Aamir Khan: ತಮ್ಮ ಮೊದಲ ಪ್ರೀತಿಯ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್‌

ತಮ್ಮ ಮುಂಬರುವ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ದ ‘ಫಿರ್ ನಾ ಐಸಿ ರಾತ್ ಆಯೇಗಿ’ ಹಾಡನ್ನು ಬಿಡುಗಡೆ ಮಾಡುವಾಗ, ಆಮೀರ್ ತಮ್ಮ ಮೊದಲ ಪ್ರೀತಿಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದರು. ಮೊದಲನೇ ಪ್ರೀತಿ ಅವರ ಹೃದಯವನ್ನು ತುಂಬಾನೇ ಗಾಯಗೊಳಿಸಿತ್ತು ಎಂದು ನಟ ನೆನಪಿಸಿಕೊಂಡರು.

 ಅಮಿರ್ ಖಾನ್

ಅಮಿರ್ ಖಾನ್

  • Share this:
ಬಹುತೇಕರಿಗೆ ತುಂಬಾ ವರ್ಷಗಳ ಕಾಲದವರೆಗೆ ಕೆಲವು ಜೀವನದಲ್ಲಿ ನಡೆದ ಸಂಗತಿಗಳು ಚೆನ್ನಾಗಿಯೇ ನೆನಪಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಂತಹ ಸಂಗತಿಗಳಲ್ಲಿ ಅವರಿಗಾಗುವ ಮೊದಲ ಪ್ರೀತಿ (Love) ಸಹ ಸೇರಿರುತ್ತದೆ ಎಂದು ಹೇಳಬಹುದು. ಹೌದು.. ಯಾರಿಗೆ ತಾನೇ ತಮ್ಮ ಮೊದಲನೆಯ ಪ್ರೀತಿಯ ಬಗ್ಗೆ ಮರೆಯಲು ಸಾಧ್ಯ ಹೇಳಿ? ಜೀವನದಲ್ಲಿ (Life) ಮೊದಲ ಬಾರಿಗೆ ನಮ್ಮ ಹೃದಯಕ್ಕೆ (Heart) ಮತ್ತು ಮನಸ್ಸಿಗೆ (Mind) ಎರಡಕ್ಕೂ ಒಂದೇ ಬಾರಿಗೆ ಇಷ್ಟವಾಗುವುದು ಎಂದರೆ ಅದು ಒಂದು ಹುಡುಗಿ (Girl) ಅಂತ ಹೇಳಿದರೆ ಸುಳ್ಳಲ್ಲ ಬಿಡಿ. ಈ ಮೊದಲನೆಯ ಪ್ರೀತಿ ಎನ್ನುವುದು ಯಾರನ್ನು ಬಿಟ್ಟಿಲ್ಲ ಅಂತ ಅನ್ನಿಸುತ್ತೆ, ಬಾಲಿವುಡ್ ನಲ್ಲಿರುವ ಮಿಸ್ಟರ್ ಪರ್ಫೆಕ್ಟ್ ಅಂತಾನೇ ಹೆಸರು ಪಡೆದಿರುವ ಆಮಿರ್ ಖಾನ್‌ (Amir Khan) ತಮ್ಮ 30 ವರ್ಷಗಳ ನಟನಾ ವೃತ್ತಿಜೀವನದಲ್ಲಿ ಅನೇಕ ನಟಿಯರೊಂದಿಗೆ ರೊಮ್ಯಾನ್ಸ್ ಮಾಡಿದ್ದಾರೆ.

ಆಮಿರ್ ಖಾನ್‌ ಅವರ ಮುಂದಿನ ಸಿನೆಮಾ
ವಾಸ್ತವವಾಗಿ, ನಾಯಕನಾಗಿ ಅವರ ಮೊದಲ ಚಿತ್ರಗಳಲ್ಲಿ ಒಂದಾದ 1988 ರ ಚಲನಚಿತ್ರ ‘ಖಯಾಮತ್ ಸೆ ಖಯಾಮತ್ ತಕ್’ ಒಂದು ಪ್ರೇಮ ಕಥೆಯಾಗಿತ್ತು. ಬುಧವಾರ, ತಮ್ಮ ಮುಂಬರುವ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ದ ‘ಫಿರ್ ನಾ ಐಸಿ ರಾತ್ ಆಯೇಗಿ’ ಹಾಡನ್ನು ಬಿಡುಗಡೆ ಮಾಡುವಾಗ, ಆಮಿರ್ ಖಾನ್‌ ತಮ್ಮ ಮೊದಲ ಪ್ರೀತಿಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದರು. ಮೊದಲನೇ ಪ್ರೀತಿ ಅವರ ಹೃದಯವನ್ನು ತುಂಬಾನೇ ಗಾಯಗೊಳಿಸಿತ್ತು ಎಂದು ನಟ ನೆನಪಿಸಿಕೊಂಡರು.

ಮೊದಲ ಪ್ರೀತಿಯ ಅನುಭವವನ್ನು ಹಂಚಿಕೊಂಡ ಖಾನ್
‘ಫಿರ್ ನಾ ಐಸಿ ರಾತ್ ಆಯೇಗಿ’ ಹಾಡಿನ ಯೂಟ್ಯೂಬ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದ್ದು, "ಹಂಬಲದ ಯಾತನೆ, ಪ್ರೀತಿಯ ಸಿಹಿ ನೋವು, ಈ ಕ್ಷಣವನ್ನು ಶಾಶ್ವತವಾಗಿ ಉಳಿಯುವಂತೆ ಮಾಡುವ ಬಯಕೆ. ಈ ಶಾಶ್ವತ ಭಾವನೆಯನ್ನು ಸೆರೆಹಿಡಿಯುವ ಹಾಡು" ಈ ಹಾಡಿನ ಬಿಡುಗಡೆಯ ಸಮಯದಲ್ಲಿ ಲೈವ್ ಸಂವಾದದಲ್ಲಿ, ಆಮಿರ್ ಖಾನ್‌ ತಮ್ಮ ಮೊದಲ ಪ್ರೀತಿಯ ಆ ಅನುಭವವನ್ನು ಹೇಳಿಕೊಂಡರು.  ತನ್ನ ಮೊದಲ ಪ್ರೀತಿಯು ತನ್ನ ನಿಕಟ ಸ್ನೇಹಿತೆಯಾಗಿದ್ದಳು ಎಂದು ನಟ ಹೇಳಿಕೊಂಡರು. ಆದರೆ ನನ್ನ ಆ ಸ್ನೇಹಿತೆಗೆ ನಾನು ಆಕೆಯನ್ನು ಪ್ರೀತಿ ಮಾಡುತ್ತಿರುವ ಬಗ್ಗೆ ತಿಳಿದೇ ಇರಲಿಲ್ಲ ಎಂದು ಆಮಿರ್  ಹೇಳಿದರು.

ಇದನ್ನೂ ಓದಿ: Vijay Sethupathi: ಪುಷ್ಪ 2 ಸಿನಿಮಾದಲ್ಲಿ ವಿಜಯ್ ಸೇತುಪತಿ? ಕುತೂಹಲ ಹೆಚ್ಚಿಸುತ್ತಿದೆ ಹೊಸ ಅಪ್​ಡೇಟ್​

"ಈ ಸಮಯದಲ್ಲಿ ನಾನು ಟೆನಿಸ್ ಆಡುತ್ತಿದ್ದೆ, ಅವಳು ನನ್ನೊಂದಿಗೆ ಅದೇ ಕ್ಲಬ್ಬಿನಲ್ಲಿದ್ದಳು. ಆದರೆ ಆಕೆ ಒಂದು ದಿನ ತನ್ನ ಕುಟುಂಬದೊಂದಿಗೆ ಈ ದೇಶವನ್ನೇ ಬಿಟ್ಟು ಬೇರೆ ದೇಶಕ್ಕೆ ಹೋದರು ಎಂದು ನನಗೆ ತಿಳಿಯಿತು. ನಾನು ಆಗ ತುಂಬಾನೇ ನೊಂದುಕೊಂಡಿದ್ದೆ, ಆದರೆ ಆಕೆಗೆ ನಾನು ಇಷ್ಟಪಡುವ ಬಗ್ಗೆ ಸ್ವಲ್ಪವೂ ತಿಳಿದಿರಲಿಲ್ಲ. ಇದರಿಂದ ನನಗೆ ಆಗಿದ್ದಂತಹ ಒಂದೇ ಒಂದು ಒಳ್ಳೆಯ ವಿಷಯವೆಂದರೆ ನಾನು ಉತ್ತಮ ಟೆನಿಸ್ ಆಟಗಾರನಾಗಿದ್ದು. ನಂತರ ಕೆಲವು ವರ್ಷಗಳು ಕಳೆದ ಮೇಲೆ ನಾನು ರಾಜ್ಯಮಟ್ಟದ ಚಾಂಪಿಯನ್ಶಿಪ್ ನಲ್ಲಿ ಟೆನಿಸ್ ಆಡಿದೆ ಮತ್ತು ರಾಜ್ಯ ಮಟ್ಟದ ಚಾಂಪಿಯನ್ ಆದೆ" ಎಂದು ಆಮಿರ್ ಹೇಳಿದರು.

ಆಮಿರ್ ಖಾನ್‌ ಎರಡು ಬಾರಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ, 1986 ರಲ್ಲಿ ಅವರು ರೀನಾ ದತ್ತಾ ಅವರೊಂದಿಗೆ ವಿವಾಹವಾದರು. ಅವರಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 2005 ರಲ್ಲಿ, ಆಮಿರ್ ಚಲನಚಿತ್ರ ನಿರ್ಮಾಪಕರಾದ ಕಿರಣ್ ರಾವ್ ಅವರನ್ನು ವಿವಾಹವಾದರು.

ಇದನ್ನೂ ಓದಿ: RRR: ಮತ್ತೊಂದು ದಾಖಲೆ ಬರೆದ ರಾಜಮೌಳಿ ಸಿನಿಮಾ, ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನ!

ಐಪಿಎಲ್ 2022 ರ ಫಿನಾಲೆಯಲ್ಲಿ ಚಿತ್ರದ ಟ್ರೈಲರ್ ರಿಲೀಸ್
ಆಮಿರ್ ಖಾನ್‌ ಅವರ ಮುಂದಿನ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಟಾಮ್ ಹ್ಯಾಂಕ್ಸ್ ಅವರ 1994 ರ ಚಲನಚಿತ್ರ ‘ಫಾರೆಸ್ಟ್ ಗಂಪ್’ ನ ಹಿಂದಿ ಭಾಷೆಯ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ನಟಿ ಕರೀನಾ ಕಪೂರ್, ಮೋನಾ ಸಿಂಗ್ ಮತ್ತು ತೆಲುಗು ನಟ ನಾಗಚೈತನ್ಯ ಅಕ್ಕಿನೇನಿ ಸಹ ನಟಿಸಿದ್ದಾರೆ. ಚಿತ್ರದ ಟ್ರೈಲರ್ ಅನ್ನು ಮೇ ತಿಂಗಳಲ್ಲಿ ನಡೆದ ಐಪಿಎಲ್ 2022 ರ ಫಿನಾಲೆಯಲ್ಲಿ ಬಿಡುಗಡೆ ಮಾಡಲಾಯಿತು.
Published by:Ashwini Prabhu
First published: