Aaramse: ಸೋಲು-ನಿರಾಶೆಗಳ ನಡುವೆ ಹೇಗಿರಬೇಕು ಆರಾಮ್ಸೆ: ಸಿನಿಮಾ ಹಾಡುಗಳನ್ನೂ ಮೀರಿಸೋ ಆಲ್ಬಂ ಸಾಂಗ್!

ಯುವ ಪ್ರತಿಭೆ ಅಭಿಷೇಕ್ ಮಠದ್ ಕಾನ್ಸೆಪ್ಟ್ ಪ್ಲ್ಯಾನ್ ಮಾಡಿ ನಿರ್ದೇಶಿಸಿ, ಕೊರಿಯೋಗ್ರಫಿ ಮಾಡಿ, ನಿರ್ಮಿಸಿ, ನಟಿಸಿರುವ ಹಾಡಿದು ಆರಾಮ್ಸೆ. ಜೈಹೋ ಗಾಯಕ ವಿಜಯ್ ಪ್ರಕಾಶ್ ಈ ಹಾಡಿಗೆ ಕಂಠದಾನ ಮಾಡಿರುವುದು ಮತ್ತೊಂದು ವಿಶೇಷತೆ.

ಆರಾಮ್ಸೆ ಮ್ಯೂಸಿಕ್ ವಿಡಿಯೋದ ಪೋಸ್ಟರ್​

ಆರಾಮ್ಸೆ ಮ್ಯೂಸಿಕ್ ವಿಡಿಯೋದ ಪೋಸ್ಟರ್​

  • Share this:
ಸಿನಿಮಾ ಎಂಬುದು ಮಾಯಾಲೋಕ. ಇಲ್ಲಿ ಕೆಲವರಿಗೆ ಅದೃಷ್ಟ ಕೈ ಹಿಡಿದು ರಾತ್ರೋರಾತ್ರಿ ಸ್ಟಾರ್ ಆಗಿರುವ ಉದಾಹರಣೆಗಳೂ ಇವೆ. ಹಾಗೇ ಸಿನಿಮಾ ಕನಸು ಹೊತ್ತು ಗಾಂಧಿನಗರದ ದಾರಿ ಹಿಡಿಯುವ ಹಲವರು ಆ ಕನಸು ನನಸಾಗದೇ ಕೇವಲ ಹೋರಾಟದಲ್ಲಿಯೇ ಜೀವನ ಸವೆಸಿ ಕಣ್ಮರೆಯಾಗುವ ಹಲವು ಉದಾಹರಣೆಗಳೂ ಇವೆ. ಪ್ರತಿಭೆ ಇದ್ದವರಿಗೆ ಅವಕಾಶಗಳಿಲ್ಲ, ಅವಕಾಶಗಳಿದ್ದವನ ಬಳಿ ಪ್ರತಿಭೆಯಿಲ್ಲ ಎಂಬಂತ ಉದಾಹರಣೆಗಳಿಗೂ ಚಿತ್ರರಂಗದಲ್ಲಿ ಕಡಿಮೆ ಏನಿಲ್ಲ. ಹೀಗೆ ಸಿನಿಮಾ ಕನಸು ಹೊತ್ತು ಚಿತ್ರರಂಗಕ್ಕೆ ಬಂದು ಹೋರಾಡುವ ಕಲಾವಿದನ ಸುಖ - ದುಃಖ, ನೋವು - ನಲಿವು, ಕಷ್ಟ - ಸುಖಗಳ ಸುತ್ತ ಸುತ್ತುವ ವಿಡಿಯೋ ಆಲ್ಬಮ್ ಸಾಂಗ್ ಒಂದು ಸದ್ಯ ಯೂಟ್ಯೂಬ್‍ನಲ್ಲಿ (You Tube) ಸಖತ್ ವೈರಲ್ ಆಗಿದೆ. ಹೆಸರು ಆರಾಮ್ಸೆ (Aaramse).

ಯುವ ಪ್ರತಿಭೆ ಅಭಿಷೇಕ್ ಮಠದ್ (Abhishek Matad) ಕಾನ್ಸೆಪ್ಟ್ ಪ್ಲ್ಯಾನ್ ಮಾಡಿ ನಿರ್ದೇಶಿಸಿ, ಕೊರಿಯೋಗ್ರಫಿ ಮಾಡಿ, ನಿರ್ಮಿಸಿ, ನಟಿಸಿರುವ ಹಾಡಿದು ಆರಾಮ್ಸೆ. ಜೈಹೋ ಗಾಯಕ ವಿಜಯ್ ಪ್ರಕಾಶ್ ಈ ಹಾಡಿಗೆ ಕಂಠದಾನ ಮಾಡಿರುವುದು ಮತ್ತೊಂದು ವಿಶೇಷತೆ.



ಆರಾಮ್ಸೆ ಒಬ್ಬ ಕಲಾವಿದನ ಸ್ಫೂರ್ತಿದಾಯಕ ಪ್ರಯಾಣದ ಬಗ್ಗೆ. ಅವರ ವೃತ್ತಿ ಜೀವನದ ಮೂಲಕ ಅವರ ಎಲ್ಲ ಅಡೆ ತಡೆಗಳು ಮತ್ತು ತೊಂದರೆಗಳನ್ನು ವಿವರಿಸುತ್ತದೆ. ನಟನೆಯ ವೃತ್ತಿ ಜೀವನದಲ್ಲಿ ಹಲವಾರು ನಿರಾಕರಣೆಗಳು ಮತ್ತು ನಿರಾಶೆಗಳ ನಂತರ ಅವರು ಹತಾಶೆಯಿಂದ ತಮ್ಮ ಜೀವನವನ್ನು ತ್ಯಜಿಸಲು ನಿರ್ಧರಿಸುತ್ತಾರೆ. ಆ ಹೋರಾಟ ಮತ್ತು ನೀವುಗಳನ್ನು ಈ ವಿಡಿಯೋ ಆಲ್ಬಂ ಸಾಂಗ್‍ನಲ್ಲಿ ಚಿತ್ರಿಸಲಾಗಿದೆ. ನಂತರ ಅವನು ತನ್ನ ಜೀವನವನ್ನು ಮತ್ತೆ ಬದುಕಲು ಮತ್ತು ಘನವಾದ ಬಂಡೆಯಂತೆ ನಿಲ್ಲಲು ನಿರ್ಧರಿಸುತ್ತಾನೆ. ಅವನು ತನ್ನ ಜೀವನವನ್ನು ಗೆಲ್ಲಬೇಕಾದರೆ ಅವನು ಮೊದಲು ಬದುಕಬೇಕು ಎಂದು ಫ್ಲ್ಯಾಶ್‍ಬ್ಯಾಕ್‍ಗೆ ಪ್ರಯಾಣಿಸುತ್ತಾನೆ. ಎಷ್ಟೇ ಸೋಲುಗಳು, ಅಡೆತಡೆಗಳು ಬಂದರೂ ಒಂದಲ್ಲಾ ಒಂದು ದಿನ ಗೆದ್ದೇ ಗೆಲ್ಲುತ್ತೇನೆ ಎಂಬುದು ಈ ವಿಡಿಯೋ ಆಲ್ಬಮ್ ಸಾಂಗ್‍ನ ಮುಖ್ಯ ಸಂದೇಶ.

ಇದನ್ನೂ ಓದಿ: ಕ್ಯೂಟ್​ ಫೋಟೋ ಶೇರ್​ ಮಾಡಿ Do not Disturb ಎನ್ನುತ್ತಿದ್ದಾರೆ ನಟಿ ರಾಗಿಣಿ ಪ್ರಜ್ವಲ್​..!

ಸುಂದರ ಲೊಕೇಷನ್‍ಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದ್ದು, ಯಾವುದೇ ಸಿನಿಮಾ ಹಾಡುಗಳನ್ನೂ ಮೀರಿಸುವಂತೆ ಸುಂದರವಾಗಿ ಮೂಡಿಬಂದಿದೆ. ರಿಷಿಕೇಶ್ ಅವರ ಕ್ಯಾಮರಾ ಕೈ ಚಳಕವೂ ಈ ಹಾಡನ್ನು ಮತ್ತಷ್ಟು ಸುಂದರವಾಗಿಸಿದೆ.

ಅಭಿಷೇಕ್ ಮಠದ್ ಈ ಹಿಂದೆಯೂ ಹಲವು ಹಾಡುಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬಂದಿರುವ ನೀ ಜೊತೆ ಇರುವಾಗ ಎಂಬ ಮ್ಯೂಸಿಕ್ ವಿಡಿಯೋ ಹಾಡಿನಲ್ಲಿ ನಟ ದೂದ್‍ಪೇಡಾ ದಿಗಂತ್ ಅವರಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ ಅಭಿಷೇಕ್. ಚಂದನ್ ಶೆಟ್ಟಿ ಅವರ ಟಕೀಲಾ ಹಾಡಿನಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Linda Evangelista: ಬೊಜ್ಜು ಕರಗಿಸಿಕೊಳ್ಳಲು ಹೋಗಿ ಇಡೀ ದೇಹದ ಆಕಾರವನ್ನೇ ಕಳೆದುಕೊಂಡ ರೂಪದರ್ಶಿ

ಅದಿತಿ ಪ್ರಭುದೇವಾ ಮಿಂಚಿರುವ ಪರ್ಫೆಕ್ಟ್ ಗರ್ಲ್ ಹಾಡಿಗೆ ನಿರ್ದೇಶನ ಹಾಗೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಜತೆಗೆ ಏ ವತನ್ ಎಂಬ ಹಿಂದಿ ಮ್ಯೂಸಿಕ್ ವಿಡಿಯೋ ಹಾಡಿಗೂ ಕೋರಿಯೋಗ್ರಫಿ ಮಾಡಿದ್ದಾರೆ. ಬಡಪಾಯಿ ಕುಡುಕ ಎಂಬ ಹಾಡಿನಲ್ಲೂ ಮಿಂಚಿದ್ದಾರೆ. ಇನ್ನು ಸಿನಿಮಾಗಳಲ್ಲೂ ನಟಿಸುತ್ತಿರುವ ಅಭಿಷೇಕ್, ಬಳೇಪೇಟೆ ಹಾಗೂ ಸಮುದ್ರಂ ಎಂಬ ಎರಡು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈ ಎರಡೂ ಸಿನಿಮಾಗಳೂ ತೆರೆಗೆ ಬರಲು ಸಿದ್ಧತೆ ನಡೆಸುತ್ತಿವೆ.
Published by:Anitha E
First published: