Bollywood: ಜಗತ್ತಿನ ಅತ್ಯುತ್ತಮ ಗುರು ಅಂದ್ರೆ ನನ್ ಹೆಂಡ್ತಿ, ಐಶ್ವರ್ಯಾ ರೈ ಬಗ್ಗೆ ಕೊಂಡಾಡಿದ ಅಭಿಷೇಕ್​ ಬಚ್ಚನ್​!

ನೆಟ್ಟಿಗರಿಂದ ಜಾಣೆ ಎನಿಸಿಕೊಂಡಿರುವ ಆರಾಧ್ಯಳಿಗೆ ಓದಿಸುವುದು ಯಾರು? ಅಪ್ಪನೋ ? ಅಮ್ಮನೊ? ಖಂಡಿತಾ ಅಮ್ಮನೆ ! ಹೌದು, ಮಗಳಿಗೆ ಮನೆಯಲ್ಲಿ ಓದಿಸುವುದು ತಾಯಿ ಐಶ್ವರ್ಯ ಅವರಂತೆ.

ಅಭಿಷೇಕ್​, ಐಶ್ವರ್ಯಾ, ಆರಾಧ್ಯ

ಅಭಿಷೇಕ್​, ಐಶ್ವರ್ಯಾ, ಆರಾಧ್ಯ

  • Share this:
ಸೆಲೆಬ್ರಿಟಿ(Celebrity)ಗಳ ಮಕ್ಕಳ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಆಕರ್ಷಣೆ. ಕರೀನಾ(Kareena) ಮಗ ತೈಮೂರ್ ,ಶಾರುಖ್ ಖಾನ್(Shah Rukh Khan) ಮಗ ಅಬ್‍ರಾಮ್, ಶಾಹಿದ್ ಕಪೂರ್(Shahid Kapoor) ಮಗಳು ಮೀಷಾ ಮತ್ತಿತರ ಪುಟಾಣಿಗಳು ಆಗಾಗ ಇಂಟರ್​ನೆಟ್‍(Internet)ನಲ್ಲಿ ಮಿಂಚುವುದುಂಟು. ಅದೇ ರೀತಿ, ಅಭಿಷೇಕ್ ಬಚ್ಚನ್(Abhishek Bachchan) ಮತ್ತು ಐಶ್ವರ್ಯಾ ರೈ ಬಚ್ಚನ್(Aishwarya Rai) ಮಗಳು ಆರಾಧ್ಯ ರೈ(Aaradhya Bachchan) ಕೂಡ ಸದಾ ನೆಟ್ಟಿಗರ ಕುತೂಹಲ ಕೆರಳಿಸುತ್ತಾಳೆ. ಅವಳು ಶಾಲೆಯಲ್ಲಿ ಮಾಡಿದ ನೃತ್ಯ, ಆನ್‍ಲೈನ್ ತರಗತಿ ವಿಡಿಯೋ, ತಾತ ಅಮಿತಾಭ್ ಬಚ್ಚನ್(Amitabh Bachchan) ಅವಳ ಕುರಿತು ಹೇಳಿದ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ಸುದ್ದಿ ಮಾಡಿವೆ. ನೆಟ್ಟಿಗರಿಂದ ಜಾಣೆ ಎನಿಸಿಕೊಂಡಿರುವ ಆರಾಧ್ಯಳಿಗೆ ಓದಿಸುವುದು ಯಾರು? ಅಪ್ಪನೋ ? ಅಮ್ಮನೊ? ಖಂಡಿತಾ ಅಮ್ಮನೆ ! ಹೌದು, ಮಗಳಿಗೆ ಮನೆಯಲ್ಲಿ ಓದಿಸುವುದು ತಾಯಿ ಐಶ್ವರ್ಯ ಅವರಂತೆ.

ಹೆಂಡತಿ ಬಗ್ಗೆ ಕೊಂಡಾಡಿದ ಅಭಿಷೇಕ್​ ಬಚ್ಚನ್​!

ಹೀಗೆಂದು ಸ್ವತಃ ಅಭಿಷೇಕ್ ಬಚ್ಚನ್ ಅವರೇ ಹೇಳಿದ್ದಾರೆ. ಇತ್ತೀಚೆಗೆ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾದ ದಸ್ವಿ ಸಿನಿಮಾದಲ್ಲಿ, ಅಭಿಷೇಕ್, ಅನಕ್ಷರಸ್ಥ, ಭ್ರಷ್ಟಾಚಾರಿ ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕುರಿತು ಟ್ವಿಟ್ಟರ್‍ನಲ್ಲಿ ನಡೆದ ಮಾತುಕತೆ ಒಂದರಲ್ಲಿ, ತನ್ನ ಮಗಳಿಗೆ ಮನೆಯಲ್ಲಿ ಯಾರು ಓದಿಸುತ್ತಾರೆ ಮತ್ತು ಚಿಕ್ಕವನಿದ್ದಾಗ ತನಗೆ ಯಾರು ಓದಿಸುತ್ತಿದ್ದರು ಎಂಬ ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ.

ವೈರಲ್​ ಆಗಿತ್ತು ಐಶ್ವರ್ಯಾ ರೈ ಮಗಳ ವಿಡಿಯೋ!

ಆರಾಧ್ಯ ಬಚ್ಚನ್‍ಗೆ ಈಗ ಹತ್ತು ವರ್ಷ ವಯಸ್ಸು. ಆಕೆ ಎಷ್ಟು ಚೆನ್ನಾಗಿ ಹಿಂದಿ ಮಾತನಾಡುತ್ತಾರೆ ಎಂಬುವುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಕಾರಣ, ಕಳೆದ ತಿಂಗಳು, ಆಕೆಯ ಹಿಂದಿ ಪದ್ಯವೊಂದನ್ನು ವಾಚಿಸುವ ವಿಡಿಯೋವೊಂದು ವೈರಲ್ ಆಗಿತ್ತು.

ಇದನ್ನೂ ಓದಿ: ಟಚ್​ ಮಾಡೋದಿರ್ಲಿ, ಹತ್ತಿರ ಬರಕ್ಕೂ ಆಗಲ್ಲ! 2ನೇ ದಿನದ ಕಲೆಕ್ಷನ್​ ಕಂಡು ಬೆಚ್ಚಿಬಿದ್ದ ಸಿನಿ ಇಂಡಸ್ಟ್ರಿ

ಜಗತ್ತಿನ ಅತ್ಯುತ್ತಮ ಗುರು ಅಂದ್ರೆ  ಐಶ್ವರ್ಯಾ ರೈ!

ಟ್ವಿಟ್ಟರ್ ವೇದಿಕೆಯಲ್ಲಿ ನಡೆದ ಮಾತುಕತೆಯಲ್ಲಿ, ಮಗಳು ಆರಾಧ್ಯಗೆ ನೀವು ಓದಲು ಸಹಾಯ ಮಾಡುತ್ತೀರಾ ಎಂದು ಅಭಿಷೇಕ್ ಬಚ್ಚನ್ ಅವರನ್ನು ಪ್ರಶ್ನಿಸಿದಾಗ, “ಅವಳು ಈಗಾಗಲೇ ಜಗತ್ತಿನ ಅತ್ಯುತ್ತಮ ಗುರುವನ್ನು ಹೊಂದಿದ್ದಾಳೆ. ಅದು ಬೇರೆ ಯಾರೂ ಅಲ್ಲ, ಅವಳ ತಾಯಿ. ಅವಳಿಗೆ ಓದಿಸಲು ಹೋಗಿ, ಒಬ್ಬ ಗುರು ಹೇಗಿರಬೇಕು ಎಂಬ ಅವಳ ನಿರೀಕ್ಷೆಯನ್ನು ಅಥವಾ ಅವಳನ್ನು ಕೆಳಮಟ್ಟಕ್ಕೆ ಇಳಿಸಲು ಬಯಸುವುದಿಲ್ಲ. ಓದಿಸುವ ವಿಭಾಗವೇನಿದ್ದರೂ ಅವಳ ತಾಯಿಗೆ ಸೇರಿದ್ದು” ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಸಿನಿಮಾ ನೋಡಿ ಹತ್ತನೇ ತರಗತಿ ಪರೀಕ್ಷೆ ಬರೆದ 20 ಕೈದಿಗಳು!

ಅಭಿಷೇಕ್​ಗೆ ಗಣಿತ ಹೇಳಿಕೊಡ್ತಿದ್ರಂತೆ ಅಮಿತಾಭ್​ ಬಚ್ಚನ್​!

ಈ ಮಾತುಕತೆಯಲ್ಲಿ, ತಾನು ಚಿಕ್ಕವನಿದ್ದಾಗ, ಗಣಿತವನ್ನು ಕಲಿಯಲು ತಂದೆ ಅಮಿತಾಭ್ ಬಚ್ಚನ್ ಅವರೊಂದಿಗೆ ಹೆಚ್ಚಿನ ವೇಳೆಯನ್ನು ಕಳೆಯುತ್ತಿದ್ದೆ ಎಂಬ ಸಂಗತಿಯನ್ನು ಅವರು ಬಹಿರಂಗಪಡಿಸಿದರು. “ಅವರು ಅದರಲ್ಲಿ ಅತ್ಯಂತ ಜಾಣರಾಗಿದ್ದರು. ಅವರು ವಿಜ್ಞಾನದ ವಿದ್ಯಾರ್ಥಿಯಾಗಿದ್ದರು. ಅವರು ಒಬ್ಬ ಅದ್ಭುತವಾದ ಶಿಕ್ಷಕರಾಗಿದ್ದರು” ಎಂದು ಅಭಿಷೇಕ್ ತಮ್ಮ ತಂದೆಯನ್ನು ಹೊಗಳಿದ್ದಾರೆ. ತಮ್ಮ ತಂದೆತಾಯಿಯ ಬಳಿ, ಓದಿಗೆ ಸಹಾಯ ಮಾಡಿ ಎಂದು ಕೇಳಿದರೆ ಅವರು ಏನು ಹೇಳುತ್ತಾರೆ ಎಂದು ಕೆಲವೊಮ್ಮೆ ಮಕ್ಕಳು ಭಯಪಡುತ್ತಾರೆ, ಹಾಗಾಗಿ ಹೆತ್ತವರು ಯಾವಾಗಲೂ ಒಳ್ಳೆಯ ಶಿಕ್ಷಕರು ಎನ್ನುವಂತಿಲ್ಲ ಎಂದು ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ ಅಭಿಷೇಕ್.
Published by:Vasudeva M
First published: