ಆಮೀರ್ ಖಾನ್ ಮುಂದಿನ ಸಿನಿಮಾದಲ್ಲಿರಲಿದೆ ಈ ವಿವಾದಾತ್ಮಕ ವಿಚಾರ; ಮುಸ್ಲಿಮರಿಂದ ಭಾರೀ ವಿರೋಧ

‘ಲಾಲ್​ ಸಿಂಗ್​ ಛಡ್ಡಾ’ ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಸಿನಿಮಾದ ರಿಮೇಕ್​. ಭಾರತದ ಸಂಸ್ಕೃತಿಗೆ ತಕ್ಕಂತೆ ಇದನ್ನು ಬದಲಾವಣೆ ಮಾಡಲಾಗಿದೆಯಂತೆ. ಇದಕ್ಕೆ ದೇಶದಲ್ಲಿ ನಡೆದಿರುವ ಕೆಲ ಸೂಕ್ಷ್ಮ ವಿಚಾರಗಳನ್ನು ಸೇರ್ಪಡೆ ಮಾಡುತ್ತಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

news18-kannada
Updated:October 23, 2019, 12:43 PM IST
ಆಮೀರ್ ಖಾನ್ ಮುಂದಿನ ಸಿನಿಮಾದಲ್ಲಿರಲಿದೆ ಈ ವಿವಾದಾತ್ಮಕ ವಿಚಾರ; ಮುಸ್ಲಿಮರಿಂದ ಭಾರೀ ವಿರೋಧ
ಅಮೀರ್ ಖಾನ್
  • Share this:
ನಟ ಆಮೀರ್​ ಖಾನ್​ ‘ಲಾಲ್​ ಸಿಂಗ್​ ಛಡ್ಡಾ’ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ‘ಸೀಕ್ರೆಟ್​ ಸೂಪರ್​ಸ್ಟಾರ್​’ ಖ್ಯಾತಿಯ ಅದ್ವೈತ್​ ಚಂದನ್​ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗ ಸಿನಿಮಾ ವಿವಾದದ ಕಿಡಿ ಹೊತ್ತಿಸುವ ಲಕ್ಷಣ ಗೋಚರವಾಗಿದೆ.

ಈ ಸಿನಿಮಾ ದೇಶದ ವಿಭಜನಯೆ ಕಥೆಯನ್ನು ಹೇಳಲಿದೆಯಂತೆ. ಆಮೀರ್​ ಖಾನ್​ ಸರ್ದಾರ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ದೇಶದ ಸೂಕ್ಷ್ಮ ವಿಚಾರಗಳು ಎಂದೇ ಪರಿಗಣಿಸಲ್ಪಟ್ಟ ಬಾಬ್ರಿ ಮಸೀದಿ ಧ್ವಂಸ, ಆಪರೇಷನ್​ ಬ್ಲ್ಯೂ ಸ್ಟಾರ್​ ವಿಷಯಗಳನ್ನು ಸಿನಿಮಾಗೆ ಸೇರಿಸಲಾಗುತ್ತಿದೆ.

‘ಲಾಲ್​ ಸಿಂಗ್​ ಛಡ್ಡಾ’ ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಸಿನಿಮಾದ ರಿಮೇಕ್​. ಭಾರತದ ಸಂಸ್ಕೃತಿಗೆ ತಕ್ಕಂತೆ ಇದನ್ನು ಬದಲಾವಣೆ ಮಾಡಲಾಗಿದೆಯಂತೆ. ಇದಕ್ಕೆ ದೇಶದಲ್ಲಿ ನಡೆದಿರುವ ಕೆಲ ಸೂಕ್ಷ್ಮ ವಿಚಾರಗಳನ್ನು ಸೇರ್ಪಡೆ ಮಾಡುತ್ತಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರುವ ಇರುವ ಪ್ರದೇಶದಲ್ಲಿ ಮಸೀದಿ ನಿರ್ಮಾಣಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ವಿಚಾರ ಇನ್ನೂ ಕೋರ್ಟ್​ನಲ್ಲೇ ಇದೆ. ಹೀಗಿರುವಾಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಬಳಕೆ ಎಷ್ಟು ಸರಿ ಎನ್ನುವ ಪ್ರಶ್ನೆ ಮೂಡಿದೆ. ಇನ್ನು, ಆಪರೇಷನ್​ ಬ್ಲ್ಯೂಸ್ಟಾರ್ ವೇಳೆ 83 ಜನರು ಮೃತಪಟ್ಟಿದ್ದರು. ಇದಾದ ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಾಡಿಗಾರ್ಡ್​​ಗಳೇ ಗುಂಡಿಕ್ಕಿ ಕೊಂದಿದ್ದರು. ಹೀಗಾಗಿ ಈ ವಿವಾದಾತ್ಮಕ ವಿಚಾರಗಳನ್ನು  ‘ಲಾಲ್​ ಸಿಂಗ್​ ಛಡ್ಡಾ’  ಸಿನಿಮಾದಲ್ಲಿ ಸೇರ್ಪಡೆ ಮಾಡುತ್ತಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading