Laal Singh Chaddha ಟ್ರೈಲರ್​ ರಿಲೀಸ್​, ಇದಕ್ಕೆ ಇವ್ರನ್ನು ಮಿಸ್ಟರ್​ ಪರ್ಫೆಕ್ಷನಿಸ್ಟ್ ಅನ್ನೋದು!

ಆಮಿರ್​ ಖಾನ್​ ತಮ್ಮ ಸಿನಿಮಾ(Movie)ದಿಂದ ಎಷ್ಟು ಸುದ್ದಿಯಲ್ಲಿ ಇರುತ್ತಾರೋ, ಅಷ್ಟೇ ಅವರ ವೈವಾಹಿಕ ಜೀವನದಿಂದಲೂ ಸುದ್ದಿಯಲ್ಲಿರುತ್ತಾರೆ. ಕೆಜಿಎಫ್​ 2 ಮುಂದೆ ತೊಡೆ ತಟ್ಟಿ ಮತ್ತೆ ರೇಸ್​ನಿಂದ ಹಿಂದೆ ಸರಿದಿದ್ದ ಲಾಲ್​ ಸಿಂಗ್​ ಛಡ್ಡಾ (Laal Singh Chaddha) ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದೆ. 

ಆಮಿರ್​ ಖಾನ್​

ಆಮಿರ್​ ಖಾನ್​

  • Share this:
ಬಾಲಿವುಡ್​(Bollywood)ನಲ್ಲಿ ಖಾನ್(Khan)​ಗಳದ್ದೇ ಅಬ್ಬರ. ಅದು ಆಗಿನಿಂದಲೂ. ಶಾರುಖ್​ ಖಾನ್ (Shah Rukh  Khan)​, ಸಲ್ಮಾನ್​ ಖಾನ್ (Salman Khan)​, ಆಮಿರ್​ ಖಾನ್ (Aamir Khan)​ ಈ ಮೂರು ಖಾನ್​ಗಳೇ ಬಾಲಿವುಡ್(Bollywood)​ನ ಪಿಲ್ಲರ್​.  ಇವರಲ್ಲಿ ಸಲ್ಮಾನ್​ ಖಾನ್​ ಇನ್ನೂ ಬ್ಯಾಚುಲರ್​​. ಮದುವೆ ಸಹವಾಸವೇ ಬೇಡ ಅಂತ ಸುಮ್ಮನಿದ್ದಾರೆ. ಶಾರುಖ್​ ಖಾನ್ (Shah Rukh Khan)​ ಮದುವೆಯಾಗಿ ಅನೋನ್ಯವಾಗಿದ್ದಾರೆ.  ಇನ್ನೂ ಇತ್ರೀಚೆಗೆ ಆಮಿರ್​​ ಖಾನ್​ ತಮ್ಮ 2ನೇ ಪತ್ನಿಗೆ ವಿಚ್ಛೇದನ ನೀಡಿದ್ದರು. ಆಮಿರ್​ ಖಾನ್​ ತಮ್ಮ ಸಿನಿಮಾ(Movie)ದಿಂದ ಎಷ್ಟು ಸುದ್ದಿಯಲ್ಲಿ ಇರುತ್ತಾರೋ, ಅಷ್ಟೇ ಅವರ ವೈವಾಹಿಕ ಜೀವನದಿಂದಲೂ ಸುದ್ದಿಯಲ್ಲಿರುತ್ತಾರೆ. ಕೆಜಿಎಫ್​ 2 ಮುಂದೆ ತೊಡೆ ತಟ್ಟಿ ಮತ್ತೆ ರೇಸ್​ನಿಂದ ಹಿಂದೆ ಸರಿದಿದ್ದ ಲಾಲ್​ ಸಿಂಗ್​ ಛಡ್ಡಾ (Laal Singh Chaddha) ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದೆ. 

ಲಾಲ್​ ಸಿಂಗ್​ ಚಡ್ಡಾ ಸಿನಿಮಾದ ಟ್ರೈಲರ್​ ರಿಲೀಸ್​

ಕೆಜಿಎಫ್​ 2 ಸಿನಿಮಾದ ಎದುರು ಆಮಿರ್​ ಖಾನ್​ ತೊಡೆತಟ್ಟಿದ್ದರು. ಆಮಿರ್​ ಖಾನ್​ ಹಾಗೂ ಕರೀನಾ ಕಪೂರ್​ ನಟನೆಯ ಲಾಲ್ ಸಿಂಗ್​ ಛಡ್ಡಾ ಸಿನಿಮಾವನ್ನು ಕೆಜಿಎಫ್ 2 ರಿಲೀಸ್​ ಆದ ದಿನವೇ ರಿಲೀಸ್​ ಮಾಡುವುದಾಗಿ ಹೇಳಿಕೊಂಡಿತ್ತು. ಇದಾದ ಕೆಲ ದಿನಗಳ ಬಳಿಕ ಈ ಘೋಷಣೆಯನ್ನು ಚಿತ್ರತಂಡ ಹಿಂಪಡೆದುಕೊಂಡಿತ್ತು. ಯಾಕೆಂದರೆ ಕೆಜಿಎಫ್​  1 ಎದುರು ಬಂದಿದ್ದ ಶಾರುಖ್​ ಖಾನ್​ ಸಿನಿಮಾ ಜೀರೋ ಮಕಾಡೆ ಮಲಗಿತ್ತು. ಈ ಭಯದಿಂದ ಆಮಿರ್​ ಖಾನ್​ ಹಿಂದೆ ಸರಿದಿದ್ದರು. ಇದೀಗ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮತ್ತೊಮ್ಮೆ ಡಿಫ್ರೆಂಟ್​ ಅವತಾರದಲ್ಲಿ ಆಮಿರ್​ ಖಾನ್​ ಕಾಣಿಸಿಕೊಂಡಿದ್ದಾರೆ.

ಫಾರೆಸ್ಟ್​ ಗಂಪ್​ ಸಿನಿಮಾದ ರಿಮೇಕ್​ ಲಾಲ್ ಸಿಂಗ್ ಛಡ್ಡಾ!

ಲಾಲ್​ ಸಿಂಗ್​ ಛಡ್ಡಾ ಸಿನಿಮಾ ಹಾಲಿವುಡ್ ಸಿನಿಮಾ ಫಾರೆಸ್ಟ್​ ಗಂಪ್​ ರಿಮೇಕ್​ ಆಗಿದೆ. ಈ ಸಿನಿಮಾದಲ್ಲಿ ಆಮಿರ್​ ಖಾನ್​ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಕರೀನಾ ಕಪೂರ್​ ಜೊತೆಯಾಗಿದ್ದಾರೆ. ಇನ್ನೂ ಈ ಸಿನಿಮಾದ ಮೂಲಕ ನಟ ನಾಗಚೈತನ್ಯ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಎಂದಿನಂತೆ ಆಮಿರ್​ ಖಾನ್​ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೊಮ್ಮೆ ತಾವು ಯಾಕೆ ಮಿಸ್ಟರ್​ ಪರ್ಫೆಕ್ಟ್​ ಅನ್ನುವುದನ್ನು ಪ್ರೂವ್​  ಮಾಡಿದ್ದಾರೆ. ರಿಲೀಸ್ ಆಗಿರುವ ಟ್ರೈಲರ್​ ಇದೀಗ ಟ್ರೆಂಡಿಂಗ್​ನಲ್ಲಿದೆ. ಟ್ರೈಲರ್​ ನೋಡಿದ ಪ್ರತಿಯೊಬ್ಬರು ಆಮಿರ್​ ಖಾನ್​ ನಟನೆಗೆ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಮುಂದಿನ​ ಸಿನಿಮಾಗೆ ಈ ಪಾಟಿ ದುಡ್ಡು ಕೇಳಿದ್ರಾ ರಾಕಿ ಭಾಯ್​ ಬೆಡಗಿ? ಶ್ರೀನಿಧಿ ಶೆಟ್ಟಿ ಇನ್ಮುಂದೆ ಸಿಕ್ಕಾಪಟ್ಟೆ ಕಾಸ್ಟ್ಲಿ!

ಆಗಸ್ಟ್​ 11ಕ್ಕೆ ಲಾಲ್​ ಸಿಂಗ್​ ಛಡ್ಡಾ ಸಿನಿಮಾ ರಿಲೀಸ್​!

ಈ ಹಿಂದೆ ಏಪ್ರಿಲ್​ 14ರಂದು ಲಾಲ್​ ಸಿಂಗ್​ ಛಡ್ಡಾ ಸಿನಿಮಾ ರಿಲೀಸ್​ ಮಾಡುವುದಾಗಿ ಹೇಳಿಕೊಂಡಿತ್ತು. ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಸ್ವತಃ ಬಾಲಿವುಡ್​ ಮಂದಿ ಚಿತ್ರತಂಡಕ್ಕೆ ಸಿನಿಮಾ ಬಿಡುಗಡೆ ದಿನಾಂಕವನ್ನು ಚೇಂಜ್​ ಮಾಡುವಂತೆ ಹೇಳಿಕೊಂಡಿತ್ತು. ಇದಾದ ಬಳಿಕ ಚಿತ್ರತಂಡ ಕೂಡ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹಾಕಿರುವುದಕ್ಕೆ ಚಿತ್ರತಂಡ ಪ್ರಕಟಣೆ ಹೊರಡಿಸಿತ್ತು. “ನಮ್ಮ ಚಿತ್ರ ಲಾಲ್ ಸಿಂಗ್ ಛಡ್ಡಾ’ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿಲ್ಲ. ಸಿನಿಮಾ ಕೆಲಸಗಳು ಮುಗಿಯಲು ಸಾಧ್ಯವಾಗದೇ ಇರುವುದೇ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹಾಕಲು ಕಾರಣ. 11 ಆಗಸ್ಟ್ 2022 ರಂದು ವಿಶ್ವದಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ” ಎಂದು ತಿಳಿಸಿತ್ತು.

ಇದನ್ನೂ ಓದಿ: ಶಾರುಖ್ ಖಾನ್ ಮನೆಯ 25 ಲಕ್ಷದ ನೇಮ್ ಪ್ಲೇಟ್‌ ನಾಪತ್ತೆ! 'ಮನ್ನತ್' ಬೋರ್ಡ್ ಕಳೆದೇ ಹೋಯ್ತಾ?

ಇನ್ನು 'ಲಾಲ್ ಸಿಂಗ್ ಚಡ್ಡಾ' ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದು, ಪ್ರೀತಂ ಸಂಗೀತ ನೀಡಿದ್ದಾರೆ. ಸಾಹಿತ್ಯವನ್ನು ಅಮಿತಾಭ್ ಭಟ್ಟಾಚಾರ್ಯ ಬರೆದಿದ್ದಾರೆ.
Published by:Vasudeva M
First published: