Dhanveer: ನಟ ಧನ್ವೀರ್ ವಿರುದ್ಧ ಅಭಿಮಾನಿ ಮೇಲೆ ಹಲ್ಲೆ ಆರೋಪ, ಅನುಪಮಾ ಥಿಯೇಟರ್ ಬಳಿ ನಡೆದಿದ್ದಾರೂ ಏನು ಗೊತ್ತಾ?

ಬೈ ಟೂ ಲವ್ ಚಿತ್ರದ ನಾಯಕ ಧನ್ವೀರ್ ಗೌಡ, ಅಭಿಮಾನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಟ ಧನ್ವೀರ್ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ನಟ ಧನ್ವೀರ್, ಅಭಿಮಾನಿ ಚಂದ್ರಶೇಖರ್

ನಟ ಧನ್ವೀರ್, ಅಭಿಮಾನಿ ಚಂದ್ರಶೇಖರ್

  • Share this:
ಬೆಂಗಳೂರು (ಫೆ.18): ಬಜಾರ್, ಬೈ ಟೂ ಲವ್ (By two love) ಚಿತ್ರದ ನಾಯಕ ನಟ ಧನ್ವೀರ್ (Actor Dhanveer), ಅಭಿಮಾನಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.‌ ಈ ಸಂಬಂಧ ಉಪ್ಪಾರಪೇಟೆ ಪೊಲೀಸ್​  ಠಾಣೆಯಲ್ಲಿ ಎನ್​ಸಿಆರ್ (NCR) ದಾಖಲಾಗಿದೆ. ನಿನ್ನೆ ರಾತ್ರಿ ಎಸ್‌.ಸಿ ರಸ್ತೆಯ ಅನುಪಮಾ ಥಿಯೇಟರ್ (Anupama Theater) ಬಳಿ ಘಟನೆ ನಡೆದಿದ್ದು, ನಟ ಧನ್ವೀರ್ ವಿರುದ್ಧ ಚಂದ್ರಶೇಖರ್ ಎಂಬುವವರು ದೂರು ನೀಡಿದ್ದಾರೆ. ಸ್ನೇಹಿತನ ಜೊತೆ ಊಟ ಮುಗಿಸಿ ಮನೆಗೆ ತೆರಳುತ್ತಿದ್ದ ಚಂದ್ರಶೇಖರ್, ನಟ ಧನ್ವೀರ್ ಕಂಡು ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಅಭಿಮಾನಿಯ ಬೇಡಿಕೆಗೆ ಧನ್ವೀರ್ ಸ್ಪಂದಿಸಿರಲಿಲ್ಲ. ಹೀಗಾಗಿ ಅವರು ಬೇಡ ಬಿಡು ನಾಳೆ ಧೃವ ಸರ್ಜಾ ಜೊತೆ ಫೋಟೋ ತೆಗೆಸಿಕೊಳ್ತಿನಿ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.

ನಟ ಧನ್ವೀರ್ ವಿರುದ್ಧ ದೂರು ದಾಖಲು

ನಟ ಧನ್ವೀರ್ ಅವರ ನಟನೆಯ ‘ಬೈ ಟೂ ಲವ್​ ಸಿನಿಮಾ (By two love) ಇಂದು ತೆರೆಗೆ ಬಂದಿದೆ. ಇದರ ಜತೆಗೆ ಅವರ ವಿರುದ್ಧ ದೂರು ಕೂಡ ದಾಖಲಾಗಿದೆ. ಬೌನ್ಸರ್​ ಜತೆ ಸೇರಿ ಅಭಿಮಾನಿ ಮೇಲೆ ಹಲ್ಲೆ ಮಾಡಿದ ಆರೋಪ ಧನ್ವೀರ್ ವಿರುದ್ಧ ಕೇಳಿ ಬಂದಿದೆ. ಹಲ್ಲೆಗೆ ಒಳಗಾದ ಅಭಿಮಾನಿ ದೂರು ದಾಖಲು ಮಾಡಿದ್ದಾರೆ. ಇದರಿಂದ ನಟನಿಗೆ ಸಂಕಷ್ಟ ಎದುರಾಗಿದೆ. ಈ ಘಟನೆ ಬಗ್ಗೆ ಧನ್ವೀರ್ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ನಡೆದಿದ್ದಾದ್ರೂ ಏನು ಗೊತ್ತಾ?

ಬೆಂಗಳೂರಿನ ಎಸ್‌.ಸಿ. ರಸ್ತೆಯ ಅನುಪಮಾ ಥಿಯೇಟರ್ ಬಳಿ ಗುರುವಾರ ತಡರಾತ್ರಿ ಘಟನೆ ನಡೆದಿದೆ. ನಟ ಧನ್ವೀರ್ ವಿರುದ್ಧ ಚಂದ್ರಶೇಖರ್ ಎಂಬ ಯುವಕ ಥಳಿಸಿರುವ ಆರೋಪ ಮಾಡಿದ್ದಾರೆ. ಸ್ನೇಹಿತನ ಜೊತೆ ಊಟ ಮುಗಿಸಿ ಚಂದ್ರಶೇಖರ್ ಮನೆಗೆ ತೆರಳುತ್ತಿದ್ದರು. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕಂಡಾಗ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಂದಾಗುತ್ತಾರೆ. ಅದೇ ರೀತಿ ಧನ್ವೀರ್ ಕಂಡಾಗ ಫೋಟೋ ತೆಗೆಸಿಕೊಳ್ಳೋಕೆ ಚಂದ್ರಶೇಖರ್ ಮುಂದಾಗಿದ್ದಾರೆ. ಅಭಿಮಾನಿಯ ಬೇಡಿಕೆಗೆ ಧನ್ವೀರ್ ಸ್ಪಂದಿಸಲಿಲ್ಲ.

ಇದನ್ನೂ ಓದಿ: Vikrant Rona: ಅನೂಪ್ ಭಂಡಾರಿ ಜೊತೆ ಮತ್ತೊಂದು ಸಿನಿಮಾ ಮಾಡ್ತಾರಾ ಕಿಚ್ಚ? ಟೇಕ್ ಆಫ್​ ಆಗುತ್ತಾ `ಬಿಲ್ಲ ರಂಗ ಬಾಷಾ’?

ಇದು ಚಂದ್ರಶೇಖರ್​ಗೆ ಬೇಸರ ತರಿಸಿದೆ. ಆಗ ಚಂದ್ರಶೇಖರ್​ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಧನ್ವೀರ್ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ. ಈ ವೇಳೆ ಧನ್ವೀರ್​ ಜತೆ ಬೌನ್ಸರ್ಸ್ ಕೂಡ ಸೇರಿದ್ದರು ಎನ್ನಲಾಗಿದೆ. ಹಲ್ಲೆಗೊಳಗಾದ ಚಂದ್ರಶೇಖರ್ ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದಾರೆ. ಚಂದ್ರಶೇಖರ್ ದೇಹಕ್ಕೆ ಗಾಯಗಳಾಗಿವೆ

ಈ ಹಿಂದೆ ನಟ ಧನ್ವೀರ್ ವಿರುದ್ಧ ಆನೆ ಏರಿದ್ದಕ್ಕೆ ಎಫ್‌ಐಆರ್ ದಾಖಲಾಗಿತ್ತು

ಕೆಲವು ತಿಂಗಳುಗಳ ಹಿಂದೆ ನಟ ಧನ್ವೀರ್ ಗೌಡ ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದರು. ಆಗ ಆನೆಯ ಮೇಲೆ ಏರಿದ್ದರು. ಆದರೆ ಮಾವುತ, ಕಾವಾಡಿಗಳನ್ನು ಬಿಟ್ಟರೆ ಬೇರೆಯವರು ಆನೆಯ ಮೇಲೆ ಏರುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಆನೆಯ ಮೇಲೆ ಏರಿ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಧನ್ವೀರ್ ಗೌಡ ಹಾಗೂ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಸತತವಾಗಿ ಅರಣ್ಯ ಕಾಯ್ದೆ ಉಲ್ಲಂಘಿಸಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಸಹ ಕಾರಣವಾಗಿದೆ.

ಇದನ್ನೂ ಓದಿ; Bollywood: ಬಾಲಿವುಡ್ ತಾರೆಯರ ಸಂಭಾವನೆ ಎಷ್ಟು ಗೊತ್ತಾ? ಆಲಿಯಾ, ದೀಪಿಕಾ ಚಿತ್ರದ ರೇಟ್ ಕೇಳಿದ್ರೆ ಶಾಕ್ ಆಗ್ತಿರಾ!

ನಟ ಧನ್ವೀರ್ ಮತ್ತು ಶ್ರೀಲೀಲಾ ‘ಬೈ ಟೂ ಲವ್​’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಪ್ರೀತಿ-ಪ್ರೇಮದ ಕಥೆ ಸಿನಿಮಾದ ಹೈಲೈಟ್​ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿದೆ. ‘ಬಜಾರ್​’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟವರು ಧನ್ವೀರ್. ‘ಕಿಸ್​’ ಚಿತ್ರದ ಮೂಲಕ ಶ್ರೀಲೀಲಾ ಬೇಡಿಕೆ ಹೆಚ್ಚಿಸಿಕೊಂಡರು. ಇಬ್ಬರೂ ‘ಬೈ ಟೂ ಲವ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಹರಿ ಸಂತೋಷ್​ ನಿರ್ದೇಶನವಿದೆ. ಸಾಧು ಕೋಕಿಲ, ರಂಗಾಯಣ ರಘು, ಅಚ್ಯುತ್​ ಕುಮಾರ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Published by:Pavana HS
First published: