Abhishek Bachchan: ದಡೂತಿ ದೇಹ, 105 ಕೆಜಿ ತೂಕ: ವೈರಲ್​ ಆಯ್ತು ಅಭಿಷೇಕ್​ ಬಚ್ಚನ್ ನ್ಯೂ ಲುಕ್​!

Abhishek Bachchan: ನಟ ಅಭಿಷೇಕ್ ಬಚ್ಚನ್(Abhishek Bachchan) ತಮ್ಮ ಮುಂಬರುವ ಚಿತ್ರ ‘ಬಾಬ್ ಬಿಸ್ವಾಸ್’(Bob Biswas) ದಲ್ಲಿನ ಪಾತ್ರಕ್ಕಾಗಿ ಸಾಕಷ್ಟು ಪ್ರಶಂಸೆಯನ್ನು ಈಗಾಗಲೇ ಗಳಿಸಿದ್ದು, ಚಿತ್ರದ ಟ್ರೈಲರ್‌(Trailer)ನಲ್ಲಿ ನಟ ದಪ್ಪನೆಯ ಕೆನ್ನೆಗಳೊಂದಿಗೆ ಕಾಣಿಸಿಕೊಂಡಿದ್ದಾರೆ

ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಅಭಿಷೇಕ್​ ಬಚ್ಚನ್​

ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಅಭಿಷೇಕ್​ ಬಚ್ಚನ್​

  • Share this:

ತಮ್ಮ ಚಿತ್ರದಲ್ಲಿನ ಪಾತ್ರಗಳಿಗನುಸಾರವಾಗಿ ನಟ ನಟಿಯರು ತಮ್ಮ ದೇಹದ ತೂಕ(Body Weight) ಹೆಚ್ಚಿಗೆ ಮಾಡಿಕೊಳ್ಳುವುದು ಮತ್ತು ದೇಹ ಫಿಟ್(Fit) ಆಗಿ ಮಾಡಿಕೊಳ್ಳುವುದು ನಾವೆಲ್ಲಾ ನೋಡಿರುತ್ತೇವೆ. ತೂಕ ಕಡಿಮೆ ಮಾಡಿಕೊಳ್ಳಬೇಕಾದರೆ ಪ್ರತಿದಿನ ಹೆಚ್ಚು ಗಂಟೆಗಳ ಕಾಲ ಜಿಮ್‌(Gym)ನಲ್ಲಿ ಕಠಿಣವಾದ ತಾಲೀಮು(Workout) ನಡೆಸಬೇಕಾಗುತ್ತದೆ. ಆದರೆ ತೂಕ ಹೆಚ್ಚಿಸಿಕೊಳ್ಳಲು ಚೆನ್ನಾಗಿ ಆಹಾರ(Food) ಸೇವಿಸಬೇಕಾಗುತ್ತದೆ. ಇಲ್ಲೊಬ್ಬ ಬಾಲಿವುಡ್ ನಟ(Bollywood Actor) ತಮ್ಮ ಚಿತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಆದರೆ ಕೋವಿಡ್-19 ವೈರಸ್ ಹಾವಳಿಯಿಂದಾಗಿ ಚಿತ್ರೀಕರಣವನ್ನು ನಿಲ್ಲಿಸಲಾಯಿತು. ನಂತರ ಲಾಕ್‌ಡೌನ್‌ನಿಂದಾಗಿ ಆ ತೂಕವನ್ನು ಹಾಗೆಯೇ ನಿಭಾಯಿಸಬೇಕಾಯಿತು. ನಟ ಅಭಿಷೇಕ್ ಬಚ್ಚನ್(Abhishek Bachchan) ತಮ್ಮ ಮುಂಬರುವ ಚಿತ್ರ ‘ಬಾಬ್ ಬಿಸ್ವಾಸ್’(Bob Biswas) ದಲ್ಲಿನ ಪಾತ್ರಕ್ಕಾಗಿ ಸಾಕಷ್ಟು ಪ್ರಶಂಸೆಯನ್ನು ಈಗಾಗಲೇ ಗಳಿಸಿದ್ದು, ಚಿತ್ರದ ಟ್ರೈಲರ್‌(Trailer)ನಲ್ಲಿ ನಟ ದಪ್ಪನೆಯ ಕೆನ್ನೆಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಚಿತ್ರದ ಚಿತ್ರೀಕರಣ ನಿಲ್ಲಿಸಿದಾಗ ಅವರು ಆ ಹೆಚ್ಚುವರಿ ತೂಕವನ್ನು ಹಾಗೆಯೇ ನಿಭಾಯಿಸಿಕೊಂಡು ಬರುವಲ್ಲಿ ಅವರಿಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.


ಅಭಿಷೇಕ್​ ಬಚ್ಚನ್​ ನ್ಯೂ ಲುಕ್​ಗೆ ಫ್ಯಾನ್ಸ್​​ ಫಿದಾ!

ಟಿವಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ, "ಚಳಿಗಾಲದಲ್ಲಿ ಕೋಲ್ಕತ್ತಾದಲ್ಲಿರುವ ಎಲ್ಲಾ ಅದ್ಭುತ ಸಿಹಿ ತಿಂಡಿಗಳನ್ನು ಸೇವಿಸಿ ಸ್ಪಷ್ಟವಾಗಿ ಶೂಟಿಂಗ್‌ಗೆ ಬೇಕಾದಂತಹ ತೂಕ ಹೊಂದಲು ಸಹಾಯವಾಯಿತು. ಆದರೆ ಲಾಕ್‌ಡೌನ್‌ನಿಂದಾಗಿ ನಾವು ನಮ್ಮ ಚಿತ್ರೀಕರಣವನ್ನು ಅರ್ಧಕ್ಕೆ ಸ್ಥಗಿತಗೊಳಿಸಬೇಕಾಗಿದ್ದರಿಂದ ಮಾನಸಿಕವಾಗಿ ನಾನು ಸಿಲುಕಿಕೊಂಡೆ . ನಾವು ಸುಮಾರು ಶೇಕಡಾ 80ರಷ್ಟು ಚಿತ್ರೀಕರಣ ಪೂರ್ತಿ ಮಾಡಿದ್ದೆವು. ನಮಗೆ ಇನ್ನೂ 10-15 ದಿನಗಳ ಕೆಲಸ ಬಾಕಿ ಉಳಿದಿತ್ತು. ಲಾಕ್‌ಡೌನ್ ಉದ್ದಕ್ಕೂ, ನಾನು ಆ ತೂಕ ಕಾಪಾಡಿಕೊಳ್ಳಬೇಕಾಗಿತ್ತು ಮತ್ತು ಅದು ತುಂಬಾನೇ ಕಠಿಣವಾಗಿತ್ತು" ಎಂದು ಅಭಿ ಹೇಳಿಕೊಂಡಿದ್ದಾರೆ.

105 ಕೆಜಿಗೆ ತೂಕ ಹೆಚ್ಚಿಸಿಕೊಂಡಿದ್ದ ಅಭಿ!


ನಿರ್ದೇಶಕ ದಿಯಾ ಘೋಷ್ ಮತ್ತು ಅವರ ತಂದೆ ಸುಜೋಯ್ ಘೋಷ್ ಆದೇಶದ ಮೇರೆಗೆ ನಟ ಪ್ರಾಸ್ಥೆಟಿಕ್ಸ್ ಬಳಸಲು ಪ್ರಯತ್ನಿಸಿದರು. ಆದರೆ ಅದರ ಹೊರತಾಗಿ ಮಾಡೋಣ ಎಂದು ನಿರ್ಧರಿಸಿದರು. "ಚಿತ್ರೀಕರಣದ ಸಮಯದಲ್ಲಿ ನಾನು 100 - 105 ಕಿಲೋ ತೂಕ ಹೊಂದಿದ್ದೆ. ನೀವು ಬಾಬ್‌ನ ಮುಖ ನೋಡಿದರೆ, ಅದು ದುಂಡಾದಾಗ ಮತ್ತು ಅವನ ಕೆನ್ನೆಗಳು ತುಂಬಿದಾಗ ಮುಖ ಬದಲಾಗುತ್ತದೆ. ನೀವು ಕೆನ್ನೆಗಳ ಮೇಲೆ ಪ್ರಾಸ್ಥೆಟಿಕ್ಸ್ ಮಾಡಿದಾಗ ಅದು ಪ್ರಾಸ್ಥೆಟಿಕ್‌ನಂತೆ ಕಾಣುತ್ತದೆ” ಎಂದು ನಟ ಹೇಳಿದರು. “ನೀವು ಆ ತೂಕ ಹೊಂದಿರುವಾಗ ಮತ್ತು ನೀವು ದೈಹಿಕವಾಗಿ ಆ ತೂಕವನ್ನು ಹೊತ್ತುಕೊಂಡಾಗ ನಿಮ್ಮ ಸಂಪೂರ್ಣ ಕಾರ್ಯಕ್ಷಮತೆ ಬದಲಾಗುತ್ತದೆ. ಏಕೆಂದರೆ ನಿಮ್ಮ ಚಲನೆ, ನಿಮ್ಮ ನಡಿಗೆ, ನಿಮ್ಮ ಓಟ ಹೀಗೆ ಎಲ್ಲವೂ ಬದಲಾಗುತ್ತದೆ" ಎಂದು ಹೇಳಿದರು.

ಇದನ್ನು ಓದಿ : ಬಾಲಿವುಡ್​ ದೈತ್ಯನಿಗೆ ಬೆವರಿಳಿಸಿದ ರಾಕಿ ಭಾಯ್​: ಯಶ್​ಗೆ ಕರೆ ಮಾಡಿ ಸಾರಿ ಕೇಳಿದ್ರಾ ಆಮಿರ್ ಖಾನ್​?

ಚಿತ್ರದ ಟ್ರೈಲರ್ ನೋಡಿ ಅಮಿತಾಭ್ ಹೇಳಿದ್ದೇನು?


ಚಿತ್ರದ ಟ್ರೈಲರ್‌ಗೆ ಪ್ರತಿಕ್ರಿಯಿಸಿರುವ ಅಭಿಷೇಕ್ ತಂದೆ ಮತ್ತು ನಟ ಅಮಿತಾಭ್ ಬಚ್ಚನ್ ಟ್ವಿಟ್ಟರ್‌ನಲ್ಲಿ, "ನೀವು ನನ್ನ ಮಗ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ" ಎಂದು ಹೇಳಿದ್ದಾರೆ.ಸುಜೋಯ್ ಘೋಷ್ ಬರೆದಿರುವ ಮತ್ತು ಅವರ ಮಗಳು ದಿಯಾ ಅನ್ನಪೂರ್ಣ ಘೋಷ್ ನಿರ್ದೇಶನದ ಚಿತ್ರವನ್ನು ಗೌರಿ ಖಾನ್, ಸುಜೋಯ್ ಘೋಷ್ ಮತ್ತು ಗೌರವ್ ವರ್ಮಾ ನಿರ್ಮಿಸಿದ್ದಾರೆ. ಚಿತ್ರದ ಪ್ರೀಮಿಯರ್ ಅನ್ನು ಡಿಸೆಂಬರ್ 3, 2021 ರಂದು ಝೀ5ನಲ್ಲಿ ಪ್ರದರ್ಶನ ಮಾಡಲಿದ್ದಾರೆ.


ಇದನ್ನು ಓದಿ :  ಕನ್ನಡದಲ್ಲಿ ದೀಪಿಕಾ ಪಡುಕೋಣೆ ಚಿತ್ರ ಬರ್ತಿದೆ, ಇದೇ ವರ್ಷ ರಿಲೀಸ್!

ಇನ್ನೂ ಅಭಿಷೇಕ್​ ಬಚ್ಚನ್​ ಅವರ ಡೆಡಿಕೇಷನ್​​ಗೆ ಫ್ಯಾನ್ಸ್​​ ಕೂಡ ಫಿದಾ ಆಗಿದ್ದಾರೆ. ಒಂದು ಪಾತ್ರಕ್ಕಾಗಿ ತಮ್ಮ ಆರೋಗ್ಯದ ಬಗ್ಗೆ ಚಿಂತೆಯೂ ಮಾಡದೇ ತೂಕ ಹೆಚ್ಚಿಸಿಕೊಳ್ಳುವುದು ತಮಾಷೆಯ ಮಾತಲ್ಲ. ನಿಜಕ್ಕೂ ನೀವು ಅದ್ಭುತ ಕಲಾವಿದ ಅಂತ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.
Published by:Vasudeva M
First published: