Aana: ಭಾರತದ ಮೊದಲ ಮಹಿಳಾ ಸೂಪರ್‌ಹೀರೋ ಅದಿತಿ ಪ್ರಭುದೇವ!

Aditi Prabhudeva: 'ಆನ' ಎಂಬ ಕನ್ನಡ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಭಾರತದ ಮಟ್ಟ ಮೊದಲ ಮಹಿಳಾ ಸೂಪರ್‌ಹೀರೋ ಆಗಿ ಮಿಂಚಲಿದ್ದಾರೆ. ಮನೋಜ್‌ ನಡಲುಮನೆ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಆನ ಸಿನಿಮಾದ ಪೋಸ್ಟರ್

ಆನ ಸಿನಿಮಾದ ಪೋಸ್ಟರ್

  • Share this:
ಸಾಮಾನ್ಯವಾಗಿ ಹಾಲಿವುಡ್‌ನಲ್ಲಿ ಸೂಪರ್‌ಹೀರೋ ಸಿನಿಮಾಗಳಿಗೇನೂ ಬರವಿಲ್ಲ. ಇನ್ನು ಬಾಲಿವುಡ್‌ ಸೂಪರ್‌ಹೀರೋಗಳು ಅಂದಾಕ್ಷಣ ನಮಗೆ 'ಶಕ್ತಿಮಾನ್'‌ ಹಾಗೂ 'ಕ್ರಿಷ್'‌ ಕಣ್ಣಮುಂದೆ ಬಂದು ನಿಲ್ಲುತ್ತಾರೆ. ಸ್ಯಾಂಡಲ್‌ವುಡ್‌ ವಿಷಯಕ್ಕೆ ಬರುವುದಾದರೆ 'ಜಾಗ್ವಾರ್'‌ ಚಿತ್ರದಲ್ಲಿ ಯುವರಾಜ ನಿಖಿಲ್‌ ಕುಮಾರಸ್ವಾಮಿ ಸೂಪರ್‌ಹೀರೋ ಶೇಡ್‌ನಲ್ಲಿ ನಟಿಸಿದ್ದರಾದರೂ ಸೂಪರ್‌ಹೀರೋ ಸಿನಿಮಾ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ. ಆದರೆ ಇದೇ ಮೊದಲ ಬಾರಿಗೆ ಅದೂ ಮಹಿಳಾ ಸೂಪರ್‌ಹೀರೋ ಸಿನಿಮಾ ಒಂದು ಕನ್ನಡದಲ್ಲಿ ಸಿದ್ಧವಾಗುತ್ತಿದೆ. ವಿಶೇಷ ಅಂದರೆ 'ಶ್ಯಾನೆ ಟಾಪಾಗವ್ಳೇ' ಖ್ಯಾತಿಯ ಹಾಲುಗಲ್ಲದ ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಭಾರತದ ಮಟ್ಟ ಮೊದಲ ಮಹಿಳಾ ಸೂಪರ್‌ಹೀರೋ ಆಗಿ ಮಿಂಚಲಿದ್ದಾರೆ.

ಇತ್ತೀಚೆಗಷ್ಟೇ ಟೈಟಲ್‌ ಲಾಂಚ್‌ ಮಾಡಲಾಗಿದ್ದು, ಚಿತ್ರಕ್ಕೆ 'ಆನ' ಎಂದು ಹೆಸರಿಡಲಾಗಿದೆ. ಈ ಹಿಂದೆ ಕೆಲ ಕಿರುಚಿತ್ರ ಹಾಗೂ ಟೆಲಿಫಿಲ್ಮ್‌ಗಳನ್ನು ಮಾಡಿರುವ ಮನೋಜ್‌ ನಡಲುಮನೆ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಯುಕೆ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಪೂಜಾ ವಸಂತ್‌ಕುಮಾರ್‌ ನಿರ್ಮಿಸುತ್ತಿದ್ದಾರೆ. ಇನ್ನು ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಇಟ್ಟುಕೊಂಡಿರುವ ನಾಯಕಿ ಅದಿತಿ, ತುಂಬ ಇಷ್ಟಪಟ್ಟು ಮತ್ತು ಕಷ್ಟಪಟ್ಟು ಮಾಡಿರುವ ಸಿನಿಮಾ ಇದು. ಇಂಥ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಕಥೆ ಕೇಳಿ ಒಂದೇ ಸಲಕ್ಕೆ ನಟಿಸಲು ಒಪ್ಪಿಕೊಂಡಿದ್ದೆ. ಚಿತ್ರದ ಬಹುಪಾಲು ಶೂಟಿಂಗ್‌ ರಾತ್ರಿ ಹೊತ್ತಿನಲ್ಲೇ ನಡೆದಿದೆ. ಇನ್ನು ಕೆಲ ಭಾಗದ ಚಿತ್ರೀಕರಣ ಬಾಕಿಯಿದೆ. ನನ್ನ ಸಿನಿ ಕೆರಿಯರ್‌ನಲ್ಲಿ ಇಲ್ಲಿವರೆಗೂ ನಾನು ಮಾಡದ ವಿಶೇಷ ಪಾತ್ರವಿದುʼ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

Aditi Prabhudeva Playing India's First Female Super Hero Character in Aana Kannada Movie.
ಆನ ಸಿನಿಮಾ ತಂಡ


ಇನ್ನು ನಿರ್ದೇಶಕ ಮನೋಜ್‌ ಅವರಿಗೆ 'ಆನ' ಲಾಕ್‌ಡೌನ್‌ ಸಮಯದಲ್ಲಿ ಹೊಳೆದ ಕಥೆಯಂತೆ. ಇಡೀ ಭಾರತದಲ್ಲೇ ಲೇಡಿ ಸೂಪರ್‌ಹೀರೋ ಪರಿಕಲ್ಪನೆಯಲ್ಲಿ ಯಾವುದೇ ಸಿನಿಮಾ ಬಂದಿಲ್ಲ. ಅದನ್ನೇ ಗಮನದಲ್ಲಿಟ್ಟುಕೊಂಡು ಕಥೆ ಸಿದ್ದ ಮಾಡಿಕೊಂಡಿದ್ದೆ. ಇನ್ನೆರಡು ದಿನಗಳ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಬಾಕಿಯಿದೆ. ಚಿತ್ರದ ಕೊನೆಯ 20 ನಿಮಿಷಗಳು ಎಲ್ಲರನ್ನೂ ಫ್ಯಾಂಟಸಿ ಲೋಕಕ್ಕೆ ಕರೆದೊಯ್ಯಲಿವೆ. ಹಾರರ್‌ ಅಂಶವೂ ಚಿತ್ರದಲ್ಲಿದೆ. ಟೆಕ್ನಿಕಲಿ ಸಿನಿಮಾ ಅದ್ಧೂರಿಯಾಗಿ ಮೂಡಿಬಂದಿದೆ ಎಂದು ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. 'ಆನ' ಸಿನಿಮಾದಲ್ಲಿ ನಾಯಕಿ ಅದಿತಿ ಜೊತೆಗೆ ನಾಲ್ಕು ಪ್ರಮುಖ ಪಾತ್ರಗಳಿವೆ. ಸಮರ್ಥ, ವಿಕಾಸ್‌ ಉತ್ತಯ್ಯ, ವರುಣ್‌ ಅಮರಾವತಿ ಹಾಗೂ ಕಾರ್ತಿಕ್‌ ನಾಗರಾಜ್‌ ಆ ಪಾತ್ರಗಳಲ್ಲಿ ನಟಿಸಿದ್ದಾರೆ. ಚೂರಿಕಟ್ಟೆ ಖ್ಯಾತಿಯ ಪ್ರೇರಣಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.'ಆನ' ಸಿನಿಮಾಗೆ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಮಾಡಿದ್ದು, ವಿಜೇತ್​ಚಂದ್ರ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಶೂಟಿಂಗ್‌ ಜೊತೆಗೆ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳೂ ಭರದಿಂದ ಸಾಗಿವೆ. ಇನ್ನು ಕೆಲವೇ ದಿನಗಳಲ್ಲಿ ಫಸ್ಟ್‌ ಪ್ರಿಂಟ್‌ ಕೈ ಸೇರಲಿದ್ದು, ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಮೊದಲಿನಂತೆ ಯಥಾಸ್ಥಿತಿಗೆ ಮರಳಿದ ಬಳಿಕ ಬಿಡುಗಡೆಯ ಬಗ್ಗೆ ಯೋಚನೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
Published by:Sushma Chakre
First published: