KGF 2 Vs Lal Singh Chadda: ಬಾಲಿವುಡ್​ ದೈತ್ಯನಿಗೆ ಬೆವರಿಳಿಸಿದ ರಾಕಿ ಭಾಯ್​: ಯಶ್​ಗೆ ಕರೆ ಮಾಡಿ ಸಾರಿ ಕೇಳಿದ್ರಾ ಆಮಿರ್ ಖಾನ್​?

KGF-2 Vs Lal Chadda:ಇದೆಲ್ಲದರ ನಡುವೆ ಯಶ್​ಗೆ ಆಮಿರ್​ ಖಾನ್​ ಕರೆ ಮಾಡಿ ಸಾರಿ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅವರು ಮಾತ್ರ ಅಲ್ಲ, ಕೆಜಿಎಫ್‌ 2 ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಅವರ ಜೊತೆಗೂ ಮಾತನಾಡಿದ್ದಾರಂತೆ.

ಲಾಲ್​ ಸಿಂಗ್​ ಚಡ್ಡಾ ವರ್ಸಸ್​ ಕೆಜಿಎಫ್​ -2

ಲಾಲ್​ ಸಿಂಗ್​ ಚಡ್ಡಾ ವರ್ಸಸ್​ ಕೆಜಿಎಫ್​ -2

  • Share this:
ಬಾಲಿವುಡ್(Bollywood)​ ಚಿತ್ರರಂಗಲ್ಲಿ ಮೂರು ಖಾನ್​ಗಳದ್ದೇ ಅಬ್ಬರ..ಆರ್ಭಟ. ಅವರೇ ಬಾಲಿವುಡ್​ನ ಪಿಲ್ಲರ್​ಗಳು. ಅದುವೇ ಶಾರುಖ್​ ಖಾನ್​(Sha Rukh Khan), ಸಲ್ಮಾನ್​ ಖಾನ್(Salman Khan)​ ಹಾಗೂ ಆಮಿರ್​ ಖಾನ್(Aamir Khan)​. ಇವರ ಸಿನಿಮಾ ರಿಲೀಸ್​ ಮಾಡುವ ಸಮಯದಲ್ಲಿ ಎಲ್ಲರೂ ತಮ್ಮ ಸಿನಿಮಾ ಬಿಡುಗಡೆ ಮಾಡಲು ಹೆದರುತ್ತಾರೆ. ಯಾಕೆಂದರೆ ಆಮೀರ್​ ಖಾನ್ ಸಿನಿಮಾ ಅಂದರೆ ಅದಕ್ಕೆ ಭಾರತದ ಮಾತ್ರವಲ್ಲ, ವಿಶ್ವಾದ್ಯಂತ ಪ್ರೇಕ್ಷಕರು ಇದ್ದಾರೆ. ಇವರ ಸಿನಿಮಾ ಬಿಡುಗಡೆಯಾದರೆ ಕೋಟಿ ಕೋಟಿ ಬಾಚೋದಂತೂ ಖಚಿತ. ಅದಕ್ಕೆ ಆಮಿರ್​ ಖಾನ್​ ವರ್ಷಕ್ಕೆ ಒಂದರಂತೆ ಸಿನಿಮಾ ಮಾಡುತ್ತಾರೆ. ಅದರಂತೆ ಈಗ ಲಾಲ್ ಸಿಂಗ್​ ಚಡ್ಡಾ​ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದ್ದಾರೆ. ಪ್ರತಿ ಬಾರಿ ಸಿನಿಮಾ ರಿಲೀಸ್ ಮಾಡುವಾಗ ಎಲ್ಲ ಹೀರೋಗಳಿಗೂ ಆತಂಕ ಇರುತ್ತೆ. ಸಿನಿಮಾಗೆ ಹೇಗೆ ಪ್ರತಿಕ್ರಿಯೆ ಸಿಗುತ್ತೆ ಅನ್ನುವ ಭಯ ಇರುತ್ತೆ. ಈ ಬಾರಿ ಆಮಿರ್​ ಖಾನ್​ಗೆ ಇದೆರೆಡು ಹೆಚ್ಚಾಗಿದೆ. ಎದುರಾಳಿ ಯಾರೆಂದು ಗೊತ್ತಿದರೂ ತಮ್ಮ ಸಿನಿಮಾನ ಆ ಸಿನಿಮಾದ ಜೊತೆ ರಿಲೀಸ್​ ಮಾಡಲು ಡಿಸೈಡ್​ ಮಾಡಿದ್ದಾರೆ. ಅದು ಬೇರೆ ಯಾರ ಜೊತೆಗೂ ಅಲ್ಲ. ರಾಕಿಂಗ್ ಸ್ಟಾರ್(Rocking Star)​ ಅಭಿನಯದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ಕೆಜಿಎಫ್​​-2(KGF-2) ಸಿನಿಮಾದ ಜೊತೆ ಲಾಲ್ ಸಿಂಗ್​ ಚಡ್ಡಾ(Laal Singh Chadda)​ ಸಿನಿಮಾ ತೆರೆಗೆ ಬರುತ್ತಿದೆ. ಈ ವಿಚಾರ ತಿಳಿದ ಆಮಿರ್​ ಖಾನ್​ ಅಭಿಮಾನಿಗಳೇ ಲಾಲ್​ ಸಿಂಗ್ ಚಡ್ಡಾ​ ಸಿನಿಮಾ ಬಿಡುಗಡೆ ದಿನಾಂಕವನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದಾರೆ. 

ಬಾಲಿವುಡ್​ ದೈತ್ಯನಿಗೆ ಬೆವರಿಳಿಸಿದ ರಾಕಿ ಭಾಯ್​!

ಹೌದು, ಕೆಜಿಎಫ್​ 2 ಸಿನಿಮಾ ಬಿಡುಗಡೆ ದಿನದಂದೇ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡೋದಾಗಿ ಆಮಿರ್​ ಖಾನ್​ ಘೋಷಣೆ ಮಾಡಿದ್ದರು. ಇದಾದ ಬಳಿಕ ಆಮಿರ್​ ಖಾನ್ ಭಾರಿ ಟೀಕೆಗೆ ಒಳಗಾಗಿದ್ದಾರೆ. ಎದುರಾಳಿ ಯಾರು ಎಂದು ಗೊತ್ತಿದರು ತಪ್ಪು ಮಾಡುತ್ತಿದ್ದೀರ ಅಂತ ನೆಟ್ಟಿಗರು ಆಮಿರ್​ ಖಾನ್​ ಸಿನಿಮಾವನ್ನು ಟ್ರೋಲ್​ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಯಶ್​ಗೆ ಆಮಿರ್​ ಖಾನ್​ ಕರೆ ಮಾಡಿ ಸಾರಿ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅವರು ಮಾತ್ರ ಅಲ್ಲ, ಕೆಜಿಎಫ್‌ 2 ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಅವರ ಜೊತೆಗೂ ಮಾತನಾಡಿದ್ದಾರಂತೆ.

ಇದನ್ನು ಓದಿ : ಜನನಿ ಹಾಡು ಬಿಡುಗಡೆಗೆ ಮುನ್ನ ಕನ್ನಡಿಗರ ಕ್ಷಮೆಯಾಚಿಸಿದ ರಾಜಮೌಳಿ

ಯಾಕೆ ಅದೇ ದಿನ ಸಿನಿಮಾ ರಿಲೀಸ್​ ಕಾರಣ ಕೊಟ್ಟ ಆಮಿರ್​ ಖಾನ್

ತಾನು ಯಶ್‌ ಅವರ ಅಭಿಮಾನಿ, ಮೊದಲ ದಿನವೇ ಕೆಜಿಎಫ್‌ 2 ಸಿನಿಮಾ ನೋಡ್ತೀನಿ ಅನ್ನುವ ಮೂಲಕ ಅಗಾಧ ಸಂಖ್ಯೆಯಲ್ಲಿರುವ ಯಶ್‌ ಫ್ಯಾನ್ಸ್ ವಿಶ್ವಾಸ ಗಳಿಸುವ ಪ್ರಯತ್ನವನ್ನು ಆಮಿರ್​ ಖಾನ್​ ಮಾಡಿದ್ದಾರೆ. ಜೊತೆಗೆ ಅದೇ ದಿನ ತನ್ನ ಸಿನಿಮಾ ಯಾಕೆ ರಿಲೀಸ್‌ ಮಾಡಬೇಕು ಅನ್ನೋದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. 'ಲಾಲ್‌ ಸಿಂಗ್ ಚಡ್ಡಾ'ದಲ್ಲಿ ಮೊದಲ ಬಾರಿ ಸಿಖ್ಖ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಬೈಸಾಕಿಯ ದಿನ ಸಿಖ್ಖರಿಗೆ ಬಹಳ ವಿಶೇಷ. ಹೀಗಾಗಿ ಆ ಒಳ್ಳೆಯ ದಿನವೇ ಚಿತ್ರ ಬಿಡುಗಡೆ ಮಾಡಬೇಕು ಅಂದುಕೊಂಡಿರುವೆ' ಎಂದಿದ್ದಾರೆ. ಇನ್ನೂ ಯಶ್​ಗೂ ಕರೆ ಮಾಡಿ ಇದೇ ವಿಚಾರ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಕನ್ನಡದಲ್ಲಿ ದೀಪಿಕಾ ಪಡುಕೋಣೆ ಚಿತ್ರ ಬರ್ತಿದೆ, ಇದೇ ವರ್ಷ ರಿಲೀಸ್!

ಏಪ್ರಿಲ್​ 14ಕ್ಕೆ ಬಾಕ್ಸ್​ ಆಫೀಸ್​ ಕ್ಲ್ಯಾಷ್!

ಯಶ್ ನಟನೆ 'ಕೆಜಿಎಫ್: ಚಾಪ್ಟರ್ 2' ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನೂರಾರು ಕೋಟಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಬಾಲಿವುಡ್‌ನಲ್ಲೂ 'ಕೆಜಿಎಫ್ 2' ಬಗ್ಗೆ ದೊಡ್ಡ ಹೈಪ್ ಕ್ರಿಯೇಟ್ ಆಗಿದೆ. ಆಮಿರ್ ಖಾನ್‌ರ ಬಹುನಿರೀಕ್ಷಿತ 'ಲಾಲ್ ಸಿಂಗ್ ಛಡ್ಡಾ' ಸಿನಿಮಾವು ಏ.14ರಂದು ತೆರೆಗೆ ಬರಲಿರುವುದರಿಂದ ದೊಡ್ಡ ಬಾಕ್ಸ್ ಆಫೀಸ್ ಕ್ಲ್ಯಾಷ್ ಉಂಟಾಗಲಿದೆ.
Published by:Vasudeva M
First published: