‘ಅಮರ್’ ನಂತರ ಸಾಲು ಸಾಲು ಚಿತ್ರಗಳಲ್ಲಿ ಅಭಿಷೇಕ್ ಬ್ಯುಸಿ; ಎರಡು ನಿರ್ದೇಶಕರಿಗೆ ಕಾಲ್​ಶೀಟ್​ ಕೊಟ್ಟ ಯಂಗ್​ ರೆಬೆಲ್​

Abhishek Ambareesh: ಅಭಿಷೇಕ್​  ಹಂಚಿಕೊಂಡ ಹೊಸ ಲುಕ್​ ಅವರ ಮುಂದಿನ ಸಿನಿಮಾದ್ದು ಎನ್ನಲಾಗಿತ್ತು. ಈ ಫೋಟೋ ನೋಡಿ ನಿಖಿಲ್​ ಕುಮಾರಸ್ವಾಮಿ ಕೂಡ ಕಮೆಂಟ್​ ಮಾಡಿದ್ದರು. ಫೋಟೋ ಬೆನ್ನಲ್ಲೇ ಕೇಳಿ ಬರುತ್ತಿರುವ ವಿಚಾರವೆಂದರೆ ಅಭಿಷೇಕ್​ ಸಧ್ಯ ಎರಡು ಸಿನಿಮಾಗೆ ಸಹಿ ಹಾಕಿದ್ದಾರಂತೆ!

Rajesh Duggumane | news18-kannada
Updated:September 11, 2019, 4:00 PM IST
‘ಅಮರ್’ ನಂತರ ಸಾಲು ಸಾಲು ಚಿತ್ರಗಳಲ್ಲಿ ಅಭಿಷೇಕ್ ಬ್ಯುಸಿ; ಎರಡು ನಿರ್ದೇಶಕರಿಗೆ ಕಾಲ್​ಶೀಟ್​ ಕೊಟ್ಟ ಯಂಗ್​ ರೆಬೆಲ್​
ಅಭಿಷೇಕ್​ ಅಂಬರೀಶ್
  • Share this:
‘ಅಮರ್​’ ಸಿನಿಮಾ ತೆರೆಕಂಡ ನಂತರ ಅಭಿಷೇಕ್​ ಅಂಬರೀಶ್​ ಮುಂದಿನ ಚಿತ್ರ ಯಾವುದು ಎನ್ನುವ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಲೇ ಇವೆ. ಆದರೆ, ಈ ವರೆಗೆ ಆ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇತ್ತೀಚೆಗೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಹೊಸ ಲುಕ್​ ಸಾಕಷ್ಟು ಊಹಾಪೋಹ ಸೃಷ್ಟಿಸಿತ್ತು. ಈಗ ಗಾಂಧಿ ನಗರದ ಅಂಗಳದಿಂದ ಅಭಿಷೇಕ್​ ಮುಂದಿನ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಲಭ್ಯವಾಗಿದೆ.

ಅಭಿಷೇಕ್​  ಹಂಚಿಕೊಂಡ ಹೊಸ ಲುಕ್​ ಅವರ ಮುಂದಿನ ಸಿನಿಮಾದ್ದು ಎನ್ನಲಾಗಿತ್ತು. ಈ ಫೋಟೋ ನೋಡಿ ನಿಖಿಲ್​ ಕುಮಾರಸ್ವಾಮಿ ಕೂಡ ಕಮೆಂಟ್​ ಮಾಡಿದ್ದರು. ಫೋಟೋ ಬೆನ್ನಲ್ಲೇ ಕೇಳಿ ಬರುತ್ತಿರುವ ವಿಚಾರವೆಂದರೆ ಅಭಿಷೇಕ್​ ಸಧ್ಯ ಎರಡು ಸಿನಿಮಾಗೆ ಸಹಿ ಹಾಕಿದ್ದಾರಂತೆ!

ಹೌದು, ‘ಲವ್​ ಗುರು’, ‘ಗಾನ ಬಜಾನ’, ‘ಜೂಮ್​’, ಆರೇಂಜ್​ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಪ್ರಶಾಂತ್​ ರಾಜ್​ ಮುಂದಿನ ಚಿತ್ರಕ್ಕೆ ಅಭಿಷೇಕ್​ ನಾಯಕ ಎನ್ನಲಾಗುತ್ತಿದೆ. ಈಗಾಗಲೇ ಕೆಲ ಹಂತದ ಮಾತುಕತೆ ಮುಗಿದಿದ್ದು, ಶೀಘ್ರವೇ ಚಿತ್ರ ಸೆಟ್ಟೇರಲಿದೆ.

ಇದನ್ನೂ ಓದಿ: ವೈರಲ್​ ಆಗುತ್ತಿದೆ ಅಭಿಷೇಕ್​ ಅಂಬರೀಷ್ ನ್ಯೂ ಲುಕ್​: ನಿಖಿಲ್ ಕುಮಾರಸ್ವಾಮಿ​ ಏನಂದ್ರು ಗೊತ್ತಾ..?

‘ಅಂಬಿ ನಿಂಗ್​ ವಯಸ್ಸಾಯ್ತೋ’ ಚಿತ್ರದ ನಿರ್ದೇಶಕ ಗುರುದತ್​ ಗಾಣಿಗ ಕೂಡ ಅಭಿಷೇಕ್​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಪ್ರಶಾಂತ್​ ರಾಜ್​ ಸಿನಿಮಾದ ಕೆಲಸಗಳು ಪೂರ್ಣಗೊಂಡ ನಂತರದಲ್ಲಿ ಅಭಿಷೇಕ್​ ಗುರದತ್​ ನಿರ್ದೇಶನದ ಸಿನಿಮಾ ಸೆಟ್​ ಸೇರಿಕೊಳ್ಳಲಿದ್ದಾರೆ.

ಅಭಿಷೇಕ್​ ಹಾಗೂ ಸುಮಲತಾಗೆ ಗುರುದತ್​ ಕಥೆ ಹೇಳಿದ್ದಾರೆ. ಇಬ್ಬರೂ ಕಥೆ ಇಷ್ಟಪಟ್ಟಿದ್ದು, ಅಭಿಷೇಕ್​ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಈ ಚಿತ್ರದಲ್ಲಿ ಹಿರಿಯ ಕಲಾವಿದನೋರ್ವನ ಅಗತ್ಯವಿದ್ದು, ಅದಕ್ಕಾಗಿ ಯಾರನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎನ್ನುವ ಲೆಕ್ಕಾಚಾರದಲ್ಲಿ ಗುರುದತ್​ ಇದ್ದಾರೆ. ಎರಡನೇ ಸಿನಿಮಾ ಪೂರ್ಣಗೊಂಡ ನಂತರವೇ ಅಭಿಷೇಕ್​ ಮೂರನೇ ಪ್ರಾಜೆಕ್ಟ್​ ಕೈಗೆತ್ತಿಕೊಳ್ಳಲಿದ್ದಾರಂತೆ.

First published: September 11, 2019, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading