ಅಮೀರ್‌ ಖಾನ್‌ ಅಂಗರಕ್ಷಕ school dropout: ಆತನ ವಾರ್ಷಿಕ ವೇತನದಲ್ಲಿ ಮುಂಬೈನಲ್ಲಿ 2 BHK Flat ಖರೀದಿಸಬಹುದು..!

ಅಮೀರ್‌ ಖಾನ್ ವೈಯಕ್ತಿಕ ಅಂಗರಕ್ಷಕ (Aamir Khan's Bodyguard) ಯುವರಾಜ್ ಘೋರ್ಪಡೆ ಎಂದು ತಿಳಿದು ಬಂದಿದ್ದು, ಇವರು ಮೊದಲು ಬಾಡಿ ಬಿಲ್ಡರ್ ಆಗಲು ಬಯಸಿದ್ದರಂತೆ. ಆದರೆ ಈಗ ಅಮೀರ್ ಖಾನ್​ ಅವರಿಗೆ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. 16ನೇ ವಯಸ್ಸಿನಲ್ಲಿ ಶಾಲೆ ಬಿಟ್ಟ ( school dropout) ಯುವರಾಜ್ ಅವರ ಜೀವನವು ಏಸ್ ಸೆಕ್ಯೂರಿಟಿಗೆ ಸೇರಿದಾಗ ತಿರುವು ಪಡೆಯಿತು.

ನಟ ಅಮೀರ್ ಖಾನ್​

ನಟ ಅಮೀರ್ ಖಾನ್​

  • Share this:
ಯಾವುದೇ ಚಲನಚಿತ್ರೋದ್ಯಮದ ನಟ ನಟಿಯರ ವೈಯಕ್ತಿಕ ಅಂಗರಕ್ಷಕರಿಗೆ (Bodyguard) ಕೆಲಸವೂ ಜಾಸ್ತಿ, ಹಾಗೆಯೇ ಸಂಬಳ ಕೂಡ ಜಾಸ್ತಿ ಅಂತಾ ಹೇಳಬಹುದು. ಏಕೆಂದರೆ ಆ ನಟ ನಟಿಯರು ತಮ್ಮ ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಅವರ ಹಿಂದೆ ಮುಂದೆಯೇ ಇದ್ದು ಅವರಿಗೆ ಅನೇಕ ಕಾರ್ಯಕ್ರಮಗಳಲ್ಲಿ ಅಭಿಮಾನಿಗಳಿಂದ ಮತ್ತು ಇತರೆ ಜನರಿಂದ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ರಕ್ಷಣೆ ನೀಡಬೇಕಾಗುತ್ತದೆ.ತುಂಬಾ ತಲೆನೋವಿನ ಕೆಲಸವಾದರೂ, ಸಂಬಳ ಮಾತ್ರ ಚೆನ್ನಾಗಿಯೇ ಇರುತ್ತದೆ. ಅದರಲ್ಲಿಯೂ ಬಾಲಿವುಡ್ ನಟರಿಗೆ ಅಂಗರಕ್ಷಕರಾಗಿರುವುದು ಸಾಮಾನ್ಯವಾದ ಮಾತಂತು ಅಲ್ಲವೇ ಅಲ್ಲ. ಅದರಲ್ಲಿಯೂ ಮಿಸ್ಟರ್ ಪರ್ಫೆಕ್ಟ್ ಅಂತಾನೇ ಪ್ರಖ್ಯಾತಿ ಪಡೆದ ಬಾಲಿವುಡ್ ನಟ ಅಮೀರ್‌ ಖಾನ್  (Aamir Khan) ವೈಯಕ್ತಿಕ ಅಂಗರಕ್ಷಕ (Bodyguard)ಅಂದರೆ ಕೇಳಬೇಕೆ? ಅವರ ವಾರ್ಷಿಕ ಸಂಬಳ ಕೇಳಿದರೆ ನೀವು ನಿಜಕ್ಕೂ ದಂಗಾಗ್ತೀರಾ.

ಅಮೀರ್‌ ಖಾನ್ ವೈಯಕ್ತಿಕ ಅಂಗರಕ್ಷಕ (Aamir Khan's Bodyguard) ಯುವರಾಜ್ ಘೋರ್ಪಡೆ ಎಂದು ತಿಳಿದು ಬಂದಿದ್ದು, ಇವರು ಮೊದಲು ಬಾಡಿ ಬಿಲ್ಡರ್ ಆಗಲು ಬಯಸಿದ್ದರಂತೆ. ಆದರೆ ಈಗ ಅಮೀರ್ ಖಾನ್​ ಅವರಿಗೆ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. 16ನೇ ವಯಸ್ಸಿನಲ್ಲಿ ಶಾಲೆ ಬಿಟ್ಟ ( school dropout) ಯುವರಾಜ್ ಅವರ ಜೀವನವು ಏಸ್ ಸೆಕ್ಯೂರಿಟಿಗೆ ಸೇರಿದಾಗ ತಿರುವು ಪಡೆಯಿತು. ನಂತರ ಅವರು ಅಮೀರ್‌ ಖಾನ್​ ಅವರ ಭದ್ರತಾ ತಂಡವನ್ನು ಸೇರಿದರು.

Kiran Rao had told about three bad habits of Aamir Khan and they are discussed as reasons post divorce of the couple
ಅಮೀರ್​ - ಕಿರಣ್​


ಒಂದು ಮಾಧ್ಯಮದ ವರದಿಯ ಪ್ರಕಾರ, ಯುವರಾಜ್ ಘೋರ್ಪಡೆ ಅವರು ವಾರ್ಷಿಕವಾಗಿ ಸುಮಾರು 2 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಇದು ತುಂಬಾ ದೊಡ್ಡ ಸಂಬಳವಾಗಿದ್ದು, ಮುಂಬೈನಲ್ಲಿ ದುಬಾರಿ ಆಸ್ತಿ ದರಗಳಿಗೆ ಹೆಸರುವಾಸಿಯಾದ ಕಾಂದೀವಲಿ, ಜೋಗೇಶ್ವರಿ ಮುಂತಾದ ಪ್ರದೇಶಗಳಲ್ಲಿ ನೀವು ಈ ಹಣದಲ್ಲಿ ಒಂದು ಉತ್ತಮವಾದ ಎರಡು ಕೋಣೆಗಳಿರುವ ಫ್ಲ್ಯಾಟ್​ ಖರೀದಿಸಬಹುದುದಂತೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಗ್ಲಾಮರಸ್​ ಗೊಂಬೆ Ramya ಲೆಟೆಸ್ಟ್​ ಫೋಟೋಗಳಿಗೆ ಅಭಿಮಾನಿಗಳು ಫಿದಾ..!

ಸುದ್ದಿ ಮಾಧ್ಯಮಕ್ಕೆ ನೀಡಿದ್ದ ಹಳೆಯ ಸಂದರ್ಶನವೊಂದರಲ್ಲಿ ಅಮೀರ್‌  ಅಂಗರಕ್ಷಕ ಯುವರಾಜ್ "9 ವರ್ಷಗಳ ಹಿಂದೆ ನಾನು ಏಸ್ ಸೆಕ್ಯೂರಿಟಿಗೆ ಸೇರಲು ನಿರ್ಧರಿಸುವವರೆಗೂ ನಾನು ನನ್ನ ಜೀವನಕ್ಕಾಗಿ ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದುದರಿಂದ ನನಗೆ ಹೇಗಪ್ಪಾ ನನ್ನ ಮುಂದಿನ ಭವಿಷ್ಯ ಎಂದು ತುಂಬಾ ಬೇಸರಗೊಂಡಿದ್ದೆ. ಇಂದು, ನಾನು ದೊಡ್ಡ ಹೆಸರು ಮಾಡಿದ ನಟ ಅಮೀರ್‌ಗೆ ಅಂಗರಕ್ಷಕನಾಗಿದ್ದೇನೆ ಮತ್ತು ನನ್ನ ಅನೇಕ ಸ್ನೇಹಿತರು ನಾನು ಅಂತಹ ದೊಡ್ಡ ವ್ಯಕ್ತಿಯೊಂದಿಗೆ ಸದಾ ತಿರುಗಾಡುತ್ತಿದ್ದೇನೆ ಎಂದು ನೋಡಿ ಅಸೂಯೆ ಪಡುತ್ತಾರೆ" ಎಂದು ಹೇಳಿಕೊಂಡಿದ್ದರು.

ಈ ಹಿಂದೆ, ಇನ್ನೊಬ್ಬ ದೊಡ್ಡ ಬಾಲಿವುಡ್ ನಟ ಶಾರುಖ್ ಖಾನ್ ಅಂಗರಕ್ಷಕ ರವಿ ಸಿಂಗ್ ವಾರ್ಷಿಕವಾಗಿ 2.7 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಎಂದು ವರದಿಗಳ ಪ್ರಕಾರ ತಿಳಿದು ಬಂದಿತ್ತು. ನಟಿ ಅನುಷ್ಕಾ ಶರ್ಮಾ ಭದ್ರತಾ ಸಿಬ್ಬಂದಿ ಸೋನು, ದೀಪಿಕಾ ಪಡುಕೋಣೆ ಅಂಗರಕ್ಷಕ ಜಲಾಲ್, ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ ಶೇರಾ, ಅಕ್ಷಯ್ ಕುಮಾರ್ ಅಂಗರಕ್ಷಕ ಶ್ರೇಸೇ ಥೆಲೆ ಅವರಿಗೂ ಉತ್ತಮ ವೇತನ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಿಲೀಸ್‍ಗೆ ರೆಡಿಯಾಗಿದೆ Amruth Apartments: ಹೀಗೊಂದು ವಿಭಿನ್ನ ಮರ್ಡರ್ ಮಿಸ್ಟರಿ!

ಅಮೀರ್​ ಖಾನ್​ ಅವರು ಇತ್ತೀಚೆಗಷ್ಟೆ ತಮ್ಮ ಎರಡನೇ ಪತ್ನಿ ಕಿರಣ್ ರಾವ್​ ಅವರಿಂದ ದೂರಾಗುವ ಕುರಿತಾಗಿ ಅಧಿಕೃತವಾಗಿ ಪ್ರಕಟಿಸುವ ಮೂಲಕ ಸುದ್ದಿಯಲ್ಲಿದ್ದರು. ಇಬ್ಬರೂ ಸಹ ಸಹಮತದಿಂದ ವಿಚ್ಛೇಧನ ಪಡೆಯುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದರು. ನಂತರವೂ ಸ್ನೇಹಿತರಾಗಿ ಮುಂದುವರೆಯುವುದಾಗಿಯೂ ಈ ಜೋಡಿ ಪ್ರಕಟಿಸಿದ್ದರು. ಇನ್ನು ಅಮೀರ್ ಖಾನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಲಾಲ್​ಸಿಂಗ್​ ಚಡ್ಡಾ. ಈ ಸಿನಿಮಾದಲ್ಲಿ ಕರೀನಾ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.
Published by:Anitha E
First published: