಿನಲ್ಲಿ ಇಂಟಿರಿಯರ್ ಕೆಲಸಗಳು ನಡೆಯುತ್ತಿದ್ದವು. ಹೀಗಾಗಿ ಕೆಲಸಗಳು ಮುಗಿದ ನಂತರ ಜುಲೈ 1ರಂದು ರಾಕಿಂಗ್​ ದಂಪತಿ ಯಶ್​ ಹಾಗೂ ರಾಧಿಕಾ ಪಂಡಿತ್​ ಅವರು ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದರು. ತಮ್ಮ ಕುಟುಂಬದವರು ಹಾಗೂ ಕೆಲವೇ ಕೆಲವು ಆತ್ಮೀಯರ ಸಮ್ಮುಖದಲ್ಲಿ ಪೂಜೆ ಮಾಡಿ, ಮನೆಗೆ ಕಾಲಿಟ್ಟಿದ್ದರು ಯಶ್​-ರಾಧಿಕಾ. ಇನ್ನುಇದೇ ಅಪಾರ್ಟ್​ಮೆಂಟ್​ನಲ್ಲಿ ಅಂಬರೀಷ್​ ಅವರ ಮನೆ ಸಹ ಇದೆಯಂತೆ.

ಇದನ್ನೂ ಓದಿ: Viral Song Manike Mage Hithe.. ಒರಿಜಿನಲ್ ಹಾಡು ನೋಡಿದ್ದೀರಾ: ಹಾಡಿದವರು ಯಾರು ಗೊತ್ತಾ..?

ರಕ್ಷಾ ಬಂಧನ ಹಾಗೂ ಕೃಷ್ಣ ಜನ್ಮಾಷ್ಟಮಿಯಂದು ರಾಧಿಕಾ ಪಂಡಿತ್ ತಮ್ಮ ಮಕ್ಕಳ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಚಿತ್ರಗಳಿಗೆ ನೆಟ್ಟಿಗರಿಗೆ ಮೆಚ್ಚುಗೆ ಸಹ ವ್ಯಕ್ತವಾಗಿತ್ತು.
Published by:Anitha E
First published: