• Home
  • »
  • News
  • »
  • entertainment
  • »
  • Abhishek Ambareesh Birthday: ಮಧ್ಯ ರಾತ್ರಿಯೇ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಜನ್ಮ ದಿನ ಆಚರಣೆ

Abhishek Ambareesh Birthday: ಮಧ್ಯ ರಾತ್ರಿಯೇ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಜನ್ಮ ದಿನ ಆಚರಣೆ

ಮಧ್ಯ ರಾತ್ರಿನೇ ಜನ್ಮ ದಿನ ಆಚರಿಸಿಕೊಂಡ ಅಭಿಷೇಕ್ ಅಂಬರೀಶ್

ಮಧ್ಯ ರಾತ್ರಿನೇ ಜನ್ಮ ದಿನ ಆಚರಿಸಿಕೊಂಡ ಅಭಿಷೇಕ್ ಅಂಬರೀಶ್

ಜೂನಿಯರ್ ರೆಬಲ್ ಸ್ಟಾರ್ ಅಂಬರೀಶ್ ಜನ್ಮ ದಿನದ ಸಡಗರ ಸಂಭ್ರಮ ಬಲು ಜೋರಾಗಿಯೇ ಇತ್ತು. ಜಯನಗರದ "ಅಂಬಿ ಮನೆ" ಸುತ್ತ-ಮುತ್ತ ಅಭಿಮಾನಿಗಳ ದಂಡೇ ಜಮಾಯಿಸಿತ್ತು.

  • Share this:

ರೆಬಲ್ ಸ್ಟಾರ್ ಅಬರೀಶ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ಜನ್ಮ ದಿನಾಚರಣೆ ಬಲು ಜೋರಾಗಿಯೇ ನಡೆದಿದೆ. ಜಯನಗರದ ಅಂಬಿ ಮನೆ ಬಳಿ ಅಪಾರ ಸಂಖ್ಯೆ (Fans) ಅಭಿಮಾನಿಗಳು ಬಂದು ಅಭಿಷೇಕ್​ ಗೆ ವಿಶ್ ಕೂಡ ಮಾಡಿದ್ದಾರೆ. ಅಂಬಿ ಮನೆಯ ತುಂಬೆಲ್ಲ ಎಲ್ಲಿ ನೋಡಿದ್ರು ಅಲ್ಲಿ ಅಭಿಮಾನಿಗಳ ದಂಡೇ ನೆರೆದಿತ್ತು. ಅಭಿಮಾನಿಗಳ ಅಪಾರ ಪ್ರೀತಿ ಇಲ್ಲಿ ರಾತ್ರಿ (Mid Night Celebration) 12 ಗಂಟೆವರೆಗೂ ಇತ್ತು. ಅದನ್ನ ಕಂಡು ಅಂಬಿ ಪುತ್ರ ಅಭಿಷೇಕ್ ಫುಲ್ ಖುಷ್ ಆದರು. ಅವರ ತಂದಿದ್ದ ಬೃಹತ್ ಮಾಲೆಗಳನ್ನ ಸ್ವೀಕರಿಸಿದರು. ಅಷ್ಟೇ ಪ್ರೀತಿಯಿಂದ ತೆಗೆದುಕೊಂಡು ಬಂದಿದ್ದ ಕೇಕ್ ಅನ್ನೂ ಕಟ್ ಮಾಡಿ ರಾತ್ರಿ 12 ಗಂಟೆಗೆ ತಮ್ಮ ಜನ್ಮ ದಿನವನ್ನ ಸೆಲೆಬ್ರೇಟ್ ಮಾಡಿದರು.


ಅಂಬಿ ಮನೆಯಲ್ಲಿ ಅಭಿಷೇಕ್ ಜನ್ಮ ದಿನದ ಸಡಗರ-ಸಂಭ್ರಮ
ಜೂನಿಯರ್ ರೆಬಲ್ ಸ್ಟಾರ್ ಅಂಬರೀಶ್ ಜನ್ಮ ದಿನದ ಸಡಗರ ಸಂಭ್ರಮ ಬಲು ಜೋರಾಗಿಯೇ ಇತ್ತು. ಜಯನಗರದ "ಅಂಬಿ ಮನೆ" ಸುತ್ತ-ಮುತ್ತ ಅಭಿಮಾನಿಗಳ ದಂಡೇ ಜಮಾಯಿಸಿತ್ತು.



ಅಂಬಿ ಮನೆಯ ಸುತ್ತ-ಮುತ್ತಲೂ ಅಭಿ ಜನ್ಮ ದಿನದ ಆಚರಣೆಗೆ ಸೂಕ್ತ ತಯಾರಿ ಕೂಡ ನಡೆದಿತ್ತು. ಬರೋ ಅಭಿಮಾನಿಗಳನ್ನ ಮೀಟ್ ಆಗೋಕೆ ಬೇಕಾಗೋ ಬ್ಯಾರಿಕೆಡ್, ಅಭಿ ನಿಲ್ಲೋಕೆ ಬೇಕಾಗೋ ವೇದಿಕೆ ಎಲ್ಲವೂ ಇಲ್ಲಿ ಸಜ್ಜಾಗಿತ್ತು.


ಮಧ್ಯ ರಾತ್ರಿನೇ ಮನೆ ಬಳಿ ನೆರೆದಿದ್ದ ಫ್ಯಾನ್ಸ್
ಹೌದು, ಅಭಿಷೇಕ್ ಅಂಬರೀಶ್ ಅಭಿಮಾನಿಗಳು ರಾತ್ರಿನೇ ಮನೆ ಬಳಿ ಬಂದಿದ್ದರು. ಬಂದು ತಮ್ಮದೇ ರೀತಿಯಲ್ಲಿ ಅಭಿಷೇಕ್​ ಗೆ ಶುಭ ಹಾರೈಸಿದರು. ರಾತ್ರಿ 12 ಗಂಟೆ ಮುಂಚೇನೆ ಇಲ್ಲಿಗೆ ಆಗಮಿಸಿದ್ದ ಅಭಿಮಾನಿಗಳು ಸಡಗರ-ಸಂಭ್ರಮದಲ್ಲಿಯೇ ಇದ್ದರು.


ಇದನ್ನೂ ಓದಿ: Abhishek Birthday: ಅಭಿಷೇಕ್ ಅಂಬರೀಶ್​ಗೆ ಹುಟ್ಟುಹಬ್ಬದ ಸಂಭ್ರಮ, ಜೂನಿಯರ್ ಅಂಬಿ ಸ್ಟೈಲಿಶ್ ಲುಕ್ ನೋಡಿ


ರಾತ್ರಿ 12ಕ್ಕೂ ಮುಂಚೆ ಜಯ ಘೋಷ ಕೂಗಿದರು. ಪಟಾಕಿ ಸಿಡಿಸಿ ಖುಷಿ ಪಟ್ಟರು. ರಾತ್ರಿ 12 ಗಂಟೆ ಹೊತ್ತಿಗೆ ಅಭಿಷೇಕ್ ಹೊರ ಬಂದ್ರು. ಅಭಿಮಾನಿಗಳ ಜೊತೆಗೆ ಬೆರೆತರು. ಆಗಲೇ ಕೆಲವು ಅಭಿಮಾನಿಗಳು ಬೃಹತ್ ಮಾಲೆಯನ್ನೂ ತಂದಿದ್ದರು. ಅದನ್ನೂ ಸ್ವೀಕರಿಸಿದ ಅಭಿ ಕೇಕ್ ಕಟ್ ಮಾಡಿ ತಮ್ಮ ಜನ್ಮ ದಿನ ಆಚರಿಸಿದರು.


ಅಂಬರೀಶ್ ರೀತಿ ಅಭಿಮಾನಿಗಳನ್ನ ಪ್ರೀತಿಯಿಂದ ಗದರಿದ ಅಭಿ
ಮನೆಯೊಳಗೂ ಕೆಲವು ಅಭಿಮಾನಿಗಳು ಬಂದಿದ್ದರು. ಅವರು ತೆಗೆದುಕೊಂಡು ಬಂದಿದ್ದ ಹೂವಿನ ಮಾಲೆಯನ್ನೂ ಅಭಿಷೇಕ್ ಕೊರಳಿಗೆ ಹಾಕಿಸಿಕೊಂಡರು. ಅಲ್ಲದೇ ಕೇಕ್ ಕಟ್ ಮಾಡಿದರು. ಆ ವೇಳೆನೆ ಕೆಲ ಅಭಿಮಾನಿಗಳನ್ನೂ ರೆಬಲ್ ಸ್ಟಾರ್ ಅಂಬರೀಶ್ ರೀತಿಯಲ್ಲಿ ಅಭಿಷೇಕ್ ಅಂಬರೀಶ್ ಗದರಿದರು.


ರೆಬಲ್ ಸ್ಟಾರ್ ಅಂಬರೀಶ್ ಇದ್ದಾಗಲೂ ಮನೆ ಬಳಿ ಇದೇ ಸಂಭ್ರಮ ಇರುತ್ತಿತ್ತು. ಈಗ ಅದೇ ಅಭಿಮಾನಿಗಳ ಪ್ರೀತಿ ಅಭಿಷೇಕ್ ಮೇಲೂ ಮುಂದುವರೆದಿದೆ.


ಅಭಿಷೇಕ್ ಜನ್ಮ ದಿನಕ್ಕೆ ಬ್ಯಾಡ್ ಮ್ಯಾನರ್ಸ್ ಟೀಸರ್ ರಿಲೀಸ್
ಅಭಿಷೇಕ್ ಅಂಬರೀಶ್ ಜನ್ಮ ದಿನಕ್ಕೆ ಬ್ಯಾಡ್ ಮ್ಯಾನರ್ಸ್ ಟೀಸರ್ ರಿಲೀಸ್ ಆಗುತ್ತಿದೆ. ಬೆಳಗ್ಗೆ 10.35 ಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡಲಾಗುತ್ತಿದೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆನೂ ಇದೆ.


ಅಭಿಷೇಕ್ ಅಂಬರೀಶ್ ಅಭಿನಯದಲ್ಲಿ ಇನ್ನೂ ಎರಡು ಸಿನಿಮಾ ರೆಡಿ ಆಗುತ್ತಿದೆ. ಆ ಸಾಲಿನಲ್ಲಿ ಮುಂಗಾರು ಮಳೆ ಚಿತ್ರ ಖ್ಯಾತಿಯ ಕೃಷ್ಣ ನಿರ್ದೇಶನದ ಕಾಳಿ ಸಿನಿಮಾ ಇದೆ.


ಇದನ್ನೂ ಓದಿ: Anubandha: ಪುಟ್ಟಗೌರಿ ಮದುವೆ, ಮಂಗಳಗೌರಿ ಮದುವೆ ಸೇರಿ 3 ಸಾವಿರಕ್ಕೂ ಹೆಚ್ಚು ಎಪಿಸೋಡ್, ಅನುಬಂಧದಲ್ಲಿ ಆನಂದಭಾಷ್ಪ


ಅಯೋಗ್ಯ ಚಿತ್ರ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಇನ್ನೂ ಹೆಸರು ಇಡದೇ ಇರೋ ವಾರಿಯರ್ ಲುಕ್​ ನ ಚಿತ್ರವೂ ಇದೆ. ಇವರೆಡೂ ಅಷ್ಟೇ ನಿರೀಕ್ಷೆಯನ್ನೂ ಹುಟ್ಟುಹಾಕಿವೆ.

First published: