Abhishek Ambareesh: ವೈರಲ್​ ಆಗುತ್ತಿದೆ ಅಭಿಷೇಕ್​ ಅಂಬರೀಷ್ ನ್ಯೂ ಲುಕ್​: ನಿಖಿಲ್ ಕುಮಾರಸ್ವಾಮಿ​ ಏನಂದ್ರು ಗೊತ್ತಾ..?

Abhishek Ambareesh: ಅಭಿಷೇಕ್​ ಮಾಡಲಿರುವ ಹೊಸ ಸಿನಿಮಾಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದರೆ ಅಭಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಲುಕ್​ ಇರುವ ಚಿತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಹೊಸ ಸಿನಿಮಾದ ಬಗ್ಗೆ ಸುಳಿವು ಕೊಟ್ಟಿದ್ದಾರೆ.

Anitha E | news18-kannada
Updated:September 14, 2019, 4:46 PM IST
Abhishek Ambareesh: ವೈರಲ್​ ಆಗುತ್ತಿದೆ ಅಭಿಷೇಕ್​ ಅಂಬರೀಷ್ ನ್ಯೂ ಲುಕ್​: ನಿಖಿಲ್ ಕುಮಾರಸ್ವಾಮಿ​ ಏನಂದ್ರು ಗೊತ್ತಾ..?
ಅಭಿಷೇಕ್​ ಅಂಬರೀಷ್​
  • Share this:
- ಅನಿತಾ ಈ, 

'ಅಮರ್'​ ಸಿನಿಮಾದ ನಂತರ ಅಭಿಷೇಕ್​ ಅಂಬರೀಷ್ ಯಾವ ಸಿನಿಮಾ ಮಾಲಡಲಿದ್ದಾರೆ ಅಂತ ಯಂಗ್​ ರೆಬೆಲ್​ ಅಭಿಮಾನಿಗಳು ಕಾಯುತ್ತಿದ್ದರು. ಸದ್ಯ ಅವರಿಗೆ ಸಾಲು ಸಾಲು ಸಿನಿಮಾಗಳ ಆಫರ್​ ಸಿಗುತ್ತಿದೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಗುಲ್ಲಾಗಿತ್ತು.

ಆದರೆ ಅಭಿಷೇಕ್​ ಮಾಡಲಿರುವ ಹೊಸ ಸಿನಿಮಾಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದರೆ ಅಭಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಲುಕ್​ ಇರುವ ಚಿತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಹೊಸ ಸಿನಿಮಾದ ಬಗ್ಗೆ ಸುಳಿವು ಕೊಟ್ಟಿದ್ದಾರೆ.




 

Loading...




View this post on Instagram





 

A post shared by Abishek Ambareesh (@abishekambareesh) on






ಹೌದು, ಅಭಿ ಸಿಕ್ಕಾಪಟ್ಟೆ ಸ್ಟೈಲಿಶ್​ ಆಗಿರು ಪೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅವರ ಸ್ನೇಹಿತ ನಿಖಿಲ್​ ಕುಮಾರಸ್ವಾಮಿ ಸಹ ಕಮೆಂಟ್​ ಮಾಡಿದ್ದಾರೆ. 'looking sharp' ನಿಮ್ಮ ಮುಂದಿನ ಪ್ರಾಜೆಕ್ಟ್​ಗೆ ಶುಭಾಶಯ ಎಂದು ನಿಖಿಲ್​ ಬರೆದಿದ್ದಾರೆ.

nikhil commnt on abhishek ambareesh's photo
ಅಭಿ ಚಿತ್ರಕ್ಕೆ ನಿಖಿಲ್​ ಕಮೆಂಟ್​ ಮಾಡಿದ್ದು ಹೀಗೆ...


ನಿಖಿಲ್​ ಬರೆದಿರುವುದನ್ನು ಗಮನಿಸಿದರೆ, ಇವರಿಬ್ಬರ ಸ್ನೇಹ ಇನ್ನೂ ಹಸಿರಾಗಿದೆ ಎಂದು ತಿಳಿಯುತ್ತದೆ. ಜೊತೆಗೆ ಅಭಿ ಅಭಿನಯಿಲಿರುವ ಹೊಸ ಸಿನಿಮಾ ಫೈನಲ್​ ಆಗಿದೆ ಅನ್ನೋದು ತಿಳಿಯುತ್ತದೆ.

ಇದನ್ನೂ ಓದಿ: ನಿಮ್ಮೊಂದಿಗೆ ಕಿಚ್ಚ: ಟ್ವಿಟರ್​ ಲೈವ್​ನಲ್ಲಿ ನಿಮ್ಮ ಪ್ರಶ್ನೆಗೆ ಉತ್ತರಿಸಲಿದ್ದಾರೆ ಸುದೀಪ್​

ಮಂಡ್ಯ ಲೋಕಸಭಾ ಚುನಾವಣೆಯ ಸಮಯದಲ್ಲಿ ಅಭಿಷೇಕ್ ಹಾಗೂ ನಿಖಿಲ್​ ನಡುವೆ ಡೈಲಾಗ್​ ವಾರ್​ ನಡೆದಿತ್ತು​.  ಬಾಲ್ಯದ ಸ್ನೇಹಿತರಾಗಿದ್ದ ಇವರು ಚುನಾವಣಾ ಸಮಯದಲ್ಲಿ ನಡೆದ ಘಟನೆಗಳಿಂದ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು ಎಂಬೆಲ್ಲ ಸುದ್ದಿಗಳು ಹರಡಿದ್ದವು.

ಆದರೆ ಚುನಾವಣೆ ಮುಗಿದು ಇನ್ನೇನು ಅಭಿ ಅಭಿನಯದ 'ಅಮರ್​' ಸಿನಿಮಾದ ಬಿಡುಗಡೆ ಸಮಯದಲ್ಲಿ ನಿಖಿಲ್​ ಯಂಗ್​ ರೆಬೆಲ್​ಗೆ ಶುಭಕೋರುವ ಮೂಲಕ ತಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ ಎಂದು ಸಾಭೀತು ಮಾಡಿದ್ದರು. ಈಗಲೂ ಅಷ್ಟೆ ಅಭಿ ಫೋಟೋಗೆ ನಿಖಿಲ್​ ಖುಷಿಯಿಂದ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Takkar: ಡಿಬಾಸ್ ದರ್ಶನ್​​ ಕೈಯಿಂದ ಟಕ್ಕರ್​ ಸಿನಿಮಾದ ಆಡಿಯೋ-ಟ್ರೈಲರ್​​​ ಬಿಡುಗಡೆ..!

ಇನ್ನೂ ಸುಮಲತಾ ಅವರು ಈ ಹಿಂದೆಯೇ ಹೇಳಿದಂತೆ ಅಭಿ ಕೈಯಲ್ಲಿ ಎರಡು ಸಿನಿಮಾಗಳಿವೆ. ಇನ್ನೂ ಯಾವುದನ್ನೂ ಫೈನಲ್​ ಮಾಡಿಲ್ಲವಂತೆ. ಆದರೆ 'ಅಮರ್​' ಬಾಕ್ಸಾಫಿಸ್​ನಲ್ಲಿ ಸದ್ದು ಮಾಡದ ಕಾರಣಕ್ಕೆ ಈ ಸಲ ಯಂಗ್​ ರೆಬೆಲ್​ ಕೊಂಚ ಆಲೋಚಿಸಿ ಹೆಜ್ಜೆ ಇಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರ ಈ ಹೊಸ ಫೋಟೋ ನೋಡಿದ ಮೇಲೆ ಅವರ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.

Rashmika Mandanna: ಸೆನ್ಸೇಷನ್​ ಆಫ್​ ದ ಇಯರ್​ ಪ್ರಶಸ್ತಿ ತನ್ನದಾಗಿಸಿಕೊಂಡ ರಶ್ಮಿಕಾರ ಹಾಟ್​ ಚಿತ್ರಗಳು..!

 

First published:September 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...