Lal Singh Chaddha: ಆಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು?

ನಟ ಆಮಿರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರವು ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ನಮಗೆಲ್ಲಾ ಗೊತ್ತೇ ಇದೆ. ಈ ಚಿತ್ರವು ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ನಟಿಸಿದ 1994 ರಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರ ‘ಫಾರೆಸ್ಟ್ ಗಂಪ್’ ನ ಅಧಿಕೃತ ಹಿಂದಿ ರೂಪಾಂತರವಾಗಿದೆ. ಸೀಕ್ರೆಟ್ ಸೂಪರ್‌ಸ್ಟಾರ್ ಖ್ಯಾತಿಯ ಅದ್ವೈತ್ ಚಂದನ್ ನಿರ್ದೇಶನದ ‘ಲಾಲ್ ಸಿಂಗ್ ಚಡ್ಡಾ’ ಲಾಲ್ ಎಂಬ ಸರಳ ವ್ಯಕ್ತಿಯ ಅಸಾಧಾರಣ ಪ್ರಯಾಣವನ್ನು ಹೇಳುತ್ತದೆ.

ಲಾಲ್ ಸಿಂಗ್ ಚಡ್ಡಾ

ಲಾಲ್ ಸಿಂಗ್ ಚಡ್ಡಾ

  • Share this:
ಬಾಲಿವುಡ್ನಲ್ಲಿ (Bollywood) ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೆ ಖ್ಯಾತಿ ಪಡೆದಿರುವ ನಟ ಆಮಿರ್ ಖಾನ್ (Aamir Khan) ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ (Lal Singh Chaddha) ಚಿತ್ರವು ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ನಮಗೆಲ್ಲಾ ಗೊತ್ತೇ ಇದೆ. ಈ ಚಿತ್ರವು ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ನಟಿಸಿದ 1994 ರಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರ ‘ಫಾರೆಸ್ಟ್ ಗಂಪ್’ ನ (Forest Gump) ಅಧಿಕೃತ ಹಿಂದಿ ರೂಪಾಂತರವಾಗಿದೆ. ಸೀಕ್ರೆಟ್ ಸೂಪರ್‌ಸ್ಟಾರ್ ಖ್ಯಾತಿಯ ಅದ್ವೈತ್ ಚಂದನ್ ನಿರ್ದೇಶನದ ‘ಲಾಲ್ ಸಿಂಗ್ ಚಡ್ಡಾ’ ಲಾಲ್ ಎಂಬ ಸರಳ ವ್ಯಕ್ತಿಯ ಅಸಾಧಾರಣ ಪ್ರಯಾಣವನ್ನು ಹೇಳುತ್ತದೆ. ಇದರಲ್ಲಿ ನಟಿ ಕರೀನಾ ಕಪೂರ್ ಖಾನ್, ಮೋನಾ ಸಿಂಗ್ ಮತ್ತು ತೆಲುಗಿನ ಜನಪ್ರಿಯ ನಟ ನಾಗ ಚೈತನ್ಯ ಕೂಡ ಇದ್ದಾರೆ.

ಈ ಚಿತ್ರದ ಗಲ್ಲಾಪೆಟ್ಟಿಗೆ ಹಣೆ ಬರಹವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಏತನ್ಮಧ್ಯೆ, ‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೆ ಸಿಕ್ಕ ರೇಟಿಂಗ್ ಮಾತ್ರ ತುಂಬಾನೇ ಕಡಿಮೆ ಅಂತ ಹೇಳಲಾಗುತ್ತಿದೆ. ಹೌದು.. ಐಎಂಡಿಬಿ ರೇಟಿಂಗ್ ಈ ಚಿತ್ರಕ್ಕೆ ತುಂಬಾ ಕಡಿಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಐಎಂಡಿಬಿಯಲ್ಲಿ ಕಳಪೆ ರೇಟಿಂಗ್ ಪಡೆದ ಅಮೀರ್ ನಟನೆಯ ಚಿತ್ರ
‘ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಅವರು 12,000 ಮತಗಳ ಆಧಾರದ ಮೇಲೆ ಐಎಂಡಿಬಿಯಲ್ಲಿ 3.5 ರೇಟಿಂಗ್ ನೀಡಿದ್ದಾರೆ. ಜನಪ್ರಿಯ ಮೂವಿ ರೇಟಿಂಗ್ ಸೈಟ್ ನಲ್ಲಿ ಇದು ತುಂಬಾ ಕಳಪೆ ರೇಟಿಂಗ್ ಆಗಿದೆ. ವಾಸ್ತವವಾಗಿ, ‘ಲಾಲ್ ಸಿಂಗ್ ಚಡ್ಡಾ’ ಚಿತ್ರವು ಐಎಂಡಿಬಿಯಲ್ಲಿ ನಟ ಆಮಿರ್ ಅವರ ಅತ್ಯಂತ ಕಡಿಮೆ ರೇಟಿಂಗ್ ಚಿತ್ರವಾಗಿದೆ. ಅವರ ಪ್ರಮುಖ ಫ್ಲಾಪ್ ಚಿತ್ರಗಳಾದ 2000ನೇ ಇಸವಿಯಲ್ಲಿ ಬಿಡುಗಡೆಯಾದ ಮೇಲಾ, 2013 ರಲ್ಲಿ ಬಿಡುಗಡೆಯಾದ ಧೂಮ್ 3 ಮತ್ತು 2018 ರಲ್ಲಿ ಬಿಡುಗಡೆಯಾದ ಥಗ್ಸ್ ಆಫ್ ಹಿಂದೂಸ್ತಾನ್ ಉತ್ತಮ ರೇಟಿಂಗ್ ಪಡೆದಿದ್ದವು. ಈ ಚಿತ್ರದ ತಯಾರಕರಿಗೆ ಇದು ಉತ್ತಮವಾದ ಸಂಕೇತವಲ್ಲ, ಆದಾಗ್ಯೂ, ಹೆಚ್ಚಿನ ಮತಗಳು ಚಲಾವಣೆಯಾದರೆ ರೇಟಿಂಗ್ ಗಳು ಬದಲಾಗುತ್ತವೆ, ಆದ್ದರಿಂದ ಮುಂಬರುವ ಸಮಯದಲ್ಲಿ ರೇಟಿಂಗ್ ಹೆಚ್ಚಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Mahesh Babu: ಸಮಂತಾ ಸಿನಿಮಾ ರಿಜೆಕ್ಟ್ ಮಾಡಿದ್ಯಾಕೆ ಪ್ರಿನ್ಸ್​ ಮಹೇಶ್ ಬಾಬು?

‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೆ ಟ್ವಿಟರ್ ಬಳಕೆದಾರರ ಪ್ರತಿಕ್ರಿಯೆ
‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೆ ಐಎಂಡಿಬಿ ರೇಟಿಂಗ್ ತುಂಬಾ ಕಳಪೆಯಾಗಿದ್ದರೂ, ಟ್ವಿಟರ್ ಬಳಕೆದಾರರು ಚಿತ್ರವನ್ನು ತುಂಬಾ ಹೊಗಳುತ್ತಿದ್ದಾರೆ. "ಇದನ್ನು ಪರಿಪೂರ್ಣ ಚಲನಚಿತ್ರ ಎಂದು ಕರೆಯಲಾಗುತ್ತಿದೆ, ಇದು ಚಲನಚಿತ್ರದ ಪ್ರತಿಯೊಂದು ಮಸಾಲೆಯನ್ನು ಸರಿಯಾದ ಪ್ರಮಾಣದಲ್ಲಿ ಪಡೆದಿದೆ” ಎಂದು ವೀಕ್ಷಕರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು "ಇದು ಅತ್ಯಂತ ನೈಜ, ತೀವ್ರವಾದ ಮತ್ತು ಆನಂದದಾಯಕ ಅನುಭವವಾಗಿತ್ತು" ಎಂದು ಕಾಮೆಂಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ‘ಲಾಲ್ ಸಿಂಗ್ ಚಡ್ಡಾ’ ತುಂಬಾನೇ ಸುದ್ದಿ ಮಾಡಿತ್ತು
ಈ ಚಿತ್ರ ಬಿಡುಗಡೆಗೂ ಮುನ್ನ ‘ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಬಹಿಷ್ಕರಿಸಬೇಕೆಂಬ ಕೂಗು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿತ್ತು. ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಆಮಿರ್ ಮಾತನಾಡುವ ಹಳೆಯ ವಿಡಿಯೋಗಳನ್ನು ಆನ್ ಲೈನ್ ನಲ್ಲಿ ಹಂಚಿಕೊಳ್ಳಲಾಯಿತು ಮತ್ತು ಅದರ ಬಿಡುಗಡೆಯ ನಂತರ ಜನರು ಚಿತ್ರವನ್ನು ಅಪಹಾಸ್ಯ ಮಾಡಲು ಶುರು ಮಾಡಿದರು.

ಇದನ್ನೂ ಓದಿ: Koffee With Karan: ಕಾಫಿ ವಿತ್ ಕರಣ್​ನಲ್ಲಿ ಸೋನಂ ಕಪೂರ್! ದೀಪಿಕಾ ಪಡುಕೋಣೆ ಬಗ್ಗೆ ಏನಂದ್ರು?

ಈ ಪ್ರವೃತ್ತಿಗಳ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, ಬಹಿಷ್ಕಾರದ ಕರೆಗಳಿಂದ ತಾನು ದುಃಖಿತನಾಗಿದ್ದೇನೆ ಮತ್ತು ತನ್ನ ಚಿತ್ರವನ್ನು ಅವಮಾನಿಸದಂತೆ ಪ್ರೇಕ್ಷಕರನ್ನು ಕೋರಿದ್ದೇನೆ ಎಂದು ಆಮಿರ್ ಹೇಳಿದ್ದರು. "ಪ್ರೇಕ್ಷಕರ ಸಾಮೂಹಿಕ ಸಂತೋಷವನ್ನು ಮನೆಯಲ್ಲಿ ಅನುಭವಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ದೊಡ್ಡ ಪರದೆಯಲ್ಲಿ ಚಲನಚಿತ್ರವನ್ನು ನೋಡಲು ಇಷ್ಟಪಡುತ್ತೇನೆ" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Published by:Ashwini Prabhu
First published: