Salman Khan ಬಳಸುವುದು 3 ವರ್ಷದ ಹಳೆಯ ಫೋನ್​ ಭಾವನ ಗುಟ್ಟು ರಟ್ಟು ಮಾಡಿದ Aayush Sharma

Aayush Sharma About Salman Khan: ಪ್ರಸ್ತುತ ಸಲ್ಮಾನ್ ಖಾನ್ ಟೈಗರ್ ಸಿನಿಮಾದ ಮೂರನೇ ಭಾಗದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಶಾರುಖ್ ಖಾನ್ ಮುಂದಿನ ಚಿತ್ರ ಪಠಾನ್‍ನಲ್ಲಿ ಸಲ್ಮಾನ್ ಖಾನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ಸಲ್ಮಾನ್ ಖಾನ್ ಮತ್ತು ನಟ ಆಯುಷ್ ಶರ್ಮಾ

ನಟ ಸಲ್ಮಾನ್ ಖಾನ್ ಮತ್ತು ನಟ ಆಯುಷ್ ಶರ್ಮಾ

  • Share this:
ನಟ ಆಯುಷ್ ಶರ್ಮಾ (Actor Aayush Sharma)ತಮ್ಮ ಭಾಮೈದ ಸಲ್ಮಾನ್ ಖಾನ್(Salman Khan) ಸರಳ ಜೀವನವನ್ನು(Simple Life) ಸಿಕ್ಕಾಪಟ್ಟೆ ಹೊಗಳಿದ್ದಾರೆ. ಮನೆಯ ಊಟವನ್ನೇ ಇಷ್ಟಪಡುವ ಸಲ್ಮಾನ್ ಖಾನ್, ಈಗಲೂ ಹಳೆಯ ಫೋನ್ ಬಳಸುತ್ತಾರೆ ಎನ್ನುವ ಆಯುಷ್, ಇತ್ತೀಚೆಗೆ ಆರ್ ಜೆ ಸಿದ್ದಾರ್ಥ್ ಕನ್ನನ್ ಜೊತೆಗಿನ ಸಂದರ್ಶನವೊಂದರಲ್ಲಿ, ಬಾಲಿವುಡ್ ಭಾಯ್‍ಜಾನ್ ಕುರಿತ ಹಲವಾರು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆ ಆಗಿರುವ ಮಹೇಶ್ ಮಾಂಜ್ರೆಕರ್ ನಿರ್ದೇಶನದ ಅಂತಿಮ್ : ದ ಫೈನಲ್ ಟ್ರುತ್ ಸಿನಿಮಾದಲ್ಲಿ ಸಲ್ಮಾನ್ ಜೊತೆ ಆಯುಷ್ ಕೂಡ ತೆರೆ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್, ಎಸಿ ಇಲ್ಲದೆ, ಕೇವಲ ಫ್ಯಾನ್ ಗಾಳಿಯಲ್ಲೇ ಹಾಸಿಗೆಯ ಮೇಲೆ ಮಲಗಬಲ್ಲರು ಎಂಬ ಮಹೇಶ್ ಹೇಳಿರುವ ಮಾತು ನಿಜವೇ ಎಂದು, ಸಿದ್ದಾರ್ಥ್ ಆಯುಷ್‌ರನ್ನು ಕೇಳಿದಾಗ ಅದು ಖಂಡಿತಾ ಎಂದವರು ಒಪ್ಪಿಕೊಂಡಿದ್ದಾರೆ.

“ನಾನು ಅವರಷ್ಟು ಸರಳವಾಗಿದ್ದೇನೆ ಎಂದು ಸುಳ್ಳು ಹೇಳಲಾರೆ. ಸಲ್ಮಾನ್ ಭಾಯ್ ಮನೆಯಲ್ಲಿ ಜೀವನ ಶೈಲಿ ಅತ್ಯಂತ ಸರಳವಾಗಿದೆ. ನೀವು ಅವರನ್ನು ಯಾವ ಫೋನ್ ಬಳಸುತ್ತಿದ್ದೀರಿ ಎಂದು ಕೇಳಿದರೆ, ಬಹುಶ: ಅವರು 2 -3 ವರ್ಷದ ಹಳೆಯ ಮಾದರಿಯೊಂದನ್ನು ತೋರಿಸಬಹುದು. ಅವರಿಗೆ ಫೋನ್‍ಗಳು, ಕಾರುಗಳು, ಬಟ್ಟೆಗಳ ಮೇಲೆ ಯಾವುದೇ ಆಸಕ್ತಿಯಿಲ್ಲ.

ಅವರು ಮನೆಗೆ ಹೊಸ ಟಿವಿ ತರುವ ಬಗ್ಗೆ ಅಥವಾ ಅti ವೇಗದ ಇಂಟರ್‌ನೆಟ್‌ ಹೊಂದುವ ಬಗ್ಗೆ ಆಸಕ್ತಿ ಇಲ್ಲ. ಅವರಿಗೆ ಕೇವಲ ಸಿನಿಮಾಗಳಲ್ಲಿ ಆಸಕ್ತಿ ಇದೆ ಎಂದು ನನಗೆ ಅನಿಸುತ್ತದೆ; ನೀವು ಕೆಲವು ಗಂಟೆ ಅವರನ್ನು ಒಂಟಿಯಾಗಿ ಬಿಟ್ಟರೆ, ಬಹುಶ: ಅವರು ಆ ಸಮಯವನ್ನು ಒಂದು ಸಿನಿಮಾ ನೋಡುವುದರಲ್ಲಿ ಕಳೆಯುತ್ತಾರೆ” ಎಂದು ಅಯುಷ್ಮಾನ್ ಹೇಳಿದ್ದಾರೆ.

“ನೀವು ಅವರ ಜಿಮ್ ನೋಡಿದರೆ, ಅದು ಕೂಡ ಅತ್ಯಂತ ಪ್ರಾಥಮಿಕವಾದದ್ದು. ವಾಸ್ತವದಲ್ಲಿ, ಹೊಸ ಕಾರುಗಳನ್ನು ಕೊಳ್ಳಲು ನಾವು ಅವರಿಗೆ ಒತ್ತಾಯ ಮಾಡಬೇಕಾಗುತ್ತದೆ. ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನೆಲದ ಮೇಲೆ ಮಲಗುತ್ತಾರೆ. ಅವರು ವಿಶೇಷ ಭೋಜನದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಅವರಿಗೆ ಬೇಕಿರುವುದು ಮನೆಯಲ್ಲಿ ತಯಾರಿಸಿದ ಆಹಾರ ಮಾತ್ರ” ಎಂದಿದ್ದಾರೆ ಆಯುಷ್.

ಇದನ್ನೂ ಓದಿ: ಮತ್ತೆ ಟ್ರೋಲ್‍ಗೆ ತುತ್ತಾದ Sabyasachi - ರೂಪದರ್ಶಿಗಳ ಬಗ್ಗೆ ನೆಟ್ಟಿಗರ ಕಾಮೆಂಟ್​

ಅಂತಿಮ್ : ದ ಫೈನಲ್ ಟ್ರುತ್, ಮರಾಠಿ ಸಿನಿಮಾ ಮುಲ್ಶಿ ಪ್ಯಾಟರ್ನ್‍ನ ರೀಮೇಕ್ ಆಗಿದ್ದು, ಬಿಡುಗಡೆ ಆದ ಮೊದಲನೇ ದಿನವೇ ಸುಮಾರು 4.5 ಕೋಟಿಯನ್ನು ಬಾಚಿಕೊಂಡಿದೆ. ಸಲ್ಮಾನ್ ಸಹೋದರಿ ಅರ್ಪಿತಾ ಪತಿಯಾಗಿರುವ ಆಯುಷ್ ಶರ್ಮಾ, 2018ರಲ್ಲಿ ಸಲ್ಮಾನ್ ಖಾನ್ ನಿರ್ಮಿಸಿದ್ದ ಲವ್ ಯಾತ್ರಿ ಸಿನಿಮಾದ ಮೂಲಕ ಮೊದಲ ಬಾರಿಗೆ ನಾಯಕನಾಗಿ ಬಾಲಿವುಡ್ ಪ್ರವೇಶಿಸಿದ್ದರು.

ಪ್ರಸ್ತುತ ಸಲ್ಮಾನ್ ಖಾನ್ ಟೈಗರ್ ಸಿನಿಮಾದ ಮೂರನೇ ಭಾಗದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಶಾರುಖ್ ಖಾನ್ ಮುಂದಿನ ಚಿತ್ರ ಪಠಾನ್‍ನಲ್ಲಿ ಸಲ್ಮಾನ್ ಖಾನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಠಾಣ್ ಸಿನಿಮಾವನ್ನು ಇನ್ನೂ ಅಧಿಕೃಕವಾಗಿ ಘೋಷಿಸಿಲ್ಲವಾದರೂ, ಇದು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಪತ್ತೇದಾರಿ ಸಿನಿಮಾಗಳಲ್ಲಿ ಒಂದಾಗಲಿದೆ ಎನ್ನಲಾಗುತ್ತಿದೆ.
Published by:Sandhya M
First published: