ಫೆ.14ರಂದು ಪ್ರೇಮಿಗಳಿಗೆ ಗಿಫ್ಟ್​​ ನೀಡಲಿದ್ದಾರೆ ಅಭಿಷೇಕ್​ ಅಂಬರೀಶ್​!

ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ್​, ಊಟಿ, ಕೇರಳ ಹಾಗೂ ಸ್ವಿಜರ್​ಲೆಂಡ್​ನಲ್ಲಿ ಶೂಟಿಂಗ್​ ಮಾಡಲಾಗಿದೆ. ಸದ್ಯದಲ್ಲೇ ಚಿತ್ರತಂಡ ಸಿಂಗಾಪುರಕ್ಕೂ ತೆರಳಲಿದ್ದು, ಅಲ್ಲಿ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಿದೆ.

Rajesh Duggumane | news18
Updated:January 23, 2019, 5:40 PM IST
ಫೆ.14ರಂದು ಪ್ರೇಮಿಗಳಿಗೆ ಗಿಫ್ಟ್​​ ನೀಡಲಿದ್ದಾರೆ ಅಭಿಷೇಕ್​ ಅಂಬರೀಶ್​!
ಅಭಿಷೇಕ್​
Rajesh Duggumane | news18
Updated: January 23, 2019, 5:40 PM IST
ಮುಂದಿನ ತಿಂಗಳು ಪ್ರೇಮಿಗಳ ದಿನಾಚರಣೆ. ಪ್ರೀತಿಸಿದವರಿಗೆ ಏನಾದರೂ ಉಡುಗೊರೆ​ ನೀಡೋದು ವಾಡಿಕೆ. ಅಚ್ಚರಿ ಎಂದರೆ, ಈ ಬಾರಿ 'ರೆಬೆಲ್​ ಸ್ಟಾರ್​' ಅಂಬರೀಶ್ ಕುಟುಂಬದ ಕುಡಿ ಅಭಿಷೇಕ್​ ಪ್ರೇಮಿಗಳಿಗೆ ಗಿಫ್ಟ್​ ನೀಡಲು ಸಿದ್ಧರಾಗಿದ್ದಾರೆ! ಅವರೇನು ಉಡುಗೊರೆ ನೀಡುತ್ತಾರೆ ಎನ್ನುವ ಪ್ರಶ್ನೆ ಮೂಡದೇ ಇರದು. ಅದಕ್ಕೂ ಉತ್ತರವಿದೆ. ಫೆ.14ರಂದು ‘ಅಮರ್​​’ ಚಿತ್ರದ ಟೀಸರ್​ ಲಾಂಚ್​ ಆಗಲಿದೆ. ಈ ಮೂಲಕ ಚಿತ್ರ ಹೇಗಿರಲಿದೆ ಎನ್ನುವ ಚಿಕ್ಕ ಹಿಂಟ್​ ನೀಡಲಿದೆ ಚಿತ್ರತಂಡ.

ಮುಹೂರ್ತದ ಸಂದರ್ಭದಲ್ಲಿ ಚಿತ್ರತಂಡ ಕೆಲ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿತ್ತು. ಅಷ್ಟೇ ಅಲ್ಲ, ಈ ಚಿತ್ರ ಬೈಕ್​ ರೇಸ್​  ಬಗ್ಗೆ ಇರಲಿದೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿತ್ತು. ಈ ಚಿತ್ರದಲ್ಲಿ ಅಭಿಷೇಕ್​ ರೇಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್​ ಚೊಚ್ಚಲ ಸಿನಿಮಾ ಇದಾಗಿದ್ದು, ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಹಾಗಾಗಿ, ಟೀಸರ್​ ಅದಕ್ಕೆ ಉತ್ತರವಾಗಲಿದೆ. ಟೀಸರ್​ ಫೆ.13ರಂದು ರಾತ್ರಿ 12 ಗಂಟೆಗೆ ​ಲಾಂಚ್​ ಆಗುತ್ತಿರುವುದು ವಿಶೇಷ.

ಇದನ್ನೂ ಓದಿ: ರವಿಚಂದ್ರನ್​ 'ದಶರಥ'ನಿಗೆ 'ಚಾಲೆಂಜಿಂಗ್​ ಸ್ಟಾರ್​' ದರ್ಶನ್​ ಧ್ವನಿ!

ಈಗಾಗಲೇ ಚಿತ್ರತಂಡ ಬಹುತೇಕ ಶೂಟಿಂಗ್​ ಮುಗಿಸಿಕೊಂಡಿದೆ. ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ್​, ಊಟಿ, ಕೇರಳ ಹಾಗೂ ಸ್ವಿಜರ್​ಲೆಂಡ್​ನಲ್ಲಿ ಶೂಟಿಂಗ್​ ಮಾಡಲಾಗಿದೆ. ಸದ್ಯದಲ್ಲೇ ಚಿತ್ರತಂಡ ಸಿಂಗಾಪುರಕ್ಕೂ ತೆರಳಲಿದ್ದು, ಅಲ್ಲಿ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಿದೆ.

ಸಂದೇಶ್​ ಕಂಬೈನ್ಸ್​ ಸಂಸ್ಥೆ ಅಂಬರೀಶ್​ ಅವರ ಹಲವು ಚಿತ್ರಕ್ಕೆ ಬಂಡವಾಳ ಹೂಡಿತ್ತು. ಈಗ ಅದೇ ಸಂಸ್ಥೆ, ‘ಅಮರ್​’ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ‘ಮೈನಾ’ ಖ್ಯಾತಿಯ ನಾಗಶೇಖರ್​ ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಮಾಡುತ್ತಿದ್ದಾರೆ. ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಚಿತ್ರದಲ್ಲಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಭಿಗೆ ಜೊತೆಯಾಗಿ ತಾನ್ಯಾ ಹೋಪ್​ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗಲ್ಲಿ ಗಲ್ಲಿಯಲ್ಲಿ 'ಗಲಿ ಗಲಿ' ಹವಾ; 10 ಕೋಟಿ ಬಾರಿ ವೀಕ್ಷಣೆ ಕಂಡ 'ಕೆಜಿಎಫ್​' ಹಾಡು

First published:January 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ