• Home
  • »
  • News
  • »
  • entertainment
  • »
  • Abhishek Bachchan: 'ನಿರುದ್ಯೋಗಿ' ಅಂತ ಹಿಯಾಳಿಸಿದವರಿಗೆ ಖಡಕ್ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್!

Abhishek Bachchan: 'ನಿರುದ್ಯೋಗಿ' ಅಂತ ಹಿಯಾಳಿಸಿದವರಿಗೆ ಖಡಕ್ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Indian actor: ಇಲ್ಲೊಬ್ಬ ಬಾಲಿವುಡ್ ನಟ ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಪೋಸ್ಟ್ ಗೆ ಕಾಮೆಂಟ್ (Comment) ಮಾಡಿ ಟ್ರೋಲ್ ಗೆ ಗುರಿಯಾಗಿದ್ದಾರೆ ನೋಡಿ.

  • Share this:

ಚಿತ್ರೋದ್ಯಮದ ನಟ (Actor) ಮತ್ತು ನಟಿಯರಿಗೆ ಆನ್ಲೈನ್ ನಲ್ಲಿ ಟ್ರೋಲ್  (Online Troll) ಮಾಡುವುದು ಹೊಸತೇನಲ್ಲ ಬಿಡಿ. ಕೆಲವರು ತಮಗೆ ಇಷ್ಟವಾಗದ ಕಾಮೆಂಟ್ ಗಳಿಗೆ ನಟ ಮತ್ತು ನಟಿಯರನ್ನು ಕಟುವಾಗಿ ಟ್ರೋಲ್ ಮಾಡುವುದನ್ನು ನಾವು ತುಂಬಾ ಹಿಂದೆಯಿಂದಲೂ ನೋಡಿದ್ದೇವೆ. ಇಲ್ಲೊಬ್ಬ ಬಾಲಿವುಡ್ ನಟ ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಪೋಸ್ಟ್ ಗೆ ಕಾಮೆಂಟ್ (Comment) ಮಾಡಿ ಟ್ರೋಲ್ ಗೆ ಗುರಿಯಾಗಿದ್ದಾರೆ ನೋಡಿ. ಇಂತಹ ಕಾಮೆಂಟ್ ಹಾಕಿದ್ದಾಗ ನೆಟ್ಟಿಗರಿಗೂ ಸಹ ಕೆಲವೊಮ್ಮೆ ಮನಸ್ಸಿಗೆ ಬೇಸರವಾಗಿ ನಟ ಅಥವಾ ನಟಿಯ ಬಗ್ಗೆ ತುಂಬಾನೇ ಕಟುವಾಗಿ ಟ್ರೋಲ್ ಮಾಡುತ್ತಾರೆ. ಹೀಗೆ ಅದು ಕಾಮೆಂಟ್ ಗೆ ಕಾಮೆಂಟ್ ಎನ್ನುವಂತೆ ಆ ಜಗಳ ಆನ್ಲೈನ್ ನಲ್ಲಿ ಕೆಲವೊಮ್ಮೆ ನಿಲ್ಲುವುದೇ ಇಲ್ಲ ಅಂತ ಹೇಳಬಹುದು.


ಇಲ್ನೋಡಿ, ನಟ ಹೀಗೆ ಕಾಮೆಂಟ್ ಮಾಡಿದ್ದಕ್ಕೆ ಟ್ರೋಲ್ ಮಾಡಿದ್ದಾರೆ. ಆದರೆ ಅಷ್ಟಕ್ಕೇ ಸುಮ್ಮನಾಗದೇ ಆ ಟ್ರೋಲ್ ಗೆ ತಕ್ಕ ಉತ್ತರವನ್ನು ನಟ ನೀಡಿ ಅವರ ಬಾಯಿ ಮುಚ್ಚಿಸಿದ್ದಾರೆ ಅಂತ ಹೇಳಬಹುದು.


ನಟ ಅಭಿಷೇಕ್ ಬಚ್ಚನ್ ‘ನಿರುದ್ಯೋಗಿ’ ಅಂತೆ!


ಈಗ ಬಾಲಿವುಡ್​ನ ಬಿಗ್ ಬಿ ಅಂತಾನೆ ಖ್ಯಾತಿ ಪಡೆದಿರುವ ಅಮಿತಾಭ್ ಬಚ್ಚನ್ ಅವರ ಮಗ ಮತ್ತು ನಟ ಅಭಿಷೇಕ್ ಬಚ್ಚನ್ ಅವರನ್ನು ಇಲ್ಲೊಬ್ಬರು ಮೂಕ ಮತ್ತು 'ನಿರುದ್ಯೋಗಿ' ಅಂತ ಆನ್ಲೈನ್ ನಲ್ಲಿ ಹೇಳಿದ್ದಾರೆ ನೋಡಿ.


ಇದನ್ನೂ ಓದಿ: ವಾಸುಕಿ ವೈಭವ್ ಮತ್ತು ಚಂದನಾ ಅವರ ಸಂಭ್ರಮದ ದೀಪಾವಳಿ ನೋಡಿ


ಟ್ವಿಟ್ಟರ್ ನಲ್ಲಿ ಪ್ರಖರವಾದ ಪದಗಳ ವಿನಿಮಯ ನಡೆಯಿತು. ಪತ್ರಕರ್ತರೊಬ್ಬರ ಪೋಸ್ಟ್ ಗೆ ನಟ ಅಭಿಷೇಕ್ ಪ್ರತಿಕ್ರಿಯಿಸಿ "ಜನರು ಇನ್ನೂ ಪತ್ರಿಕೆಗಳನ್ನು ಓದುತ್ತಾರೆಯೇ" ಎಂದು ಕೇಳಿದ್ದರು.


ಇದಕ್ಕೊಬ್ಬರು ಉತ್ತರಿಸಿ "ಬುದ್ಧಿವಂತ ಜನರು ಓದುತ್ತಾರೆ, ನಿಮ್ಮಂತಹ ನಿರುದ್ಯೋಗಿಗಳಲ್ಲ" ಎಂದು ಅಭಿಷೇಕ್ ಅವರನ್ನು ಉದ್ದೇಶಿಸಿ ಬರೆದಿದ್ದಾರೆ. ನಟ ಅದನ್ನು ತಮಾಷೆಯ ಪ್ರತಿಕ್ರಿಯೆಯೊಂದಿಗೆ ಟ್ರೋಲ್ ಗೆ ಪ್ರತಿಕ್ರಯಿಸಲು ನಿರ್ಧರಿಸಿದರು.


ಟ್ರೋಲ್ ಗೆ ನಟ ಅಭಿಷೇಕ್ ಉತ್ತರಿಸಿದ್ದೇಗೆ?


ಅಭಿಷೇಕ್ ಅವರು ಆ ಕಾಮೆಂಟ್ ಗೆ "ಓಹ್! ಆ ಇನ್ಪುಟ್ ಗಾಗಿ ತುಂಬಾ ಧನ್ಯವಾದಗಳು. ಅಂದ ಹಾಗೆ, ಬುದ್ಧಿವಂತಿಕೆ ಮತ್ತು ಉದ್ಯೋಗಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ಉದಾಹರಣೆಗೆ ನಿಮ್ಮನ್ನು ತೆಗೆದುಕೊಳ್ಳಿ. ನೀವು ಉದ್ಯೋಗದಲ್ಲಿದ್ದೀರಿ ಎಂದು ನನಗೆ ಖಾತ್ರಿಯಿದೆ, ನೀವು ಬುದ್ಧಿವಂತರಲ್ಲ ಎಂದೂ ನನಗೆ ಖಾತ್ರಿಯಿದೆ” ಎಂದು ಬರೆದಿದ್ದಾರೆ.


ನಂತರ, ಕಾಮೆಂಟ್ ವಿಭಾಗದಲ್ಲಿ ಜೂನಿಯರ್ ಬಚ್ಚನ್ ಅವರ ನೀರಸ ಪ್ರತಿಕ್ರಿಯೆಗಾಗಿ ಅಭಿಮಾನಿಗಳು ಅವರನ್ನು ಶ್ಲಾಘಿಸಿದರು. ಅಭಿಮಾನಿಯೊಬ್ಬರು "ಪರದೆಯ ಮೇಲೆ ನಿಮ್ಮ ಪ್ರತಿಭೆಯನ್ನು ನಾನು ಮೆಚ್ಚುತ್ತೇನೆ... ನೀವು ಅದ್ಭುತ ಪ್ರದರ್ಶನಗಳನ್ನು ನೀಡಿದ್ದೀರಿ ಮತ್ತು ನೀವು ನಿರ್ವಹಿಸಿದ ಎಲ್ಲಾ ರೀತಿಯ ಪಾತ್ರಕ್ಕೂ ನೀವು ನ್ಯಾಯ ಒದಗಿಸಿದ್ದೀರಿ... ದಯವಿಟ್ಟು ಈ ರೀತಿಯಾಗಿ ಟ್ವೀಟ್ ಮಾಡುವವರನ್ನು ನಿರ್ಲಕ್ಷಿಸಿ" ಎಂದು ಹೇಳಿದ್ದಾರೆ.


ಇನ್ನೊಬ್ಬರು "ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ, ಅವರು ಇತರರನ್ನು ಟೀಕಿಸುವಲ್ಲಿ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಆದರೆ ನಿಮ್ಮ ಅಭಿಮಾನಿಯಾಗಿ ನಾನು ಹೇಳುತ್ತೇನೆ, ನೀವು ಅದ್ಭುತ ನಟ ಮತ್ತು ವ್ಯಕ್ತಿ ಸಹ ಅಗಿದ್ದೀರಿ. ನೀವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೀರಿ, ಅದನ್ನೇ ಮುಂದುವರಿಸಿ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ” ಎಂದು ಹೇಳಿ ಕಾಮೆಂಟ್ ಮಾಡಿದ್ದಾರೆ.


ಇಂತಹ ಟ್ರೋಲ್ ಗಳ ಬಗ್ಗೆ ಅಭಿಷೇಕ್ ಸಹೋದರಿ ಶ್ವೇತಾ ಹೇಳಿದ್ದೇನು?


ಅಭಿಷೇಕ್ ಅವರನ್ನ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತದೆ. ಅವರ ಸಹೋದರಿ ಶ್ವೇತಾ ಬಚ್ಚನ್ ಇತ್ತೀಚೆಗೆ ತಮ್ಮ ಮಗಳ ಒಂದು ಪಾಡ್ಕಾಸ್ಟ್ ನಲ್ಲಿ ಕಾಣಿಸಿಕೊಂಡರು ಮತ್ತು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.


ಇದನ್ನೂ ಓದಿ: ಆರ್ಯನಿಲ್ಲದೇ ಝೇಂಡೆಗೆ ಮರ್ಯಾದೆ ಇಲ್ವಾ? ಜೊತೆ ಜೊತೆಯಲಿ ಸೀರಿಯಲ್ ಟೈಮೇ ಚೇಂಜಾಯ್ತು!


"ಇದು ತುಂಬಾನೇ ಅಸಹ್ಯವಾಗಿದೆ, ಅವರು (ಟ್ರೋಲ್ ಗಳು) ಯಾವಾಗಲೂ ಅಭಿಷೇಕ್ ಮೇಲೆ ದಾಳಿ ಮಾಡುತ್ತಾರೆ ಮತ್ತು ಇದು ನಮ್ಮ ಕುಟುಂಬ ಸದಸ್ಯರಿಗೆ ನಿಜವಾಗಿಯೂ ಬೇಸರವನ್ನುಂಟು ಮಾಡುತ್ತದೆ, ಅದು ನಿಜವಾಗಿಯೂ ನನ್ನ ರಕ್ತವನ್ನು ಕುದಿಸುತ್ತದೆ. ಇದು ನಿಜವಾಗಿಯೂ ನನ್ನನ್ನು ಅಸಮಾಧಾನಗೊಳಿಸುತ್ತದೆ. ಬಹುಶಃ ಅವನು ನನ್ನ ತಮ್ಮ ಆಗಿರುವುದರಿಂದ ಮತ್ತು ನಾನು ಅವನ ಬಗ್ಗೆ ಕಾಳಜಿ ಹೊಂದಿರುವುದರಿಂದ ನನಗೆ ಬೇಸರವನ್ನುಂಟು ಮಾಡುತ್ತದೆ" ಎಂದು ಹೇಳಿದ್ದರು.

First published: