Aamir Khan: ಬಾಲಿವುಡ್ ಸಿನಿಮಾಗಳು ಸದ್ದು ಮಾಡದಿರಲು ಆಮಿರ್ ಖಾನ್ ಕಾರಣವಂತೆ, ಕರಣ್ ಜೋಹರ್ ಹೀಗೆ ಅಂದಿದ್ಯಾಕೆ?

ಕರಣ್‌ ಜೋಹರ್‌ ದಕ್ಷಿಣ ಚಿತ್ರರಂಗದಲ್ಲಿ ಬಾಲಿವುಡ್‌ನಲ್ಲಿ ಆಗುವಂತಹ ಬದಲಾವಣೆಗಳು ಆ ಬದಲಾವಣೆಗಳಿಗೆ ಆಮಿರ್ ಖಾನ್‌ ಅವರೇ ನೇರ ಹೊಣೆ ಎಂದು ಕರಣ್‌ ಜೋಹರ್‌ ಹೇಳಿದರು ಇದಕ್ಕೆ ಆಮಿರ್ ಖಾನ್ ಏನು ಹೇಳಿದ್ದಾರೆ ನೋಡಿ.

ಆಮಿರ್ ಖಾನ್  ಮತ್ತು ಕರಣ್ ಜೋಹರ್

ಆಮಿರ್ ಖಾನ್ ಮತ್ತು ಕರಣ್ ಜೋಹರ್

  • Share this:
'ಕಾಫಿ ವಿತ್ ಕರಣ್' ಸೀಸನ್ 7 (Koffee with Karan Season 7) ಪ್ರಾರಂಭವಾಗಿದೆ. ಡಿಸ್ನಿ ಹಾಟ್‌ಸ್ಟಾರ್ ಒಟಿಟಿಯಲ್ಲಿ ಶೋ ಪ್ರಸಾರವಾಗುತ್ತಿದ್ದು, ಈಗಾಗಲೇ ಕೆಲವು ಎಪಿಸೋಡ್‌ಗಳು ಪ್ರಸಾರವೂ ಆಗಿದೆ. ಮೊದಲ ಎಪಿಸೋಡ್‌ನಲ್ಲಿ (Episode) ಆಲಿಯಾ ಭಟ್ ಹಾಗೂ ರಣ್ವೀರ್ ಸಿಂಗ್ ಭಾಗವಹಿಸಿದ್ದರು. 'ಕಾಫಿ ವಿತ್ ಕರಣ್' ಎಪಿಸೋಡ್‌ನಲ್ಲಿ ಏನು ಚರ್ಚೆ ಆಗುತ್ತದೆ, ಯಾವ ಗಾಳಿ ಸುದ್ದಿ ಹೊರಗೆ ಬರುತ್ತದೆ ಎಂಬುದರ ಜೊತೆಗೆ ಯಾರು ಯಾರು ಅತಿಥಿಗಳು (Guests) ಬರುತ್ತಾರೆ ಎಂಬುದು ಕೂಡ ಸದಾ ಕುತೂಹಲದ ವಿಷಯ ಆಗಿರುತ್ತದೆ. ಈ ಬಾರಿ 'ಕಾಫಿ ವಿತ್ ಕರಣ್'ನ ನಿರೂಪಕ ಕರಣ್ ಜೋಹರ್ (Karan Johar) ಈ ಬಾರಿ ಹಲವು ಅತಿಥಿಗಳನ್ನು ಶೋಗೆ ಆಹ್ವಾನಿಸಿದ್ದಾರೆ.

ಕಾಫಿ ವಿತ್ ಕರಣ್ ೭ ಷೋನಲ್ಲಿ ಅತಿಥಿಯಾಗಿ ಬಂದ ಆಮಿರ್ ಖಾನ್
ಕಾಫಿ ವಿತ್ ಕರಣ್ ಶೋಗೆ ಯಾರು ಯಾರು ಅತಿಥಿಗಳು ಬರಲಿದ್ದಾರೆ ಎಂಬುದರ ಝಲಕ್ ಶೋ ನ ಟೀಸರ್‌ನಲ್ಲಿ ಈಗಾಗಲೇ ಸಿಕ್ಕಿದೆ. ಆದರೆ ಕೆಲವು ಪ್ರಮುಖ ಅತಿಥಿಗಳ ಎಪಿಸೋಡ್‌ ಅನ್ನು ಟೀಸರ್‌ನಲ್ಲಿ ತೋರಿಸಲಾಗಿಲ್ಲ ಎನ್ನಲಾಗುತ್ತಿದೆ. ಅಂತಹ ಪ್ರಮುಖ ಅತಿಥಿಗಳಲ್ಲಿ ಆಮಿರ್ ಖಾನ್‌ ಕೂಡ ಒಬ್ಬರಾಗಿದ್ದಾರೆ. ಕರಣ್ ಜೋಹರ್ ಅವರು ಕಾಫಿ ವಿತ್ ಕರಣ್ 7 ರ ಇತ್ತೀಚಿನ ಎಪಿಸೋಡ್‌ನಲ್ಲಿ, ಲಾಲ್ ಸಿಂಗ್ ಚಡ್ಡಾ ನಾಯಕನಟರಾದ ಆಮಿರ್ ಖಾನ್‌ ಮತ್ತು ಬಾಲಿವುಡ್‌ ಹಿರೋಯಿನ್‌ ಕರೀನಾ ಕಪೂರ್ ಖಾನ್ ಅವರನ್ನು ಈ ಶೋಗೆ ಒಟ್ಟಿಗೆ ಕರೆ ತಂದಿದ್ದಾರೆ.

ಕರಣ್‌ ಜೋಹರ್‌ ದಕ್ಷಿಣ ಚಿತ್ರರಂಗದಲ್ಲಿ ಬಾಲಿವುಡ್‌ನಲ್ಲಿ ಆಗುವಂತಹ ಬದಲಾವಣೆಗಳು ಆ ಬದಲಾವಣೆಗಳಿಗೆ ಆಮಿರ್ ಖಾನ್‌ ಅವರೇ ನೇರ ಹೊಣೆ ಎಂದು ಕರಣ್‌ ಜೋಹರ್‌ ಹೇಳಿದರು. ಇವರ ಮಾತಿಗೆ ಅಮೀರ್‌ ಖಾನ್‌ ʼಕರಣ್‌ ಜೋಹರ್‌ ಅವರ ಗ್ರಹಿಕೆ ತಪ್ಪು. ನನ್ನ ಸಿನಿಮಾಗಳು ಯಾವಾಗಲೂ ಮಾಸ್‌ ಸಿನಿಮಾಗಳೇ ಆಗಿರುತ್ತವೆ. ಆದರೆ ಈ ದಿನಗಳಲ್ಲಿ ನಾನು ಆ ತರಹದ ಸಿನಿಮಾಗಳನ್ನು ಮಾಡುತ್ತಿಲ್ಲ. ಆದ್ದರಿಂದ ಸಿನಿಮಾ ನಿರ್ಮಾಪಕರು ಏನು ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸಿದರು.

ದಕ್ಷಿಣ ಸಿನಿಮಾ ವರ್ಸಸ್‌ ಬಾಲಿವುಡ್‌ ಸಿನಿಮಾ  ಬಗ್ಗೆ ಚರ್ಚೆ
ಆಮಿರ್ ಖಾನ್‌ ಮತ್ತು ಕರೀನಾ ಕಪೂರ್ ಖಾನ್ ಕಾಫಿ ವಿತ್ ಕರಣ್ 7 ನಲ್ಲಿ ಭಾಗವಹಿಸಿದ್ದಾರೆ. ಕರಣ್‌ ಜೋಹರ್‌ ಮತ್ತು ಇವರಿಬ್ಬರೂ ದಕ್ಷಿಣ ಸಿನಿಮಾ ವರ್ಸಸ್‌ ಬಾಲಿವುಡ್‌ ಸಿನಿಮಾ ಎಂಬುದರ ಬಗ್ಗೆ ಮತ್ತು ಇತರ ಸಿನಿಮಾ ವಿಷಯಗಳ ಬಗ್ಗೆ ಮಾತನಾಡಿದರು.

ಇದನ್ನೂ ಓದಿ: ಹೆಂಡತಿಯಲ್ಲ, ಮಗಳೂ ಅಲ್ಲ, ಅಮೀರ್​ ಖಾನ್ ಜೀವನದಲ್ಲಿ ಈ ಇಬ್ಬರು ಲೇಡೀಸ್​ ತುಂಬಾ ಸ್ಪೆಷಲ್!

ಈ ಕಾರ್ಯಕ್ರಮದಲ್ಲಿ ಕರಣ್ ಜೋಹರ್ “ದಕ್ಷಿಣ ಸಿನಿಮಾಗಳು ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗುತ್ತಿವೆ ಮತ್ತು ಆದರೆ ಬಾಲಿವುಡ್ ಸಿನಿಮಾಗಳಿಗೆ ಇದು ಸಾಧ್ಯವಾಗುತ್ತಿಲ್ಲ. ಏಕೆ? ಬಾಲಿವುಡ್‌ ಸಿನಿಮಾಗಳು ಪ್ರೇಕ್ಷಕರನ್ನು ಹಿಡಿದಿರಿಸಲು ಯಶ್ವಸಿಯಾಗುತ್ತಿಲ್ಲವೇ? ಈ ಎಲ್ಲ ಬದಲಾವಣೆಗೆ ನೀವೆ ಹೊಣೆ” ಎಂದು ಹೇಳಿದರು.

ಕರಣ್ ಜೋಹರ್ "ನೀವು ಸಿನಿಮಾಗಳ ಬಗ್ಗೆ ಶೈಕ್ಷಣಿಕ ತಿಳುವಳಿಕೆಯನ್ನು ಹೊಂದಿದ್ದೀರಿ. ದಕ್ಷಿಣ ಸಿನಿಮಾಗಳಾದ ಬಾಹುಬಲಿಯಿಂದ ಹಿಡಿದು ಪುಷ್ಪ, ಆರ್ ಆರ್ ಆರ್ ಮತ್ತು ಕೆಜಿಎಫ್ 2 ವರೆಗೆ ತೆರೆ ಕಾಣುತ್ತಿರುವ ಸಿನಿಮಾಗಳು ತುಂಬಾ ಯಶಸ್ಸನ್ನು ಗಳಿಸುತ್ತಿವೆ. ಆದರೆ ನಮ್ಮ ಬಾಲಿವುಡ್‌ ಸಿನಿಮಾಗಳು ಮಖಾಡೆ ಮಲಗುತ್ತಿವೆ. ನಮ್ಮ ಸಿನಿಮಾಗಳಿಗೂ ಈ ದಕ್ಷಿಣ ಸಿನಿಮಾಗಳಿಗೂ ಇರುವ ವ್ಯತ್ಯಾಸವೇನು? ಈ ಎಲ್ಲ ಬದಲಾವಣೆಗಳಿಗೆ ಮುಖ್ಯ ಕಾರಣವೇನು?” ಎಂದು ಅಮೀರ್‌ ಖಾನ್‌ ಅವರನ್ನು ಪ್ರಶ್ನಿಸಿದರು.

ಕರಣ್ ಪ್ರಶ್ನೆಗೆ ಆಮಿರ್ ಅವರ ನೋಡಿ ಹೇಗಿತ್ತು ಅಂತ
ಕರಣ್‌ ಜೋಹರ್‌ ಅವರ ತೀಕ್ಷ್ಣ ಪ್ರಶ್ನೆಯನ್ನು ಆಮಿರ್ ಖಾನ್‌ ತುಂಬಾ ಪ್ರಬುದ್ಧತೆಯಿಂದ ತೆಗೆದುಕೊಂಡು “ಕರಣ್ ಜೋಹರ್ ಅವರ ಗ್ರಹಿಕೆ ಸಂಪೂರ್ಣ ತಪ್ಪು. ನೀವು ತುಂಬಾ ತಪ್ಪು ಮಾಡುತ್ತಿದ್ದೀರಿ. ನನ್ನ ಎಲ್ಲಾ ಹಿಂದಿ ಸಿನಿಮಾಗಳು , ಜನರ ಹೃದಯ ತಲುಪುವ, ಹಾರ್ಟ್‌ಲ್ಯಾಂಡ್ ಸಿನಿಮಾಗಳಾಗಿವೆ. ಈ ಎಲ್ಲಾ ಸಿನಿಮಾಗಳು ಸಾಮಾನ್ಯ ಜನರ ಹೃದಯ ಮುಟ್ಟುವ ಭಾವನೆಗಳನ್ನು ಹೊಂದಿದ್ದವು.

ತಾರೆ ಜಮೀನ್ ಪರ್ ಸಿನಿಮಾವು ಮಗು ಇರುವ ಪ್ರತಿಯೊಂದು ಮನೆಯೊಂದಿಗೂ ಈ ಸಿನಿಮಾ ಸಂಪರ್ಕ ಸಾಧಿಸಿದೆ. ರಂಗ್ ದೇ ಬಸಂತಿ ತಳಮಟ್ಟದ ಪ್ರೇಕ್ಷಕರನ್ನು ಮುಟ್ಟಿದೆ. ನಾನು ಸಿನಿಮಾ ನಿರ್ದೇಶಕರಿಗೆ ನೀವು ಆಕ್ಷನ್ ಸಿನಿಮಾ ಮಾಡಿ ಎಂದು ನಾನು ಹೇಳುತ್ತಿಲ್ಲ. ಒಳ್ಳೆಯ ಸಿನಿಮಾ ಮಾಡಿ ಎಂದಷ್ಟೆ ಹೇಳುವುದು. ಆದರೆ ಇಂದು ಪ್ರಸ್ತುತವಾದ ವಿಷಯ ಆರಿಸಿ ಉತ್ತಮ ಸಿನಿಮಾ ಮಾಡುವುದು ಎಲ್ಲರಿಗೂ ಒಳ್ಳೆಯದು. . ಪ್ರತಿಯೊಬ್ಬ ಸಿನಿಮಾ ನಿರ್ಮಾಪಕರಿಗೂ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ” ಎಂದು ಆಮಿರ್ ಖಾನ್‌ ಶಾಂತ ರೀತಿಯಿಂದ ಉತ್ತರಿಸಿದರು.

ಇದನ್ನೂ ಓದಿ: Aamir Khan: ಮೋನಾ ಸಿಂಗ್ ಬಗ್ಗೆ ಟೀಕೆ ಮಾಡಿದವರಿಗೆ ಆಮಿರ್ ಕ್ಲಾಸ್​, ಆಕೆಯ ಕೆಲಸ ಹಾಳು ಮಾಡಬೇಡಿ ಎಂದ ನಟ

ಆಮಿರ್ ಖಾನ್‌ ಮೂರು ಬಾರಿ ಕಾಫಿ ವಿತ್ ಕರಣ್‌ ಶೋಗೆ ಬಂದಿದ್ದರು. ಆಗ 'ಕಾಫಿ ವಿತ್ ಕರಣ್' ಶೋ ಬಹಳ ಓವರ್‌ ರೇಟೆಡ್ ಎಂದಿದ್ದರು. ಹಾಗೂ ಕರಣ್ ಜೋಹರ್ ನಿರ್ದೇಶನದ 'ಕಭಿ ಖುಷಿ ಕಭಿ ಗಮ್' ಸಿನಿಮಾ ತಮಗೆ ಇಷ್ಟವಾಗಿರಲಿಲ್ಲ ಎಂದು ಸಹ ಹೇಳಿದ್ದರು. ಹಾಗಾಗಿ ಅಮೀರ್ ಖಾನ್ ಮತ್ತೊಮ್ಮೆ ಕಾಫಿ ವಿತ್ ಕರಣ್‌ ಶೋಗೆ ಬರಲಾರರು ಎನ್ನಲಾಗಿತ್ತು, ಆದರೆ ಆಶ್ಚರ್ಯಕರವಾಗಿ ಆಮಿರ್ ಖಾನ್‌ ಈ ಬಾರಿ ಶೋಗೆ ಬಂದಿದ್ದಾರೆ.
Published by:Ashwini Prabhu
First published: