Bad Manners: ನಾಳೆ ಅಭಿಷೇಕ್​ ಅಂಬರೀಷ್​ ನಟನೆಯ ಬ್ಯಾಡ್​ ಮ್ಯಾನರ್ಸ್ ಚಿತ್ರದ​ ಫಸ್ಟ್​ ಲುಕ್​ ವಿಡಿಯೋ ಬಿಡುಗಡೆ..!

Bad Manners Movie First Look Video: ನಾಳೆ ರೆಬೆಲ್​ ಸ್ಟಾರ್​ ಅಂಬರೀಷ್ ಅವರ ಜನ್ಮದಿನ. ಅದರ ಪ್ರಯುಕ್ತ ಬೆಳಿಗ್ಗೆ 9.45ಕ್ಕೆ ಬ್ಯಾಡ್​ ಮ್ಯಾನರ್ಸ್​ ಚಿತ್ರದ ಫಸ್ಟ್​ಲುಕ್​ ವಿಡಿಯೋ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Anitha E | news18-kannada
Updated:May 28, 2020, 10:54 PM IST
Bad Manners: ನಾಳೆ ಅಭಿಷೇಕ್​ ಅಂಬರೀಷ್​ ನಟನೆಯ ಬ್ಯಾಡ್​ ಮ್ಯಾನರ್ಸ್ ಚಿತ್ರದ​ ಫಸ್ಟ್​ ಲುಕ್​ ವಿಡಿಯೋ ಬಿಡುಗಡೆ..!
ದುನಿಯಾ ಸೂರಿ-ಅಭಿಷೇಕ್
  • Share this:
ದುನಿಯಾ ಸೂರಿ ನಿರ್ದೇಶನದಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್​​ ಅಭಿನಯಿಸುತ್ತಿರುವ ವಿಷಯ ನಿನ್ನೆಯಷ್ಟೆ ಅಧಿಕೃತವಾಯಿತು. ಜೊತೆಗೆ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್ ಬಿಡುಗಡೆ ಮಾಡಿತ್ತು ಚಿತ್ರತಂಡ. 

ನಾಳೆ ರೆಬೆಲ್​ ಸ್ಟಾರ್​ ಅಂಬರೀಷ್ ಅವರ ಜನ್ಮದಿನ. ಅದರ ಪ್ರಯುಕ್ತ ಬೆಳಿಗ್ಗೆ 9.45ಕ್ಕೆ ಬ್ಯಾಡ್​ ಮ್ಯಾನರ್ಸ್​ ಚಿತ್ರದ ಫಸ್ಟ್​ಲುಕ್​ ವಿಡಿಯೋ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Abhishek Ambareesh starrer Bad Manners First Look Video Will be out Tomorrow on Ambareeshs birth anniversary
ಅಭಿಷೇಕ್​ ಅಂಬರೀಷ್​


ಸುಧೀರ್ ಕೆ.ಎಂ ನಿರ್ಮಾಣದ ಬ್ಯಾಡ್ ಮ್ಯಾನರ್ಸ್ ಚಿತ್ರದ ಅಧಿಕೃತ ಫಸ್ಟ್‌ಲುಕ್ ವಿಡಿಯೋ ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್​ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಪಕ್ಕಾ ಕಮರ್ಷಿಯಲ್​ ಕಂಟೆಂಟ್​ ಹೊಂದಿದ್ದು, ಅಭಿಷೇಕ್​ ಲವರ್ ಬಾಯ್​ನಿಂದ ಮಾಸ್​ ಹೀರೋ ಆಗಲಿದ್ದಾರೆ.

ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ನೂರು ಕೋಟಿ ವೀಕ್ಷಣೆ ಪಡೆದ ಟಿ-ಸಿರೀಸ್​ನ ಹನುಮಾನ್​ ಚಾಲೀಸಾ ವಿಡಿಯೋ..!

ನಿನ್ನೆ ಬಿಡುಗಡೆಯಾದ ಪೋಸ್ಟರ್​ನಲ್ಲಿ ಅಭಿಷೇಕ್ ಕೈಯಲ್ಲಿ ಪಿಸ್ತೂಲ್​ ಹಿಡಿದು​ ಸಖತ್​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮರ್ ಸಿನಿಮಾದಲ್ಲಿ ಲವರ್ ಬಾಯ್​ ಆಗಿ ರಂಜಿಸಿದ್ದ ಯಂಗ್ ರೆಬೆಲ್​ ಸ್ಟಾರ್ ಈಗ ಫುಲ್​ ಮಾಸ್​ ನಾಯಕನಾಗಲಿದ್ದಾರೆ.

ಇದನ್ನೂ ಓದಿ: Butta Bomma Song: ವಿಶ್ವ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಅಲ್ಲು ಅರ್ಜುನ್​ರ ಬುಟ್ಟ ಬೊಮ್ಮ ಹಾಡು...!ಅಭಿಷೇಕ್​ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಕುರಿತಾಗಿ ರೆಬೆಲ್​ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡವ ಪ್ಲಾನ್​ನಲ್ಲಿತ್ತು ಚಿತ್ರತಂಡ. ಅದರಂತೆ ನಾಳೆ ಬಿಡುಗಡೆಯಾಗಲಿರುವ ಫಸ್ಟ್​ಲುಕ್​ ವಿಡಿಯೋ ವಿಶೇಷವಾಗಿರಲಿದೆಯಂತೆ.

Nikhil-Revathi: ಬಿಡದಿಯ ತೋಟದಲ್ಲಿ ನಿಖಿಲ್​-ರೇವತಿ: ಮತ್ತೆ ಕವಿಯಾದ ಯುವರಾಜ..!

First published: May 28, 2020, 10:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading