Aamir Khan: 'ಲಾಲ್​ ಸಿಂಗ್​ ಚಡ್ಡಾ‘ ಸಿನಿಮಾ ನೋಡಲು ಬರ್ತಿಲ್ವಂತೆ ಜನ; 1300 ಶೋಗಳು ರದ್ದು

ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಬಾಯ್ಕಾಟ್ ಅಭಿಯಾನ ಚಿತ್ರಕ್ಕೆ ದೊಡ್ಡ ಹೊಡೆತ ನೀಡಿದೆ. ಆರಂಭಿಕ ಅಂದಾಜಿನ ಪ್ರಕಾರ ಚಿತ್ರವು ಮೊದಲ ದಿನ ಕೇವಲ 10 -11 ಕೋಟಿ ರೂ. ಗಳಿಸಿದೆ.

ಆಮೀರ್​ ಖಾನ್​

ಆಮೀರ್​ ಖಾನ್​

  • Share this:
ಆಮಿರ್ ಖಾನ್  (Aamir Khan) ನಟನೆಯ ‘ಲಾಲ್​ ಸಿಂಗ್ ಚಡ್ಡಾ’  ಸಿನಿಮಾ ಬಿಡುಗಡೆಯಾಗಿದೆ. ಆದ್ರೆ ಪ್ರೇಕ್ಷಕರೇ ಇಲ್ಲದೇ ಸಿನಿಮಾ ಥಿಯೇಟರ್​ಗಳು ಖಾಲಿ ಖಾಲಿಯಾಗಿದೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರ ನೋಡಲು ಜನರೇ ಬರ್ತಿಲ್ವಂತೆ ಹೀಗಾಗಿ ಅನೇಕ ಕಡೆಗಳಲ್ಲಿ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಬಾಯ್ಕಾಟ್ ವಿವಾದಗಳ ನಡುವೆ ಆ.11 ರಂದು ಬಿಡುಗಡೆಯಾದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಬಾಯ್ಕಾಟ್ ಅಭಿಯಾನ ಚಿತ್ರಕ್ಕೆ ದೊಡ್ಡ ಹೊಡೆತ ನೀಡಿದೆ. ಆರಂಭಿಕ ಅಂದಾಜಿನ ಪ್ರಕಾರ ಚಿತ್ರವು ಮೊದಲ ದಿನ ಕೇವಲ 10 -11 ಕೋಟಿ ರೂ. ಗಳಿಸಿದೆ.

ಬಾಕ್ಸ್ ಆಫೀಸ್​ನಲ್ಲಿ ಕಳಪೆ ಪ್ರದರ್ಶನ

ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ವಿವಾದಗಳನ್ನು ಎದುರಿಸಿತ್ತು. ಈ ಹಿಂದೆ ಅಮೀರ್ ಮತ್ತು ಕರೀನಾ ನೀಡಿದ ಹೇಳಿಕೆಗಳ ಮೇಲೆ ಚಿತ್ರವನ್ನು ಬಹಿಷ್ಕರಿಸುವ ಕುರಿತು ಟ್ವಿಟರ್ ಟ್ರೆಂಡ್ ಇತ್ತು. ಅಮೀರ್ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಿ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಲು ವಿನಂತಿಸಿದ್ದರು. ದಿನ ಕಳೆದಂತೆ ಶೋಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದು ಆಮಿರ್ ಖಾನ್ ಅವರ ಚಿಂತೆಗೆ ಕಾರಣವಾಗಿದೆ. ಹೀಗೆ ಮುಂದುವರಿದರೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೀನಾಯ ಸ್ಥಿತಿಗೆ ತಲುಪಲಿದೆ.



ಕಂಗೆಟ್ಟ ಆಮೀರ್​ ಖಾನ್​

ಕಳೆದ 13 ವರ್ಷಗಳಲ್ಲಿ ಆಮೀರ್ ಖಾನ್‌ಗೆ ಇದು ಅತ್ಯಂತ ಕಳಪೆ ಓಪನಿಂಗ್ ಎಂದು ಬಾಲಿವುಡ್ ಹಂಗಾಮಾ ಹೇಳಿದೆ. ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಈ ಚಿತ್ರ ಟಾಮ್ ಹ್ಯಾಂಕ್ಸ್ ಅವರ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಇದಾಗಿದೆ. ಆಮೀರ್ ಅವರ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರ ಹಿಂದಿ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಫ್ಲಾಪ್ ಎಂದು ಪರಿಗಣಿಸಲಾಗಿದೆ. 2018 ರಲ್ಲಿ ಬಿಡುಗಡೆಯಾದ ಈ ಚಿತ್ರ ತನ್ನ ಆರಂಭಿಕ ದಿನದಲ್ಲಿ 52 ಕೋಟಿ ರೂ. ಗಳಿಸಿತು.

ಇದನ್ನೂ ಓದಿ: Aamir Khan: ನಟ ಆಮಿರ್ ತಮ್ಮ ಮಕ್ಕಳ ಜೊತೆ ಹೆಚ್ಚು ಸಮಯ ಕಳೆದಿಲ್ವಂತೆ, ಕಾರಣ ಕೇಳಿ

ಜನರ ನಿರೀಕ್ಷೆಯಲ್ಲಿ ಲಾಲ್ ಸಿಂಗ್ ಚಡ್ಡ

ಲಾಲ್ ಸಿಂಗ್ ಚಡ್ಡ' ಸಿನಿಮಾ ತಂಡ ಈಗ ವಾರಾಂತ್ಯದ ಕಲೆಕ್ಷನ್ ಮೇಲೆ ಕಣ್ಣಿಟ್ಟಿದೆ. ಸ್ವಾತಂತ್ರ್ಯೋತ್ಸವ ಸಹ ಇರುವ ಕಾರಣ ಸರಣಿ ರಜೆಗಳಿದ್ದು, ಈ ಸಮಯದಲ್ಲಿ ಹೆಚ್ಚು ಮಂದಿ ಮಲ್ಟಿಪ್ಲೆಕ್ಸ್‌ಗಳಿಗೆ ಬರಬಹುದೆನ್ನುವ ನಿರೀಕ್ಷೆ ಇದೆ.  ಸಿನಿಮಾದಲ್ಲಿ ಮುಗ್ಧ ಸಿಖ್ ಪಾತ್ರದಲ್ಲಿ ಆಮಿರ್ ಖಾನ್ ನಟಿಸಿದ್ದಾರೆ. ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ ಚಿತ್ರಕತೆ ಬರೆದಿರುವುದು ಅತುಲ್ ಕುಲಕರ್ಣಿ. ಸಂಗೀತ ನೀಡಿರುವುದು ಪ್ರೀತಮ್ ಮತ್ತು ತನುಜ್ ಟಿಕ್ಕು.

ಅಕ್ಷಯ್ ಕುಮಾರ್​ ಅವರ 'ರಕ್ಷಾ ಬಂಧನ್'

ಇನ್ನು ಅಕ್ಷಯ್ ಕುಮಾರ್​ ಅವರ 'ರಕ್ಷಾ ಬಂಧನ್' ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚಿನ ಗಳಿಕೆ ಕಂಡಿಲ್ಲ. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರ ಸಹೋದರ ಮತ್ತು ಅವನ ನಾಲ್ಕು ಸಹೋದರಿಯರ ನಡುವಿನ ಸಂಬಂಧವನ್ನು ಕೇಂದ್ರೀಕರಿಸುತ್ತದೆ. ಇದು ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನದಂದು ಕೇವಲ 8 ರಿಂದ 8.50 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ:  Aamir Khan: ಬಾಲಿವುಡ್ ಸಿನಿಮಾಗಳು ಸದ್ದು ಮಾಡದಿರಲು ಆಮಿರ್ ಖಾನ್ ಕಾರಣವಂತೆ, ಕರಣ್ ಜೋಹರ್ ಹೀಗೆ ಅಂದಿದ್ಯಾಕೆ?

1300 ಶೋಗಳಿಗೆ ಕತ್ತರಿ

‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಸುಮಾರು 1300 ಶೋಗಳಿಗೆ ಕತ್ತರಿ ಹಾಕಲಾಗಿದೆ. ಅಕ್ಷಯ್ ಕುಮಾರ್ ನಟನೆಯ ‘ರಕ್ಷಾ ಬಂಧನ್​’ ಸಿನಿಮಾ ಕೂಡ ಆಗಸ್ಟ್ 11ರಂದು ತೆರೆಗೆ ಬಂದಿದೆ. ಈ  ಸಿನಿಮಾ ವಿಮರ್ಶೆಯಲ್ಲಿ ಗೆದ್ದಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ 1000 ಶೋಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. ಇದರಿಂದ ಅಕ್ಷಯ್ ಕುಮಾರ್ ಸಿನಿಮಾದ ಮೈಲೇಜ್ ಹೆಚ್ಚುತ್ತಿದೆ.
Published by:Pavana HS
First published: