ಬೆಡ್ ಮೇಲೆ ನನ್ನ ಹೆಂಡತಿ ಆ ನಟಿಯಂತೆ ಕಂಡಿದ್ದರೆ ಖುಷಿಯಾಗಿ ಇರುತ್ತಿದ್ದೆ ಎಂದಿದ್ದ ಅಮೀರ್ ಖಾನ್!

ನೀವೇನಾದರೂ ಬೆಳಗ್ಗೆ ಎದ್ದಾಗ ರಣಬೀರ್​ ಕಪೂರ್​ ಆಗಿದ್ದರೆ ಮೊದಲು ಏನು ಮಾಡುತ್ತೀರ ಎಂಬ ಪ್ರಶ್ನೆಗೆ ಕಿರಣ್​ ಬೋಲ್ಡ್​ ಆಗಿ ಮರು ಪ್ರಶ್ನೆ ಹಾಕಿದ್ದರು. ರಣಬೀರ್​​ ಆಗಿ ಎದ್ದೇಳೋದಾ, ರಣಬೀರ್​​ ಜೊತೆ ಎದ್ದೇಳೋದಾ ಎಂದು ನಕ್ಕಿದ್ದರು.

ಅಮೀರ್​ - ಕಿರಣ್​

ಅಮೀರ್​ - ಕಿರಣ್​

  • Share this:
ಬಾಲಿವುಡ್​​ನ ದಿಗ್ಗಜ ನಟ ಅಮೀರ್​ ಖಾನ್​ ಅವರ 2ನೇ ಮದುವೆಯೂ ಮುರಿದು ಬಿದ್ದಿದೆ. 2ನೇ ಪತ್ನಿ ಕಿರಣ್​ ರಾವ್​ರಿಂದಲೂ ವಿಚ್ಛೇದನ ಪಡೆಯಲು ಲಗಾನ್​​ ನಟ ಮುಂದಾಗಿದ್ದಾರೆ. ಅಮೀರ್​ ಖಾನ್​-ಕಿರಣ್​​ ರಾವ್​ ಇಬ್ಬರು ದೂರವಾಗುತ್ತಿರುವ ಬಗ್ಗೆ ಜಂಟಿ ಹೇಳಿಕೆಯನ್ನು ನೀಡಿದ್ದಾರೆ. 15 ವರ್ಷಗಳ ಮದುವೆ ಕೊನೆಯಾಗುತ್ತಿದ್ದು, ಗೆಳೆಯರಾಗಿ ಮುಂದುವರೆಯುತ್ತೇವೆ ಎಂದಿದ್ದಾರೆ. ಸಿನಿಮಾ ಪ್ರೊಡಕ್ಷನ್​​ ಕಂಪನಿ, ಪಾನಿ ಫೌಂಡೇಷನ್​ ಸಹ ಮಾಲೀಕರಾಗಿ ಮುಂದುವರೆಯುತ್ತೇವೆ ಎಂದು ತಿಳಿಸಿದ್ದಾರೆ.

ಅಮೀರ್​ ಅವರ ಸೂಪರ್​ ಹಿಟ್​ ಸಿನಿಮಾ ಲಗಾನ್​​​ ಚಿತ್ರತಂಡದಲ್ಲಿದ್ದ ಕಿರಣ್​ ರಾವ್​ ಅವರನ್ನು ಅಮೀರ್​ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮೊದಲ ಪತ್ನಿ ರೀನಾ ದತ್​ಗೆ ಡಿವೋರ್ಸ್​​​ ನೀಡಿ ಬೆಂಗಳೂರು ಮೂಲದ ಕಿರಣ್​​ ಅವರ ಕೈ ಹಿಡಿದಿದ್ದರು ಬಾಲಿವುಡ್​ ಫರ್ಫೆಕ್ಷನಿಸ್ಟ್​​. ಆದರೆ ಸೂಪರ್​​ ಸ್ಟಾರ್​ ನಟನ 2ನೇ ಮದುವೆಯೂ ಡಿವೋರ್ಸ್​​​ನಲ್ಲಿ ಅಂತ್ಯವಾಗಿದೆ.

ಅಮೀರ್​-ಕಿರಣ್​​​ ಬೇರೆಯಾಗುತ್ತಿರುವ ಸುದ್ದಿ ಹೊರಬೀಳುತ್ತಲೇ ಅವರ ಹಳೆಯ ವಿಡಿಯೋಗಳು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಕೆಲ ವರ್ಷಗಳ ಹಿಂದೆ ಅಮೀರ್​-ಕಿರಣ್​ ಜೋಡಿ ನಿರ್ದೇಶಕ ಕರಣ್​ ಜೋಹರ್​ ನಡೆಸಿ ಕೊಡುವ ಕಾಫಿ ವಿತ್​ ಕರಣ್​ ಶೋನಲ್ಲಿ ಭಾಗಿಯಾಗಿದ್ದರು. ಕಾಂಟ್ರವರ್ಸಿಗಳಿಂದಲೇ ಸುದ್ದಿಯಾಗುವ ಈ ಶೋನಲ್ಲಿ ಅಮೀರ್​​-ಕಿರಣ್​ ಸಹ ಗಾಸಿಪ್​ಗೆ ಎಡೆ ಮಾಡಿಕೊಡುವ ಹೇಳಿಕೆಗಳನ್ನು ಕೊಟ್ಟಿದ್ದರು.

ಕಾಫಿ ವಿತ್​ ಕರಣ್​ ಶೋನ ರ್ಯಾಪಿಡ್​ ಫೈರ್​​ ರೌಂಡ್​ನಲ್ಲಿ ಕರಣ್​​ ಕೆಲವೊಂದಿಷ್ಟು ತಮಾಷೆಯ, ಕಾಲೆಳೆಯುವಂತ ಪ್ರಶ್ನೆಗಳನ್ನು ಕೇಳಿದ್ದರು. ನೀವೇನಾದರೂ ಬೆಳಗ್ಗೆ ಎದ್ದಾಗ ರಣಬೀರ್​ ಕಪೂರ್​ ಆಗಿದ್ದರೆ ಮೊದಲು ಏನು ಮಾಡುತ್ತೀರ ಎಂಬ ಪ್ರಶ್ನೆಗೆ ಕಿರಣ್​ ಬೋಲ್ಡ್​ ಆಗಿ ಮರು ಪ್ರಶ್ನೆ ಹಾಕಿದ್ದರು. ರಣಬೀರ್​​ ಆಗಿ ಎದ್ದೇಳೋದಾ, ರಣಬೀರ್​​ ಜೊತೆ ಎದ್ದೇಳೋದಾ ಎಂದು ನಕ್ಕಿದ್ದರು. ಪಕ್ಕದಲ್ಲೇ ಇದ್ದ ಅಮೀರ್​ ಪೋಸೆಸಿವ್​ ಆದವರಂತೆ ನಟಿಸಿ ತಮಾಷೆ ಮಾಡಿದ್ದರು.

ಮುಂದಿನ ಪ್ರಶ್ನೆಯಲ್ಲಿ ಬೆಳಗ್ಗೆ ಎದ್ದಾಗ ಕತ್ರಿನಾ ಕೈಫ್​​ ಆಗಿದ್ದರೆ ಏನು ಮಾಡುತ್ತೀರಾ ಎಂದು ಕರಣ್​ ಪ್ರಶ್ನಿಸಿದ್ದರು. ಕಿರಣ್​ ಉತ್ತರಿಸುವ ಮೊದಲೇ ಅಮೀರ್​​ ನನ್ನ ಹೆಂಡತಿ ಎದ್ದಾಗ ಕತ್ರೀನಾ ಆಗಿದ್ದರೆ ನನಗಂತೂ ಸಖತ್​ ಖುಷಿಯಾಗುತ್ತೆ ಎಂದಿದ್ದರು. ಹೆಂಡತಿ ಕತ್ರಿನಾ ತರ ಕಾಣಿಸಿದರೆ ಯಾರಿಗೆ ಖುಷಿಯಾಗಲ್ಲ ಎಂದಿದ್ದರು. ನಿರೂಪಣೆ ಮಾಡುತ್ತಿದ್ದ ಕರಣ್​​ ಸಹ ಬಿದ್ದು ಬಿದ್ದು ನಕ್ಕಿದ್ದರು. ರಣಬೀರ್​ ಕಪೂರ್​ ಉತ್ತರಕ್ಕೆ ನನಗೆ ಟಾಂಗ್​ ಕೊಡ್ತಿದ್ದೀರಾ ಎಂದು ಅಮೀರ್​​ನ ಕಿಚಾಯಿಸಿ ಕಿರಣ್​ ಸಹ ನಕ್ಕಿದ್ದರು.

ಇದನ್ನೂ ಓದಿ: ಅಮೀರ್ ಖಾನ್​ ವಿಚ್ಛೇದನ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಟ್ವಿಟರ್​ನಲ್ಲಿ ಟ್ರೆಂಡ್​ ಆದ ದಂಗಲ್ ನಟಿ ಫಾತಿಮಾ ಸನಾ ಶೇಖ್​

ಇಡೀ ಶೋನಲ್ಲಿ ಕಿರಣ್​ ನನಗೆ ರಣಬೀರ್​ ಕಪೂರ್​ ಎಂದರೆ ಇಷ್ಟ ಎಂದು ಹಲವು ಬಾರಿ ಉತ್ತರಿಸಿದ್ದಾರೆ. ಇನ್ನು ಮುಂದಿನ ವರ್ಷ ಕಾಫಿ ವಿತ್​ ಕರಣ್​ ಶೋನಲ್ಲಿ ಭಾಗಿಯಾಗಿದ್ದ ಅಮೀರ್​ ಖಾನ್​ಗೆ ಇಬ್ಬರು ನಟಿಯರು ಸಾಥ್​ ನೀಡಿದ್ದರು. ಅಮೀರ್​ ಜೊತೆ ದಂಗಲ್​ ಸಿನಿಮಾದ ನಟಿಯರಾದ ಫಾತಿಮಾ ಸನಾ, ಸನಾಯ ಮಲ್ಹೋತ್ರಾ ಕಾಣಿಸಿಕೊಂಡಿದ್ದರು. ದಂಗಲ್​ ಸಿನಿಮಾದಲ್ಲಿ ಅಮೀರ್​ ಅವರ ಮಗಳಾಗಿ ನಟಿಸಿದ್ದ ಫಾತಿಮಾ ಹೆಸರು ಅವರೊಂದಿಗೆ ತಳುಕು ಹಾಕಿಕೊಂಡಿದೆ. ಫಾತಿಮಾರೊಂದಿಗೆ ಅಮೀರ್​​ ಆಪ್ತತೆಯೇ ಡಿವೋರ್ಸ್​ಗೆ ಕಾರಣವಾಯ್ತಾ ಎಂಬ ಮಾತು ಬಾಲಿವುಡ್​ನಲ್ಲಿ ಕೇಳಿ ಬರುತ್ತಿದೆ.
Published by:Kavya V
First published: