• Home
  • »
  • News
  • »
  • entertainment
  • »
  • Bollywood: ಅಪ್ಪನಂತೆ ಮಗ​ ಪ್ರತಿಭಾವಂತರಲ್ಲ ಎಂದವರಿಗೆ ಅಭಿಷೇಕ್​ ಬಚ್ಚನ್​ ಕೊಟ್ರು ಕೂಲ್​ ರಿಪ್ಲೈ!

Bollywood: ಅಪ್ಪನಂತೆ ಮಗ​ ಪ್ರತಿಭಾವಂತರಲ್ಲ ಎಂದವರಿಗೆ ಅಭಿಷೇಕ್​ ಬಚ್ಚನ್​ ಕೊಟ್ರು ಕೂಲ್​ ರಿಪ್ಲೈ!

ಅಭಿಷೇಕ್​ ಬಚ್ಚನ್​, ಅಮಿತಾಭ್​​ ಬಚ್ಚನ್​

ಅಭಿಷೇಕ್​ ಬಚ್ಚನ್​, ಅಮಿತಾಭ್​​ ಬಚ್ಚನ್​

ತನ್ನ ಬಗ್ಗೆ ಮಾಡಿದ್ದ ಟ್ವೀಟ್‌ ಗೆ ಪ್ರತಿಯಾಗಿ ನೀವು ಹೇಳಿದ್ದು ಸಂಪೂರ್ಣವಾಗಿ ಸರಿ ಎಂದಿರುವ ಅಭಿಷೇಕ್‌, ನಾನು ಅತ್ಯಂತ ಹೆಮ್ಮೆಯ ಮಗ ಎಂದು ಪ್ರತಿಕ್ರಿಯಿಸಿದ್ದಾರೆ.

  • Trending Desk
  • 3-MIN READ
  • Last Updated :
  • Share this:

ಲೇಖಕಿ ತಸ್ಲೀಮಾ ನಸ್ರೀನ್‌ (Taslima Nasreen) ಅವರು ಅಮಿತಾಭ್ ಬಚ್ಚನ್‌ (Amitabh Bachchan) ಹಾಗೂ ಅಭಿಷೇಕ್‌ ಬಚ್ಚನ್‌ (Abhishek Bachchan) ಬಗ್ಗೆ ಟ್ವೀಟ್‌ ಮಾಡಿದ್ದರು. ಅವರು ಮಾಡಿದ್ದ ʼಅಭಿಷೇಕ್‌ ಬಚ್ಚನ್‌ ಅಮಿತಾಬ್‌ ರಷ್ಟು ಪ್ರತಿಭಾವಂತರಲ್ಲʼ ಎಂಬ ಟ್ವೀಟ್‌ (Tweet) ಗೆ ಅಭಿಷೇಕ್‌ ಬಚ್ಚನ್‌ ಕೂಲ್‌ (Cool) ಆಗಿಯೇ ತಿರುಗೇಟು ನೀಡಿದ್ದಾರೆ. ತನ್ನ ಬಗ್ಗೆ ಮಾಡಿದ್ದ ಟ್ವೀಟ್‌ ಗೆ ಪ್ರತಿಯಾಗಿ ನೀವು ಹೇಳಿದ್ದು ಸಂಪೂರ್ಣವಾಗಿ ಸರಿ ಎಂದಿರುವ ಅಭಿಷೇಕ್‌, ನಾನು ಅತ್ಯಂತ ಹೆಮ್ಮೆಯ ಮಗ ಎಂದು ಪ್ರತಿಕ್ರಿಯಿಸಿದ್ದಾರೆ.


ತಸ್ಲೀಮಾ ನಸ್ರೀನ್‌ ಟ್ವೀಟ್‌ ನಲ್ಲಿ ಏನಿತ್ತು?


ತಸ್ಲೀಮಾ ಅವರು ಅಮಿತಾಬ್ ಬಚ್ಚನ್ ಅವರು 'ತನ್ನ ಮಗ ತನ್ನ ಎಲ್ಲಾ ಪ್ರತಿಭೆಗಳನ್ನು ಆನುವಂಶಿಕವಾಗಿ ಪಡೆದಿದ್ದಾನೆ ಮತ್ತು ಅತ್ಯುತ್ತಮ' ಎಂದು ಭಾವಿಸುತ್ತಾರೆ ಎಂದು ಹೇಳಿದ್ದರು. ಗುರುವಾರ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ತಸ್ಲಿಮಾ, ”ಅಮಿತಾಭ್ ಬಚ್ಚನ್ ಅವರು ತಮ್ಮ ಮಗ ಅಭಿಷೇಕ್ ಬಚ್ಚನ್ ಅವರನ್ನು ತುಂಬಾ ಪ್ರೀತಿಸುತ್ತಾರೆ. ಅವರು ತಮ್ಮ ಎಲ್ಲಾ ಪ್ರತಿಭೆಗಳನ್ನು ತಮ್ಮ ಮಗ ಪಡೆದಿದ್ದಾರೆ ಮತ್ತು ಅವರ ಮಗನೇ ಅತ್ಯುತ್ತಮ ಎಂದು ಭಾವಿಸುತ್ತಾರೆ. ಅಭಿಷೇಕ್ ಒಳ್ಳೆಯವರು. ಆದರೆ ಅಮಿತ್‌ಜಿಯಷ್ಟು ಅಭಿಷೇಕ್ ಪ್ರತಿಭಾವಂತ ಎಂದು ನಾನು ಭಾವಿಸುವುದಿಲ್ಲ” ಎಂಬುದಾಗಿ ಟ್ವೀಟ್‌ ಮಾಡಿದ್ದರು.


ಏನಿತ್ತು ಅಭಿಷೇಕ್‌ ಬಚ್ಚನ್‌ ಕೂಲ್‌ ಕಾಮೆಂಟ್‌


ತಸ್ಲೀಮಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನಟ ಅಭಿಷೇಕ್ ಬಚ್ಚನ್, "ಖಂಡಿತವಾಗಿಯೂ ಸರಿಯಾಗಿದೆ ಮೇಡಮ್. ಪ್ರತಿಭೆ ಅಥವಾ ಬೇರೆ ಯಾವುದರಲ್ಲೂ ಅವರ (ಅಮಿತಾಭ್ ಬಚ್ಚನ್) ಹತ್ತಿರಕ್ಕೂ ಯಾರೂ ಬರುವುದಿಲ್ಲ. ಅವರು ಯಾವಾಗಲೂ 'ಅತ್ಯುತ್ತಮ'ನಾಗಿಯೇ ಇರುತ್ತಾರೆ! ನಾನು ಅತ್ಯಂತ ಹೆಮ್ಮೆಯ ಮಗ” ಎಂದು ಬರೆದಿದ್ದು, ನಮಸ್ಕಾರ ಮಾಡುವಂಥ, ಮಡಿಸಿದ ಕೈಗಳ ಎಮೋಜಿ ಹಾಕಿದ್ದಾರೆ.


ಹಾರ್ಟ್​ ಫೋಸ್ಟ್​ ಮಾಡಿದ ಸುನೀಲ್​ ಶೆಟ್ಟಿ!


ಇನ್ನು ಅಭಿಷೇಕ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನಟ ಸುನೀಲ್ ಶೆಟ್ಟಿ ಕೆಂಪು ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.ಈ ಪೋಸ್ಟ್‌ಗೆ ಅನೇಕ ಟ್ವಿಟರ್ ಬಳಕೆದಾರರೂ ಪ್ರತಿಕ್ರಿಯಿಸಿದ್ದಾರೆ. ಒಬ್ಬ ವ್ಯಕ್ತಿ, "ಬಹುಶಃ ಅದಕ್ಕಾಗಿಯೇ ಅವರನ್ನು ಹೆಚ್ಚು ರೇಟ್ ಮಾಡಲಾಗಿಲ್ಲ ಮತ್ತು ಅದು ದುಃಖಕರವಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಅವರು ಹೆಚ್ಚಿನವರಿಗಿಂತ ಉತ್ತಮ. ಆದರೆ ಯಾವಾಗಲೂ ಅವರ ತಂದೆಗೆ ಹೋಲಿಸುತ್ತಾರೆ" ಎಂಬುದಾಗಿ ಬರೆದಿದ್ದಾರೆ.


ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ!? ನ್ಯಾಷನಲ್ ಕ್ರಶ್​ಗೆ ಬಂಪರ್ ಆಫರ್​!


ಇನ್ನೊಬ್ಬರು "ಮೇಡಂ, ಅಮಿತಾಭ್ ಬಚ್ಚನ್ ಒಬ್ಬ ದಂತಕಥೆ! ಸಚಿನ್ ತೆಂಡೂಲ್ಕರ್, ದಿಲೀಪ್ ಸಾಬ್, ಮ್ಯಾಜಿಕ್ ಜಾನ್ಸನ್, ಮರ್ಲಾನ್ ಬ್ರಾಂಡೋ ಮುಂತಾದವವರು ಜೀವನದಲ್ಲಿ ಒಬ್ಬರು ಮಾತ್ರ ಆಗುತ್ತಾರೆ! ತಂದೆಗಿಂತ ತಕ್ಷಣವೇ ಉತ್ತಮವಾಗಬಲ್ಲ ಒಬ್ಬ ಮಗನನ್ನು ನನಗೆ ತೋರಿಸಿ ಎಂದು ಹೇಳಿರುವುದು ತಂದೆಯ ಸ್ವಂತ ಮಾತುಗಳು" ಎಂಬುದಾಗಿ ಬರೆದಿದ್ದಾರೆ. ಇನ್ನು, ಇತ್ತೀಚೆಗೆ, ಅಭಿಷೇಕ್ ಅವರು ಫಿಲ್ಮ್‌ಫೇರ್ OTT ಅವಾರ್ಡ್ಸ್ 2022 ರಲ್ಲಿ ದಸ್ವಿಯಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.


ಅಲ್ದೇ ಅವರ ಅಭಿನಯದ ದಸ್ವಿ ಚಿತ್ರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನೂ ಬಾಚಿಕೊಂಡಿದೆ. ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಹಿರಿಯ ನಟ ಅಮಿತಾಭ್ ಬಚ್ಚನ್, “ನನ್ನ ಹೆಮ್ಮೆ.. ನನ್ನ ಸಂತೋಷ.. ನೀವು ನಿಮ್ಮ ಮಾತನ್ನು ಸಾಬೀತುಪಡಿಸಿದ್ದೀರಿ. ನಿಮ್ಮನ್ನು ಅಪಹಾಸ್ಯಕ್ಕೆ ಒಳಪಡಿಸಲಾಯಿತು. ಆದರೆ ನೀವು ಮೌನವಾಗಿ ನಿಮ್ಮ ಸಾಮರ್ಥ್ಯವನ್ನು ತೋರಿಸಿದ್ದೀರಿ. ಅತ್ಯುತ್ತಮ"‌ ಎಂದು ಹೇಳಿದ್ದರು.


ಇದನ್ನೂ ಓದಿ: ಕಾಜಲ್ ಅಗರ್ವಾಲ್ ರೊಮ್ಯಾಂಟಿಕ್​ ಫೋಟೋಗಳು ವೈರಲ್


ಇನ್ನು, ತುಷಾರ್ ಜಲೋಟಾ ಅವರು ನಿರ್ದೇಶಿಸಿದ ದಸ್ವಿ ಚಿತ್ರದಲ್ಲಿ ನಿಮೃತ್ ಕೌರ್ ಮತ್ತು ಯಾಮಿ ಗೌತಮ್ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಅಭಿಷೇಕ್, ಗಂಗಾ ರಾಮ್ ಚೌಧರಿ ಎಂಬ ಪಾತ್ರದಲ್ಲಿ ನಟಿಸಿದ್ದು, ಅಶಿಕ್ಷಿತ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ.

Published by:ವಾಸುದೇವ್ ಎಂ
First published: