Mango Season: ಮಗ ಆಜಾದ್ ಜೊತೆ ನಟ ಆಮೀರ್ ಖಾನ್ ಮಾವಿನಹಣ್ಣು ಸವಿಯುವ ಮಜಾ ನೋಡಿ

ಆಮೀರ್ ಖಾನ್ ಅವರ ಪ್ರೊಡಕ್ಷನ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಇತ್ತೀಚೆಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ ತಂದೆ-ಮಗ ಜೋಡಿಯಾಗಿ ಕೂತು ಮಾವಿನಹಣ್ಣುಗಳನ್ನು ತಿನ್ನುತ್ತಿರುವುದನ್ನು ನೋಡಬಹುದಾಗಿದೆ.

ಪುತ್ರನ ಜೊತೆ ಅಮೀರ್ ಖಾನ್

ಪುತ್ರನ ಜೊತೆ ಅಮೀರ್ ಖಾನ್

  • Share this:
ಬೇಸಿಗೆ (Summer) ಋತು ಶುರುವಾದರೆ ಸಾಕು, ನಮಗೆಲ್ಲಾ ನೆನಪಾಗುವ ಒಂದೇ ಒಂದು ಹಣ್ಣು (Fruits) ಎಂದರೆ ಅದುವೇ ಹಣ್ಣುಗಳ ರಾಜ ಮಾವಿನಹಣ್ಣು (Mango) ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಮಾವಿನಹಣ್ಣನ್ನು ಇಷ್ಟ ಪಡದವರು ಯಾರಿದ್ದಾರೆ ಹೇಳಿ..? ಬಹುತೇಕರು ಇಷ್ಟ ಪಡುವ ಮತ್ತು ಬೇರೆ ಹಣ್ಣುಗಳನ್ನು ಇಷ್ಟ ಪಡದವರು ಸಹ ಮಾವಿನಹಣ್ಣಿನ ಹೆಸರು ಕೇಳಿದರೆ ಸಾಕು ಓಡಿ ಓಡಿ ಬರುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ ಅಜ್ಜಿಯರಿಗೂ ಸಹ ಮಾವಿನಹಣ್ಣು ಎಂದರೆ ಬಲು ಪ್ರೀತಿ ಎಂದು ಹೇಳಬಹುದು. ಕೆಲವೊಬ್ಬರಂತೂ ತಮ್ಮ ಮನೆಗೆ ಮಾವಿನಹಣ್ಣಿನ ದೊಡ್ಡ ಬುಟ್ಟಿಯನ್ನೇ ಖರೀದಿಸಿ ತೆಗೆದುಕೊಂಡು ಬಂದು ಮನೆಯಲ್ಲಿ ಇರಿಸಿಕೊಂಡಿರುತ್ತಾರೆ.

ಇನ್ನು ಹಳ್ಳಿಯಲ್ಲಿ ಮಾವಿನ ಮರದ ಹತ್ತಿರ ಜನವೋ ಜನ, ಕಲ್ಲಿನಿಂದ ಹೊಡೆಯುವುದು ಮತ್ತು ಕೆಳಗೆ ಬಿದ್ದಂತಹ ಮಾವಿನಹಣ್ಣನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿಟ್ಟು, ಅದು ಪೂರ್ತಿಯಾಗಿ ಹಣ್ಣಾದ ಮೇಲೆ ಬಾಯಿ ಚಪ್ಪರಿಸಿಕೊಂಡು ತಿನ್ನುವುದನ್ನು ನೋಡಿರುತ್ತೇವೆ. ಕೆಲವರು ಕತ್ತರಿಸಿಕೊಂಡು ಈ ಮಾವಿನಹಣ್ಣಿನ ರುಚಿಯನ್ನು ಸವಿದರೆ, ಇನ್ನೂ ಕೆಲವರು ಮಾವಿನಹಣ್ಣನ್ನು ಮೆತ್ತಗೆ ಮಾಡಿಕೊಂಡು ಅದರ ರಸವನ್ನು ಹೀರುತ್ತಾ ಆನಂದಿಸುತ್ತಾರೆ.

ಬಿಸಿಲಿನ ಶಾಖದಿಂದ ನಮಗೆ ತ್ವರಿತ ಪರಿಹಾರ

ಮಾವಿನಹಣ್ಣಿನ ಬಗ್ಗೆ ನಾವು ಹೆಚ್ಚು ಇಷ್ಟಪಡುವ ಒಂದು ವಿಷಯ ಯಾವುದು ಅಂತ ನಮ್ಮನ್ನು ಯಾರಾದರೂ ಕೇಳಿದರೆ, ಅತ್ಯಂತ ಸಾಮಾನ್ಯ ಉತ್ತರವೆಂದರೆ ಮಾವಿನಹಣ್ಣಿನ ಸಿಹಿ ಮತ್ತು ಮಾವಿನಹಣ್ಣಿನ ರಸ ಎಂದು ಹೇಳುತ್ತೇವೆ. ಈ ಮಾವಿನಹಣ್ಣುಗಳು ಹೊರಗಿನ ಸುಡುವ ಬಿಸಿಲಿನ ಶಾಖದಿಂದ ನಮಗೆ ತ್ವರಿತ ಪರಿಹಾರವನ್ನು ನೀಡುತ್ತವೆ. ಸ್ವಲ್ಪ ಉಪ್ಪು ಮತ್ತು ಮೆಣಸಿನ ಖಾರವನ್ನು ಮಾವಿನಹಣ್ಣಿನ ಮೇಲೆ ಹಾಕಿಕೊಂಡು ತಿನ್ನಬಹುದು. ಅಲ್ಲದೆ ಮಾಗಿದ ಮತ್ತು ರಸಭರಿತವಾದ ಮಾವಿನಹಣ್ಣನ್ನು ಅದರ ರಸವನ್ನು ಹೀರುವುದರೊಂದಿಗೆ ಆನಂದಿಸಬಹುದು.

ಎಷ್ಟು ತಿಂದರೂ ಸಾಕಾಗುವುದಿಲ್ಲ ಮಾವಿನಹಣ್ಣು

ಈ ಬೇಸಿಗೆಯಲ್ಲಿ ಮಾವಿನಹಣ್ಣುಗಳನ್ನು ಎಷ್ಟು ತಿಂದರೂ ಸಾಕಾಗುವುದಿಲ್ಲ, ಇನ್ನೂ ತಿನ್ನಬೇಕು ಎಂದೆನಿಸುವುದಂತೂ ನಿಜ. ಇಲ್ನೋಡಿ ಬಾಲಿವುಡ್ ನಟ ಆಮೀರ್ ಖಾನ್ ಕೂಡ ನಮ್ಮಂತೆಯೇ ಅದೇ ದೋಣಿಯ ಪ್ರಯಾಣಿಕರು ಎಂದು ಹೇಳಬಹುದು. ನೋಡಿ ಬೇಸಿಗೆ ಆರಂಭವಾಗುತ್ತಿದ್ದಂತೆ, 57 ವರ್ಷದ ನಟ ತಟ್ಟೆ ತುಂಬೆಲ್ಲಾ ರಸಭರಿತ ಮಾವಿನಹಣ್ಣುಗಳನ್ನು ಇರಿಸಿಕೊಂಡು ಹೇಗೆ ತಿನ್ನುತ್ತಿದ್ದಾರೆ ಅಂತ. ಈ ಫೋಟೋಗಳಲ್ಲಿ ನಾವು ಆಮೀರ್ ಅವರ ಜೊತೆಯಲ್ಲಿ ಅವರ 10 ವರ್ಷದ ಮಗ ಆಜಾದ್ ರಾವ್ ಖಾನ್ ಸಹ ಮಾವಿನಹಣ್ಣನ್ನು ಆನಂದಿಸುತ್ತಿರುವುದನ್ನು ನಾವು ನೋಡಬಹುದು.


ಆಮೀರ್ ಖಾನ್ ಅವರ ಪ್ರೊಡಕ್ಷನ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಇತ್ತೀಚೆಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ ತಂದೆ-ಮಗ ಜೋಡಿಯಾಗಿ ಕೂತು ಮಾವಿನಹಣ್ಣುಗಳನ್ನು ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ಫೋಟೋದಲ್ಲಿ ಆಮೀರ್ ಖಾನ್ ಮಾವಿನಹಣ್ಣುಗಳನ್ನು ಕತ್ತರಿಸುವುದು ಮತ್ತು ಪಕ್ಕದಲ್ಲಿರುವ ತನ್ನ ಮಗನಿಗೆ ಕೊಡುವುದನ್ನು ಸಹ ನಾವು ನೋಡಬಹುದು.

ಇದನ್ನೂ ಓದಿ: Alia Yoga: ಪ್ರತಿದಿನ ಈ ಯೋಗಾಸನ ಮಾಡಿದ್ರೆ ಬೆಸ್ಟ್ ಅಂತೆ! ಈ ಬಗ್ಗೆ ಟಿಪ್ಸ್ ಕೊಟ್ರು ಆಲಿಯಾ ಭಟ್ ಟ್ರೈನರ್

ಇವರ ಟೇಬಲ್ ಮೇಲೆ ಒಂದು ದೊಡ್ಡ ತಟ್ಟೆಯಲ್ಲಿ ಅನೇಕ ಮಾವಿನಹಣ್ಣುಗಳನ್ನು ಇರಿಸಿರುವುದನ್ನು ಸಹ ನಾವು ಫೋಟೋದಲ್ಲಿ ನೋಡಬಹುದು. ತದ ನಂತರ ಇಬ್ಬರೂ ಆ ಕತ್ತರಿಸಿದ ಮಾವಿನ ಹಣ್ಣುಗಳನ್ನು ನಗು ನಗುತಾ ಸೇವಿಸಿದರು. "ನೀವು ನಿಮ್ಮ ಕುಟುಂಬದವರೊಡನೆ ಕೂತು ಮಾವಿನಹಣ್ಣುಗಳನ್ನು ತಿಂದಿದ್ದೀರಾ..?" ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್

ಈ ಪೋಸ್ಟ್ ಕ್ಷಣಾರ್ಧದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರು ಈ ತಂದೆ-ಮಗನ ಸ್ನೇಹದ ಬಗ್ಗೆ ಅನೇಕ ಕಾಮೆಂಟ್‌ಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Ranbir Kapoor: ಮುಗಿದೇ ಹೋಯ್ತಾ ಹನಿಮೂನ್! ರಶ್ಮಿಕಾ ಜೊತೆ ಕಾಣಿಸಿಕೊಂಡಿದ್ದೇಕೆ ರಣಬೀರ್‌?

ಈ ಪೋಸ್ಟ್ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 20 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು ನೂರಾರು ಕಾಮೆಂಟ್‌ಗಳನ್ನು ಗಳಿಸಿತ್ತು. ಒಟ್ಟಾರೆಯಾಗಿ ಇದುವರೆಗೆ ಈ ಪೋಸ್ಟ್ 23 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದ್ದು, 500ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಸಹ ಪಡೆದಿದೆ ಎಂದು ಹೇಳಬಹುದು.
Published by:Divya D
First published: