Abhishek Bachchan: ಅಪ್ಪನ ಶೂಟಿಂಗ್​​ ಸೆಟ್​​ಗೆ ಸರ್​ಪ್ರೈಸ್ ವಿಸಿಟ್ ಕೊಟ್ಟ ಅಭಿಷೇಕ್ ಬಚ್ಚನ್

ಅಪ್ಪನ ಜೊತೆಗಿನ ಸರ್‌ ಪ್ರೈಸ್‌ ವಿಸಿಟ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್‌ ಬಚ್ಚನ್‌ ಬರೆದುಕೊಂಡಿದ್ದಾರೆ. ಈ ಪೋಟೋ ಜೊತೆಗೆ ಬಾಲ್ಯದ ಫೋಟೋವನ್ನೂ ಕೊಲ್ಯಾಜ್‌ ಮಾಡಿ ಇನ್‌ ಸ್ಟಾಗ್ರಾಂ ನಲ್ಲಿ ಶೇರ್‌ ಮಾಡಿದ್ದಾರೆ. ಅಲ್ದೇ ಕೆಲವೊಂದು ಯಾವತ್ತಿಗೂ ಬದಲಾಗೋದಿಲ್ಲ ಅನ್ನೋದಾಗಿ ಕ್ಯೂಟ್‌ ಆಗಿ ಬರೆದುಕೊಂಡಿದ್ದಾರೆ ಅಭಿಷೇಕ್‌ ಬಚ್ಚನ್‌.

ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್

ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್

  • Share this:
ಬಾಲಿವುಡ್‌ ನಲ್ಲಿ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ (Amitabh Bachchan) ಖದರೇ ಬೇರೆ. ಈ ಇಳಿವಯಸ್ಸಿನಲ್ಲೂ ಅವರ ನಟನಾ ಕೌಶಲ್ಯ ಜೊತೆಗೆ ಅವರ ಎನರ್ಜಿ ಎಂಥವರಿಗೂ ಸ್ಪೂರ್ತಿ ನೀಡುತ್ತೆ. ಈಗಲೂ ಕೂಡ ಕೈಯಲ್ಲಿ ಸಾಕಷ್ಟು ಸಿನಿಮಾ ಇಟ್ಟುಕೊಂಡು ಹಾರ್ಡ್‌ ವರ್ಕ್‌ (Hard work) ಮಾಡ್ತಾರೆ ಅಮಿತಾಬ್‌ ಬಚ್ಚನ್.‌ ವಿಷ್ಯ ಏನು ಅಂದ್ರೆ ಅಪ್ಪನ ಶೂಟಿಂಗ್‌ ನಡಿತಾ ಇರೋ ಸೆಟ್‌ ಗೆ ಇತ್ತೀಚಿಗೆ ಮಗ ಅಭಿಷೇಕ್‌ ಬಚ್ಚನ್‌ (Abhishek Bachchan) ಭೇಟಿ ನೀಡಿದ್ರು. ಅದೂ ಸರ್​ಪ್ರೈಸ್ ಭೇಟಿ. ತಮ್ಮ ಬ್ಯುಸಿ ಶೆಡ್ಯೂಲ್‌ ನಲ್ಲೂ ಅಭಿಷೇಕ್‌ ಅಪ್ಪನ ಸೆಟ್‌ ಗೆ (Set) ಆಗಾಗ ಭೇಟಿ ನೀಡೋದಿದೆ. ಇದು ಅವರ ಇಷ್ಟದ ಕೆಲಸ ಕೂಡ.

ತಂದೆಯ ಬಗ್ಗೆ ಅಭಿಷೇಕ್ ಏನು ಬರೆದುಕೊಂಡಿದ್ದಾರೆ 
ಅಪ್ಪನ ಜೊತೆಗಿನ ಸರ್​ಪ್ರೈಸ್ ವಿಸಿಟ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್‌ ಬಚ್ಚನ್‌ ಬರೆದುಕೊಂಡಿದ್ದಾರೆ. ಈ ಪೋಟೋ ಜೊತೆಗೆ ಬಾಲ್ಯದ ಫೋಟೋವನ್ನೂ ಕೊಲ್ಯಾಜ್‌ ಮಾಡಿ ಇನ್‌ ಸ್ಟಾಗ್ರಾಂ ನಲ್ಲಿ ಶೇರ್‌ ಮಾಡಿದ್ದಾರೆ. ಅಲ್ದೇ ಕೆಲವೊಂದು ಯಾವತ್ತಿಗೂ ಬದಲಾಗೋದಿಲ್ಲ ಅನ್ನೋದಾಗಿ ಕ್ಯೂಟ್‌ ಆಗಿ ಬರೆದುಕೊಂಡಿದ್ದಾರೆ ಅಭಿಷೇಕ್‌ ಬಚ್ಚನ್‌.
ಇದನ್ನೂ ಓದಿ: Harnaaz Kaur Sandhu: ಧೂಳೆಬ್ಬಿಸ್ತಿದೆ ಹರ್ನಾಜ್‌ ಕೌರ್‌ ಸಂಧು ಫೋಟೋಸ್; ನೆಟ್ಟಿಗರಂತೂ ಫುಲ್‌ ಫಿದಾ

ʼಎತ್ತರ ಹಾಗೂ ಮುಖದ ಕೂದಲಿನ ಹೊರತಾಗಿ ಕೆಲವೊಂದು ಸಂಗತಿಗಳು ಯಾವತ್ತಿಗೂ ಬದಲಾಗೋದಿಲ್ಲ. ಅಪ್ಪನ ಸೆಟ್‌ ಗೆ ಸರ್​ಪ್ರೈಸ್ ಭೇಟಿ ನೀಡುವುದು ತನ್ನ ಅಚ್ಚುಮೆಚ್ಚಿನ ಕೆಲಸಗಳಲ್ಲೊಂದುʼ ಅಂತ ಅಭಿಷೇಕ್‌ ಬಚ್ಚನ್‌ ಇನ್ಸ್ಟಾ ಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಅಮಿತಾಭ್ ಪೋಸ್ಟ್‌ ಗೆ ಅನೇಕ ಸ್ಟಾರ್‌ ನಟ ನಟಿಯರ ಕಾಮೆಂಟ್ ಗಳು ಹೀಗಿತ್ತು
ಅಮಿತಾಭ್ ಪೋಸ್ಟ್‌ ಗೆ ಅನೇಕ ಸ್ಟಾರ್‌ ನಟ ನಟಿಯರು ಕಾಮೆಂಟ್‌ ಮಾಡಿದ್ದಾರೆ. ಅಭಿಷೇಕ್‌ ಅಕ್ಕನ ಮಗಳು ನವ್ಯಾ ನವೇಲಿ ಹಾಗೂ ನಿಮೃತ್‌ ಕೌರ್‌ ಈ ಪೋಸ್ಟ್‌ ಗೆ ಹಾರ್ಟ್‌ ಎಮೋಜಿ ಹಾಕಿದ್ದಾರೆ. ಜೆನಿಲಿಯಾ ಡಿಸೋಜಾ Awwww ಎಂದು ಕಾಮೆಂಟ್‌ ಮಾಡಿದರೆ ರಿತೇಶ್‌ ದೇಶಮುಖ್‌ ಬಿಗ್‌ ಲವ್‌ ಅಂತಾ ಕಾಮೆಂಟ್‌ ಮಾಡಿದ್ದಾರೆ. ಸದ್ಯ ಬಾಲಿವುಡ್‌ ನಲ್ಲಿ ಬ್ಯುಸ್‌ ಆಗಿರುವ ಅಮಿತಾಭ್ ಬಚ್ಚನ್‌ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹಿಂದಿಯ ಪಾಪ್ಯುಲರ್‌ ಶೋ ಕೌನ್‌ ಬನೇಗಾ ಕರೋಡ್ಪತಿ ಕಾರ್ಯಕ್ರಮದ 14ನೇ ಅಮಿತಾಭ್ ಪೋಸ್ಟ್‌ಗೆ ಅನೇಕ ಸ್ಟಾರ್‌ ನಟ ನಟಿಯರ ಕಾಮೆಂಟ್ ಗಳು ಹೀಗಿತ್ತು ಸೀಸನ್ ಆಯೋಜನೆಯಲ್ಲಿ ಅವರು ಬ್ಯುಸಿ ಇದ್ದಾರೆ.

ಬ್ರಹ್ಮಾಸ್ತ್ರ ಸಿನೆಮಾದಲ್ಲೂ ಅಮಿತಾಭ್ ನಟನೆ 
ಅಲ್ಲದೇ ಕಳೆದ ವಾರವಷ್ಟೇ ಬಿಡುಗಡೆಯಾಗಿರೋ ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ನಟನೆಯ ಬ್ರಹ್ಮಾಸ್ತ್ರ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಮಿತಾಭ್ ಅಭಿನಯಿಸಿದ್ದಾರೆ. ಅಲ್ಲದೇ ಹಾಲಿವುಡ್‌ ನ ʼದ ಇಂಟರ್ನ್‌ʼ ಚಿತ್ರದ ಹಿಂದಿ ರಿಮೇಕ್‌ ನಲ್ಲಿ ನಟಿ ದೀಪಿಕಾ ಪಡುಕೋಣೆ ಜೊತೆಗೆ ಅವರು ಅಭಿನಯಿಸಲಿದ್ದಾರೆ. ಅಲ್ಲದೇ ರಶ್ಮಿಕಾ ಮಂದಣ್ಣ , ನೀನಾ ಗುಪ್ತಾ, ಪವೇಲ್‌ ಗುಲಾಟಿ ಹಾಗೂ ಸುನೀಲ್‌ ಗ್ರೋವರ್‌ ನಟನೆಯ ಗುಡ್‌ ಬೈ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಅಲ್ಲದೇ ಸೂರಜ್‌ ಬರ್ಜಾತ್ಯ ಅವರ ಉಂಚಾಯಿ ಹಾಗೂ ನಾಗ್‌ ಅಶ್ವಿನ್‌ ಅವರ ಪ್ರಾಜೆಕ್ಟ್‌ ನಲ್ಲೂ ಕೂಡ ಅಮಿತಾಬ್‌ ಬಚ್ಚನ್‌ ಕೆಲಸ ಮಾಡ್ತಿದ್ದಾರೆ.

ಇದನ್ನೂ ಓದಿ:  Milind And Ankita: ಪತ್ನಿ ಅಂಕಿತಾ ಫಿಟ್ನೆಸ್​​ನಿಂದ ಪ್ರಭಾವಿತರಾದ ನಟ ಮಿಲಿಂದ್ ಸೋಮನ್!

ಇನ್ನು ನಟ ಅಭಿಷೇಕ್‌ ಬಚ್ಚನ್‌ ಕೂಡ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಲಾಸ್ಟ್‌ ಪ್ರಾಜೆಕ್ಟ್‌ ದಸ್ವಿಯಲ್ಲಿ ನಿಮೃತ್‌ ಕೌರ್‌ ಹಾಗೂ ಯಾಮಿ ಗೌತಮ್‌ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇನ್ನು ಅವರ ನಟನೆಯ 'ಗ್ರೂಮರ್‌' ಚಿತ್ರದ ಚಿತ್ರೀಕರಣ ಈ ವರ್ಷ ಅವರ ಜನ್ಮದಿನದಂದು ಶುರುವಾಗಿದೆ. ಅಲ್ದೇ ಓಟಿಟಿ ಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಜನಪ್ರಿಯ ವೆಬ್‌ ಸಿರೀಸ್‌ 'ಬ್ರೆತ್‌' ನ ಮುಂದಿನ ಭಾಗದಲ್ಲೂ ಅಭಿಷೇಕ್‌ ಕಾಣಿಸಿಕೊಳ್ಳಲಿದ್ದಾರೆ.
Published by:Ashwini Prabhu
First published: