news18-kannada Updated:August 17, 2020, 8:42 AM IST
ಟರ್ಕಿಯ ಪ್ರಥಮ ಮಹಿಳೆಯೊಂದಿಗೆ ನಟ ಅಮೀರ್ ಖಾನ್
ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ತಮ್ಮ ಸಿನಿಮಾ ಹಾಗೂ ನಟನೆಯ ಮೂಲಕ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ. ಆದರೆ ಆಗೊಮ್ಮೆ ಈಗೊಮ್ಮೆ ವಿವಾದಗಳಿಂದಲೂ ಸದ್ದು ಮಾಡುವುದರಲ್ಲೂ ಅವರು ಹಿಂದೆ ಬಿದ್ದಿಲ್ಲ. ಹೌದು, ಕೆಲ ವರ್ಷಗಳ ಹಿಂದಷ್ಟೇ ಅಮೀರ್ ಮತ್ತು ಪತ್ನಿ ಕಿರಣ್ ರಾವ್, ಭಾರತದಲ್ಲಿರುವುದು ನಮಗೆ ಸುರಕ್ಷಿತವೆನಿಸುತ್ತಿಲ್ಲ ಎಂದು ಹೇಳಿ, ವಿವಾದವನ್ನು ಮೇಲೆಳೆದುಕೊಂಡಿದ್ದರು. ಈಗ ಅಮೀರ್ ಮತ್ತೊಂದು ಕಾಂಟ್ರವರ್ಸಿ ಅನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
.ಹೌದು, ಸದ್ಯ ಅಮೀರ್ ಖಾನ್ ಹೆಸರು ವಿವಾದದಲ್ಲಿ ತಳಕು ಹಾಕಿಕೊಳ್ಳಲು ಕಾರಣ, ಅವರ ಟರ್ಕಿ ಭೇಟಿ. 1994ರ ಸೂಪರ್ಹಿಟ್ ಹಾಲಿವುಡ್ ಸಿನಿಮಾ ಫಾರೆಸ್ಟ್ ಗಂಪ್ ಅನ್ನು ಹಿಂದಿಯಲ್ಲಿ ಲಾಲ್ ಸಿಂಗ್ ಚಡ್ಡಾ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗುತ್ತಿದ್ದು, ಟಾಮ್ ಹ್ಯಾಂಕ್ಸ್ ನಟಿಸಿದ್ದ ನಾಯಕನ ಪಾತ್ರದಲ್ಲಿ ಅಮೀರ್ ನಟಿಸುತ್ತಿದ್ದಾರೆ. ಈಗಾಗಲೇ ಕೆಲ ಭಾಗದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಉಳಿದ ಭಾಗದ ಚಿತ್ರೀಕರಣಕ್ಕಾಗಿ ಲಾಲ್ ಸಿಂಗ್ ಚಡ್ಡಾ ತಂಡ, ಟರ್ಕಿ ದೇಶದಲ್ಲಿ ಬೀಡು ಬಿಟ್ಟಿದೆ.

ಟರ್ಕಿಯಲ್ಲಿ ಅಮೀರ್ ಖಾನ್
ಆದರೆ, ಭಾರತಕ್ಕೆ ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಪಾಕಿಸ್ತಾನದ ಪರ ಟರ್ಕಿ ನಿಂತಿದ್ದು, ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕ್ ಪರ ಬೆಂಬಲ ಸೂಚಿಸಿದೆ. ಮಾತ್ರವಲ್ಲ ಐಸಿಸ್ ಸೇರಿದಂತೆ ಹಲವು ಉಗ್ರ ಸಂಘಟನೆಗಳನ್ನೂ ಪೋಷಿಸುತ್ತಿರುವ ಅನುಮಾನಗಳೂ ಇವೆ. ಹಾಗೇ, ನ್ಯೂಕ್ಲಿಯರ್ ಸಪ್ಲೈಯರ್ ಗ್ರೂಪ್ ಅರ್ಥಾತ್ ಎನ್ಎಎಸ್ಜಿ ಭಾರತ ಸೇರುವ ಬಗ್ಗೆಯೂ ಟರ್ಕಿ ವಿರೋಧಿಸುತ್ತಲೇ ಬರುತ್ತಿದೆ. ಇಂತಹ ಹಲವಾರು ಕಾರಣಗಳಿಂದಾಗಿ ಸದ್ಯ ಭಾರತ ಹಾಗೂ ಟರ್ಕಿ ನಡುವಿನ ಸಂಬಂಧ ಸರಿಯಿಲ್ಲ ಎಂಬುದು ಗೊತ್ತಿದೆ.
ಹೀಗಿರುವಾಗ ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಟರ್ಕಿಯಲ್ಲಿ ಶೂಟಿಂಗ್ ಮಾಡುತ್ತಿರುವುದು ಮಾತ್ರವಲ್ಲ, ಟರ್ಕಿಯ ಪ್ರಥಮ ಮಹಿಳೆ ಎಮೀನ್ ಎರ್ಡೊಗಾನ್ರನ್ನು ರಾಜಧಾನಿ ಇಸ್ತಾನ್ಬುಲ್ನ ಹ್ಯೂಬರ್ ಮ್ಯಾನ್ಷನ್ನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಸಿನಿಮಾ, ರಾಜಕೀಯ, ಎರಡೂ ದೇಶಗಳ ಆಹಾರ ಪದ್ಧತಿ, ಆಚರಣೆಗಳು ಸೇರಿದಂತೆ ಇಬ್ಬರೂ ಮಾಡುತ್ತಿರುವ ಸಮಾಜಮುಖಿ ಕೆಲಸಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಅಮೀರ್ ಜೊತೆಗಿನ ಫೋಟೋಗಳನ್ನು ಖುದ್ದು ಎಮೀನ್ ಎರ್ಡೊಗಾನ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Preity Zinta: ಯಾರ ಮೇಲೆ ಯುದ್ಧ ಮಾಡೋಕೆ ಸಿದ್ಧರಾಗುತ್ತಿದ್ದಾರೆ ಪ್ರೀತಿ ಜಿಂಟಾ: ವಿಡಿಯೋ ನೋಡಿ..!ಮಿತ್ರರಾಷ್ಟ್ರವಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಭಾರತಕ್ಕೆ ಬಂದಾಗ ಅಮೀರ್, ಅವರನ್ನು ಭೇಟಿಯಾಗಲು ಬಂದಿರಲಿಲ್ಲ. ಆದರೆ ಈಗ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿರದ ಟರ್ಕಿ ದೇಶಕ್ಕೆ ಶೂಟಿಂಗ್ಗೆ ಹೋಗಿರುವುದು ಮಾತ್ರವಲ್ಲದೇ, ಆ ರಾಷ್ಟ್ರದ ಪ್ರಥಮ ಮಹಿಳೆಯನ್ನೂ ಭೇಟಿಯಾಗಿದ್ದಾರಲ್ಲ ಅಂತ ಅಮೀರ್ ಖಾನ್ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
Aamir Khan refused to meet India's friendly Israel's PM Netanyahu.
2015ರಲ್ಲಿ ಭಾರತದಲ್ಲಿ ಅಸಹಿಷ್ಣುತೆ ಇದೆ ಎನ್ನುವ ಮೂಲಕ, ಪಿಕೆ ಚಿತ್ರದಲ್ಲಿ ಹಿಂದೂ ದೇವರನ್ನು ಹಾಗೂ ಆಚರಣೆಗಳನ್ನು ಹೀಯಾಳಿಸಿದ್ದ ಅಮೀರ್, ಹಲವರ ಆಕ್ರೋಶಕ್ಕೆ ಕಾರಣವಾಗಿದ್ದರು. ಪಾಕಿಸ್ತಾನದ ಜೊತೆ ಸೇರಿ ಭಾರತದ ವಿರುದ್ಧ ಪಿತೂರಿ ಮಾಡುತ್ತಿರುವ ಟರ್ಕಿ ದೇಶಕ್ಕೆ ಹೋಗಿರುವುದು ಈಗ ಮತ್ತೊಮ್ಮೆ ಜನರನ್ನು ಕೆರಳಿಸಿದೆ. ಹೀಗಾಗಿಯೇ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಾಯ್ಕಾಟ್ ಮಾಡುವಂತೆ ಹಲವರು ಕರೆ ನೀಡಿದ್ದಾರೆ. ಜೊತೆಗೆ ಅಮೀರ್ ಖಾನ್ರನ್ನು ಆನ್ಲೈನ್ನಲ್ಲಿ ಟ್ರೋಲ್ ಕೂಡ ಮಾಡಲಾಗುತ್ತಿದೆ.
Published by:
Anitha E
First published:
August 17, 2020, 8:01 AM IST