'ಮೆಗಾಸ್ಟಾರ್' ಚಿರಂಜೀವಿ (Chiranjeevi) , ರಾಮ್ ಚರಣ್ (Ram Charan) , ಪೂಜಾ ಹೆಗ್ಡೆ (Pooja Hegde) ನಟನೆಯ 'ಆಚಾರ್ಯ' (Acharya) ಸಿನಿಮಾ ರಿಲೀಸ್ ಆಗಿದ್ದು, ಈ ಚಿತ್ರ ನೋಡಿದವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಅಭಿಮಾನಿಗಳು. ಮಗಧೀರ ಸಿನಿಮಾದಲ್ಲಿ ಅಪ್ಪ ಚಿರಂಜೀವಿ ಹಾಗೂ ಮಗ ರಾಮ್ಚರಣ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಆಚಾರ್ಯ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ ಅನ್ನುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ ಆಗಿದ್ದರು. ಇದೀಗ ಈ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ರಾತ್ರಿಯಿದಲೇ ಹಲವೆಡೆ ಫ್ಯಾನ್ಸ್ ಶೋ (Fan Show) ನಡೆದಿದೆ. ರಾತ್ರಿಯಿಂದಲೇ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ ಅಭಿಮಾನಿಗಳು ಸಿನಿಮಾ ನೋಡಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಿಗ್ ಬಜೆಟ್ ಆಚಾರ್ಯ ಸಿನಿಮಾ ಹೇಗಿದೆ?
'ಆಚಾರ್ಯ' ಚಿತ್ರವು ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಆಗಿದ್ದು, ಸಾಮಾಜಿಕ ಸಂದೇಶವಿದೆ.ನಿಜ ಜೀವನದ ತಂದೆ-ಮಗನಾದ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ ಕಾಂಬಿನೇಶನ್ನಲ್ಲಿ ಮೂಡಿಬಂದ ಸಿನಿಮಾ ಇದಾಗಿದೆ. ರಾಮ್ ಚರಣ್ ಅವರ 'ಮಗಧೀರ' ಚಿತ್ರದ ಒಂದು ಹಾಡಿನಲ್ಲಿ ಚಿರು ಕಾಣಿಸಿಕೊಂಡಿದ್ದರು. ಆಚಾರ್ಯ ಸಿನಿಮಾದ ಮೊದಲ ಭಾಗ ಅಷ್ಟೊಂದು ಚೆನ್ನಾಗಿಲ್ಲ, ಎರಡನೇ ಭಾಗ ಔಟ್ಡೇಟೆಡ್ ಆಗಿದೆ ಎಂದು ಸಿನಿಮಾ ನೋಡಿದ ವೀಕ್ಷಕರು ಹೇಳುತ್ತಿದ್ದಾರೆ. ಕೆಲ ದೃಶ್ಯಗಳು ಮಾತ್ರ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ.
ಕಮಾಲ್ ಮಾಡಿಲ್ಲ ಅಪ್ಪ-ಮಗನ ಕಾಂಬೋ!
ಪೂಜಾ ಹೆಗಡೆ ಸಿನಿಮಾದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಮೊದಲ ಭಾಗ ಆರ್ಡಿನರಿಯಾಗಿದೆ, 2ನೇ ಭಾಗ ಅಭಿಮಾನಿಗಳಿಗಾಗಿ ಮೀಸಲಿಡಲಾಗಿದೆ, ಅಲ್ಲಿ ಫೈಟ್, ಬಿಜಿಎಂ, ಹಾಡುಗಳೆಲ್ಲ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ತುಂಬ ಎಮೋಶನಲ್ ಆಗಿದೆ, ಹಿಂದು ಧರ್ಮದ ಕುರಿತು ಮೆಸೇಜ್ ಇದೆ. ಆದರೆ, ಅಪ್ಪ-ಮಗನ ಜೋಡಿ ವರ್ಕೌಟ್ ಆಗಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹಳೇ ಬಾಟಲಿಗೆ ಹೊಸ ನೀರು ತುಂಬಿಸಿಕೊಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ಗೋವಾದಲ್ಲಿ ಕೆಜಿಎಫ್ 2 ನೋಡಿದ ರಾಧಿಕಾ ಪಂಡಿತ್ & ಫ್ಯಾಮಿಲಿ! ಅಪ್ಪನ ಸಿನಿಮಾ ನೋಡಿ ಮಕ್ಕಳು ಹೀಗಂದ್ರು
ಕಥೆಯಲ್ಲಿಲ್ಲ ಬಿಗಿ ಹಿಡಿತ, ಸ್ಕ್ರೀನ್ ಪ್ಲೇ ಡಲ್!
ಇದೊಂದು ದುರಂತ, ಪಾಯಿಂಟ್ಲೆಸ್ ಕಥೆ ಈ ಸಿನಿಮಾದಲ್ಲಿದೆ. ಈ ಚಿತ್ರದಲ್ಲಿ ಎಲ್ಲವೂ ವೀಕ್ ಆಗಿದೆ, ಬಂಜಾರಾ ಹಾಡು ಚೆನ್ನಾಗಿದೆ, ಸಿನಿಮಾ ನೋಡುವ ಧೈರ್ಯ ಮಾಡಬೇಡಿ ಎಂದು ಇನ್ನೂ ಕೆಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಚಿರಂಜೀವಿ ಹಾಗೂ ರಾಮ್ಚರಣ್ ಅವರ ಅಭಿನಯ ಬಿಟ್ಟರೆ ಸಿನಿಮಾದಲ್ಲಿ ಬೇರೆ ಏನಿಲ್ಲ ಎನ್ನಬಹುದು.
ಇದನ್ನೂ ಓದಿ: KGF 2 ಅಬ್ಬರಕ್ಕೆ ಬಾಲಿವುಡ್ ಶೇಕ್, ಬಾಕ್ಸ್ ಆಫೀಸ್ ಸುಲ್ತಾನನಾದ ರಾಕಿ ಬಾಯ್!
4 ಕೋಟಿ ಖರ್ಚು ಮಾಡಿದ ಸೆಟ್ ದೃಶ್ಯ ಸೂಪರ್!
'ಆಚಾರ್ಯ' ಚಿತ್ರಕ್ಕಾಗಿ ಸುಮಾರು 20 ಎಕರೆ ಜಾಗದಲ್ಲಿ ಅದ್ಭುತವಾದ ದೇವಾಲಯದ ಸೆಟ್ ನಿರ್ಮಾಣ ಮಾಡಲಾಗಿತ್ತು. ಇದರ ನಿರ್ಮಾಣಕ್ಕೆ ಅಂದಾಜು 4 ಕೋಟಿ ರೂ. ಖರ್ಚು ಮಾಡಲಾಗಿದೆಯಂತೆ. 16 ಕೋಟಿ ರೂ. ವೆಚ್ಚದಲ್ಲಿ ಸಿನಿಮಾಕ್ಕಾಗಿ ಹೈದರಾಬಾದ್ನಲ್ಲೇ ನಿರ್ದೇಶಕ ಕೊರಟಾಲ ಶಿವ ಅವರ ಮುಂದಾಳತ್ವದಲ್ಲಿ ಒಂದು ಹಳ್ಳಿ ಸೆಟ್ ಅನ್ನು ಚಿತ್ರತಂಡ ನಿರ್ಮಾಣ ಮಾಡಿತ್ತು. ಈ ಸೆಟ್ನಲ್ಲಿ ಮೂಡಿಬಂದಿರುವ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಒಟ್ಟಾರೆ ಸಿನಿಮಾ ಹೇಳಿಕೊ್ಳುವಷ್ಟು ಚೆನ್ನಾಗಿಲ್ಲ ಎಂಬುಂದು ಗೊತ್ತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ