Jhund Movie: ಅಮಿತಾಭ್ ಚಿತ್ರ ನೋಡಿ ಕಣ್ಣೀರಿಟ್ಟ ಆಮಿರ್ ಖಾನ್, ಈ ಸಿನಿಮಾದಲ್ಲಿ ಅಂಥದ್ದೇನಿದೆ?

ಕಳೆದ 20 ರಿಂದ 30 ವರ್ಷಗಳಲ್ಲಿ ನಾವು ಕಲಿತದ್ದನ್ನು ಮತ್ತು ಮಾಡಿದ್ದನ್ನು 'ಝುಂಡ್’ ಚಿತ್ರ ಒಂದೇ ಬಾರಿಗೆ ಅಳಿಸಿ ಹಾಕಿದೆ. ಅಲ್ಲದೇ ಈ ಚಿತ್ರವು ನಟ ಅಮಿತಾಭ್ ಬಚ್ಚನ್ ಅವರು ಮಾಡಿದಂತಹ ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಲಿವುಡ್‌ನಲ್ಲಿ ಬಿಗ್ ಬಿ ಎಂದೇ ಖ್ಯಾತಿಯಾಗಿರುವ ನಟ ಅಮಿತಾಭ್ ಬಚ್ಚನ್ (Amitabh bachchan) ಅವರ ನಟನೆಯನ್ನು ಯಾರು ಮೆಚ್ಚಿಕೊಂಡಿಲ್ಲ ಹೇಳಿ..? ಅಮಿತಾಭ್ ಅವರು ತಮ್ಮ 79ನೇ ವಯಸ್ಸಿನಲ್ಲಿಯೂ ಅಷ್ಟೇ ಹುಮ್ಮಸ್ಸಿನಿಂದ ನಟಿಸುತ್ತಾರೆ ಎನ್ನುವುದಕ್ಕೆ ಅವರ ಪ್ರಸ್ತುತ ಚಲನಚಿತ್ರಗಳಿಗಿಂತಲೂ (Movie) ಬೇರೆ ಸಾಕ್ಷಿ ಬೇಕಿಲ್ಲ. ಅಮಿತಾಭ್ ಅವರ ಹೊಸ ಚಿತ್ರ ‘ಝುಂಡ್ಅನ್ನು ಖಾಸಗಿ ಪ್ರದರ್ಶನದಲ್ಲಿ ನೋಡಿದ ಒಬ್ಬ ಬಾಲಿವುಡ್ (Bolllywood) ನಟ ಕಣ್ತುಂಬಿಕೊಂಡರಂತೆ ಎಂದು ಹೇಳಲಾಗುತ್ತಿದೆ. ಯಾರು ನಟ ಅಂತೀರಾ? ಅವರು ಬೇರೆ ಯಾರು ಅಲ್ಲ, ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಟ್ ಎಂತಲೇ ಖ್ಯಾತಿ ಪಡೆದಿರುವ ನಟ ಆಮೀರ್ ಖಾನ್ (Aamir khan). ಇತ್ತೀಚೆಗೆ ಖಾಸಗಿ ಪ್ರದರ್ಶನದಲ್ಲಿ ‘ಝುಂಡ್’ (jhund) ಚಿತ್ರವನ್ನು ನಟ ಆಮೀರ್ ನೋಡಿದ ನಂತರ ಕಣ್ಣಿನಲ್ಲಿ ನೀರು ತುಂಬಿಕೊಂಡು ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಲ್ಲದೆ ಅದರಲ್ಲಿರುವ ಮಕ್ಕಳ ಪಾತ್ರಗಳನ್ನು ಹೊಗಳಿದ್ದಾರೆ.

ಅಮಿತಾಭ್ ವೃತ್ತಿ ಜೀವನದ ಶ್ರೇಷ್ಠ ಚಿತ್ರ:

‘ಜುಂಡ್’ ಚಿತ್ರದ ನಿರ್ದೇಶಕ ನಾಗರಾಜ್ ಪೋಪಟ್‌ರಾವ್ ಮಂಜುಳೆ ಮತ್ತು ನಿರ್ಮಾಪಕ ಭೂಷಣ್ ಕುಮಾರ್ ಅವರೊಂದಿಗೆ ಮಾತನಾಡಿದ ಆಮೀರ್, ‘ಕಳೆದ 20 ರಿಂದ 30 ವರ್ಷಗಳಲ್ಲಿ ನಾವು ಕಲಿತದ್ದನ್ನು ಮತ್ತು ಮಾಡಿದ್ದನ್ನು ಈ ಚಿತ್ರ ಒಂದೇ ಬಾರಿಗೆ ಅಳಿಸಿ ಹಾಕಿದೆ. ಅಲ್ಲದೇ ಈ ಚಿತ್ರವು ನಟ ಅಮಿತಾಭ್ ಬಚ್ಚನ್ ಅವರು ಮಾಡಿದಂತಹ ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿದೆ. ಜೊತೆಗೆ ಈ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲಾ ಮಕ್ಕಳ ನಟನೆಯೂ ತುಂಬಾ ಅದ್ಧುತವಾಗಿ ಮೂಡಿಬಂದಿದೆ’ ಎಂದು ಹೇಳಿದರು.

’ಝುಂಡ್’ ಚಿತ್ರ ಮೆಚ್ಚಿದ ಮಿಸ್ಟರ್ ಪರ್ಫೆಕ್ಷನಿಸ್ಟ್‌:

ಈ ಚಿತ್ರದ ಕುರಿತು ಹೇಳಲು ನನ್ನ ಬಳಿ ಪದಗಳಿಲ್ಲ, ಭಾರತದ ಹುಡುಗಿಯರು ಮತ್ತು ಹುಡುಗರ ಭಾವನೆಗಳನ್ನು ನೀವು ಸೆರೆಹಿಡಿದ ರೀತಿ ಇದೆಯಲ್ಲ, ಅದು ತುಂಬಾನೇ ಚೆನ್ನಾಗಿ ಮೂಡಿಬಂದಿದೆ. ಮಕ್ಕಳು ಸಹ ಕೆಲಸ ಮಾಡಿದ ರೀತಿ ನಂಬಲು ಅಸಾಧ್ಯವಾಗಿದೆ. ಅಲ್ಲದೇ ನೀವು ಎಂತಹ ಚಲನಚಿತ್ರವನ್ನು ಮಾಡಿದ್ದೀರಿ, ಇದೊಂದು ಅದ್ಭುತ ಚಿತ್ರ. ಇದು ತುಂಬಾ ಅನನ್ಯವಾಗಿದೆ, ನೀವು ಅದನ್ನು ಹೇಗೆ ಮಾಡಲು ಸಾಧ್ಯವಾಯಿತು ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ.

ಇದನ್ನೂ ಓದಿ: Bollywood: ಕರೀನಾ ಮತ್ತು ಕೊರೋನಾ ಬಗ್ಗೆ ಮಾತನಾಡಿದ ಅಮೀರ್ ಖಾನ್

ಇನ್ನು, ಚಿತ್ರದಲ್ಲಿ ಸೆರೆಹಿಡಿದಿರುವ ಆ ಮಕ್ಕಳ ಭಾವನೆಗಳು ತುಂಬಾನೇ ಆಶ್ಚರ್ಯ ಮೂಡಿಸುವಂತದ್ದು. ಖಂಡಿತವಾಗಿಯೂ ಈ ಚಿತ್ರವು ಪ್ರೇಕ್ಷಕರ ಮೇಲೆ ಶಾಶ್ವತ ಪ್ರಭಾವ ಬೀರುತ್ತದೆ. ಜೊತೆಗೆ ಕಳೆದ 20 ರಿಂದ 30 ವರ್ಷಗಳಲ್ಲಿ ನಾವು ಕಲಿತದ್ದನ್ನು ಈ ಚಿತ್ರವು ಅಳಿಸಿ ಹಾಕಿದೆ’ ಎಂದು  ಆಮೀರ್ ಚಿತ್ರದ ನಿರ್ದೇಶಕರನ್ನು ಹೊಗಳಿದರು.

ಜುಂಡ್’ ನೈಜ ಕಥೆಯಾಧಾರಿತ ಚಿತ್ರ:

ಈ ಚಿತ್ರದ ಕಥೆಯು ನಾಗ್ಪುರದ ಸಾಮಾಜಿಕ ಕಾರ್ಯಕರ್ತ ಮತ್ತು ಸ್ಲಂ ಸಾಕರ್‌ ಸಂಸ್ಥೆಯ ಸಂಸ್ಥಾಪಕ ಸಾಮಾಜಿಕ ಕಾರ್ಯಕರ್ತ ವಿಜಯ್ ಬಾರ್ಸೆ ಅವರ ಜೀವನವನ್ನು ಆಧರಿಸಿದೆ. ಅವರು ಸ್ಲಮ್ ಮಕ್ಕಳನ್ನು ಒಂದೆಡೆ ಸೇರಿಸಿ ಹೇಗೆ ಒಂದು ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಕಟ್ಟಿದರು ಎಂಬುದು ಚಿತ್ರದ ಕಥೆಯಾಗಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಬೀದಿ ಮಕ್ಕಳಿಂದ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ರಚಿಸಲು ಪ್ರೇರೇಪಿಸುವ ಕೋಚ್​ ಆಗಿ ನಟಿಸಿದ್ದಾರೆ.

ಇದನ್ನೂ ಓದಿ: KGF 2 vs Aamir Khan: ಕೆಜಿಎಫ್ 2 ಎದುರು ಬರಲು ಆಮಿರ್ ಹಿಂಜರಿಕೆ? ಲಾಲ್ ಸಿಂಗ್ ಛಡ್ಡಾ ಬಿಡುಗಡೆ ಮುಂದೂಡಿಕೆ

ಇನ್ನು, ಚಿತ್ರದಲ್ಲಿ ಅಮಿತಾಭ್​ ಬಚ್ಚನ್ ಸೇರಿದಂತೆ ಸೈರಾಟ್ ಖ್ಯಾತಿಯ ಆಕಾಶ್ ಥೋಸರ್ ಮತ್ತು ರಿಂಕು ರಾಜ್​​ಗುರು ಕೂಡ ನಟಿಸಿದ್ದಾರೆ. ನಟ ಅಮಿತಾಭ್ ಆ ಪಾತ್ರವನ್ನು ತುಂಬಾನೇ ಚೆನ್ನಾಗಿ ನಿರ್ವಹಿಸಿದ್ದಾರೆ. ಇನ್ನು, ಝುಂಡ್ ಚಿತ್ರವು ಇದೇ ಮಾರ್ಚ್ 4 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
Published by:shrikrishna bhat
First published: