RRR: `ನಾಟು ನಾಟು’ ಹಾಡಿಗೆ ಸ್ಟೆಪ್​ ಹಾಕಿದ ಆಮಿರ್​​​ ಖಾನ್​! ಬಿದ್ದು ಬಿದ್ದು ನಕ್ಕ ಆಲಿಯಾ, ವಿಡಿಯೋ ನೋಡಿ

ಇನ್ನೇನು ವಿಶ್ವಾದ್ಯಂತ ಮಾರ್ಚ್ 25 ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಅನೇಕ ಕಡೆಗಳಲ್ಲಿ ಚಿತ್ರತಂಡವು ಸುತ್ತಾಡುತ್ತಾ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್(Pre-Release Event)​ ಕಾರ್ಯಕ್ರಮ ನಡೆಸುತ್ತಿದೆ.

ಆರ್​ಆರ್​ಆರ್​ ಚಿತ್ರತಂಡ

ಆರ್​ಆರ್​ಆರ್​ ಚಿತ್ರತಂಡ

  • Share this:
‘ಬಾಹುಬಲಿ’(Bahubhali) ಅಂತಹ ದೊಡ್ಡ ಚಿತ್ರವನ್ನು ನೀಡಿ ಅಪಾರವಾದ ಖ್ಯಾತಿ ಗಳಿಸಿದ ರಾಜಮೌಳಿ(Rajamouli) ಅವರು ಇದೀಗ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದೊಡ್ಡ ಮಟ್ಟದ ಚಿತ್ರ ಎಂದರೆ ಅದು ‘ಆರ್​ಆರ್​ಆರ್’(RRR) ಎಂದು ಹೇಳಬಹುದು. ಇನ್ನೇನು ವಿಶ್ವಾದ್ಯಂತ ಮಾರ್ಚ್ 25 ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಅನೇಕ ಕಡೆಗಳಲ್ಲಿ ಚಿತ್ರತಂಡವು ಸುತ್ತಾಡುತ್ತಾ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್(Pre-Release Event)​ ಕಾರ್ಯಕ್ರಮ ನಡೆಸುತ್ತಿದೆ. ಇದೇ ರೀತಿ, ‘ಆರ್​ಆರ್​ಆರ್’ ಚಿತ್ರದ ನಾಯಕ ನಟರಾದ ಜೂನಿಯರ್ ಎನ್‌ಟಿಆರ್(Junior NTR) ಮತ್ತು ರಾಮ್ ಚರಣ್(Ramcharan), ಬಾಲಿವುಡ್ ನಟಿ ಆಲಿಯಾ ಭಟ್(Alia Bhatt) ಮತ್ತು ಚಲನಚಿತ್ರ ನಿರ್ಮಾಪಕ ಎಸ್.ಎಸ್. ರಾಜಮೌಳಿ ಸೇರಿದಂತೆ ಚಿತ್ರದ ಪಾತ್ರವರ್ಗವು ಚಿತ್ರದ ಪ್ರಚಾರಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿತ್ತು.

RRR ಪ್ರೀ ರಿಲೀಸ್​ ಇವೆಂಟ್​​ನಲ್ಲಿ ಆಮಿರ್​ ಖಾನ್​!

ಅಭಿಮಾನಿಗಳಿಗಾಗಿ ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಮತ್ತು ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿಯಾಗಿರುವಂತಹ ಆಮಿರ್ ಖಾನ್ ಅವರು ‘ಆರ್​ಆರ್​ಆರ್’ ಚಿತ್ರದ ಪಾತ್ರ ವರ್ಗವನ್ನು ಸೇರಿಕೊಂಡರು. ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಮೀರ್ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡಿದ್ದು, ಅವರು ‘ಆರ್​ಆರ್​ಆರ್’ ಚಿತ್ರದ ನಾಯಕ ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರೊಂದಿಗೆ ಸೇರಿ ಏನು ಮಾಡಿದ್ದಾರೆ ನೋಡಿ. ಆಮಿರ್ ಖಾನ್ ಅವರು ಈ ಇಬ್ಬರು ನಟರ ಜೊತೆಗೆ ಸೇರಿಕೊಂಡು ಅವರ ‘ಆರ್​ಆರ್​ಆರ್’ ಚಿತ್ರದಲ್ಲಿರುವ ‘ನಾಟು ನಾಟು’ ಹಾಡಿನಲ್ಲಿರುವ ಹುಕ್ ಸ್ಟೆಪ್ ಅನ್ನು ವೇದಿಕೆಯ ಮೇಲೆಯೇ ಪ್ರಯತ್ನಿಸಿದರು.

ಇದನ್ನೂ ಓದಿ: ತಾಯಿಯಾಗುತ್ತಿರುವ ವಿಚಾರ ಹಂಚಿಕೊಂಡ ಸೋನಮ್ ಕಪೂರ್! ಖುಷಿ ಕ್ಷಣದ ಫೋಟೋ ಇಲ್ಲಿದೆ ನೋಡಿ

ಆಮಿರ್​ ಖಾನ್​ಗೆ ಹುಕ್​ ಸ್ಟೆಪ್ಸ್​ ಹೇಳಿಕೊಟ್ಟ ಜ್ಯೂ.ಎನ್​ಟಿಆರ್​, ರಾಮ್​!

'ಪಿಕೆ' ಚಿತ್ರದ ನಟ ಈ ಹುಕ್ ಸ್ಟೆಪ್ಸ್ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿ, “ಈ ಸ್ಟೆಪ್ಸ್‌ಗಳನ್ನು ನೀವು ಹೇಗೆ ಇಷ್ಟೊಂದು ವೇಗವಾಗಿ ಮಾಡಿದ್ದೀರಿ” ಎಂದು ಆಮಿರ್ ಇಬ್ಬರು ನಟರನ್ನು ಕೇಳುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. "ಆ ಹುಕ್ ಸ್ಟೆಪ್ಸ್ ತುಂಬಾನೇ ವೇಗವಾಗಿವೆ" ಎಂದು ಸಹ ಆಮಿರ್ ಹೇಳಿದರು. ನಂತರ ಆಮಿರ್ ಅವರು ಆಲಿಯಾ ಭಟ್, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಸೇರಿಕೊಂಡು, ಈ ನಾಲ್ವರು ವೇದಿಕೆಯ ಮೇಲೆ ಒಟ್ಟಾಗಿ ಆ ಹುಕ್ ಸ್ಟೆಪ್ಸ್ ಹಾಕಿದ್ದನ್ನು ಈ 23 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ನೋಡಬಹುದು.ಸೀರೆ ಉಟ್ಟು ಸ್ಟೆಪ್ಸ್​ ಹಾಕಿದ ಆಲಿಯಾ ಭಟ್​!

ಆಲಿಯಾ ಸೀರೆಯನ್ನು ಉಟ್ಟರೂ ಸಹ ತುಂಬಾನೇ ಸಲೀಸಾಗಿ ಆ ಹುಕ್ ಸ್ಟೆಪ್‌ಗಳನ್ನು ಹಾಕಿದರು. ನಂತರ ನಿರ್ದೇಶಕ ರಾಜಮೌಳಿ, ಜೂನಿಯರ್ ಎನ್‌ಟಿಆರ್, ಆಲಿಯಾ ಮತ್ತು ರಾಮ್ ಚರಣ್ ಅವರಿಗಾಗಿ ಹುಕ್ ಸ್ಟೆಪ್ ಮಾಡಲು ಆಮೀರ್ ಅಭಿಮಾನಿಗಳನ್ನು ವೇದಿಕೆಗೆ ಕರೆದರು. ಈ ವಿಡಿಯೋವನ್ನು ಇದುವರೆಗೂ 45 ಸಾವಿರಕ್ಕಿಂತಲೂ ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ. ಒಟ್ಟಿನಲ್ಲಿ ಆಮೀರ್ ಈ ಸ್ಟೆಪ್ಸ್ ಹಾಕುತ್ತಿರುವುದು ತುಂಬಾನೇ ಮುದ್ದಾಗಿ ಕಂಡು ಬಂದಿದೆ.

ಇದನ್ನೂ ಓದಿ: ಅಪ್ಪು-ಅಣ್ಣಾವ್ರ ಕೊನೆ ಸಿನಿಮಾದಲ್ಲಿ ಒಂದೇ ಸಂದೇಶ! ಪುನೀತ್​ ನಿಜಕ್ಕೂ ತಂದೆ ತಕ್ಕ ಮಗ..

ಚಿತ್ರದ ಬಿಡುಗಡೆಯು ತುಂಬಾನೇ ಹತ್ತಿರದಲ್ಲಿದ್ದು, ದೇಶಾದ್ಯಂತ ಬಹು ನಿರೀಕ್ಷಿತ ಚಿತ್ರದ ಪ್ರಚಾರಕ್ಕಾಗಿ ಮೇಲುಸ್ತುವಾರಿಯ ತಯಾರಕರು ಬಹು ನಗರ ಪ್ರವಾಸವನ್ನು ಯೋಜಿಸಿದ್ದಾರೆ. ಹೈದರಾಬಾದ್, ಬೆಂಗಳೂರು, ಬರೋಡಾ, ದೆಹಲಿ, ಅಮೃತಸರ, ಜೈಪುರ, ಕೋಲ್ಕತ್ತಾ ಮತ್ತು ವಾರಾಣಸಿಯಿಂದ ದುಬೈವರೆಗೆ ಮಾರ್ಚ್ 18 ರಿಂದ 22 ರ ವರೆಗೆ ತಯಾರಕರು ವ್ಯಾಪಕವಾದ ಪ್ರಚಾರ ಯೋಜನೆಯನ್ನು ರೂಪಿಸಿದ್ದಾರೆ.
Published by:Vasudeva M
First published: