Abhishek Ambareesh: ಹೊಸ ಅವತಾರದಲ್ಲಿ ಯಂಗ್ ರೆಬೆಲ್ ಸ್ಟಾರ್; ಅಭಿಷೇಕ್ ಅಂಬರೀಶ್ 4ನೇ ಚಿತ್ರದ ಪೋಸ್ಟರ್ ರಿಲೀಸ್

ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮಾಡ್ತಿರೋ ಅಭಿಷೇಕ್ ತನ್ನ 4ನೇ ಚಿತ್ರಕ್ಕೂ ಸೈನ್ ಮಾಡಿದ್ದಾರೆ. ಪಿರಿಯಡ್ ಡ್ರಾಮಾ ಕಥೆಯಲ್ಲಿ ಯಂಗ್ ರೆಬೆಲ್ ಕಾಣಿಸಿಕೊಳ್ಳಲಿದ್ದು, ಹೊಸ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಅಭಿಷೇಕ್​ ಹೊಸ ಮೂವಿ ಪೋಸ್ಟರ್​

ಅಭಿಷೇಕ್​ ಹೊಸ ಮೂವಿ ಪೋಸ್ಟರ್​

  • Share this:
ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh)​​ ಹುಟ್ಟು ಹಬ್ಬದ ಹಿನ್ನೆಲೆ, ಪುತ್ರ ಅಭಿಷೇಕ್​ ಅಂಬರೀಶ್ ಅಭಿನಯದ ಹೊಸ ಸಿನಿಮಾ ಪೋಸ್ಟರ್ (New Film Poster)​​ ರಿಲೀಸ್​ ಮಾಡಲಾಗಿದೆ. ವಾರಿಯರ್​ ಲುಕ್​ನಲ್ಲಿ ಕಾಣಿಸಿಕೊಂಡಿರೋ ಅಭಿಷೇಕ್ ಅಂಬರೀಶ್ (Abhishek Ambareesh) ಅವರ ಹೊಸ ಚಿತ್ರದ ಪೋಸ್ಟರ್​ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆಯೋಗ್ಯ ಹಾಗೂ ಮದಗಜ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದ ಮಹೇಶ್​ ಕುಮಾರ್ (Mahesh Kumar) ಅವರು ಇದೀಗ ಅಭಿಷೇಕ್​ಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಅಂಬರೀಶ್​ ಅವರ ಸಮಾಧಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿದೆ. ಅಲ್ಲಿಯೇ ಅಭಿಷೇಕ್ ಅಂಬರೀಶ್ ಅವರ 4ನೇ ಚಿತ್ರದ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ (Rockline Venkatesh) ಬಂಡವಾಳ ಹಾಕಿದ್ದಾರೆ.

4ನೇ ಚಿತ್ರಕ್ಕೆ ಸಹಿ ಹಾಕಿದ ಅಭಿಷೇಕ್​​

ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮಾಡ್ತಿರೋ ಅಭಿಷೇಕ್ ತನ್ನ 4ನೇ ಚಿತ್ರಕಕೂ ಸೈನ್ ಮಾಡಿದ್ದಾರೆ. ಪಿರಿಯಡ್ ಡ್ರಾಮಾ ಕಥೆಯಲ್ಲಿ ಯಂಗ್ ರೆಬೆಲ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಇನ್ನೂ ಹೆಸರುಇಟ್ಟಿಲ್ಲ. ಹೀಗಾಗಿ ಸದ್ಯಕ್ಕೆ  ‘AA04’ ಎಂದು ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಚಿತ್ರದಲ್ಲಿ ಅಭಿಷೇಕ್ ವಾರಿಯರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗ ರಿಲೀಸ್ ಆಗಿರುವ ಹೊಸ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ.





ಪಿರಿಯಡ್ ಡ್ರಾಮಾ ಕಥೆ ಯಂಗ್ ರೆಬೆಲ್ ಸ್ಟಾರ್​

ಪಿರಿಯಡ್ ಡ್ರಾಮಾ ಕಥೆಯಲ್ಲಿ ಅಭಿಷೇಕ್​ ಅಂಬರೀಶ್​ ಕಾಣಿಸಿಕೊಳ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಕಥೆ 1,000 ವರ್ಷಗಳ ಹಿಂದೆ ನಡೆಯಲಿದೆ ಎಂಬ ಮಾಹಿತಿ ಚಿತ್ರ ತಂಡದವರಿಂದ ಹೊರಬಂದಿದೆ.



ಅಮರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಅಭಿಮಾನಿಗಳ ಮನಸ್ಸಲ್ಲಿ ಯಂಗ್ ರೆಬೆಲ್ ಸ್ಟಾರ್ ಎನಿಸಿಕೊಂಡವರು ಅಭಿಷೇಕ್​ ಅಂಬರೀಷ್​. ಮೊದಲ ಚಿತ್ರದ ನಂತರ  ಸುಕ್ಕಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್‘ ಚಿತ್ರದಲ್ಲಿ ಅಭಿನಯಿಸುತ್ತಿದ್ದು,  ಸಾಲಾಗಿ 2 ಚಿತ್ರವನ್ನು ಒಪ್ಪಿಕೊಂಡಿರುವ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದರು. ಅದರಲ್ಲಿ ಒಂದು ಸಿನಿಮಾವನ್ನು ಮಹೇಶ್​ ಅವರು ನಿರ್ದೇಶಿಸುತ್ತಿದ್ದಾರೆ.

ಅಕ್ಟೋಬರ್​ 3ರಿಂದ ಶೂಟಿಂಗ್

ಅಯೋಗ್ಯ' ಹಾಗೂ 'ಮದಗಜ' ಖ್ಯಾತಿಯ ಮಹೇಶ್ ಕುಮಾರ್ ಈ ಸಿನಿಮಾ ಶೂಟಿಂಗ್​ನನ್ನು ಅಕ್ಟೋಬರ್​ನಿಂದ ಆರಂಭಿಸಲು ನಿರ್ಧರಿಸಿಲಾಗಿದೆಯಂತೆ, ಅದರ ಫಸ್ಟ್​ ಲುಕ್ ಸಹ ಭಾರೀ ನಿರೀಕ್ಷೆ ಮೂಡಿಸಿದೆ. ಅ

ಇನ್ನು ಈ ಚಿತ್ರದ ಫಸ್ಟ್​ ಲುಕ್​ನಲ್ಲಿ  ರಕ್ತ ಮತ್ತು ಅರ್ಧ ಮುಖದಲ್ಲಿ ಯಂಗ್ ರೆಬಲ್ ಸ್ಟಾರ್ ಮಿಂಚಿದ್ದಾರೆ.  ಈ ಚಿತ್ರ ಒಂದು ಕಾಲಘಟ್ಟದಲ್ಲಿ ನಡೆಯುವ  ಕಥೆ ಇದಾಗಿದೆ ಎಂದು ನಿರ್ದೇಶಕ ಮಹೇಶ್ ಕುಮಾರ್  ಈಗಾಗಲೇ ಹೇಳಿದ್ದಾರೆ.

ಇದನ್ನೂ ಓದಿ: Sumalatha Birthday: ಮಂಡ್ಯ ಗೌಡ್ತಿಗೆ ಹುಟ್ಟುಹಬ್ಬದ ಸಂಭ್ರಮ; ಸುಮಲತಾಗೆ ಶುಭಾಶಯಗಳ ಮಹಾಪೂರ



ತುಂಬಾ ದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಸುಮಾರು 30 ರಿಂದ 35 ಕೋಟಿ ಬಜೆಟ್​ ನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಅಲ್ಲದೇ ಚಿತ್ರದ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್​ ಸೀನ್​ ಗಳು ಇರಲಿವೆ ಎಂದು ಹೇಳಿದ್ದಾರೆ. ಅಲ್ಲದೇ 135 ದಿನ ಶೂಟಿಂಗ್ ಪ್ಲ್ಯಾನ್ ಮಾಡಿದ್ದೇವೆ ಎಂದು ಈ ಹಿಂದೆ ನಿರ್ದೇಶಕರೇ ತಿಳಿಸಿದ್ದಾರೆ.


 

Published by:Pavana HS
First published: