Akshay Kumar: ಅಮೀರ್​ ಖಾನ್​ಗಾಗಿ ತನ್ನ ಸಿನಿಮಾದ ಬಿಡುಗಡೆ ದಿನಾಂಕವನ್ನೇ ಮುಂದೂಡಿದ ಅಕ್ಷಯ್​ ಕುಮಾರ್​..!

Aamir Khan: ಓಡುವ ಕುದುರೆಗಳಾಗಿದ್ದ ಖಾನ್​ಗಳಲ್ಲಿ ಒಬ್ಬರಾಗಿದ್ದ ಅಮೀರ್​ ಖಾನ್​ ಸಹ ಈಗ ತಮ್ಮ ಸಿನಿಮಾಗಾಗಿ ಬೇರೆ ನಾಯಕರ ಬಳಿ ಸಹಾಯ ಕೇಳುವಂತಾಗಿದೆ. ಹೌದು, ಸಿನಿಮಾ ರಂಗದಲ್ಲಿ ಇರುವ ಸ್ಪರ್ಧೆಗೆ ಅಮೀರ್​ ಖಾನ್​ ತಲೆಕೆಡಿಸಿಕೊಂಡಂತಿದೆ. ಇದಕ್ಕೆ ಇರಬೇಕು ಅಮೀರ್​ ಈಗ ಅಕ್ಷಯ್​ ಕುಮಾರ್​ ಅವರ ಸಹಾಯ ಕೇಳಿರುವುದು.

ಬಚ್ಚನ್ ಪಾಂಡೆ ಹಾಗೂ ಲಾಲ್​ ಸಿಂಗ್​ ಚಡ್ಡ

ಬಚ್ಚನ್ ಪಾಂಡೆ ಹಾಗೂ ಲಾಲ್​ ಸಿಂಗ್​ ಚಡ್ಡ

  • Share this:
ಕಾಲವೊಂದಿತ್ತು ಖಾನ್​ಗಳ ಸಿನಿಮಾಗಳು ಬಾಲಿವುಡ್​ನಲ್ಲಿ ಯಾವುದೇ ಪ್ರಚಾರವಿಲ್ಲದೆ ತೆರೆಕಂಡರೂ ಕೋಟಿ ಕೋಟಿ ಬಾಚಿಕೊಳ್ಳುತ್ತಿದ್ದವು. ಖಾನ್​ಗಳು ಇಡೀ ಬಿ-ಟೌನ್​ ಅನ್ನೇ ಆಳುತ್ತಿದ್ದರು. ಆದರೆ ಈಗ ಖಾನ್​ಗಳ ಸಿನಿಮಾಗಳು ತೆರೆ ಕಾಣುವುದೇ ಅಪರೂಪ, ಕಂಡರೂ ಅವು ಹೆಚ್ಚು ಸಮಯ ಬಾಕ್ಸಾಫಿಸ್​ನಲ್ಲಿ ನಿಲ್ಲುವುದೇ ಇಲ್ಲ. 

ಓಡುವ ಕುದುರೆಗಳಾಗಿದ್ದ ಖಾನ್​ಗಳಲ್ಲಿ ಒಬ್ಬರಾಗಿದ್ದ ಅಮೀರ್​ ಖಾನ್​ ಸಹ ಈಗ ತಮ್ಮ ಸಿನಿಮಾಗಾಗಿ ಬೇರೆ ನಾಯಕರ ಬಳಿ ಸಹಾಯ ಕೇಳುವಂತಾಗಿದೆ. ಹೌದು, ಸಿನಿಮಾ ರಂಗದಲ್ಲಿ ಇರುವ ಸ್ಪರ್ಧೆಗೆ ಅಮೀರ್​ ಖಾನ್​ ತಲೆಕೆಡಿಸಿಕೊಂಡಂತಿದೆ. ಇದಕ್ಕೆ ಇರಬೇಕು ಅಮೀರ್​ ಈಗ ಅಕ್ಷಯ್​ ಕುಮಾರ್​ ಸಹಾಯ ಕೇಳಿರುವುದು.

Rare and Childhood photos of Actor Aamir Khan 
ನಟ ಅಮೀರ್​ ಖಾನ್​ರ ಅಪರೂಪದ ಚಿತ್ರಗಳು


ಹೌದು, ಅಮೀರ್​ ಖಾನ್​ ಆ್ಯಕ್ಷನ್​​ ಕಿಂಗ್​ ಅಕ್ಷಯ್​ ಬಳಿ ಒಂದು ಮನವಿ ಮಾಡಿಕೊಂಡಿದ್ದರು. ಅದು ಈ ವರ್ಷಾಂತ್ಯದಲ್ಲಿ ಅಮೀರ್ ಖಾನ್​ರ ಬಹುನಿರೀಕ್ಷಿತ ಸಿನಿಮಾ 'ಲಾಲ್​ ಸಿಂಗ್​ ಚಡ್ಡಾ'ವನ್ನು ಕ್ರಿಸ್ಮಸ್​ಗೆ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದರು. ಅದೇ ಸಮಯಕ್ಕೆ ಅಕ್ಷಯ್​ ಕುಮಾರ್​ ಅವರ 'ಬಚ್ಚನ್​ ಪಾಂಡೆ' ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿತ್ತು.

ಇದನ್ನೂ ಓದಿ: Shah Rukh Khan New Movie: ಕೊನೆಗೂ ಹೊಸ ಸಿನಿಮಾದ ಬಗ್ಗೆ ಸುಳಿವು ಕೊಟ್ಟ ಕಿಂಗ್​ ಖಾನ್​ ಶಾರುಖ್​ ಖಾನ್​..!

'ಬಚ್ಚನ್​ ಪಾಂಡೆ' ಸಿನಿಮಾ ಬಿಡುಗಡೆ ವಿಚಾರವಾಗಿ ಅಕ್ಷಯ್​ ಹಾಗೂ ಸಾಜಿದ್​ ನಾಡಿಯಾದ್​ವಾಲಾ ಅವರೊಂದಿಗೆ ಅಮೀರ್​ ಮಾತನಾಡಿದ್ದು, ಬಿಡುಗಡೆ ದಿನಾಂಕವನ್ನು ಮುಂದೂಡುವಂತೆ ಮನವಿ ಮಾಡಿದ್ದರು. ಇದನ್ನು ಗೌರವಿಸಿರುವ ಅಕ್ಷಯ್​ ಸಿನಿಮಾದ ಹೊಸ ಬಿಡುಗಡೆ ದಿನಾಂಕದ ಜೊತೆಗೆ ಹೊಸ ಪೋಸ್ಟರ್​ ಅನ್ನೂ ಬಿಡುಗಡೆ ಮಾಡಿದ್ದಾರೆ.

Anytime @aamir_khan , we’re all friends here 🙃 Presenting - new look, new release date. Coming on 22nd January, 2021. In and as #BachchanPandey! #SajidNadiadwala @farhad_samji @kritisanon https://t.co/Y75p0bQmaF pic.twitter.com/orZPR6NZYM



ಈ ಸಿನಿರಂಗದಲ್ಲಿ ಎಲ್ಲರೂ ಸ್ನೇಹಿತರು ಎಂದು  ಹೊಸ ಲುಕ್​ ಹಾಗೂ ಹೊಸ ದಿನಾಂಕವನ್ನು ಪ್ರಕಟಿಸಿದ್ದಾರೆ ಅಕ್ಷಯ್​. ಅವರ 'ಬಚ್ಚನ್ ಪಾಂಡೆ' ಸಿನಿಮಾ ಈ ವರ್ಷಾಂತ್ಯದ ಬದಲು 2021 ಜನವರಿ 22ಕ್ಕೆ ತೆರೆ ಕಾಣಲಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಅಕ್ಷಯ್​ ಹಾಗೂ ಸಾಜಿದ್​ ನಾಡಿಯಾದ್​ವಾಲಾ ಅವರ ಸಹಾಯಕ್ಕೆ ಧನ್ಯವಾದ ತಿಳಿಸಿರುವ ಅಮೀರ್​, ಕೆಲವೊಮ್ಮೆ ಒಂದೇ ಒಂದು ಮಾತುಕತೆ ಸಾಕು... ಎಲ್ಲ ಸರಿಹೋಗುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ.

Sometimes all it takes is one conversation. Thank you to my friends @akshaykumar & Sajid Nadiadwala for their warm gesture of moving the release date of their film Bachchan Pandey at my request. I wish them the very best for their film. Looking forward to it. 



'ಲಾಲ್​ ಸಿಂಗ್​ ಚಡ್ಡಾ' ಸಿನಿಮಾ ಇದೇ ವರ್ಷ ಡಿಸೆಂಬರ್​ನಲ್ಲಿ ಕ್ರಿಸ್ಮಸ್​ಗೆ ತೆರೆಕಾಣಲಿದೆ. ಹಾಲಿವುಡ್​ನಲ್ಲಿ ಟಾಮ್​ ಹ್ಯಾಂಕ್ಸ್​ ಅಭಿನಯದ 'ಫಾರೆಸ್ಟ್​ ಗಂಪ್' ಚಿತ್ರದ ರಿಮೇಕ್​ ಆಗಿದೆ.

 

Pranitha: ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿ ಜೊತೆ ವೇದಿಕೆ ಹಂಚಿಕೊಂಡ ನಟಿ ಪ್ರಣೀತಾ


 

First published: