Bigg Boss: ಬಿಗ್‌ಬಾಸ್ ಆಫರ್ ನಿರಾಕರಿಸಿದ್ರಂತೆ ಖ್ಯಾತ ನಟನ ಸಹೋದರ!

ಕಳೆದ ಕೆಲವು ತಿಂಗಳುಗಳಿಂದ, ಆಮಿರ್ ಖಾನ್‌ ಅವರ ಸಹೋದರ ಫೈಸಲ್ ಖಾನ್ ಅನೇಕ ಕಾರಣಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಕೆಲಸದಿಂದ ಹೊರಗುಳಿದಿರುವುದರಿಂದ ಹಿಡಿದು ತಮ್ಮ ಸಹೋದರ ಆಮಿರ್ ಖಾನ್‌ ಅವರ ಕೆಲಸ ಅಥವಾ ಮದುವೆಯ ಬಗ್ಗೆ ಪ್ರತಿಕ್ರಿಯಿಸುವವರೆಗೆ ಹೀಗೆ ಅನೇಕ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ರಿಯಾಲಿಟಿ ಶೋ ‘ಬಿಗ್‌ಬಾಸ್’ ನಿಂದ ಆಫರ್ ಸ್ವೀಕರಿಸಿದ ನಂತರ ಸ್ಟಾರ್ ಸಹೋದರ ‘ಬರಲ್ಲ’ ಅಂತ ಹೇಳಿ ದೊಡ್ಡ ಸುದ್ದಿ ಮಾಡಿದ್ದಾರೆ.

ಫೈಸಲ್ ಖಾನ್

ಫೈಸಲ್ ಖಾನ್

  • Share this:
ಮೊನ್ನೆ ಅಷ್ಟೇ ಹಿಂದಿ ರಿಯಾಲಿಟಿ ಶೋ ‘ಬಿಗ್‌ಬಾಸ್’ ನ 16ನೇ ಸೀಸನ್ ಗೆ (Bigg Boss Season 16) ಬಂಗಾಳಿ ನಟಿ ಮತ್ತು ಲೋಕಸಭಾ ಸಂಸದೆ ನುಸ್ರತ್ ಜಹಾನ್ (Nusrat Jahan) ಅವರನ್ನು ಬರುವಂತೆ ಕೇಳಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈಗ ಇನ್ನೊಬ್ಬ ಬಾಲಿವುಡ್ ನಟನನ್ನು (Bollywood Actor) 'ಬಿಗ್‌ಬಾಸ್' ಶೋ ಗೆ ಬರುವಂತೆ ಕೇಳಿಕೊಂಡಿದ್ದಾರೆ. ಆದರೆ ಅವರಿಗೆ ‘ನಾನು ಬರಲ್ಲ’ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರಂತೆ ಈ ನಟ. ಕಳೆದ ಕೆಲವು ತಿಂಗಳುಗಳಿಂದ, ಆಮಿರ್ ಖಾನ್‌ (Aamir Khan) ಅವರ ಸಹೋದರ ಫೈಸಲ್ ಖಾನ್ (Faissal Khan) ಅನೇಕ ಕಾರಣಗಳಿಂದಾಗಿ ಸುದ್ದಿಯಲ್ಲಿದ್ದಾರೆ.

ಕೆಲಸದಿಂದ ಹೊರಗುಳಿದಿರುವುದರಿಂದ ಹಿಡಿದು ತಮ್ಮ ಸಹೋದರ ಆಮಿರ್ ಖಾನ್‌ ಅವರ ಕೆಲಸ ಅಥವಾ ಮದುವೆಯ ಬಗ್ಗೆ ಪ್ರತಿಕ್ರಿಯಿಸುವವರೆಗೆ ಹೀಗೆ ಅನೇಕ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ರಿಯಾಲಿಟಿ ಶೋ ‘ಬಿಗ್‌ಬಾಸ್’ ನಿಂದ ಆಫರ್ ಸ್ವೀಕರಿಸಿದ ನಂತರ ಸ್ಟಾರ್ ಸಹೋದರ ‘ಬರಲ್ಲ’ ಅಂತ ಹೇಳಿ ದೊಡ್ಡ ಸುದ್ದಿ ಮಾಡಿದ್ದಾರೆ.

ಈಗಾಗಲೇ ಎರಡು ಆಫರ್ ಬಂದಿದ್ಯಂತೆ
ಆಗಸ್ಟ್ 24 ರಂದು, ಫೈಸಲ್ ಖಾನ್ ಅವರು ಇನ್‌ಸ್ಟಾಗ್ರಾಮ್ ಅಭಿಮಾನಿಗಳಿಗೆ ಮತ್ತು ಫಾಲೋವರ್ಸ್ ಗಳೊಂದಿಗೆ ಎರಡು ಆಫರ್ ಗಳನ್ನು ಪಡೆದಿದ್ದಾರೆ ಎಂದು ಶುಭ ಸುದ್ದಿಯನ್ನು ಹಂಚಿಕೊಂಡರು. ಅವರು ಬಿಗ್‌ಬಾಸ್ ನಿಂದ ಆಫರ್ ಬಂದಿತ್ತು, ಆದರೆ ಅದನ್ನು ಅವರು ತಿರಸ್ಕರಿಸಿದ್ದಾರೆ ಅಂತ ಹೇಳಿದರು.

ಇದನ್ನೂ ಓದಿ : Hrithik Roshan: ಹೃತಿಕ್ ರೋಷನ್ ಯಶಸ್ಸು ಪಡೆಯಲು ಏನೆಲ್ಲಾ ಸರ್ಕಸ್​ ಮಾಡಿದ್ರು ಗೊತ್ತಾ? ಕಥೆ ಬಿಚ್ಚಿಟ್ಟ ನಟನ ತಂದೆ

ಅವರು ಪಡೆದ ಮತ್ತೊಂದು ಆಫರ್ ಮತ್ತೊಂದು ಟಿವಿ ಶೋ ಆಗಿದೆ. ಮಾಜಿ ನಟ ವಿಡಿಯೋದಲ್ಲಿ "ಹಾಯ್ ಪ್ರತಿಯೊಬ್ಬರೂ ಹೇಗಿದ್ದೀರಾ? ಕಳೆದ ಕೆಲವು ದಿನಗಳಿಂದ ನನಗೆ ಜ್ವರ ಬಂದಿತ್ತು, ಆದರೆ ಈಗ ಗುಣಮುಖನಾಗಿದ್ದೇನೆ. ನಾನು ನನ್ನ ಅನೇಕ ಸ್ನೇಹಿತರೊಂದಿಗೆ ಮಾತನಾಡಿದೆ ಮತ್ತು ಇಂದು ನನಗೆ ತುಂಬಾನೇ ಒಂದು ಖುಷಿಯ ದಿನ, ಏಕೆಂದರೆ ನನಗೆ ಎರಡು ಆಫರ್ ಗಳು ಬಂದಿವೆ" ಎಂದು ಹೇಳಿದ್ದನ್ನು ಕೇಳಬಹುದು.

ವಿಡಿಯೋ ಮೂಲಕ ಏನು ಹೇಳಿದ್ದಾರೆ 
"ಒಂದು ಬಿಗ್‌ಬಾಸ್ ಗಾಗಿ ಇತ್ತು, ಆದರೆ ನಾನು ಅದನ್ನು ನಿರಾಕರಿಸಿದೆ. ಟಿವಿ ಸೀರಿಯಲ್ ಗಾಗಿ ಮತ್ತೊಂದು ಆಫರ್ ಬಂತು. ಜನರು ನನ್ನ ಬಗ್ಗೆ ಯೋಚಿಸುತ್ತಿದ್ದಾರೆ ಮತ್ತು ನನ್ನನ್ನು ಪರಿಗಣಿಸುತ್ತಿದ್ದಾರೆ ಎಂದು ನಾನು ಸಾಕಷ್ಟು ಉತ್ಸುಕನಾಗಿದ್ದೇನೆ. ನನಗೆ ಸಂತೋಷವಾಗಿದೆ. ದಯವಿಟ್ಟು ನನಗೆ ಕೆಲವು ಉತ್ತಮ ಕೆಲಸ ಸಿಗಲಿ ಎಂದು ಪ್ರಾರ್ಥಿಸಿ, ನಾನು ವೆಬ್ ಸಿರೀಸ್ ಅಥವಾ ಚಲನಚಿತ್ರವಾಗಿರಲಿ ನಿಮ್ಮೆಲ್ಲರನ್ನು ಮನರಂಜಿಸಲು ಪ್ರಯತ್ನಿಸುತ್ತೇನೆ. ಧನ್ಯವಾದಗಳು" ಎಂದು ವಿಡಿಯೋಲ್ಲಿ ಹೇಳಿದರು.










View this post on Instagram






A post shared by Faissal Khan (@faissal.khan)




ಈ ವಿಡಿಯೋ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ 
ಫೈಸಲ್ ಖಾನ್ ಅವರ ವಿಡಿಯೋಗೆ ಕಾಮೆಂಟ್ ಮಾಡಿದ ಬಳಕೆದಾರರು "ಬಿಗ್‌ಬಾಸ್ ಶೋ ಗೆ ಹೋಗಿ ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ" ಎಂದು ಹೇಳಿದರು. ಇನ್ನೊಬ್ಬರು "ಬಿಗ್‌ಬಾಸ್ ಆಫರ್ ಅನ್ನು ತೆಗೆದುಕೊಳ್ಳಿರಿ, ಬದುಕು ಮತ್ತೊಮ್ಮೆ ಕಟ್ಟಿಕೊಳ್ಳಬಹುದು" ಎಂದು ಕಾಮೆಂಟ್ ಮಾಡಿದರು.

ಇದನ್ನೂ ಓದಿ: Harry Styles: ನಾನು ಏನು ಮಾಡುತ್ತಿದ್ದೆನೆಂದು ನನಗೆ ಯಾವ ಐಡಿಯಾ ಕೂಡ ಇಲ್ಲ ಎಂದ ಖ್ಯಾತ ಸಿನಿಮಾ ನಟ!

ಅವರ ವಿಡಿಯೋಗೆ ಕೆಲವು ದಿನಗಳ ಮೊದಲು, ಸ್ವಯಂ-ಘೋಷಿತ ವಿಮರ್ಶಕ ಕಮಾಲ್ ರಶೀದ್ ಖಾನ್ ಅವರು ಫೈಸಲ್ ಖಾನ್ ಅವರ ಸಂದರ್ಶನದ ಬಗ್ಗೆ ಟ್ವೀಟ್ ಮಾಡಿದ್ದರು, ಅಲ್ಲಿ ಅವರು ಅಮೀರ್ ಖಾನ್ ಅವರ ಬಗ್ಗೆ ಕಾಮೆಂಟ್ ಮಾಡಿದ್ದರು. ಫೈಸಲ್ ಖಾನ್ ಅವರು ತಮ್ಮ ಸಂದರ್ಶನದಲ್ಲಿ “ಅಮೀರ್ ಖಾನ್ ನಷ್ಟು ಕೆಟ್ಟ ವ್ಯಕ್ತಿ ಬೇರೊಬ್ಬರಿಲ್ಲ, ತನ್ನ ತಂದೆಗೆ ಸೇರದ, ತನ್ನ ಕುಟುಂಬಕ್ಕೆ ಸೇರದ ವ್ಯಕ್ತಿಯು, ದೇಶಕ್ಕೆ ಏನಾಗುತ್ತಾನೆ. ಅವರ ಕುಟುಂಬ ಸದಸ್ಯರು ಇತರರಿಗಿಂತ ಹೆಚ್ಚಾಗಿ ಅವರ ಬಗ್ಗೆ ತಿಳಿದಿದ್ದಾರೆ ಎಂದು ನನಗೆ ಖಾತ್ರಿಯಿದೆ" ಎಂದು ಹೇಳಿದ್ದರಂತೆ.

ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಅಥವಾ ಅಕ್ಟೋಬರ್ ತಿಂಗಳ ಆರಂಭದಿಂದ 'ಬಿಗ್‌ಬಾಸ್ 16' ಪ್ರಥಮ ಪ್ರದರ್ಶನ ಕಾಣಲಿದೆ ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: