ಹಬ್ಬದ ಟೈಮ್​ನಲ್ಲೇ ಒಂದೊಳ್ಳೆಯ ಊಟ ಬಡಿಸೋಕೆ ರೆಡಿ ಆದ್ರು ಭೀಮಸೇನ ನಳಮಹಾರಾಜ ನಾಯಕಿ ಆರೋಹಿ

ಕೊರೋನಾ ಸಂದರ್ಭವಾದ್ದರಿಂದ ಥಿಯೇಟರ್​ ಕಡೆಗೆ ಜನ ಅಷ್ಟಾಗಿ ಮುಖ ಮಾಡುತ್ತಿಲ್ಲ. ಹೀಗಾಗಿ, ಈ ಸಂದರ್ಭದಲ್ಲಿ ಭಿಮಸೇನ ನಳಮಹರಾಜ ಅಮೇಜಾನ್​ ಪ್ರೈನ್​ಲ್ಲಿ ರಿಲೀಸ್​ ಆಗುತ್ತಿರುವುದಕ್ಕೆ ಖುಷಿ ಇದೆ ಅನ್ನೋದು ಆರೋಹಿ ಮಾತು.

Rajesh Duggumane | news18-kannada
Updated:October 23, 2020, 11:15 AM IST
ಹಬ್ಬದ ಟೈಮ್​ನಲ್ಲೇ ಒಂದೊಳ್ಳೆಯ ಊಟ ಬಡಿಸೋಕೆ ರೆಡಿ ಆದ್ರು ಭೀಮಸೇನ ನಳಮಹಾರಾಜ ನಾಯಕಿ ಆರೋಹಿ
Aarohi Narayan
  • Share this:
ಒಂದು ಕಡೆ ಶಿವಾಜಿ ಸೂರತ್ಕಲ್​ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಭೀಮಸೇನ ನಳಮಹಾರಾಜ ಸಿನಿಮಾ ಅಮೆಜಾನ್​ ಪ್ರೈಮ್​ನಲ್ಲಿ ತೆರೆಗೆ ಬರೋಕೆ ಸಿದ್ಧವಾಗಿದೆ! ಅರೆ ಈ ಎರಡೂ ಚಿತ್ರಕ್ಕೂ ಏನು ಕನೆಕ್ಷನ್ ಅಂತೀರಾ? ಖಂಡಿತವಾಗಿಯೂ ಇದೆ. ಶಿವಾಜಿ ಸೂರತ್ಕಲ್ ಸಿನಿಮಾದಲ್ಲಿ ಡಾ. ಅಂಜಲಿ ಆಗಿ ಕಾಣಿಸಿಕೊಂಡಿದ್ದ ಆರೋಹಿ ನಾರಾಯಣ್​ ಭೀಮಸೇನ ನಳಮಹಾರಾಜ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ವಿಚಾರಕ್ಕೆ ಅವರು ತುಂಬಾನೇ ಖುಷಿ ಆಗಿದ್ದಾರೆ.

ಭೀಮಸೇನ ನಳಮಹಾರಾಜ ಚಿತ್ರದಲ್ಲಿ ಅಯ್ಯಂಗಾರಿ ಕುಟುಂಬದ ಹುಡುಗಿ ಆಗಿ ನಟಿಸಿದ್ದಾರಂತೆ ಆರೋಹಿ. ಅವರ ಪಾತ್ರ ಚಿತ್ರದಲ್ಲಿ ಭಿನ್ನವಾಗಿದೆಯಂತೆ. “ಅಯ್ಯಂಗಾರಿ ಬ್ರಾಹ್ಮಣ ಕುಟುಂಬದವರು ಸಂಪ್ರದಾಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ತಂದೆ ಹೇಳುವ ಮಾತನ್ನು ಮೀರುವುದಿಲ್ಲ. ಆದರೆ, ಸಿನಿಮಾದಲ್ಲಿ ನನ್ನ ಪಾತ್ರ ಇದಕ್ಕೆ ವಿರುದ್ಧವಾಗಿದೆ. ಅಯ್ಯಂಗಾರ್​ ಕುಟುಂಬದ ಹುಡುಗಿ ಆದರೂ ನಾನು ಚಿಕನ್​ ತಿನ್ನುತ್ತೇನೆ, ಶಾರ್ಟ್ಸ್​ ಹಾಕುತ್ತೇನೆ, ತಂದೆಗೆ ಸದಾ ಎದುರುತ್ತರ ಕೊಡುತ್ತೇನೆ. ಹೀಗೆ ನನ್ನ ಪಾತ್ರ ಸಾಗುತ್ತದೆ ಎನ್ನುತ್ತಾರೆ,” ಅವರು.

ಈ ಚಿತ್ರದಲ್ಲಿ ನಾಯಕಿ ತಲೆಗೆ ಪೆಟ್ಟುಬಿದ್ದು ಎಲ್ಲವನ್ನೂ ಮರೆತು ಬಿಡುತ್ತಾಳೆ. ನಂತರ ಅವಳಿಗೆ ಏನೇ ಮಾಡಿದರೂ ನೆನಪು ಬರುತ್ತಿರುವುದಿಲ್ಲ. ಈ ಪಾತ್ರವನ್ನು ಆವರಿಸಿಕೊಂಡ ನಂತರದಲ್ಲಿ ಅವರಿಗೆ ತುಂಬಾನೇ ತೊಂದರೆ ಎದುರಾಗಿತ್ತಂತೆ. “ನಾನು ಪಾತ್ರವನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿಟ್ಟಿದ್ದೆ. ಹೀಗಾಗಿ ಅದರಿಂದ ಹೊರಬರೋಕೆ ತುಂಬಾನೇ ಕಷ್ಟವಾಗಿತ್ತು. ಈ ಪಾತ್ರ ನನ್ನ ನಿಜ ಜೀವನದ ಮೇಲೆ ತುಂಬಾನೇ ಪರಿಣಾಮ ಬೀರಿತ್ತು,” ಎನ್ನುತ್ತಾರೆ.

ಸಿನಿಮಾವನ್ನು ಪುಷ್ಕರ್​, ರಕ್ಷಿತ್​ ಹಾಗೂ ಹೇಮಂತ್​ ರಾವ್​ ನಿರ್ಮಾಣ ಮಾಡಿದ್ದಾರೆ. ಪುಷ್ಕರ್​ ನಿರ್ಮಾಣದ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಈ ಬಗ್ಗೆ ಮಾತನಾಡಿರುವ ಅವರು, “ಕಿರಿಕ್​ ಪಾರ್ಟಿ ಸಿನಿಮಾ ನೋಡಿದ್ದೆ. ಪುಷ್ಕರ್​ ಈ ಚಿತ್ರದ ನಿರ್ಮಾಪಕ ಎಂಬುದಷ್ಟೇ ಗೊತ್ತಿತ್ತು. ಅವರನ್ನು ಭೇಟಿ ಆದ ನಂತರದಲ್ಲಿ ಅವರು ತುಂಬಾನೇ ಪ್ಯಾಷನೇಟ್​ ಎನಿಸಿತು,” ಎನ್ನುತ್ತಾರೆ.

ಇನ್ನು, ಚಿತ್ರವನ್ನು ಕಾರ್ತಿಕ್ ಸರಗೂರು ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಚಿತ್ರದ ಕಥೆ ಹೇಳಿದ ನಂತರ ಆರೋಹಿ ತುಂಬಾನೇ ಇಂಪ್ರೆಸ್​ ಆಗಿದ್ದರಂತೆ. ಅವರ ಜೊತೆ ಕೆಲಸ ಮಾಡಿದ ನಂತರದಲ್ಲಿ ಕಾರ್ತಿಕ್​ ಎಂತಹ ಫ್ಯಾಷನೇಟ್​ ಡೈರೆಕ್ಟರ್​ ಎಂಬುದು ಗೊತ್ತಾಯಿತು ಎನ್ನುತ್ತಾರೆ.

ಚಿತ್ರದಲ್ಲಿ ಅರವಿಂದ್​ ಅಯ್ಯರ್​ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರ ಬಗ್ಗೆ ಮಾತನಾಡುವ ಆರೋಹಿ, ಚಿತ್ರದಲ್ಲಿ ನಟನೆ ಮಾಡುವಾಗ ಅರವಿಂದ್​ ಆ ಪಾತ್ರವನ್ನು ಆವರಿಸಿಕೊಂಡಿರುತ್ತಾರೆ. ಅವರ ಮಾತಿಗಿಂತ ಮುಖಭಾವನೆಯೇ ಹೆಚ್ಚು ಮಾತನಾಡುತ್ತದೆ. ಅವರು ಸೆಟ್​ನಲ್ಲಿ ತುಂಬಾನೇ ಜಾಲಿ ಆಗಿರುತ್ತಾರೆ ಎನ್ನುತ್ತಾರೆ.

“ಕೊರೋನಾ ಸಂದರ್ಭವಾದ್ದರಿಂದ ಥಿಯೇಟರ್​ ಕಡೆಗೆ ಜನ ಅಷ್ಟಾಗಿ ಮುಖ ಮಾಡುತ್ತಿಲ್ಲ. ಹೀಗಾಗಿ, ಈ ಸಂದರ್ಭದಲ್ಲಿ ಭಿಮಸೇನ ನಳಮಹರಾಜ ಅಮೇಜಾನ್​ ಪ್ರೈನ್​ಲ್ಲಿ ರಿಲೀಸ್​ ಆಗುತ್ತಿರುವುದಕ್ಕೆ ಖುಷಿ ಇದೆ. ಹಬ್ಬದ ಟೈಮ್​​ನಲ್ಲಿ ಜನರಿಗೆ ಒಂದೊಳ್ಳೆಯ ಊಟ ಸಿಕ್ಕಂತಾಗುತ್ತದೆ, ಎಂಬುದು ಆರೋಹಿ ಅಭಿಪ್ರಾಯ.
Published by: Rajesh Duggumane
First published: October 23, 2020, 11:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading