Tollywood: ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾ ಬಿಡುಗಡೆಗೂ ಕೊರೊನಾ ಅಡ್ಡಿ...!

ದೇಶದಲ್ಲಿ ವೇಗವಾಗಿ ಹಬ್ಬುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ಆಚಾರ್ಯ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಸಿನಿಮಾವನ್ನು ಫೆಬ್ರವರಿ ಮೊದಲ ವಾರ 4 ರಂದು ಬಿಡುಗಡೆಯಾಗಬೇಕಾಗಿತ್ತು.

ಆಚಾರ್ಯ ಚಿತ್ರದ  ಪೋಸ್ಟರ್

ಆಚಾರ್ಯ ಚಿತ್ರದ ಪೋಸ್ಟರ್

  • Share this:
ಕೋವಿಡ್ -19 ಮತ್ತು ಹೊಸ ರೂಪಾಂತರಿ ಓಮೈಕ್ರಾನ್ (Omicron) ಸಾಮಾನ್ಯ ಜನರು ಸೇರಿದಂತೆ ಪ್ರತಿಯೊಬ್ಬರ ಬದುಕನ್ನು ಹೈರಾಣಗೊಳಿಸಿದೆ. ರಾತ್ರಿ ಕರ್ಪ್ಯೂ, ವಾರಾಂತ್ಯ ಕರ್ಪ್ಯೂನಿಂದಾಗಿ ಎಲ್ಲಾ ವ್ಯವಹಾರ ವಹಿವಾಟುಗಳು, ಚಿತ್ರಮಂದಿರಗಳು ಪ್ರತಿಶತ 50ಕ್ಕೆ ಬಂದಿದೆ. ಜನರ ಮನರಂಜನೆಯಾದ ಸಿನಿಮಾಗಳನ್ನು ಮುಂದೂಡಲಾಗುತ್ತಿದೆ. (Postponed) ಈಗಾಗಲೇ ರಾಮ್ ಚರಣ್, ಜೂನಿಯರ್ ಎನ್ ಟಿಆರ್ (Ram Charan, Jr NTR's) ಅಭಿನಯದ ಆರ್ ಆರ್ ಆರ್ ಸಿನಿಮಾ ಮುಂದೂಡಲಾಗಿದೆ. ತಮಿಳಿನ ಅಜಿತ್ ಅಭಿನಯದ ವಲಿಕೈ ಸಿನಿಮಾ (Valikai Cinema), ಮಲಯಾಳಂನಲ್ಲಿನ ದುಲ್ಕರ್ ಅಭಿನಯದ ಸಿನಿಮಾ ಕೂಡ ಮುಂದೂಡಲ್ಪಟ್ಟಿತು. ಇದೀಗ ಚಿರಂಜೀವಿ (Chiranjeevi's) ಸಿನಿಮಾ ಸರದಿ

ಅಭಿಮಾನಿಗಳಲ್ಲಿ ನಿರಾಸೆ
ಹೌದು ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ. ದೇಶದಲ್ಲಿ ವೇಗವಾಗಿ ಹಬ್ಬುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ಆಚಾರ್ಯ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಸಿನಿಮಾವನ್ನು ಫೆಬ್ರವರಿ ಮೊದಲ ವಾರ 4 ರಂದು ಬಿಡುಗಡೆಯಾಗಬೇಕಾಗಿತ್ತು. ಆದರೆ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದ್ದು, ಹೊಸ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಣೆಯಾಗಿಲ್ಲ.

ಸಿನಿಮಾ ತಯಾರಕರು ಈ ಇತ್ತೀಚಿನ ಬೆಳವಣಿಗೆಯ ಬಗ್ಗೆ ಟ್ವಿಟ್ಟರ್ ಮೂಲಕ ಪ್ರೇಕ್ಷಕರಿಗೆ ತಿಳಿಸಿದ್ದಾರೆ. ಕೋವಿಡ್‍ನ ವ್ಯಾಪಕ ಹರಡುವಿಕೆಯಿಂದಾಗಿ. ಆಚಾರ್ಯ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಎಲ್ಲಾ ಕೋವಿಡ್ ಪ್ರೋಟೋಕಾಲ್‍ಗಳನ್ನು ಅನುಸರಿಸಿ. ಎಂದು ಹೇಳಿದ್ದಾರೆ. ಆಚಾರ್ಯ ಸಿನಿಮಾಕ್ಕೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: Samantha ಬರೀ ಚೆಂದುಳ್ಳಿ ಚೆಲುವೆಯಲ್ಲ, ತುಂಬಾ ಶಕ್ತಿಶಾಲಿ ಕೂಡ! ಯಾಕೆ ಅಂತ ಈ ವಿಡಿಯೋ ನೋಡಿ...

ಸಿನಿಮಾದಲ್ಲಿ ರಾಮ್ ಚರಣ್ ಪಾತ್ರ
ಆಚಾರ್ಯ ಸಿನಿಮಾ ಮಾತ್ರವಲ್ಲದೆ ಇದಕ್ಕೂ ಮುನ್ನ ಕೋವಿಡ್ ಕಾರಣಕ್ಕೆ ಆರ್‌ಆರ್‌ಆರ್, ರಾಧೆ ಶ್ಯಾಮ್ ಮತ್ತು ಭೀಮ್ಲಾ ನಾಯಕ್ ಚಿತ್ರಗಳನ್ನು ಮುಂದೂಡಲಾಗಿತ್ತು. ಮುಂದಿನ ದಿನಗಳಲ್ಲಿ ಕೆಲವು ಚಿತ್ರಗಳು ವಿಳಂಬವಾಗುವ ಸಾಧ್ಯತೆಯೂ ಇದೆ. ಮ್ಯಾಟಿನಿ ಎಂಟರ್‍ಟೈನ್‍ಮೆಂಟ್ ಮತ್ತು ಕೊನಿಡೆಲಾ ಪ್ರೊಡಕ್ಶನ್ ಕಂಪನಿ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಕಾಜಲ್ ಅಗರ್ವಾಲ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮಣಿ ಶರ್ಮಾ ಹಿನ್ನೆಲೆ ಸಂಗೀತ ನೀಡಿದ್ದು, ತಿರು ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ರಾಮ್ ಚರಣ್ ಈ ಸಿನಿಮಾದಲ್ಲಿ ಸಿದ್ಧ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟೀಸರ್ ಗೆ ಉತ್ತಮ ಪ್ರತಿಕ್ರಿಯೆ
ಇದಕ್ಕೂ ಮೊದಲು, ಈ ಹಿಂದೆ ಮಾತನಾಡಿದ್ದ ರಾಮ್ ಚರಣ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ತಮ್ಮ ತಂದೆ ಚಿರಂಜೀವಿಯೊಂದಿಗೆ ತೆರೆ ಹಂಚಿಕೊಂಡಿದ್ದೇನೆ. ನನ್ನ ತಂದೆಯ ಸಿನಿಮಾದಲ್ಲಿ ನಾನು ತೆರೆ ಹಂಚಿಕೊಳ್ಳಲು ಸಾಧ್ಯವಾಗುವುದು ನನಗೆ ಸಂಪೂರ್ಣ ಗೌರವವಾಗಿದೆ. ಅಲ್ಲದೆ, ಇದು ನನಗೆ ಅತಿಥಿ ಪಾತ್ರವಲ್ಲ ಆದರೆ ಪೂರ್ಣ ಪ್ರಮಾಣದ ಪಾತ್ರವಾಗಿದೆ. ಇದನ್ನು ಮಾಡಲು ಅವಕಾಶ ಮಾಡಿಕೊಟ್ಟ ನಿರ್ದೇಶಕ ಕೊರಟಾಲ ಶಿವ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಚರಣ್ ಹೇಳಿದ್ದಾರೆ. ಇನ್ನು ಈ ಸಿನಿಮಾದ ಟೀಸರ್ ನವೆಂಬರ್ 28ರಂದು ಬಿಡುಗಡೆಯಾಗಿತ್ತು. ಸಿನಿ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆಯು ಬಂದಿತ್ತು. ಅಭಿಮಾನಿಗಳು ರಾಮ್ ಚರಣ್ ಪಾತ್ರವನ್ನು ಮೆಚ್ಚಿದ್ದರು.

ಇದನ್ನೂ ಓದಿ: Jacqueline Fernandez: ಅಕ್ಕಿನೇನಿ ನಾಗಾರ್ಜುನ ಚಿತ್ರದಿಂದ ಜಾಕಲಿನ್​​​ ಔಟ್​.. ಕಾರಣ ಕೇಳಿದ್ರೆ ಶಾಕ್​ ಆಗ್ತಿರಾ..!

ಮತ್ತೊಂದೆಡೆ, ಮೆಹರ್ ರಮೇಶ್ ಅವರ ಭೋಲಾ ಶಂಕರ್ ಚಿತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ. ಮೆಗಾಸ್ಟಾರ್ ಮುಂದೆ ಮೋಹನ್ ರಾಜಾ ನಿರ್ದೇಶನದ ಗಾಡ್‍ಫಾದರ್‍ನ ಭಾಗವಾಗಲಿದ್ದಾರೆ. ಈ ಮಧ್ಯೆ, ಎಸ್‍ಎಸ್ ರಾಜಮೌಳಿಯವರ ಬಹು ನಿರೀಕ್ಷಿತ ಮ್ಯಾಗ್ನಮ್ ಆಪಸ್ ಆರ್‍ಆರ್‍ಆರ್‍ನಲ್ಲಿ ರಾಮ್ ಚರಣ್, ಜೂನಿಯರ್ ಎನ್‍ಟಿಆರ್ ಮತ್ತು ಆಲಿಯಾ ಭಟ್ ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನು ರಾಮ್ ಚರಣ್ ಮತ್ತು ನಿರಂಜನ್ ರೆಡ್ಡಿ ಅವರು ಕೊನಿಡೆಲಾ ಪ್ರೊಡಕ್ಶನ್ಕಂಪನಿ ಮತ್ತು ಮ್ಯಾಟಿನಿ ಎಂಟರ್‍ಟೈನ್‍ಮೆಂಟ್ ಅಡಿಯಲ್ಲಿ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಮಣಿ ಶರ್ಮಾ ಸಂಗೀತ ಸಂಯೋಜಿಸುತ್ತಿದ್ದಾರೆ.
Published by:vanithasanjevani vanithasanjevani
First published: