ಕೆಲವು ವರ್ಷಗಳಿಂದ ಈ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯನ್ನು ಹೊರತು ಪಡಿಸಿ, ಅಭಿಮಾನಿಗಳು ತಮ್ಮ ಮನೆಯಲ್ಲಿ ಟಿವಿ (TV) ಮುಂದೆ ಕುಳಿತುಕೊಂಡು ನೋಡಿ ಕುಣಿದು ಕುಪ್ಪಳಿಸುತ್ತಿರುವ ಇನ್ನೊಂದು ಆಟ ಎಂದರೆ ಅದು ಕಬಡ್ಡಿ ಅಂತಾನೆ ಹೇಳಬಹುದು. ಸತತ ಮೂರನೇ ಬಾರಿಗೆ ಪ್ರೋ ಕಬಡ್ಡಿ (Kabbadi) ಲೀಗ್ (PKL) ಫೈನಲ್ ಪಂದ್ಯವನ್ನು ತಲುಪಿದ್ದಲ್ಲದೆ, ಜೈಪುರ್ ಪಿಂಕ್ ಪ್ಯಾಂಥರ್ಸ್ ಎರಡನೇ ಬಾರಿಗೆ ಪಿಕೆಎಲ್ 2022 ರ ಚಾಂಪಿಯನ್ಶಿಪ್ ಅನ್ನು ಗೆದ್ದುಕೊಂಡು ಪಿಕೆಎಲ್ ನ ಚಾಂಪಿಯನ್ ಗಳಾದರು ಎಂಬುದು ನಮಗೆಲ್ಲರಿಗೂ ಗೊತ್ತೇ ಇದೆ.
ಲೀಗ್ ಹಂತದಲ್ಲಿ ಮೊದಲ ಸ್ಥಾನ ಪಡೆದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವು ಈ ಋತುವಿನ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ರೋಚಕ 4 ಅಂಕಗಳ ಅಂತರದಲ್ಲಿ ಮಣಿಸಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೋ ಕಬಡ್ಡಿ ಲೀಗ್ ಟೂರ್ನಿಯ 9ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಿಕೆಎಲ್ ಫೈನಲ್ ಪಂದ್ಯವನ್ನು 4 ಅಂಕಗಳ ಅಂತರದಲ್ಲಿ ಗೆದ್ದುಕೊಂಡ ಪ್ಯಾಂಥರ್ಸ್
ಮುಂಬೈನ ಸರ್ದಾರ್ ವಲ್ಲಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸುನೀಲ್ ಕುಮಾರ್ ಸಾರಥ್ಯದ ಪ್ಯಾಂಥರ್ಸ್ ತಂಡ, ಪುಣೇರಿ ಪಲ್ಟಾನ್ ವಿರುದ್ಧ 33-29 ಅಂಕಗಳಿಂದ ಜಯ ಸಾಧಿಸಿತು.
ಈ ವಿಜಯದ ಹಿನ್ನಲೆಯಲ್ಲಿ ಒಬ್ಬ ಬಾಲಿವುಡ್ ನಟ ತನ್ನ ಹೆಂಡತಿ ಮಗಳನ್ನು ಸಂತೋಷದಿಂದ ಅಪ್ಪಿಕೊಂಡು ವಿಜಯದ ಸಂಭ್ರಮಾಚರಣೆಯನ್ನು ಮಾಡಿದ್ದಾರೆ ನೋಡಿ.
View this post on Instagram
ಇಲ್ಲಿಯೂ ಸಹ ಹಾಗೆ ಆಗಿದೆ ನೋಡಿ.. ಆರಾಧ್ಯ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ಪ್ರೋ ಕಬಡ್ಡಿ ಲೀಗ್ ನಲ್ಲಿ ಅಭಿಷೇಕ್ ಬಚ್ಚನ್ ಅವರ ತಂಡ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಪರ ಚಿಯರ್ ಲೀಡರ್ ಗಳಾಗಿದ್ದರು.
ಪ್ಯಾಂಥರ್ಸ್ ತಂಡದ ವಿಜಯೋತ್ಸವದಲ್ಲಿ ಪಾಲ್ಗೊಂಡ ಅಭಿಷೇಕ್ ಬಚ್ಚನ್ ಮಗಳು ಮತ್ತು ಹೆಂಡತಿ
ತಾಯಿ ಮತ್ತು ಮಗಳು ಈ ಪಂದ್ಯದಲ್ಲಿ ಅಭಿಷೇಕ್ ಅವರ ತಂಡದ ಗೆಲುವಿಗಾಗಿ ಚಿಯರ್ ಮಾಡುತ್ತಿದ್ದರು. ಆ ಫೈನಲ್ ಪಂದ್ಯ ನಡೆಯುವ ಸ್ಥಳದಿಂದ ಹಲವಾರು ವೀಡಿಯೋಗಳು ಮತ್ತು ಫೋಟೋಗಳು ಪ್ರಸ್ತುತ ಎಲ್ಲಾ ವಿಷಯಗಳೊಂದಿಗೆ ಗಮನ ಸೆಳೆಯುತ್ತಿವೆ.
‘ಕಜ್ರಾ ರೇ’ ನಟಿ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ವಿಶೇಷ ವಿಜಯವನ್ನು ಆಚರಿಸುವುದನ್ನು ತಡೆಯಲು ಸಾಧ್ಯವಾಗದ ಕಾರಣ ಒಂದೆರಡು ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದರು.
ಈ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಐಶ್ವರ್ಯಾ ಅವರು "ಜೈಪುರ್ ಪಿಂಕ್ ಪ್ಯಾಂಥರ್ಸ್ ಪ್ರೋ ಕಬಡ್ಡಿ ಸೀಸನ್ 9 ಚಾಂಪಿಯನ್ಸ್! ಎಂತಹ ಅದ್ಭುತ ಋತು! ನಂಬಲಾಗದಷ್ಟು ಪ್ರತಿಭಾವಂತ ಆಟಗಾರರು, ಏಕಾಗ್ರತೆ ಮತ್ತು ಕಠಿಣ ಪರಿಶ್ರಮಿ ಕಬಡ್ಡಿ ಕ್ರೀಡಾಪಟುಗಳನ್ನೊಳಗೊಂಡ ನಮ್ಮ ತಂಡದ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ... ಶಬಾಷ್ ಹುಡುಗರೇ” ಎಂದು ಶೀರ್ಷಿಕೆಯನ್ನು ಸಹ ಹಾಕಿಕೊಂಡಿದ್ದಾರೆ.
ಅಭಿಷೇಕ್ ಅವರ ಮುದ್ದಾದ ವೀಡಿಯೋ ಹೇಗಿದೆ ಗೊತ್ತಾ?
ಆದರೆ, ಈ ಸ್ಮರಣೀಯ ಪಂದ್ಯವನ್ನು ಗೆದ್ದ ನಂತರ ಬಚ್ಚನ್ ಕುಟುಂಬದ ಒಂದು ಮುದ್ದಾದ ವೀಡಿಯೋ ನಮ್ಮ ಕಣ್ಣುಗಳನ್ನು ಸೆಳೆಯಿತು. ಈ ಕ್ಲಿಪ್ ನಲ್ಲಿ ‘ದಸ್ವಿ’ ಚಿತ್ರದ ನಟ ಅಭಿಷೇಕ್ ತನ್ನ ಹೆಂಡತಿ ಮತ್ತು ಮಗಳಿಗೆ ಖುಷಿಯಿಂದ ಹಗ್ ಮಾಡುವುದನ್ನು ನೋಡಬಹುದು.
ಇದನ್ನೂ ಓದಿ: Ponniyin Selvan: ಐಶ್ವರ್ಯಾ ರೈ-ತ್ರಿಷಾ ಒಟ್ಟಿಗೆ ಕಾಣಿಸಿಕೊಂಡೇ ಇಲ್ವಾ? ಹೀಗೇಕೆ ಮಾಡಿದ್ರು ಮಣಿರತ್ನಂ?
ಈ ಕ್ಷಣವು ತುಂಬಾ ವಿಶೇಷವಾಗಿತ್ತು ಮತ್ತು ಅದು ಅಕ್ಷರಶಃ ಕುಟುಂಬದ ಖುಷಿಯನ್ನು ತೋರಿಸುತ್ತದೆ. ಅವರಲ್ಲದೆ, ಅಭಿಷೇಕ್ ಅವರ ಸೋದರ ಸೊಸೆ ನವ್ಯಾ ನಂದಾ ಕೂಡ ಪಂದ್ಯದ ಸಮಯದಲ್ಲಿ ಅವರೊಂದಿಗೆ ಸೇರಿಕೊಂಡರು ಮತ್ತು ಅವರೆಲ್ಲರೂ ತುಂಬಾನೇ ಖುಷಿಯಾಗಿದ್ದರು.
ಇನ್ನೂ ಕೆಲಸದ ವಿಷಯಕ್ಕೆ ಬಂದರೆ ನಟಿ ಐಶ್ವರ್ಯ ರೈ ಬಚ್ಚನ್ ಈ ವರ್ಷದ ಆರಂಭದಲ್ಲಿ ಪೊನ್ನಿಯಿನ್ ಸೆಲ್ವನ್ 1 ರಲ್ಲಿ ನಟಿಸಿದ್ದರು. ಈ ಚಿತ್ರವನ್ನು ಮಣಿರತ್ನಂ ಅವರು ನಿರ್ದೇಶಿಸಿದ್ದು, ಗಲ್ಲಾಪೆಟ್ಟಿಗೆಯ ಬ್ಲಾಕ್ ಬಸ್ಟರ್ ಹಿಟ್ ಆಗಿ ಹೊರಹೊಮ್ಮಿತು. ಮತ್ತೊಂದೆಡೆ, ಅಭಿಷೇಕ್ ಬಚ್ಚನ್ ‘ಬ್ರೀಥ್ ಇನ್ ಟೂ ದಿ ಶ್ಯಾಡೋಸ್’ ನ ಇತ್ತೀಚಿನ ಸೀಸನ್ ನ ಭಾಗವಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ