Abhishek Bachchan-Aishwarya Rai ಗೆ ಇಂದು 15ನೇ ವಿವಾಹ ವಾರ್ಷಿಕೋತ್ಸವ! ಇವ್ರ ಬಗ್ಗೆ ಗೊತ್ತಿರದ ಸಂಗತಿಗಳು ಇಲ್ಲಿದೆ

ಐಶ್ ಮತ್ತು ಅಭಿಷೇಕ್ ಬಚ್ಚನ್ ಪ್ರೀತಿ, ಸಂಬಂಧ, ಮೊದಲ ಭೇಟಿ ಬಗ್ಗೆ ಹಲವರಿಗೆ ತಿಳಿದಿಲ್ಲ. 15 ವರ್ಷಗಳ ಸಂಭ್ರಮದ ಈ ಸಮಯದಲ್ಲಿ ಇವರಿಬ್ಬರ ಬಗೆಗಿನ 15 ಕುತೂಹಲಕಾರಿ ವಿಷಯಗಳು ಇಲ್ಲಿವೆ.

ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ

ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ

  • Share this:
ಬಾಲಿವುಡ್‌(Bollywood)ನ ಜನಪ್ರಿಯ ಮತ್ತು ಸುಂದರ ಜೋಡಿಗಳಾದ ಅಭಿಷೇಕ್ ಬಚ್ಚನ್(Abhishek Bachchan) ಮತ್ತು ಐಶ್ವರ್ಯ ರೈ ಬಚ್ಚನ್(Aishwarya Rai Bachchan) ಅವರಿಗೆ ಇಂದು 15ನೇ ವಿವಾಹ ವಾರ್ಷಿಕೋತ್ಸವ(15th Wedding Anniversary) ಸಂಭ್ರಮ. ಚಿತ್ರರಂಗದಲ್ಲಿ ತಮ್ಮದೇ ಹೆಸರು, ಖ್ಯಾತಿ ಗಳಿಸಿದ್ದ ಇಬ್ಬರು ಒಬ್ಬೊರನ್ನೊಬ್ಬರು ಪ್ರೀತಿಸುತ್ತಿದ್ದರು. ನಂತರ ಈ ಪ್ರಣಯ ಪಕ್ಷಿಗಳು 15 ವರ್ಷದ ಹಿಂದೆ ಅಂದರೆ ಏಪ್ರಿಲ್ 20, 2007ರಂದು ವಿವಾಹವಾದರು. ಇವರ ಪ್ರೀತಿಗೆ ಸಾಕ್ಷಿಯಾಗಿ ಒಂದು ಮುದ್ದಾದ ಹೆಣ್ಣು ಮಗಳು ಸಹ ಇದ್ದಾಳೆ. ಈಗಿನಷ್ಟು ಸಾಮಾಜಿಕ ಜಾಲತಾಣ(Social Media)ಗಳು ಆಗ ಹೆಚ್ಚು ಜನಪ್ರಿಯವಾಗಿರಲಿಲ್ಲ. ಈಗೆಲ್ಲಾ ತಮ್ಮ ನೆಚ್ಚಿನ ನಟರು ಏನೆಲ್ಲಾ ಮಾಡ್ತಾ ಇದ್ದಾರೆ ಅನ್ನೋ ಪಿನ್ ಟು ಪಿನ್ ಮಾಹಿತಿ ಅಭಿಮಾನಿಗಳಿಗೆ ಸಿಗುತ್ತದೆ. ಆದರೆ ಐಶ್ ಮತ್ತು ಅಭಿಷೇಕ್ ಬಚ್ಚನ್ ಪ್ರೀತಿ, ಸಂಬಂಧ, ಮೊದಲ ಭೇಟಿ ಬಗ್ಗೆ ಹಲವರಿಗೆ ತಿಳಿದಿಲ್ಲ. 15 ವರ್ಷಗಳ ಸಂಭ್ರಮದ ಈ ಸಮಯದಲ್ಲಿ ಇವರಿಬ್ಬರ ಬಗೆಗಿನ 15 ಕುತೂಹಲಕಾರಿ ವಿಷಯಗಳು ಇಲ್ಲಿವೆ.

1) ಮೊದಲ ಭೇಟಿ

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮೊದಲ ಬಾರಿಗೆ ಸ್ವಿಡ್ಜರ್‌ಲ್ಯಾಂಡ್​​ನಲ್ಲಿ ಭೇಟಿಯಾಗಿದ್ದರು.

2) ಭೇಟಿಗೆ ಬಾಬಿ ಡಿಯೋಲ್ ಕಾರಣ

ಬಾಬಿ ಡಿಯೋಲ್ ಮತ್ತು ಐಶ್ವರ್ಯಾ 'ಔರ್ ಪ್ಯಾರ್ ಹೋ ಗಯಾ' ಚಿತ್ರಕ್ಕಾಗಿ ಸ್ವಿಡ್ಜರ್‌ಲ್ಯಾಂಡ್​ನಲ್ಲಿದ್ದರು. ಅದೇ ಸಮಯದಲ್ಲಿ ಅಭಿಷೇಕ್ ಬಚ್ಚನ್ ಸಹ ತಮ್ಮ ತಂದೆಯವರ ಸಿನಿಮಾ ಮೃತ್ಯುದಾತಕ್ಕೆ ಪ್ರೊಡಕ್ಷನ್ ಬಾಯ್ ಆಗಿ ಸ್ವಿಡ್ಜರ್​​ಲ್ಯಾಂಡ್​ನಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಸ್ವತಃ ಅಭಿಷೇಕ್ ಯೂಟ್ಯೂಬರ್ ರಣ್ವೀರ್ ಅಲ್ಲಾಬಾದಿಯಾ ಅವರ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ನಾನು ಪ್ರೊಡಕ್ಷನ್ ಬಾಯ್ ಆಗಿದ್ದಾಗ ನಾನು ಅವಳನ್ನು ಮೊದಲ ಬಾರಿಗೆ ಭೇಟಿಯಾದೆ. ನನ್ನ ತಂದೆ ಮೃತ್ಯುದಾತ ಎಂಬ ಚಲನಚಿತ್ರವನ್ನು ಮಾಡುತ್ತಿದ್ದರು ಮತ್ತು ನಾನು ಸ್ವಿಟ್ಜರ್ಲೆಂಡ್‌ಗೆ ಲೋಕೇಶನ್ ಹುಡುಕಲು ಹೋಗಿದ್ದೆ, ಎರಡ್ಮೂರು ದಿನ ನಾನು ಸ್ವಿಜರ್ಲ್ಯಾಂಡ್ನಲ್ಲಿದ್ದೆ. ಆ ವಿಚಾರವನ್ನು ಹೇಗೋ ತಿಳಿದುಕೊಂಡ ನನ್ನ ಬಾಲ್ಯ ಸ್ನೇಹಿತ ಬಾಬಿ ಡಿಯೋಲ್ ಹೇ ನೀನು ಏಕೆ ಊಟಕ್ಕೆ ನಮ್ಮ ಜೊತೆ ಬರಬಾರದು ಎಂದು ಕರೆದ. ಆ ಮೇಲೆ ನಾನು ಊಟಕ್ಕೆ ಹೋದೆ. ಅಲ್ಲಿಯೇ ಮೊದಲ ಸಲ ಐಶ್ವರ್ಯ ರೈ ಅವರನ್ನು ಭೇಟಿ ಮಾಡಿದೆ” ಎಂದು ತಿಳಿಸಿದ್ದರು.

3) ಒಟ್ಟಿಗೆ ನಟಿಸಿದ ಮೊದಲ ಚಿತ್ರ

ಅಭಿಷೇಕ್ ಮತ್ತು ಐಶ್ವರ್ಯಾ ಎಂಟು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಮೊದಲನೆಯದು 2000ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಸಿನಿಮಾ 'ಧೈ ಅಕ್ಷರ್ ಪ್ರೇಮ್ ಕೆ'.

4) ಹೆಚ್ಚು ಹತ್ತಿರವಾಗಿದ್ದು

ಐಶ್ವರ್ಯಾ ಮತ್ತು ಅಭಿಷೇಕ್ 2006ರಲ್ಲಿ ಗುರು, ಉಮ್ರಾವ್ ಜಾನ್ ಮತ್ತು ಧೂಮ್ 2 ಎಂಬ ಮೂರು ಚಲನಚಿತ್ರಗಳನ್ನು ಒಟ್ಟಿಗೆ ಚಿತ್ರೀಕರಿಸುವ ವೇಳೆ ಇಬ್ಬರು ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆದರು.

5) ಪ್ರಪೋಸ್ ಮಾಡಿದ್ದು ಅಭಿಷೇಕ್ ಬಚ್ಚನ್

ಗುರು ಚಿತ್ರದ ಪ್ರೀಮಿಯರ್ ನಂತರ ನ್ಯೂಯಾರ್ಕ್‌ನ ಹೋಟೆಲ್ ಬಾಲ್ಕನಿಯಲ್ಲಿ ಅಭಿಷೇಕ್ ಮೊದಲಿಗೆ ಐಶ್ವರ್ಯಾಗೆ ಸಿನಿಮಾದ ರೀತಿಯಲ್ಲೇ ಪ್ರಪೋಸ್ ಮಾಡಿದ್ದರು.

ಇದನ್ನೂ ಓದಿ: ರಾಕಿ ಡೋಂಟ್​ ಲೈಕ್​ ರೆಕಾರ್ಡ್​.. ಬಟ್​ ರೆಕಾರ್ಡ್​ ಲೈಕ್ಸ್​ ರಾಕಿಂಗ್​ ಸ್ಟಾರ್​! 'ದಂಗಲ್'​ ದಾಖಲೆನೇ ಧೂಳಿಪಟ

6) ಪ್ರಪೋಸ್ ಹಿಂದಿನ ಆಲೋಚನೆ

ಮದುವೆಯ ನಂತರ ಅವರ ಮೊದಲ ಸಂದರ್ಶನದಲ್ಲಿ, ಅಭಿಷೇಕ್ ಓಪ್ರಾ ವಿನ್ಫ್ರೇ ಅವರೊಂದಿಗೆ ಪ್ರಪೋಸ್ ಹಿಂದಿನ ಆಲೋಚನೆಯನ್ನು ಹಂಚಿಕೊಂಡರು. ನ್ಯೂಯಾರ್ಕ್‌ನಲ್ಲಿ ಚಿತ್ರದ ಚಿತ್ರೀಕರಣದ ವೇಳೆ ಆ ಹೋಟೆಲ್‌ನಲ್ಲಿ ಉಳಿದುಕೊಂಡ ಸಮಯದಲ್ಲಿ ಐಶ್ವರ್ಯಾ ಹೆಂಡತಿಯಾಗಿ ಜೊತೆಗಿದ್ದರೆ ಚೆನ್ನಾಗಿರುತ್ತದೆ ಎಂದು ಅವರು ಅಂದುಕೊಂಡಿದ್ದರಂತೆ. ಆದ್ದರಿಂದ, ಅಭಿಷೇಕ್ ವರ್ಷಗಳ ನಂತರ, ಅದೇ ಬಾಲ್ಕನಿಯಲ್ಲಿ ಐಶುಗೆ ಪ್ರಪೋಸ್ ಮಾಡಿದ್ದರಂತೆ ಮತ್ತು ಐಶ್ವರ್ಯಾ ಅದನ್ನು ತಕ್ಷಣ ಒಪ್ಪಿಕೊಂಡಿದ್ದರು.

7) ಉಂಗುರ

ಅಭಿಷೇಕ್ ಅವರು ಯಾವುದೇ ಬೆಲೆ ಬಾಳುವ ಉಂಗುರ ಹಾಕಿಲ್ಲವಂತೆ. ಬದಲಿಗೆ ಗುರು ಚಿತ್ರದ ಸೆಟ್‌ನಲ್ಲಿನ ಯಾವುದೋ ಉಂಗುರದ ಪ್ರಾಪರ್ಟಿಯನ್ನು ಭಾವನಾತ್ಮಕ ಕಾರಣಗಳಿಗಾಗಿ ಉಂಗುರವನ್ನು ನೀಡುವಂತೆ ತಯಾರಕರಿಗೆ ವಿನಂತಿಸಿದ್ದರು ಎಂದು ವರದಿಯಾಗಿದೆ.

8) ನಿಶ್ಚಿತಾರ್ಥ

ಪ್ರೇಮ ಪಕ್ಷಿಗಳು ಜನವರಿ 14, 2007ರಂದು ಮುಂಬೈನ ಬಚ್ಚನ್ ನಿವಾಸ ಜಲ್ಸಾದಲ್ಲಿ ಪರಸ್ಪರ ನಿಶ್ಚಿತಾರ್ಥ ಮಾಡಿಕೊಂಡರು.

9) ಅಭಿಷೇಕ್ ಮತ್ತು ಐಶ್ವರ್ಯ ಮದುವೆ

ಅಭಿಷೇಕ್ ಮತ್ತು ಐಶ್ವರ್ಯಾ 2007ರ ಏಪ್ರಿಲ್ 20 ರಂದು ವಿವಾಹವಾದರು.

10) ಐಶ್ವರ್ಯಾ ಮದುವೆ ಸೀರೆ

ತನ್ನ ಮದುವೆಯ ದಿನದಂದು, ಐಶ್ ನಿಜವಾದ ಚಿನ್ನದ ದಾರದ ಕೆಲಸವಿರುವ ಅಮೂಲ್ಯವಾದ ಚಿನ್ನದ ಕಾಂಜೀವರಂ ಸೀರೆಯನ್ನು ಧರಿಸಿದ್ದಳು. ಇದರ ಬೆಲೆ 75 ಲಕ್ಷ ರೂ. ಮತ್ತು ಇದುವರೆಗಿನ ಅತ್ಯಂತ ದುಬಾರಿ ಸೀರೆಗಳಲ್ಲಿ ಇದು ಒಂದಾಗಿದೆ.

11) ಅಭಿಷೇಕ್ ಉಡುಪು

ಬ್ಲಫ್‌ಮಾಸ್ಟರ್ ನಟ ತನ್ನ ಮದುವೆಯ ದಿನದ ಉಡುಪಾಗಿ ಚಿನ್ನದ ದಾರದ ಮೇಲೆ ಬಿಳಿ ಶೆರ್ವಾನಿಯನ್ನು ಧರಿಸಿಕೊಂಡಿದ್ದರು.

12) ಹನಿಮೂನ್

ದಂಪತಿಗಳು ತಮ್ಮ ಮದುವೆಯ ನಂತರ ಯುರೋಪ್‌ಗೆ ಒಂದು ತಿಂಗಳ ಹನಿಮೂನ್‌ಗಾಗಿ ಹೋಗಿದ್ದರು.

ಇದನ್ನೂ ಓದಿ: ರಣಬೀರ್ ಕಪೂರ್-ಆಲಿಯಾ ಭಟ್ ನಿವ್ವಳ ಆಸ್ತಿ ಕಂಡು ಬೆಕ್ಕಸ ಬೆರಗಾಗಿ!

13) ತಂದೆ-ತಾಯಿ ಆದ ಜೋಡಿಗಳು

ನವೆಂಬರ್ 16, 2011ರಂದು ತಮ್ಮ ಮಗಳು ಆರಾಧ್ಯಳಿಗೆ ಐಶ್ ಜನ್ಮ ನೀಡಿದರು. ಇಬ್ಬರೂ ನಟರು ತಮ್ಮ ಮಗಳೊಂದಿಗೆ ತುಂಬಾ ಆತ್ಮೀಯರಾಗಿದ್ದಾರೆ. ಐಶ್ವರ್ಯಾ ಆಗಾಗ್ಗೆ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಮಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.

14) 'ಅಭಿಷೇಕ್ ನನ್ನ ಸ್ಫೂರ್ತಿ'

ಸಂದರ್ಶನವೊಂದರಲ್ಲಿ, ಐಶ್ವರ್ಯಾ "ಅಭಿಷೇಕ್ ನನ್ನ ಸ್ಫೂರ್ತಿಯ ಮೂಲ, ಅವರು ಯಾವಾಗಲೂ ನನಗೆ ಬೆಂಬಲ ನೀಡುತ್ತಾರೆ. ನಾನು ಗೊಂದಲಕ್ಕೊಳಗಾದಾಗ ನನ್ನಲ್ಲಿರುವ ದ್ವಂದ್ವವನ್ನು ಪರಿಹರಿಸುತ್ತಾರೆ'' ಎಂದಿದ್ದರು.

15) ' ಐಶ್ವರ್ಯಾ ಬಗ್ಗೆ ಹೆಮ್ಮೆ'

ಜೂನಿಯರ್ ಬಚ್ಚನ್ ತನ್ನ ಜೀವನದ ಮೇಲೆ ಐಶ್ವರ್ಯಾ ಪ್ರಭಾವದ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ, "ಅವಳು ನನಗಿಂತ ಹೆಚ್ಚು ಜನಪ್ರಿಯಳು. ಅವಳು ನನಗಿಂತ ದೊಡ್ಡ ತಾರೆ. ನಾನು ಇದರ ಬಗ್ಗೆ ತುಂಬಾ ಸಂತೋಷ ಮತ್ತು ಹೆಮ್ಮೆಪಡುತ್ತೇನೆ" ಎಂದು ಹೇಳಿದ್ದಾರೆ.
Published by:Vasudeva M
First published: