ಆಮಿರ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದ ಈ ನಟ ಈಗ ಬೀದಿ ಬದಿ ತರಕಾರಿ ವ್ಯಾಪಾರಿ!

ಮುಂಬೈ ಭಾಗದಲ್ಲಿ ಕಳೆದ ಮೂರು ತಿಂಗಳಿಂದ ಕೊರೋನಾ ವೈರಸ್​ ನಿರಂತರವಾಗಿ ಹಬ್ಬುತ್ತಿದ್ದು, ಹೀಗಾಗಿ ಆರ್ಥಿಕ ಚಟುವಟಿಕೆಗಳು ಆರಂಭಗೊಂಡಿಲ್ಲ. ಇನ್ನು, ಅನೇಕ ಸೆಟ್ಟೇರಿದ ಸಾಕಷ್ಟು ಸಿನಿಮಾಗಳು ಅರ್ಧಕ್ಕೆ ನಿಂತಿವೆ.

news18-kannada
Updated:June 29, 2020, 4:20 PM IST
ಆಮಿರ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದ ಈ ನಟ ಈಗ ಬೀದಿ ಬದಿ ತರಕಾರಿ ವ್ಯಾಪಾರಿ!
ಜಾವೇದ್ ಹೈದರ್​
  • Share this:
ಲಾಕ್​ಡೌನ್​ನಿಂದ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಅನೇಕರು ಕಂಗಾಲಾಗಿದ್ದಾರೆ. ವಿಚಿತ್ರ ಎಂದರೆ, ಕೆಲಸವಿಲ್ಲದೆ, ಅನೇಕರು ಬೀದಿ ಬದಿ ಮಾರಾಟಕ್ಕೆ ಇಳಿದಿದ್ದಾರೆ. ಈ ಸಾಲಿಗೆ ಬಾಲಿವುಡ್​ ನಟನೋರ್ವನೆ ಸೇರ್ಪಡೆ ಆಗಿದೆ.

ಮುಂಬೈ ಭಾಗದಲ್ಲಿ ಕಳೆದ ಮೂರು ತಿಂಗಳಿಂದ ಕೊರೋನಾ ವೈರಸ್​ ನಿರಂತರವಾಗಿ ಹಬ್ಬುತ್ತಿದ್ದು, ಹೀಗಾಗಿ ಆರ್ಥಿಕ ಚಟುವಟಿಕೆಗಳು ಆರಂಭಗೊಂಡಿಲ್ಲ. ಇನ್ನು, ಅನೇಕ ಸೆಟ್ಟೇರಿದ ಸಾಕಷ್ಟು ಸಿನಿಮಾಗಳು ಅರ್ಧಕ್ಕೆ ನಿಂತಿವೆ. ಈ ಮಧ್ಯೆ ಕೆಲ ಕಲಾವಿದರು ತುತ್ತು ಕೂಳಿಗೆ ಕಷ್ಟ ಪಡುವಂತಾಗಿದೆ! ಆಮೀರ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದ ಜಾವೇದ್​ ಹೈದರ್​ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬೇರೆ ದಾರಿ ಕಾಣದೆ ಬೀದಿ ಬದಿಯಲ್ಲಿ ತರಕಾರಿ ಮಾರುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ಜಾವೇದ್ ಕುರಿತಾದ ವಿಡಿಯೋವನ್ನು ನಟಿ ಡಾಲಿ ಬಿಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಾಬರ್​ (2009), ಆಮಿರ್​ ಖಾನ್​-ರಾಣಿ ಮುಖರ್ಜಿ ಅಭಿನಯಿಸಿದ್ದ ಗುಲಾಮ್​ (1998) ಸಿನಿಮಾದಲ್ಲಿ ಜಾವೇದ್ ಕೂಡ ಅಭಿನಯಿಸಿದ್ದರು.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading