Abhishek Bachchan: ಕೊಟ್ಟ ಮಾತಿನಂತೆ ನಡೆದುಕೊಂಡ ಅಭಿಷೇಕ್​ ಬಚ್ಚನ್​.. ಅಗ್ರಾ ಜೈಲಿನಲ್ಲಿ `ದಸ್ವಿ’ ಪ್ರೀಮಿಯರ್​ ಶೋ!

ಅಗ್ರಾ ಸೆಂಟ್ರಲ್​ ಜೈಲಿನಲ್ಲೇ ಈ ಸಿನಿಮಾದ ಚಿತ್ರೀಕರಣವಾಗಿದೆ. ಶೂಟಿಂಗ್​ ವೇಳೆ ಅಲ್ಲಿದ್ದ ಖೈದಿಗಳ ಜೊತೆ ಅಭಿಷೇಕ್​ ಬಚ್ಚನ್​ ಉತ್ತಮ ಬಾಂಧ್ಯವವನ್ನು ಹೊಂದಿದ್ದರು.

ಜೈಲಿನಲ್ಲಿ ದಸ್ವಿ ಸಿನಿಮಾ

ಜೈಲಿನಲ್ಲಿ ದಸ್ವಿ ಸಿನಿಮಾ

  • Share this:
ಬಾಲಿವುಡ್(Bollywood) ಸೂಪರ್​ ಸ್ಟಾರ್ ಅಮಿತಾಭ್​ ಬಚ್ಚನ್(Amithabh Bachchan)​ ಅವರ ಮಗ ಅಭಿಷೇಕ್​ ಬಚ್ಚನ್(Abhishek Bachchan)​ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಹೌದು, ಒಂದು ವರ್ಷದ ಹಿಂದೆ ಅಭಿಷೇಕ್​ ಬಚ್ಚನ್​ ಒಂದು ಮಾತನ್ನು ನೀಡಿದ್ದರು. ಅದರಂತೆ ಈಗ ಆ ಮಾತಿನಂತೆ ನಡೆದುಕೊಂಡಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದರ ಜೊತೆಗೆ ಯಾರು ಮಾಡಿರದಂತಹ ರೆಕಾರ್ಡ್​ವೊಂದನ್ನು ಮಾಡಿದ್ದಾರೆ. ಅದೇನು ಅಂತೀರಾ? ಮುಂದೆ ನೋಡಿ. ಅಭಿಷೇಕ್​ ಬಚ್ಚನ್​ ಅವರ ಮುಂದಿನ ಸಿನಿಮಾ ‘ದಸ್ವಿ’(Dasvi). ಇದೊಂದು ಹಾಸ್ಯದ ಜೊತೆ ಸಮಾಜಕ್ಕೆ ಸಂದೇಶ ಇರುವಂತ ಚಿತ್ರ. ಈ ಚಿತ್ರದ ಶೂಟಿಂಗ್​ಗಾಗಿ ಅಭಿಷೇಕ್​ ಬಚ್ಚನ್​ ಹಾಗೂ  ಚಿತ್ರತಂಡ ಅಗ್ರಾ ಸೆಂಟ್ರಲ್​ ಜೋಲಿ(Agra Central Jail)ಗೆ ಕಳೆದ ವರ್ಷ ಭೇಟಿ ನೀಡಿತ್ತು. ಅಗ್ರಾ ಸೆಂಟ್ರಲ್​ ಜೈಲಿನಲ್ಲೇ ಈ ಸಿನಿಮಾದ ಚಿತ್ರೀಕರಣವಾಗಿದೆ. ಶೂಟಿಂಗ್​ ವೇಳೆ ಅಲ್ಲಿದ್ದ ಖೈದಿಗಳ ಜೊತೆ ಅಭಿಷೇಕ್​ ಬಚ್ಚನ್​ ಉತ್ತಮ ಬಾಂಧ್ಯವವನ್ನು ಹೊಂದಿದ್ದರು.

ಅಂದು ಖೈದಿಗಳಿಗೆ ಮಾತು ಕೊಟ್ಟಿದ್ದ ಅಭಿಷೇಕ್​!

ದಸ್ವಿ ಚಿತ್ರದ ಶೂಟಿಂಗ್​ ಎಲ್ಲ ಮುಗಿದ ಬಳಿಕ ಖೈದಿಗಳಿಗೆ ಅಭಿಷೇಕ್​ ಬಚ್ಚನ್​ ಮಾತು ನೀಡಿದ್ದರು. ಸಿನಿಮಾ ತಯಾರದ ಬಳಿಕ ಮೊದಲು ನಿಮಗೆ ತೋರಿಸುತ್ತೇನೆ ಎಂದು ಅಗ್ರಾ ಸೆಂಟ್ರಲ್​ ಜೈಲಿನ ಖೈದಿಗಳಿಗೆ ಹೇಳಿದ್ದರು. ಅದರಂತೆ ಈಗ ಸಿನಿಮಾ ತಯಾರಾಗಿತ್ತು. ಹೀಗಾಗಿ ಅಭಿಷೇಕ್​ ಬಚ್ಚನ್​ ಮತ್ತೆ ಅಗ್ರಾ ಸೆಂಟ್ರಲ್​ ಜೈಲಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಖೈದಿಗಳಿಗೆ ಕೊಟ್ಟ ಮಾತಿನಂತೆ 2000 ಸಾವಿರ ಜನರಿಗೆ ತಮ್ಮ ಮುಂಬರುವ ದಸ್ವಿ ಚಿತ್ರವನ್ನು ತೋರಿಸಿದ್ದಾರೆ. ಜೈಲಿನಲ್ಲೇ ದೊಡ್ಡ ಪರದೆ ಹಾಕಿಸಿ ಖೈದಿಗಳು ಹಾಗೂ ಪೊಲೀಸರಿಗೆ ಸಿನಿಮಾ ತೋರಿಸಿದ್ದಾರೆ.

ದಾಸ್ವಿ ಸಿನಿಮಾ ನೋಡಿ ಖೈದಿಗಳು ಫುಲ್​ ಖುಷ್​!

ಇನ್ನೂ ದಸ್ವಿ ಸಿನಿಮಾ ನೋಡಿದ ಖೈದಿಗಳು ಸಂತಸ ಪಟ್ಟಿದ್ದಾರೆ. ಅಭಿಷೇಕ್ ಮತ್ತು ಸಹ-ನಟರಾದ ಯಾಮಿ ಗೌತಮ್, ನಿಮ್ರತ್ ಕೌರ್ ಮತ್ತು ನಿರ್ದೇಶಕ ತುಷಾರ್ ಜಲೋಟಾ ಸೇರಿದಂತೆ ಕಲಾವಿದರು ಮತ್ತು ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳನ್ನು ಸ್ವಾಗತಿಸಿ ಸಿನಿಮಾ ಪ್ರದರ್ಶಸಿದ್ದಾರೆ. ‘ಕಳೆದ ರಾತ್ರಿ ನಾನು ಒಂದು ವರ್ಷದ ಹಿಂದೆ ನಾನು ಮಾಡಿದ ಬದ್ಧತೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದೇನೆ. ನಮ್ಮ # ದಸ್ವಿ ಚಿತ್ರದ ಮೊದಲ ಪ್ರದರ್ಶನವನ್ನು ಅಗ್ರಾ ಸೆಂಟ್ರಲ್ ಜೈಲಿನ ಪೊಲೀಸರು ಮತ್ತು ಕೈದಿಗಳಿಗಾಗಿ ನಡೆಸಲಾಯಿತು’ ಎಂದು ಅಭಿಷೇಕ್​ ಬಚ್ಚನ್​ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.ಇದನ್ನೂ ಓದಿ:ಮೆಟಾವರ್ಸ್​ನಲ್ಲೂ ರಾಕಿ ಭಾಯ್​ದೇ ಹವಾ.. ಇಡೀ ವಿಶ್ವದಲ್ಲೇ ಹೊಸ ದಾಖಲೆ ಬರೆದ ಕೆಜಿಎಫ್​​ವರ್ಸ್!

ಏಪ್ರಿಲ್​ 7ರಂದು ದಾಸ್ವಿ ಸಿನಿಮಾ ರಿಲೀಸ್​!

ಜಿಯೋ ಸ್ಟುಡಿಯೋಸ್ & ದಿನೇಶ್ ವಿಜನ್ ಉಪಸ್ಥಿತರಿದ್ದು, ದಸ್ವಿ. ಎ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ, ತುಷಾರ್ ಜಲೋಟಾ ನಿರ್ದೇಶಿಸಿದ್ದಾರೆ, ಅಭಿಷೇಕ್ ಬಚ್ಚನ್, ಯಾಮಿ ಗೌತಮ್ ಮತ್ತು ನಿಮ್ರತ್ ಕೌರ್ ಇತರರು ನಟಿಸಿದ್ದಾರೆ, ದಿನೇಶ್ ವಿಜನ್ ಮತ್ತು ಬೇಕ್ ಮೈ ಕೇಕ್ ಫಿಲ್ಮ್ಸ್ ನಿರ್ಮಿಸಿದ್ದಾರೆ, ಏಪ್ರಿಲ್ 7, 2022 ರಿಂದ ಜಿಯೋ ಸಿನಿಮಾ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಇದನ್ನೂ ಓದಿ: RRR ಸಿನಿಮಾದಲ್ಲಿ ಆಲಿಯಾ ಸೀನ್ಸ್​​ಗೆ ಕತ್ತರಿ? ರಾಜಮೌಳಿಯನ್ನು ಅನ್​ಫಾಲೋ ಮಾಡಿದ್ರಾ `ಸೀತಾ’?

ಅಭಿಷೇಕ್ ಬಚ್ಚನ್ ಉತ್ತರಾಧಿಕಾರಿ!

ಬ್ಲಾಗ್ ಅನ್ನು ಆರಂಭಿಸಿರುವ ಅಮಿತಾಭ್ ಬಚ್ಚನ್ ಅವರು, ತಂದೆಗೆ ತನ್ನ ಮಕ್ಕಳ ಸಾಧನೆಗಳನ್ನು ವೀಕ್ಷಿಸುವುದು “ಅತ್ಯಂತ ದೊಡ್ಡ ಸಂತೋಷ ಸಂಗತಿ'' ಎಂದು ಹೇಳಿಕೊಂಡಿದ್ದಾರೆ. ಹಾಗೂ, “ವೈಭವವನ್ನು ಆಸ್ವಾದಿಸಲು , ಗುರುತಿಸುವುದಕ್ಕಾಗಿ ಅವರು ತಮ್ಮ ಹೆಸರನ್ನು ಹೇಳುತ್ತಾರೆ. ನನಗಾಗಿ ಅಭಿಷೇಕ್, ಅಭಿಷೇಕ್‍ನ ತಂದೆ ನಾನು ಎಂದು ಗುರುತಿಸಲ್ಪಡುವಂತೆ ಮಾಡಿದ್ದಾನೆ. ಮತ್ತು ಅತ್ಯಂತ ಹೆಮ್ಮೆಯಿಂದ ನಾನು ಅಭಿಷೇಕ್ ನನ್ನ “ಉತ್ತರಾಧಿಕಾರಿ” ಎಂದು ಹೇಳುತ್ತೇನೆ ಎಂದು ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ ಅಮಿತಾಭ್ ಬಚ್ಚನ್.
Published by:Vasudeva M
First published: