ಗೋಧಿ ಪ್ಯಾಕೆಟ್​ನಲ್ಲಿ 15 ಸಾವಿರ ಇರಿಸಿದ್ದು ನಾನಲ್ಲ..ಯಾರೋ ರಾಬಿನ್​ ಹುಡ್​ ಇರಬೇಕು!; ಅಮೀರ್​ ಖಾನ್​​

Aamir Khan: ಗೋಧಿ ಪ್ಯಾಕೆಟ್​ನಲ್ಲಿ 15 ಸಾವಿರ ರೂಪಾಯಿ ಹಣವನ್ನು ಇಟ್ಟದಕ್ಕೂ ನನಗೆ ಯಾವುದೇ ಸಂಬಂಧವಿಲ್ಲ ಇದೊಂದು ಗಾಳಿ ಸುದ್ದಿಯಾಗಿದೆಎಂದು ಅಮೀರ್​ ಖಾನ್​ ಹೇಳಿದ್ದಾರೆ.

news18-kannada
Updated:May 4, 2020, 2:30 PM IST
ಗೋಧಿ ಪ್ಯಾಕೆಟ್​ನಲ್ಲಿ 15 ಸಾವಿರ ಇರಿಸಿದ್ದು ನಾನಲ್ಲ..ಯಾರೋ ರಾಬಿನ್​ ಹುಡ್​ ಇರಬೇಕು!; ಅಮೀರ್​ ಖಾನ್​​
ಅಮೀರ್​ ಖಾನ್​​
  • Share this:
ಇತ್ತೀಚೆಗೆ ಬಾಲಿವುಡ್​ ನಟ ಅಮೀರ್​ ಖಾನ್​​ ಲಾಕ್​ಡೌನ್​ ಅವಧಿಯಲ್ಲಿ ಬಡವರಿಗೆ ಸಹಾಯ ಮಾಡಲು ಗೋಧಿ ಹಿಟ್ಟಿನ ಪ್ಯಾಕೆಟ್​ಗಳಲ್ಲಿ 15 ಸಾವಿರ ರೂಪಾಯಿ ನೀಡುತ್ತಿದ್ದರು ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಅಮೀರ್​ ಖಾನ್​ ಈ ರೀತಿ ಉಪಾಯವನ್ನು ಮಾಡಿ ಲಾಕ್​ಡೌನ್​ ಸಮಯದಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೀಗ ಈ ಸುದ್ದಿ ನಿಜಾಂಶವನ್ನು ನಟ ಅಮೀರ್​ ಖಾನ್​ ಅವರೇ ಹೇಳಿದ್ದಾರೆ.

ಗೋಧಿ ಪ್ಯಾಕೆಟ್​ನಲ್ಲಿ 15 ಸಾವಿರ ರೂಪಾಯಿ ಹಣವನ್ನು ಇಟ್ಟದಕ್ಕೂ ನನಗೆ ಯಾವುದೇ ಸಂಬಂಧವಿಲ್ಲ ಇದೊಂದು ಗಾಳಿ ಸುದ್ದಿಯಾಗಿದೆಎಂದು ಅಮೀರ್​ ಖಾನ್​ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು ‘ಗೋಧಿ ಪ್ಯಾಕೆಟ್​ ಒಳಗೆ ಹಣವಿಟ್ಟಿರುವುದು ಸುಳ್ಳು ಸುದ್ದಿ. ನಾನಂತು ಈ ತರಹದ ಕೆಲಸ ಮಾಡಿಲ್ಲ. ಯಾರೋ ಹೆಸರನ್ನು ಬಹಿರಂಗ ಪಡಿಸದ ರಾಬಿನ್ ಹುಡ್​​ ಈ ತರಹದ ಕೆಲಸ ಮಾಡಿರಬೇಕು. ಇದಕ್ಕೂ ನನಗೂ ಸಂಬಂಧವಿಲ್ಲ' ಎಂದಿದ್ದಾರೆ.

 ಹಾಗಿದ್ದರೆ, ಒಂದೊಂದು ಗೋಧಿ ಪ್ಯಾಕೆಟ್​ನ ಒಳಗಡೆ ಬರೋಬ್ಬರಿ 15 ಸಾವಿರ ರುಪಾಯಿ ಇಟ್ಟ ಮಹಾನುಭಾವ ಯಾರು? ಇಂದೊಂದು ಸುಳ್ಳು ಸುದ್ದಿಯೇ? ಎಂಬುದು ಬಹಿರಂಗವಾಗಬೇಕಿದೆ.

 

ಲಾಕ್​ಡೌನ್​ ಅವಧಿಯಲ್ಲಿ ಅನೇಕ ಸ್ಟಾರ್​ ನಟರು ಕೋವಿಡ್​-19 ವೈರಸ್​ನಿಂದಾಗಿ ಸಂಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡಿದ್ದಾರೆ. ನಟ ಅಮೀರ್​ ಖಾನ್​ ಕೂಡ ಪಿಎಂ ಕೇರ್ಸ್​​ಗೆ ದೇಣಿಗೆ ನೀಡುವ ಮೂಲಕ ಸಹಾಯವನ್ನು ಮಾಡಿದ್ದಾರೆ. ಆದರೆ ಎಷ್ಟು ಮೊತ್ತದ ದೇಣಿಗೆ ನೀಡಿದ್ದಾರೆ ಎಂಬುದನ್ನು ಅಮೀರ್​ ಖಾನ್​ ಬಹಿರಂಗವಾಗಿ ಇರಿಸಿದ್ದಾರೆ.

ಲಾಕ್​ಡೌನ್ ವೇಳೆ ಕಬಡ್ಡಿ ಆಡುತ್ತಾ ಸಮಯ ಕಳೆಯುತ್ತಿದ್ದಾರೆ ಈ ಖ್ಯಾತ ನಟಿ!
First published: May 4, 2020, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading