HBD Abhishek Ambareesh: ದರ್ಶನ್​-ಯಶ್​ ನನಗೆ ಪ್ರೇರಣೆ ಎಂದ ಯಂಗ್​ ರೆಬೆಲ್​ ಅಭಿಷೇಕ್​ ಅಂಬರೀಷ್​..!

Abhishek-Darshan: ಲೋಕಸಭಾ ಚುನಾವಣೆ ಇರಬಹುದು, ಅಂಬಿ ಅಗಲಿದ ಸಮಯದಲ್ಲಿ ಇರಬಹುದು ದರ್ಶನ್​ ಹಾಗೂ ಯಶ್​ ಅಂಬಿ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಅದಕ್ಕೆ ಯಶ್​-ದರ್ಶನ್​ರನ್ನು ಜೋಡೆತ್ತು ಎಂದು ಕರೆಯಲಾಗುತ್ತಿತ್ತು. ಈಗ ಡಿಬಾಸ್​, ರಾಕಿಂಗ್​ ಸ್ಟಾರ್​ ಹಾಗೂ ಪ್ರಜ್ವಲ್​ ದೇವರಾಜ್​ ಕುರಿತು ಅಭಿಷೇಕ್​ ಒಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ. 

Anitha E | news18-kannada
Updated:October 3, 2019, 6:29 PM IST
HBD Abhishek Ambareesh: ದರ್ಶನ್​-ಯಶ್​ ನನಗೆ ಪ್ರೇರಣೆ ಎಂದ ಯಂಗ್​ ರೆಬೆಲ್​ ಅಭಿಷೇಕ್​ ಅಂಬರೀಷ್​..!
ಅಭಿಷೇಕ್​ ಅಂಬರೀಷ್​
  • Share this:
ರೆಬೆಲ್​ ಸ್ಟಾರ್​ ಅಂಬರೀಷ್​ ಅವರ ಕುಟುಂಬ ದರ್ಶನ್​ ಅವರನ್ನು ಹಿರಿಯ ಮಗ ಎಂದೇ ಕರೆಯುತ್ತಾರೆ. ಇನ್ನು ಅಭಿಷೇಕ್​ ಸಹ ದರ್ಶನ್​ರನ್ನು ಅಣ್ಣನಂತೆ ಕಾಣುತ್ತಾರೆ. ಅವರಿಬ್ಬರ ಸಂಬಂಧದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಹೌದು, ಲೋಕಸಭಾ ಚುನಾವಣೆ ಇರಬಹುದು, ಅಂಬಿ ಅಗಲಿದ ಸಮಯದಲ್ಲಿ ಇರಬಹುದು ದರ್ಶನ್​ ಹಾಗೂ ಯಶ್​ ಅಂಬಿ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಅದಕ್ಕೆ ಯಶ್​-ದರ್ಶನ್​ರನ್ನು ಜೋಡೆತ್ತು ಎಂದು ಕರೆಯಲಾಗುತ್ತಿತ್ತು. ಈಗ ಡಿಬಾಸ್​, ರಾಕಿಂಗ್​ ಸ್ಟಾರ್​ ಹಾಗೂ ಪ್ರಜ್ವಲ್​ ದೇವರಾಜ್​ ಕುರಿತು ಅಭಿಷೇಕ್​ ಒಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ.

'ಅಮರ್​' ಸಿನಿಮಾದಲ್ಲಿ ಅಭಿಷೇಕ್​ ಜತೆ ದರ್ಶನ್​


ಈ ಮೂವರು ಸಹೋದರರೇ ನನಗೆ ಸ್ಫೂರ್ತಿ ಎಂದಿದ್ದಾರೆ. ಹೌದು, ಅದು ಏನಕ್ಕೆ ಅಂತೀರಾ..? ಇಂದು ಅಭಿ ಅವರ 26ನೇ ಹುಟ್ಟುಹಬ್ಬ. ಆದರೆ ಅಪ್ಪನ ಅಗಲಿಕೆಯಿಂದಾಗಿ ಅಭಿ ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಲ್ಲದೆ ಅಪ್ಪ ಅಂಬರೀಷ್​ ಅವರ ಹೆಸರಲ್ಲಿ ಅಭಿಮಾನಿಗಳು ತಾವಿರುವ ಊರುಗಳಲ್ಲೇ ಒಂದು ಗಿಡ ನೆಟ್ಟು ನನಗ ಹರಸಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಕೇಳಿಕೊಂಡಿದ್ದಾರೆ.

 


Loading...

 




View this post on Instagram




 

Taking inspiration from my dear brothers @darshanthoogudeepashrinivas @thenameisyash @prajwaldevaraj And others , this is a humble appeal to all 🙏🏻🙏🏻


A post shared by Abishek Ambareesh (@abishekambareesh) on






ಇಂತಹ ನಿರ್ಧಾರಕ್ಕೆ ದರ್ಶನ್​, ಯಶ್ ಹಾಗೂ ಪ್ರಜ್ವಲ್​ರಂತಹ ಅಣ್ಣಂದಿರೇ ಸ್ಫೂರ್ತಿ ಎಂದು ಅಭಿ ಬರೆದುಕೊಂಡಿದ್ದಾರೆ.  ಇನ್ನು ಅಭಿ ಮಾಡಿರುವ ಈ ಪೋಸ್ಟ್​ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಸ್ಯಾಂಡಲ್​ವುಡ್​​ ನಟಿಯನ್ನ ಮದುವೆಯಾಗಬೇಕಾದರೆ ಈರುಳ್ಳಿಯಿಂದ ದೂರವಿರಿ..!
First published:October 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...