Kareena Kapoorಗಾಗಿ 25,000 ರೂ ಸೀರೆ ಖರೀದಿಸಿದ Aamir Khan, ವಿಡಿಯೋ ನೋಡಿ

ಈ ವಿಡಿಯೊದಲ್ಲಿ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಒಟ್ಟಿಗೆ ಸೀರೆ ಮಳಿಗೆಯೊಂದಕ್ಕೆ ಭೇಟಿ ನೀಡಿರುವ  ದೃಶ್ಯ ಸೆರೆಯಾಗಿದೆ.

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬಾಲಿವುಡ್‌ನ ಮಿ. ಪರ್ಫೆಕ್ಷನಿಸ್ಟ್ (Perfectionist) ಎಂದೇ ಖ್ಯಾತರಾಗಿರುವ ಅಮೀರ್ ಖಾನ್(Aamir Khan) , ಯಾವುದಾದರೂ ವಿಷಯದ ಕುರಿತು ಚಿತ್ರ ನಿರ್ಮಿಸುವಾಗ ಅತಿ ಸೂಕ್ಷ್ಮ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಲ್ಲದೆ ಅವರು ಉದ್ಯಮದ ಹಲವಾರು ಮಂದಿಯೊಂದಿಗೆ ಉತ್ತಮ ಸೌಹಾರ್ದ ಸಂಬಂಧ ಹೊಂದಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಅವರು 25,000 ರೂ. ಮೌಲ್ಯದ ಸೀರೆಯೊಂದನ್ನು ಕರೀನಾ ಕಪೂರ್ ಖಾನ್ (Kareena Kapoor Khan) ಅವರಿಗೆ ಉಡುಗೊರೆ (Gifted) ನೀಡಿದ್ದಾರೆ..!

ಈ ವರ್ಷ ತೆರೆಗೆ
ಚಲನಚಿತ್ರ ನಿರ್ಮಾಣದ ಸಂದರ್ಭದಲ್ಲಿ ಅಮೀರ್ ಖಾನ್ ಚಿತ್ರಕತೆಯಿಂದ ಮೊದಲ್ಗೊಂಡು ನಿರ್ಮಾಣೋತ್ತರ ಚಟುವಟಿಕೆಗಳವರೆಗೆ ಮೇಲುಸ್ತುವಾರಿ ನಡೆಸುತ್ತಾರೆ. 2021ರಲ್ಲಿ ಲಾಲ್ ಸಿಂಗ್ ಚಡ್ಡಾ ಕುರಿತು ನಿರ್ಮಿಸಲಾಗಿರುವ ಚಿತ್ರವೊಂದರಲ್ಲಿ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಜೋಡಿಯಾಗಿ ಕಾಣಿಸಿಕೊಂಡು, ಆ ಚಿತ್ರ ಈ ವರ್ಷ ತೆರೆ ಕಾಣಲಿದೆ.

ಈ ಚಿತ್ರದ ಕೆಲವು ಭಾಗಗಳನ್ನು ಮಧ್ಯಪ್ರದೇಶ ಮುಖ್ಯವಾಗಿ ಗ್ವಾಲಿಯರ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಇಬ್ಬರು ನಟರ ನಡುವೆಯೂ ಉತ್ತಮ ಹೊಂದಾಣಿಕೆಯಿತ್ತು ಹಾಗೂ ಹೆಚ್ಚು ಪರಸ್ಪರ ತಮಾಷೆ ಮಾಡಿಕೊಳ್ಳುತ್ತಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ತೆಗೆದಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Year Ender 2021: ಈ ವರ್ಷ ವಿಚ್ಚೇದನ ಪಡೆದು ದೂರಾದ ಸೆಲೆಬ್ರಿಟಿಗಳು ಇವ್ರೆ ನೋಡಿ..!

ಕರೀನಾಗಾಗಿ ಪ್ಯಾಕ್ ಮಾಡಿ
ಈ ವಿಡಿಯೊದಲ್ಲಿ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಒಟ್ಟಿಗೆ ಸೀರೆ ಮಳಿಗೆಯೊಂದಕ್ಕೆ ಭೇಟಿ ನೀಡಿರುವ  ದೃಶ್ಯ ಸೆರೆಯಾಗಿದೆ. ಅಮೀರ್ ಖಾನ್ ಬೆಳ್ಳಿ ಹಾಗೂ ಕಪ್ಪು ಬಣ್ಣ ಹೊಂದಿರುವ ಸೀರೆಯೊಂದನ್ನು ಆಯ್ಕೆ ಮಾಡಿ, ಅದರ ಬೆಲೆಯನ್ನು ಅಂಗಡಿ ಕೆಲಸಗಾರನ ಬಳಿ ವಿಚಾರಿಸುತ್ತಾರೆ. ಆಗ ಆತ,  ಈ ಸೀರೆಯ ಬೆಲೆ 6.500 ರೂ. ಎಂದು ಉತ್ತರಿಸುತ್ತಾನೆ. ಅದಕ್ಕೆ ಅಮೀರ್ ಖಾನ್ ಈ ಸೀರೆಯನ್ನು ಕರೀನಾಗಾಗಿ ಪ್ಯಾಕ್ ಮಾಡಿ ಎಂದು ಸೂಚಿಸುತ್ತಾರೆ.

ವಿಡಿಯೋ ನೋಡಿ:




ಸೀರೆಯ ಬೆಲೆ ಅಷ್ಟೇ ಸಾರ್
ಈ ಕತೆಯ ಕೊನೆಯಲ್ಲಿ ಒಂದು ತಿರುವಿದೆ. ಅಂಗಡಿ ಕೆಲಸಗಾರನಿಗೆ ತಾನು ಈ ಸೀರೆಯನ್ನು 6,500 ರೂ.ಗೆ ಖರೀದಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಅಂಗಡಿ ಕೆಲಸಗಾರ, “ಸೀರೆಯ ಬೆಲೆ ಅಷ್ಟೇ ಸಾರ್” ಎನ್ನುತ್ತಾನೆ. ಆಗ ಅಮೀರ್ ಖಾನ್ ನಾನು ಈ ಸೀರೆಯನ್ನು 25,000 ರೂ. ಬೆಲೆಗೆ ಖರೀದಿಸುತ್ತೇನೆ. ಈ ಬೆಲೆಯು ಮಾರುಕಟ್ಟೆ ದರವಾಗಿರುತ್ತದೆ ಎಂದು ಹೇಳುತ್ತಾರೆ. ನಂತರ ಆ ಸೀರೆಯನ್ನು ಖರೀದಿಸುವ ಅಮೀರ್ ಖಾನ್, ಅದನ್ನು ಕರೀನಾ ಕಪೂರ್ ಅವರಿಗೆ ಉಡುಗೊರೆ ನೀಡುವುದನ್ನು ಕಂಡು ಸ್ತಂಭೀಭೂತರಾಗುತ್ತಾರೆ. ಈ ವಿಡಿಯೋವನ್ನು ಕರೀನಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.

ಚಿನ್ನದಂಥ ಹೃದಯದ ವ್ಯಕ್ತಿ
ಈ ಸೀರೆಯನ್ನು ಖರೀದಿಸಿದ ನಂತರ ಅಮೀರ್ ಖಾನ್, ಅದರ ಮೇಲಿನ ಕರಕುಶಲ ಕಲೆಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. “ಬಹುತ್ ಅಚ್ಚಿ ಡಿಸೈನ್ ಹೈ (ತುಂಬಾ ಒಳ್ಳೆಯ ವಿನ್ಯಾಸ)” ಎಂದು ಅವರು ಹೊಗಳುತ್ತಾರೆ. ನಂತರ ಆ ಸೀರೆ ಮಳಿಗೆಯ ಕೆಲಸಗಾರ, ತಾನು ಈ ಸೀರೆಯನ್ನು 15 ದಿನಗಳೊಳಗಾಗಿ ತಯಾರಿಸಿದೆ ಎಂದು ಹೇಳುತ್ತಾನೆ. ವಿಡಿಯೋದಲ್ಲಿ ಕರೀನಾ ಸೀರೆ ಉಡುತ್ತಿರುವುದು ಕಂಡು ಬರುತ್ತದೆ. ಈ ವಿಡಿಯೋವೈರಲ್ ಆಗುತ್ತಿದ್ದಂತೆಯೆ ಒಬ್ಬ ವ್ಯಕ್ತಿ “ಅಮೀರ್ ಖಾನ್ ಚಿನ್ನದಂಥ ಹೃದಯದ ವ್ಯಕ್ತಿ” ಎಂದು ಪ್ರಶಂಸಿಸಿದ್ದರೆ, ಮತ್ತೊಬ್ಬ ವ್ಯಕ್ತಿ ಅವರನ್ನು “ಮಿ. ಪರ್ಫೆಕ್ಷನಿಸ್ಟ್” ಎಂದು ಹೊಗಳಿದ್ದಾರೆ.

ಇದನ್ನೂ ಓದಿ: Bollywood: ಕರೀನಾ ಮತ್ತು ಕೊರೋನಾ ಬಗ್ಗೆ ಮಾತನಾಡಿದ ಅಮೀರ್ ಖಾನ್

ಅಮೀರ್ ಖಾನ್ ಕರಕುಶಲ ವಸ್ತುಗಳು ಸ್ವದೇಶಿ ನಿರ್ಮಿತ ವಸ್ತ್ರಗಳನ್ನು ಹೆಚ್ಚು ಇಷ್ಟಪಡುವುದು ಜನಜನಿತ ವಿಚಾರವಾಗಿದೆ. ಅವರು ಆ ಸೀರೆಯನ್ನು ಸ್ಥಳೀಯ ಕಲೆ ಹಾಗೂ ಕುಶಲಕಲೆಯನ್ನು ಉತ್ತೇಜಿಸುವ ಸಲುವಾಗಿ ಖರೀದಿಸಿದರು ಎಂದು ವರದಿಗಳು ಹೇಳಿವೆ.
Published by:vanithasanjevani vanithasanjevani
First published: