Aamir Khan: ನಟ ಆಮಿರ್ ತಮ್ಮ ಮಕ್ಕಳ ಜೊತೆ ಹೆಚ್ಚು ಸಮಯ ಕಳೆದಿಲ್ವಂತೆ, ಕಾರಣ ಕೇಳಿ

ತಮ್ಮ ಕೆಲಸದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತ ಅನ್ನಿಸಿಕೊಂಡಿರುವ ಬಾಲಿವುಡ್ ನಟ ಆಮಿರ್ ಖಾನ್ ಅವರು ಒಂದು ವಿಷಯದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಇದ್ದಾರೆ ಅಂತ ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅದೇನಂತ ನಿಮಗೂ ಗೊತ್ತಾಗ್ಬೇಕಾ ಇಲ್ಲಿದೆ ಓದಿ.

ಆಮಿರ್ ಖಾನ್‌

ಆಮಿರ್ ಖಾನ್‌

  • Share this:
ಎಷ್ಟೋ ಸಲ ಈ ಸಂಸಾರ (Family), ಸಂಸಾರದ ಬೆಳೆಯುತ್ತಿರುವ ಜವಾಬ್ದಾರಿ ಅಂತ ಹೀಗೆ ನಾವು ಕೆಲಸದ ಕಡೆಗೆ ಮತ್ತು ಸಂಪಾದನೆಯ ಕಡೆಗೆ ಹೆಚ್ಚು ಆದ್ಯತೆ ನೀಡಲು ಶುರು ಮಾಡುತ್ತೇವೆ. ಇದೆಲ್ಲದರ ಮಧ್ಯೆ ನಾವು ಯಾರ ಸಲುವಾಗಿ ಈ ಕೆಲಸ (Work) ಮತ್ತು ಸಂಪಾದನೆ ಮಾಡುತ್ತಿದ್ದೇವೆ, ಅವರಿಗೆ ನಾವು ಎಷ್ಟು ಸಮಯ ನೀಡುತ್ತಿದ್ದೇವೆ ಎನ್ನುವುದು ಬಹುತೇಕರ ಗಮನಕ್ಕೆ ಬರುವುದೇ ಇಲ್ಲ. ತುಂಬಾ ವರ್ಷಗಳ ನಂತರ ಆ ಕಳೆದುಕೊಂಡ ಸಮಯದ ಅರಿವು ನಮಗೆ ಆಗಲು ಶುರುವಾಗುತ್ತದೆ ಮತ್ತು ಆಗ ನಾವು ‘ಅರೇ ನನ್ನ ಹೆಂಡತಿಯ (Wife) ಜೊತೆ ಕುಳಿತುಕೊಂಡು ಸ್ವಲ್ಪ ಮಾತಾಡಿರಬೇಕಿತ್ತು, ಮಕ್ಕಳ (Children) ಜೊತೆ ಸಮಯ ಕಳೆದಿದ್ದರೆ ಚೆನ್ನಾಗಿರುತ್ತಿತ್ತು’ ಅಂತ ಅನ್ನಿಸುವುದಕ್ಕೆ ಶುರುವಾಗುತ್ತದೆ.

ಮಕ್ಕಳ ಬಗ್ಗೆ ಏನು ಹೇಳಿದ್ದಾರೆ ಆಮಿರ್ ಖಾನ್
ಅದಕ್ಕಾಗಿ ವೃತ್ತಿ ಜೀವನವನ್ನು ಮತ್ತು ವೈಯುಕ್ತಿಕ ಜೀವನವನ್ನು ಸಮನಾಗಿ ನೋಡಿಕೊಂಡು ಹೋಗುವುದು ತುಂಬಾನೇ ಮುಖ್ಯವಾಗುತ್ತದೆ. ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ತಮ್ಮ ಕೆಲಸದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತ ಅನ್ನಿಸಿಕೊಂಡಿರುವ ಬಾಲಿವುಡ್ ನಟ ಆಮಿರ್ ಖಾನ್ ಅವರು ಒಂದು ವಿಷಯದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಇದ್ದಾರೆ ಅಂತ ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ‘ಕಾಫಿ ವಿತ್ ಕರಣ್ ಸೀಸನ್ 7 ರ ಗುರುವಾರದ ಸಂಚಿಕೆಯಲ್ಲಿ ನಟಿ ಕರೀನಾ ಕಪೂರ್ ಖಾನ್ ಮತ್ತು ನಟ ಆಮಿರ್ ಖಾನ್ ಇಬ್ಬರು ಅತಿಥಿಗಳಾಗಿ ಆಗಮಿಸಿದ್ದರು.

ಆಮಿರ್ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ, ಸಾಕಷ್ಟು ಆತ್ಮಾವಲೋಕನವನ್ನು ಮಾಡಿಕೊಂಡಿದ್ದಾರೆ ಎಂದು ಈ ಶೋ ನಲ್ಲಿ ಹೇಳಿಕೊಂಡರು. ಅವರು ತಮ್ಮ ಜೀವನದ ಎಲ್ಲಾ ಸಂಬಂಧಗಳ ಬಗ್ಗೆ ಹೆಚ್ಚು ಗಮನ ಹರಿಸದಿರುವುದಕ್ಕೆ ತುಂಬಾನೇ ವಿಷಾದವನ್ನು ಸಹ ವ್ಯಕ್ತಪಡಿಸಿದರು.

ಕೆಲಸಕ್ಕಿಂತ ಹೆಚ್ಚಾಗಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರಂತೆ ನಟ
"ಒಂದು ವರ್ಷದ ಹಿಂದೆ, ನಾನು ಸಾಕಷ್ಟು ಆತ್ಮಾವಲೋಕನ ಮಾಡಿಕೊಂಡೆ. ನಾನು ನನ್ನ ಕೆಲಸದಂತೆ ನನ್ನ ಸಂಬಂಧಗಳನ್ನು ಪೋಷಿಸುವುದಿಲ್ಲ ಎಂದು ನಾನು ಅರ್ಥ ಮಾಡಿಕೊಂಡೆ. ಇರಾ ಮತ್ತು ಜುನೈದ್ ಅವರು ಚಿಕ್ಕವರಿದ್ದಾಗಿನಿಂದ ಅವರೊಂದಿಗೆ ನಾನು ಹೆಚ್ಚು ಸಮಯ ಕಳೆದಿಲ್ಲ ಎಂದು ನಾನು ಅರಿತುಕೊಂಡೆ. ಈಗ, ಕಳೆದ ತಿಂಗಳಿನಿಂದ ನಾನು ಒಬ್ಬ ಬದಲಾದ ವ್ಯಕ್ತಿಯಾಗಿದ್ದೇನೆ. ನಾನು ನನ್ನ ಕುಟುಂಬ, ನನ್ನ ಮಕ್ಕಳು, ಕಿರಣ್ ಪೋಷಕರು, ರೀನಾಳ ಪೋಷಕರು, ನನ್ನ ತಾಯಿ, ಸಹೋದರಿ ಮತ್ತು ಸಹೋದರನೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದೇನೆ. ನನ್ನ ಕೆಲಸಕ್ಕಿಂತಲೂ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ನಾನು ಬಯಸುತ್ತೇನೆ. ಆದರೆ ಆ ಸಮಯದಲ್ಲಿ, ನಾನು ಏನು ಮಾಡುತ್ತಿದ್ದೆನೋ ಅದನ್ನು ತುಂಬಾ ಉತ್ಸಾಹದಿಂದ ಮಾಡುತ್ತಿದ್ದೆ ಮತ್ತು ಬೇರೆ ಯಾವುದರ ಬಗ್ಗೆಯೂ ನಾನು ಗಮನ ಹರಿಸುತ್ತಿರಲಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: Aamir Khan: ದಯವಿಟ್ಟು ನನ್ನ ಸಿನಿಮಾ ಬಹಿಷ್ಕಾರ ಮಾಡ್ಬೇಡಿ ಎಂದ ಆಮಿರ್ ಖಾನ್, ಟ್ವಿಟ್ಟರ್​ ಟ್ರೆಂಡ್​ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟ

ಆಮಿರ್ ಖಾನ್ ಅವರು ತಮ್ಮ ಇಬ್ಬರು ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರೊಂದಿಗೆ ಮಾತನಾಡುತ್ತಿದ್ದಾರೆ ಮತ್ತು ಅವರು ವಾರಕ್ಕೊಮ್ಮೆಯಾದರೂ ತಮ್ಮ ಮಕ್ಕಳೊಂದಿಗೆ ಭೇಟಿಯಾಗುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ಅವರ ಬಗ್ಗೆ ಇವರಿಗೆ ತುಂಬಾನೇ ಗೌರವವಿದೆ ಎಂದು ನಟ ಹೇಳಿದರು.

ಆಮಿರ್ ಖಾನ್ ಅವರ ಮುಂದಿನ ಸಿನೆಮಾದ ಬಗ್ಗೆ ಏನಂದ್ರು
ನಟ ಆಮಿರ್ ಮತ್ತು ನಟಿ ಕರೀನಾ ಹಾಲಿವುಡ್ ಹಿಟ್ ‘ಫಾರೆಸ್ಟ್ ಗಂಪ್’ ಚಿತ್ರದ ಹಿಂದಿ ರೂಪಾಂತರವಾದ ‘ಲಾಲ್ ಸಿಂಗ್ ಚಡ್ಡಾ’ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, 'ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ' ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ವೇಗವನ್ನು ಪಡೆದುಕೊಂಡಿತು, ನಂತರ ಆಮಿರ್ ತಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡುವಂತೆ ಎಲ್ಲರಿಗೂ ಮನವಿ ಮಾಡಿದರು.

"ಬಾಲಿವುಡ್ ಅನ್ನು ಬಹಿಷ್ಕರಿಸುವುದು, ಆಮಿರ್ ಖಾನ್ ಅನ್ನು ಬಹಿಷ್ಕರಿಸುವುದು, ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಹಿಷ್ಕರಿಸುವುದು, ಇದೆಲ್ಲಾ ನೋಡಿದರೆ ನನಗೆ ತುಂಬಾನೇ ದುಃಖವಾಗುತ್ತದೆ. ನಾನು ದುಃಖಿತನಾಗಿದ್ದೇನೆ, ಏಕೆಂದರೆ ತಮ್ಮ ಹೃದಯಗಳಲ್ಲಿ ಇದನ್ನು ಹೇಳುತ್ತಿರುವ ಬಹಳಷ್ಟು ಜನರು ನಾನು ಭಾರತವನ್ನು ಇಷ್ಟಪಡದ ವ್ಯಕ್ತಿ ಎಂದು ನಂಬುತ್ತಾರೆ, ಆದರೆ ಅದು ಸುಳ್ಳು" ಎಂದು ಅವರು ಹೇಳಿದರು.

ಇದನ್ನೂ ಓದಿ: ಹೆಂಡತಿಯಲ್ಲ, ಮಗಳೂ ಅಲ್ಲ..., ಅಮೀರ್​ ಖಾನ್ ಜೀವನದಲ್ಲಿ ಈ ಇಬ್ಬರು ಲೇಡೀಸ್​ ತುಂಬಾ ಸ್ಪೆಷಲ್!

"ನಾನು ನನ್ನ ದೇಶವನ್ನು ನಿಜವಾಗಿಯೂ ಪ್ರೀತಿಸುತ್ತೇನೆ. ನಾನು ಹೀಗೆಯೇ ಇದ್ದೇನೆ. ಕೆಲವು ಜನರು ಆ ರೀತಿ ಭಾವಿಸಿದರೆ ಅದು ದುರದೃಷ್ಟಕರ. ದಯವಿಟ್ಟು ನನ್ನ ಚಲನಚಿತ್ರಗಳನ್ನು ಬಹಿಷ್ಕರಿಸಬೇಡಿ. ದಯವಿಟ್ಟು ನನ್ನ ಚಲನಚಿತ್ರಗಳನ್ನು ವೀಕ್ಷಿಸಿ” ಎಂದು ನಟ ಕೇಳಿಕೊಂಡರು.
Published by:Ashwini Prabhu
First published: