Amir Khan: ಕಿರಣ್ ರಾವ್ ಜೊತೆಗಿನ ವಿಚ್ಛೇದನದ ಹಿಂದೆ ಮೂರನೆಯಾಕೆ ಇದ್ದಾಳಾ? ಮೌನ ಮುರಿದ ಆಮೀರ್!

ತಮ್ಮ ಮಾಜಿ ಪತ್ನಿ ರೀನಾ ದತ್ತಾ ಬಗ್ಗೆ ಮಾತಾಡುತ್ತಾ ಆಮಿರ್ ಅವರು “ಕಿರಣ್ ಅವರ ಕಾರಣದಿಂದಾಗಿ ರೀನಾ ಅವರಿಂದ ಬೇರ್ಪಡಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಜೀವನದಲ್ಲಿ ಎರಡನೇ ಮಹಿಳೆ ಇಲ್ಲ, ಆಗಲೂ ಯಾರೂ ಇರಲಿಲ್ಲ ಮತ್ತು ಈಗಲೂ ಯಾರೂ ಇಲ್ಲ" ಎಂದು ಸ್ಪಷ್ಟವಾಗಿ ಹೇಳಿದರು.

ಅಮೀರ್ ಖಾನ್-ಕಿರಣ್ ರಾವ್

ಅಮೀರ್ ಖಾನ್-ಕಿರಣ್ ರಾವ್

  • Share this:
ನಿನ್ನೆ ತಾನೇ ಬಾಲಿವುಡ್‌ ನ 'ಮಿಸ್ಟರ್ ಪರ್ಫೆಕ್ಷನಿಸ್ಟ್‌' ಎಂದು ಹೆಸರು ಪಡೆದ ಆಮಿರ್ ಖಾನ್ (Amir Khan)‌ ಅವರು ತಮ್ಮ 57ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡಿದ್ದು ಅವರೆಲ್ಲಾ ಅಭಿಮಾನಿಗಳಿಗೆ ಗೊತ್ತಿರುವ ವಿಚಾರವೇ ಆಗಿರುತ್ತದೆ. ಅವರ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂತು ಎಂದು ಹೇಳಬಹುದು. ಇದೇ ಸಂದರ್ಭದಲ್ಲಿ ನಟ ಆಮಿರ್ ಖಾನ್ ತನ್ನ ಪತ್ನಿ ಕಿರಣ್ ರಾವ್ (Kiran Rao) ಅವರೊಂದಿಗಿನ ವಿಚ್ಛೇದನದ ಬಗ್ಗೆ ಮತ್ತು ಅವರ ವೈವಾಹಿಕ ಜೀವನದ (Marital Life) ಸುತ್ತಲೂ ಎದ್ದಿರುವ ಅನೇಕ ವದಂತಿಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದರು ಎಂದು ಹೇಳಲಾಗುತ್ತಿದೆ. ನ್ಯೂಸ್18 ಗೆ ನೀಡಿದ ಸಂದರ್ಶನವೊಂದರಲ್ಲಿ ಆಮಿರ್ ಖಾನ್ ಅವರು ಪತ್ನಿ ಕಿರಣ್ ರಾವ್ ಅವರೊಂದಿಗಿನ ವಿಚ್ಛೇದನದ ಬಗ್ಗೆ ಮೌನ ಮುರಿದು ಮಾತನಾಡಿ ಏನು ಹೇಳಿದರು ನೋಡಿ.

ಆಮಿರ್ "ಕಿರಣ್ ಮತ್ತು ನಾನು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾವು ಪರಸ್ಪರರ ಬಗ್ಗೆ ಸಾಕಷ್ಟು ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದೇವೆ. ಆದರೆ ಜನರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಮತ್ತು ನಾವು ವಾಸ್ತವವಾಗಿ, ನಾವು ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತೇವೆ ಮತ್ತು ನಿಜವಾದ ಅರ್ಥದಲ್ಲಿ ಪರಸ್ಪರ ಕುಟುಂಬವನ್ನು ನಮ್ಮ ಕುಟುಂಬ ಎಂದು ಪರಿಗಣಿಸುತ್ತೇವೆ” ಎಂದು ಹೇಳಿದರು.

ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ

“ಆದರೆ ಗಂಡ ಹೆಂಡತಿಯ ನಮ್ಮ ಸಂಬಂಧದಲ್ಲಿ ಕೆಲವು ಬದಲಾವಣೆಗಳು ಆದವು ಮತ್ತು ನಾವು ಮದುವೆ ಎಂಬ ಈ ವ್ಯವಸ್ಥೆಯನ್ನು ಗೌರವಿಸಲು ಬಯಸಿದ್ದೇವೆ. ಆದಾಗ್ಯೂ, ನಾವು ಯಾವಾಗಲೂ ಪರಸ್ಪರರ ಪಕ್ಕದಲ್ಲಿರುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾವು ಹತ್ತಿರದಲ್ಲಿ ವಾಸಿಸುತ್ತಿದ್ದೇವೆ. ಆದರೆ ನಾವು ಇನ್ನು ಮುಂದೆ ಗಂಡ ಹೆಂಡತಿಗಳಲ್ಲ ಮತ್ತು ಅದಕ್ಕಾಗಿಯೇ ನಾವು ವಿಚ್ಛೇದನೆ ಪಡೆಯಲು ನಿರ್ಧರಿಸಿದೆವು" ಎಂದು ಆಮಿರ್ ಹೇಳಿದರು.

ಎರಡನೇ ಮಹಿಳೆ ನನ್ನ ಲೈಫ್​ನಲ್ಲಿಲ್ಲ

ತಮ್ಮ ಮಾಜಿ ಪತ್ನಿ ರೀನಾ ದತ್ತಾ ಬಗ್ಗೆ ಮಾತಾಡುತ್ತಾ ಆಮಿರ್ ಅವರು “ಕಿರಣ್ ಅವರ ಕಾರಣದಿಂದಾಗಿ ರೀನಾ ಅವರಿಂದ ಬೇರ್ಪಡಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಜೀವನದಲ್ಲಿ ಎರಡನೇ ಮಹಿಳೆ ಇಲ್ಲ, ಆಗಲೂ ಯಾರೂ ಇರಲಿಲ್ಲ ಮತ್ತು ಈಗಲೂ ಯಾರೂ ಇಲ್ಲ" ಎಂದು ಸ್ಪಷ್ಟವಾಗಿ ಹೇಳಿದರು.

ರೀನಾ ದತ್ತಾ ಜೊತೆ 16 ವರ್ಷ ಸಂಸಾರ

ಕಿರಣ್ ರಾವ್ ಅವರನ್ನು ಆಮಿರ್ ಮದುವೆಯಾಗುವ ಮುಂಚೆ ರೀನಾ ದತ್ತಾ ಅವರೊಂದಿಗೆ 16 ವರ್ಷ ಸಂಸಾರವನ್ನು ನಡೆಸಿದ್ದರು ಮತ್ತು ಈ ದಂಪತಿಗಳಿಗೆ ಜುನೈದ್ ಎಂಬ ಮಗ ಮತ್ತು ಇರಾ ಎಂಬ ಮಗಳು ಇದ್ದಾರೆ.

ಮಗ ಆಜಾದ್ ರಾವ್ ಖಾನ್

ಆಮಿರ್ ಖಾನ್ ಮತ್ತು ಕಿರಣ್ ರಾವ್ ಡಿಸೆಂಬರ್ 28, 2005 ರಂದು ವಿವಾಹವಾದರು. ಅವರು ‘ಲಗಾನ್’ ಚಿತ್ರದ ಸೆಟ್ ನಲ್ಲಿ ಅಶುತೋಷ್ ಗೋವರಿಕರ್ ಗೆ ಸಹಾಯಕ ನಿರ್ದೇಶಕರಾಗಿದ್ದರು. ಡಿಸೆಂಬರ್ 5, 2011 ರಂದು ಇವರಿಬ್ಬರು ಬಾಡಿಗೆ ತಾಯ್ತನದ ಮೂಲಕ ತಮ್ಮ ಮಗ ಆಜಾದ್ ರಾವ್ ಖಾನ್ ಅವರ ಜನನವನ್ನು ಘೋಷಿಸಿದರು.

ಇದನ್ನೂ ಓದಿ: PV Sindhu: ಸ್ಪೋರ್ಟ್ಸ್​ಗೂ ಸೈ- ಡ್ಯಾನ್ಸ್​ಗೂ ಜೈ.. ಮೊನ್ನೆ ಕಚ್ಚಾ ಬಾದಾಮ್​, ಈಗ ತಮಿಳು ಸಾಂಗ್​ಗೆ ಸಿಂಧು ಸ್ಟೆಪ್ಸ್​!

ಈ ದಂಪತಿಗಳು ಜುಲೈ 3, 2021 ರಂದು ಜಂಟಿ ಹೇಳಿಕೆಯನ್ನು ನೀಡುವುದರೊಂದಿಗೆ ತಾವಿಬ್ಬರೂ ಬೇರ್ಪಡುವಿಕೆಯನ್ನು ಘೋಷಿಸಿದರು, ಅವರಿಬ್ಬರು ಒಟ್ಟಿಗೆ 15 ವರ್ಷ ಸಂಸಾರ ಮಾಡಿದ್ದಾರೆ. ಆಮಿರ್ ಮತ್ತು ಕಿರಣ್ ತಮ್ಮ ಮಗ ಆಜಾದ್ ರಾವ್ ಖಾನ್ ಗೆ ಸಹ-ಪೋಷಕರಾಗಿ ಮುಂದುವರಿಯಲಿದ್ದಾರೆ ಮತ್ತು ವೃತ್ತಿಪರ ವಲಯದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

ಇದನ್ನೂ ಓದಿ: Shama Sikander: ಅಮೆರಿಕ ಹುಡುಗನ ಜೊತೆ ಸಪ್ತಪದಿ ತುಳಿದ ನಟಿ ಶಮಾ ಸಿಕಂದರ್!

ಇನ್ನೂ ಚಲನ ಚಿತ್ರಗಳ ವಿಷಯಕ್ಕೆ ಬಂದಾಗ, ಆಮಿರ್ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಇದರಲ್ಲಿ ನಟಿ ಕರೀನಾ ಕಪೂರ್ ಖಾನ್, ಮೋನಾ ಸಿಂಗ್ ಮತ್ತು ತೆಲುಗಿನ ನಟ ನಾಗ ಚೈತನ್ಯ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಸೀಕ್ರೆಟ್ ಸೂಪರ್ ಸ್ಟಾರ್ ಖ್ಯಾತಿಯ ಅದ್ವೈತ್ ಚಂದನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
Published by:Divya D
First published: