Aamir Khan: ಸ್ಕೂಲ್ ಫೀಸ್ ಕಟ್ಟುವುದಕ್ಕೂ ಆಮಿರ್ ಖಾನ್ ಮನೆಯವರ ಬಳಿ ದುಡ್ಡು ಇರ್ಲಿಲ್ವಂತೆ! ನಟನ ಬಾಲ್ಯ ಹೇಗಿತ್ತು?

ಸಂದರ್ಶನವೊಂದರಲ್ಲಿ ನಟ ಆಮಿರ್ ಖಾನ್ ಅವರು ತಮ್ಮ ಕುಟುಂಬವು ಸಾಲದಲ್ಲಿದ್ದ ಮತ್ತು ಶಾಲೆಯಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಅವರು ಮತ್ತು ಅವರ ಒಡಹುಟ್ಟಿದವರು ಓದುತ್ತಿರುವ ಶಾಲೆಯಲ್ಲಿ ಫೀಸ್ ಕಟ್ಟಲು ಯಾವಾಗಲೂ ತಡ ಮಾಡುತ್ತಿದ್ದರು ಎಂಬುದರ ಬಗ್ಗೆ ಅವರು ಮಾತನಾಡಿದರು.

ಆಮಿರ್ ಖಾನ್

ಆಮಿರ್ ಖಾನ್

  • Share this:
ಈಗ ಬಾಲಿವುಡ್ ನಲ್ಲಿ (Bollywood) ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೆ ಖ್ಯಾತಿ ಪಡೆದಿರುವ ನಟ ಆಮಿರ್ ಖಾನ್ ಅವರ ಬಾಲ್ಯ ಅಷ್ಟೊಂದು ಪರ್ಫೆಕ್ಟ್ ಆಗಿರಲಿಲ್ವಂತೆ. ಎಂದರೆ ಈಗ ಬಾಲಿವುಡ್ ನಲ್ಲಿ ಇಷ್ಟೊಂದು ವರ್ಷಗಳಲ್ಲಿ ಅನೇಕ ಸೂಪರ್ ಹಿಟ್ ಸಿನೆಮಾಗಳನ್ನು (Super Hit Movies) ನೀಡಿದ ನಂತರ ತುಂಬಾನೇ ದುಡ್ಡು ಮತ್ತು ಹೆಸರು ಮಾಡಿರಬಹುದು, ಆದರೆ ಬಾಲ್ಯದಲ್ಲಿ ತುಂಬಾನೇ ಕಷ್ಟದ ದಿನಗಳನ್ನು ಈ ನಟ ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ಈ ಚಿತ್ರೋದ್ಯಮದಲ್ಲಿ ಹೆಸರು ಮಾಡುವ ಮೊದಲು ಅವರು ತುಂಬಾನೇ ಕಷ್ಟದ ದಿನಗಳನ್ನು ನೋಡಿದ್ದಾರಂತೆ. ಜಗತ್ತು ಅವರಲ್ಲಿರುವ ಪ್ರತಿಭೆಯನ್ನು (Talent) ಗುರುತಿಸುವ ಮೊದಲು ನಟನು (Actor) ಹೋರಾಟದ ಬದುಕಿನ ದಿನಗಳನ್ನು ಕಳೆದಿದ್ದಾರೆ ಎಂದು ಹೇಳಬಹುದು.

‘ಹ್ಯೂಮನ್ಸ್ ಆಫ್ ಬಾಂಬೆ’ ಗೆ ನೀಡಿದ ಹೊಸ ಸಂದರ್ಶನದಲ್ಲಿ ನಟ ಆಮಿರ್ ಖಾನ್ ಅವರು ತಮ್ಮ ಕುಟುಂಬವು ಸಾಲದಲ್ಲಿದ್ದ ಮತ್ತು ಶಾಲೆಯಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಅವರು ಮತ್ತು ಅವರ ಒಡಹುಟ್ಟಿದವರು ಓದುತ್ತಿರುವ ಶಾಲೆಯಲ್ಲಿ ಫೀಸ್ ಕಟ್ಟಲು ಯಾವಾಗಲೂ ತಡ ಮಾಡುತ್ತಿದ್ದರು ಎಂಬುದರ ಬಗ್ಗೆ ಅವರು ಮಾತನಾಡಿದರು. ಅವರು ಆಗ ಓದುತ್ತಿರುವ ಶಾಲೆಯ ಅಸೆಂಬ್ಲಿಯಲ್ಲಿ ಪ್ರಾಂಶುಪಾಲರು ಫೀಸ್ ಕಟ್ಟದೆ ಇರುವುದಕ್ಕೆ ತಮ್ಮ ಹೆಸರುಗಳನ್ನು ಘೋಷಿಸುತ್ತಿದ್ದರು ಎಂದು ಅವರು ಹೇಳಿದರು.

ಶಾಲಾ ದಿನಗಳನ್ನು ನೆನಪಿಸಿಕೊಂಡ ಆಮಿರ್ 
ಸಂದರ್ಶನದಲ್ಲಿ, ಆಮಿರ್ ಖಾನ್ ತಮ್ಮ ಕುಟುಂಬವು ತುಂಬಾನೇ ಸಾಲದಲ್ಲಿದ್ದ ಸಮಯದ ಬಗ್ಗೆ ಮತ್ತು ಅವರು ಎಂಟು ವರ್ಷದವರಾಗಿದ್ದಾಗಿನಿಂದಲೂ ಕಷ್ಟದ ಸಮಯವನ್ನು ಎದುರಿಸಿದ್ದರ ಬಗ್ಗೆ ಮಾತನಾಡಿದರು. ಅವರ ಶಾಲಾ ದಿನಗಳಲ್ಲಿ, 6ನೇ ತರಗತಿಗೆ 6 ರೂಪಾಯಿ, 7ನೇ ತರಗತಿಗೆ 7 ರೂಪಾಯಿ ಮತ್ತು 8ನೇ ತರಗತಿಗೆ 8 ರೂಪಾಯಿ ಫೀಸ್ ಇದ್ದಾಗಲೂ ಸಹ ಅವರಿಗೆ ಕಟ್ಟಲು ತುಂಬಾನೇ ಕಷ್ಟವಾಗಿತ್ತು.

ಇದನ್ನೂ ಓದಿ: Aamir Khan: ನಟ ಆಮಿರ್ ತಮ್ಮ ಮಕ್ಕಳ ಜೊತೆ ಹೆಚ್ಚು ಸಮಯ ಕಳೆದಿಲ್ವಂತೆ, ಕಾರಣ ಕೇಳಿ

ಆದಾಗ್ಯೂ, ಆಮಿರ್ ಮತ್ತು ಅವರ ಒಡಹುಟ್ಟಿದವರು 'ತಮ್ಮ ಶಾಲೆಯ ಫೀಸ್ ಅನ್ನು ಪಾವತಿಸಲು ಯಾವಾಗಲೂ ತಡ ಮಾಡುತ್ತಿದ್ದರು'. ಅವರಿಗೆ ಒಂದು ಅಥವಾ ಎರಡು ಎಚ್ಚರಿಕೆಗಳನ್ನು ನೀಡಿದ ನಂತರವೇ ಪಾವತಿಸುತ್ತಿದ್ದರಂತೆ. ಅಲ್ಲದೆ, ಅವರ ಶಾಲೆಯ ಪ್ರಾಂಶುಪಾಲರು ಇಡೀ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಮುಂದೆ ಅಸೆಂಬ್ಲಿಯಲ್ಲಿ ಅವರ ಹೆಸರುಗಳನ್ನು ಘೋಷಿಸುತ್ತಿದ್ದರು ಎಂದು ಆಮಿರ್ ಅವರು ನೆನಪಿಸಿಕೊಂಡರು. ಈ ಮಾತುಗಳನ್ನು ಹೇಳುವಾಗ ನಟ ಆಮಿರ್ ಖಾನ್ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.

ಆಮಿರ್ ಖಾನ್ ಅವರ ವೈಯುಕ್ತಿಕ ಜೀವನ
ಆಮಿರ್ ಖಾನ್ ಚಲನಚಿತ್ರ ನಿರ್ಮಾಪಕ ತಾಹಿರ್ ಹುಸೇನ್ ಮತ್ತು ಅವರ ಪತ್ನಿ ಜೀನತ್ ಹುಸೇನ್ ಅವರ ಮಗ. ಅವರಿಗೆ ಫೈಸಲ್ ಖಾನ್, ಫರ್ಹತ್ ಖಾನ್ ಮತ್ತು ನಿಖತ್ ಖಾನ್ ಎಂಬ ಮೂವರು ಒಡಹುಟ್ಟಿದವರಿದ್ದಾರೆ. ಅವರು ಅವರೆಲ್ಲರಿಗಿಂತ ಹಿರಿಯರು. ಆಮಿರ್ 1973ರಲ್ಲಿ 'ಯಾದೋ ಕಿ ಬಾರಾತ್' ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ನಂತರ ವಯಸ್ಕನಾಗಿ, ಅವರ ಮೊದಲ ಪ್ರಮುಖ ಪಾತ್ರವು ನಟಿ ಜೂಹಿ ಚಾವ್ಲಾ ಅವರ ಜೊತೆಯಲ್ಲಿ ಅಭಿನಯಿಸಿದ ‘ಖಯಾಮತ್ ಸೇ ಖಯಾಮತ್ ತಕ್’ ಅಂತ ಹೇಳಬಹುದು.

ಆಮಿರ್ ಅವರ ಸಿನಿ ಪಯಣ ಹೇಗಿತ್ತು ಗೊತ್ತೇ?
ನಟ ಆಮಿರ್ ಖಾನ್ ಹಲವಾರು ವರ್ಷಗಳಿಂದ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಖ್ (1989), ದಿಲ್ (1990), ರಾಜಾ ಹಿಂದೂಸ್ತಾನಿ (1996), ಸರ್ಫರೋಷ್ (1999), ಲಗಾನ್ (2001), ರಂಗ್ ದೇ ಬಸಂತಿ (2006), ತಾರೆ ಜಮೀನ್ ಪರ್ (2007), ಘಜಿನಿ (2008), 3 ಈಡಿಯಟ್ಸ್ (2009), ಧೂಮ್ 3 (2013), ಪಿಕೆ (2014), ಮತ್ತು ದಂಗಲ್ (2014) ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:  Aamir Khan: ಬಾಲಿವುಡ್ ಸಿನಿಮಾಗಳು ಸದ್ದು ಮಾಡದಿರಲು ಆಮಿರ್ ಖಾನ್ ಕಾರಣವಂತೆ, ಕರಣ್ ಜೋಹರ್ ಹೀಗೆ ಅಂದಿದ್ಯಾಕೆ?

ಆಮಿರ್ ಹಿಂದಿನ ನಾಲ್ಕು ವರ್ಷಗಳಲ್ಲಿ ಮಾಡಿದ ಮೊದಲ ಚಿತ್ರವಾದ ಲಾಲ್ ಸಿಂಗ್ ಚಡ್ಡಾ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ ಎಂದು ಹೇಳಬಹುದು. ಅದ್ವೈತ್ ಚಂದನ್ ನಿರ್ದೇಶನದ ಲಾಲ್ ಸಿಂಗ್ ಚಡ್ಡಾ ಚಿತ್ರ 1994 ರ ಅಕಾಡೆಮಿ ಪ್ರಶಸ್ತಿ ವಿಜೇತ ಇಂಗ್ಲೀಷ್ ಚಲನಚಿತ್ರ ‘ಫಾರೆಸ್ಟ್ ಗಂಪ್’ ನ ಅಧಿಕೃತ ಹಿಂದಿ ರೂಪಾಂತರವಾಗಿದೆ.
Published by:Ashwini Prabhu
First published: