ಪ್ರೀತಿಯ​ ಸುಳಿಯಲ್ಲಿ ಅಮೀರ್ ಖಾನ್​​ ಮಗಳು?; ವೈರಲ್​ ಆಯ್ತು ಇರಾ ಖಾಸಗಿ ಫೋಟೋಗಳು!

ಇರಾ ಕೂಡ ಮಿಶಾಲ್​ ಜೊತೆ ಇರುವ ಸಾಕಷ್ಟು ಫೋಟೋಗಳನ್ನು ಅಪ್​ಲೋಡ್​ ಮಾಡಿದ್ದಾರೆ. ಇದನ್ನು ನೋಡಿದವರು, ಇಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಇರಾ ಜೊತೆ ಮಿಶಾಲ್​

ಇರಾ ಜೊತೆ ಮಿಶಾಲ್​

 • News18
 • Last Updated :
 • Share this:
  ಸೆಲೆಬ್ರೆಟಿ ಮಕ್ಕಳು ಸಿನಿಮಾ ಹಾಗೂ ಖಾಸಗಿ ಜೀವನದ ವಿಚಾರಕ್ಕೆ ಆಗಾಗ ಸುದ್ದಿಯಲ್ಲಿರುತ್ತಾರೆ. ಈಗ ಅಮೀರ್ ​ ಖಾನ್​ ಮಗಳು ಇರಾ ಕೂಡ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಅವರ ಖಾಸಗಿ ಫೋಟೋಗಳು. ಯುವಕನ ಜೊತೆ ಇರಾ ತುಂಬಾನೇ ಆಪ್ತವಾಗಿ ಕಾಣಿಸಿಕೊಂಡಿರುವ ಫೋಟೋ ವೈರಲ್​ ಆಗಿದೆ. ಹಾಗಾಗಿ ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

  ಇರಾ ಜೊತೆ ಇರುವ ವ್ಯಕ್ತಿ ಮಿಶಾಲ್ ಕಿರ್ಪಾಲಾನಿ. ಪ್ರೊಫೈಲ್​ನಲ್ಲಿ ತಾನೋರ್ವ ಕಲಾವಿದ ಹಾಗೂ ಸಂಗೀತ ಸಂಯೋಜಕ ಎಂದು ಬರೆದುಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಸಾಕಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಿಶಾಲ್​ ಹಂಚಿಕೊಂಡಿದ್ದಾರೆ.

  ಇರಾ ಖಾನ್​ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅವರು ಕೂಡ ಮಿಶಾಲ್​ ಜೊತೆ ಇರುವ ಸಾಕಷ್ಟು ಫೋಟೋಗಳನ್ನು ಅಪ್​ಲೋಡ್​ ಮಾಡಿದ್ದಾರೆ. ಇದನ್ನು ನೋಡಿದವರು, ಇಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನು, ಅನೇಕರು ಹಾರ್ಟ್​​ ಬ್ರೇಕ್​ ಆಯಿತು ಎಂದು ಬರೆದುಕೊಂಡಿದ್ದಾರೆ.

  ಇದನ್ನೂ ಓದಿ: ಮಗನಿಗಾಗಿ ನಿರ್ದೇಶನ ಮಾಡುವುದರಿಂದ ದೂರ ಉಳಿದಿದ್ದಾರೆ ಬಾಲಿವುಡ್​ನ ಸ್ಟಾರ್​ ನಟ!

  “ಈ ಫೋಟೋ ನೋಡಿದಮೇಲೆ ನನ್ನ ಹಾರ್ಟ್​ ಬ್ರೇಕ್​ ಆಗಿದೆ. ಅದೇನೇ ಇರಲಿ ಇರಾಗೆ ಬೇಸರ ಮಾಡಬೇಡಿ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ,” ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಅಷ್ಟಕ್ಕೂ ಯಾರೀತ? ಇರಾಗೂ ಮಿಶಾಲ್​ಗೂ ಏನು ಸಂಬಂಧ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ.

  ಕಳೆದ ವರ್ಷ ಇರಾ ಜೊತೆ ಇರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಅಮೀರ್ ​. ಆದರೆ ಇದಕ್ಕೆ ಸಾಕಷ್ಟು ಅಶ್ಲೀಲ ಕಮೆಂಟ್​ಗಳು ಬಂದಿದ್ದವು. ಆಮೀರ್​ ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದರು.   
  View this post on Instagram
   

  Used to not be allowed in the building But now we on the rooftop🥂


  A post shared by Mishaal kirpalani (@mishaalkirpalani) on
   
  View this post on Instagram
   

  Charmer😘


  A post shared by Mishaal kirpalani (@mishaalkirpalani) on

  ಇದನ್ನೂ ಓದಿ: ಅಪರೂಪದ ಫೋಟೋ ಹಂಚಿಕೊಂಡ ಅಮಿತಾಭ್​ ಬಚ್ಚನ್​; ಬಿಗ್​ಬಿ ಜೊತೆಯಿರೋ ಸ್ಟಾರ್​ಗಳು ಯಾರು ಗೊತ್ತಾ?

  First published: