HOME » NEWS » Entertainment » ACCEPTED BIHARS REQUEST FOR CBI PROBE INTO SUSHANT RAJPUT CASE HG

ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಕೇಸ್ ಸಿಬಿಐಗೆ ಶಿಫಾರಸು

Sushanth Singh Rajput: ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​​ ಅವರು ಸುಶಾಂತ್​ ಸಿಂಗ್​ ರಜಪೂತ್​ ಅವರ ಕೇಸ್​ ಅನ್ನು ಸಿಬಿಐಗೆ ಒಪ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಕೇಂದ್ರ ಸರ್ಕಾರ ಇವರ ಮನವಿಯನ್ನು ಪರಿಗಣಿಸಿ ಸುಶಾಂತ್​ ಸಿಂಗ್​ ಕೇಸ್​ ಅನ್ನು ತನಿಖೆ ಮಾಡುವಂತೆ ಸಿಬಿಐಗೆ ತಿಳಿಸಿದೆ.

news18-kannada
Updated:August 5, 2020, 2:29 PM IST
ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಕೇಸ್ ಸಿಬಿಐಗೆ ಶಿಫಾರಸು
ನಟ ಸುಶಾಂತ್ ಸಿಂಗ್.
  • Share this:
ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​​ ಜೂ.14ರಂದು ಆತ್ಮಹತ್ಯೆ ಮಾಡುವ ಮೂಲಕ ಬದುಕು ಮುಗಿಸಿದರು. ಆದರೆ ಇವರ ಸಾವಿನ ಸುತ್ತಾ ಸಾಕಷ್ಟು ಅನುಮಾನ ಹುತ್ತ ಹುಟ್ಟಿಕೊಂಡಿತ್ತು. ಅನೇಕರು ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಕೇಸ್​ ಸಿಬಿಐ ವಶಕ್ಕೆ ತೆಗೆದುಕೊಳ್ಳವಂತೆ ಆಗ್ರಹಿಸಿದ್ದರು. ಇದೀಗ ಬಿಹಾರ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಸುಶಾಂತ್​ ಸಿಂಗ್​ ಅವರ ಕೇಸನ್ನು ಸಿಬಿಐ ತನಿಖೆ ಮಾಡಬೇಕೆಂದು ಹೇಳಿದೆ. ಅಭಿಮಾನಿಗಳಿಗಂತೂ ಈ ವಿಚಾರ ಎಲ್ಲಿಲ್ಲದ ಸಂತೋಷ ನೀಡಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​​ ಅವರು ಸುಶಾಂತ್​ ಸಿಂಗ್​ ರಜಪೂತ್​ ಅವರ ಕೇಸನ್ನು ಸಿಬಿಐಗೆ ಒಪ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಕೇಂದ್ರ ಸರ್ಕಾರ ಇವರ ಮನವಿಯನ್ನು ಪರಿಗಣಿಸಿ ಸುಶಾಂತ್​ ಸಿಂಗ್​ ಕೇಸ್​ ಅನ್ನು ತನಿಖೆ ಮಾಡುವಂತೆ ಸಿಬಿಐಗೆ ತಿಳಿಸಿದೆ.

ಸುಶಾಂತ್​ ಸಿಂಗ್​ ಗೆಳತಿ ರಿಯಾ ಚಕ್ರವರ್ತಿ ಪರವಾಗಿ ವಕೀಲ ಶ್ಯಾಮ್​​ ದಿವಾನ್​​ ವಾದ ಮಾಡುತ್ತಿದ್ದಾರೆ. ಸುಶಾಂತ್​ ಸಿಂಗ್​ ಕುಟುಂಬದ ಮಕೀಲರು, ಸುಶಾಂತ್​​ ಸಾವಿಗೆ ಸಂಬಂಧಪಟ್ಟ ಸಾಕ್ಷ್ಯವನ್ನು ಮುಂಬೈ ಪೊಲೀಸರು ನಾಶ ಪಡಿಸಿದ್ದಾರೆ ಎಂಸು ಶಂಕೆ ವ್ಯಕ್ತಪಡಿಸಿದ್ದಾರೆ. ಮುಕುಲ್​​​ ರೋಹಟಗಿ ಬಿಹಾರ ಸರ್ಕಾರವನ್ನು ಪ್ರತಿನಿಧಿಸಿದ್ದಾರೆ.

ನಟಿ ರಿಯಾ ಚಕ್ರವರ್ತಿ ಅವರು  ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದ ಎಫ್​ಐಆರ್​ ಅನ್ನು ಪಾಟ್ನಾದಿಂದ ಮುಂಬೈಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.ಸುಪ್ರೀಂ ಕೋರ್ಟ್​ ಮಹಾರಾಷ್ಟ್ರ ಸರ್ಕಾರದ ಬಳಿ ಸುಶಾಂತ್​ ಸಿಂಗ್​ ಸಾವಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದೆ. ದಾಖಲೆಯನ್ನು ನೀಡಲು ಮೂರು ದಿನಗಳ ಕಾಲವಕಾಶ ಕೊಟ್ಟಿದೆ. ಹಾಗಾಗಿ ಮುಂದಿನ ವಾರ ಸುಶಾಂತ್​ ಸಿಂಗ್​ ಆತ್ಮಹತ್ಯೆ ಕೇಸ್​​ ತನಿಖೆ ನಡೆಯಲಿದೆ.
Published by: Harshith AS
First published: August 5, 2020, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories