Aamir Khan: ಮೋನಾ ಸಿಂಗ್ ಬಗ್ಗೆ ಟೀಕೆ ಮಾಡಿದವರಿಗೆ ಆಮಿರ್ ಕ್ಲಾಸ್​, ಆಕೆಯ ಕೆಲಸ ಹಾಳು ಮಾಡಬೇಡಿ ಎಂದ ನಟ

Laal Singh Chaddha: ಈ ಚಿತ್ರದಲ್ಲಿ ಆಮಿರ್​ ಖಾನ್​  ಲಾಲ್ ಸಿಂಗ್ ಚಡ್ಡಾ ಆಗಿ ಕಾಣಿಸಿಕೊಂಡಿದ್ದು,  ಮೋನಾ ಅವರ ತಾಯಿ ಶ್ರೀಮತಿ ಚಡ್ಡಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಮಿರ್ ಖಾನ್​

ಆಮಿರ್ ಖಾನ್​

  • Share this:
ನಟ ಆಮಿರ್​ ಖಾನ್ (Aamir Khan) ಅವರು ತಮ್ಮ ಮುಂದಿನ ಸಿನಿಮಾ ಲಾಲ್ ಸಿಂಗ್ ಚಡ್ಡಾದಲ್ಲಿ (Laal Singh Chaddha) ತಮ್ಮ ವಯಸ್ಸಿನ ಅಂತರದ ಹೊರತಾಗಿಯೂ ನಟಿ ಮೋನಾ ಸಿಂಗ್ ಅವರು ತಾಯಿಯ ಪಾತ್ರವನ್ನು ಮಾಡಿರುವ ಬಗ್ಗೆ ಹಲವಾರು ಜನರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ. 40 ವರ್ಷದ ಮೋನಾ ಸಿಂಗ್ (Mona Singh) 57 ವರ್ಷದ ಆಮಿರ್​ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೋನಾ ಅವರು ಚಿತ್ರದಲ್ಲಿ ಅದ್ಬುತವಾಗಿ ನಟಿಸಿದ್ದಾರೆ ಮತ್ತು ವಯಸ್ಸಿನ ಆಧಾರದ ಮೇಲೆ ಅವರನ್ನು ಪ್ರಶ್ನಿಸುವುದು ಅನ್ಯಾಯ ಎಂದಿರುವ ಆಮಿರ್​ ಖಾನ್​, ಮೋನಾ ಅವರ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಶ್ನೆಗಳ ಸುರಿಮಳೆ ಸುರಿದ ಆಮಿರ್ ಖಾನ್​

ಈ ಚಿತ್ರದಲ್ಲಿ ಆಮಿರ್​ ಖಾನ್​  ಲಾಲ್ ಸಿಂಗ್ ಚಡ್ಡಾ ಆಗಿ ಕಾಣಿಸಿಕೊಂಡಿದ್ದು,  ಮೋನಾ ಅವರ ತಾಯಿ ಶ್ರೀಮತಿ ಚಡ್ಡಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಲನಚಿತ್ರವು ಅಕಾಡೆಮಿ ಪ್ರಶಸ್ತಿ ವಿಜೇತ 1994 ರ ಚಲನಚಿತ್ರ ಫಾರೆಸ್ಟ್ ಗಂಪ್‌ನ ರಿಮೇಕ್ ಆಗಿದ್ದು, ಇದರಲ್ಲಿ ಟಾಮ್ ಹ್ಯಾಂಕ್ಸ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ಆಮಿರ್​, ನಾನು ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ, ಒಬ್ಬ ನಟನಾಗಿ, ಸೃಜನಶೀಲ ವ್ಯಕ್ತಿಯಾಗಿ, ನಾನು 103 ಅನ್ನು ನೋಡುತ್ತಿದ್ದೇನೆ, ಅದು ನನ್ನ ಕೆಲಸ. ಅಲ್ಲದೇ ಪಾತ್ರ ಮಾಡಲು ನನ್ನ ವಯಸ್ಸು ಏಕೆ ಸೂಕ್ತವಲ್ಲ? ನನಗೆ 57 ವರ್ಷ  ಆಗಿರುವುದರಿಂದಲಾ? ಇದರ ಹಿಂದಿನ ಲಾಜಿಕ್​ ಏನು? ನಟನೆ ಮಾಡಲು ಹಾಗಾದ್ರೆ ಯಾವ ವಯಸ್ಸು ಸೂಕ್ತ? ನಟ ಯಾವುದೇ ವಯಸ್ಸಿನವರಾಗಿದ್ದರೂ ಪಾತ್ರಕ್ಕೆ ತಕ್ಕಂತೆ ನಟಿಸುವುದು ಬಹಳ ಮುಖ್ಯ ಎಂದಿದ್ದಾರೆ.

Aamir Khan requests people Please do not boycott my Laal Singh Chaddha

ನೀವು ಈ ರೀತಿ ಮಾತನಾಡುತ್ತಿರುವುದು ಸರಿಯಲ್ಲ, ಮೋನಾ ಅದ್ಭುತವಾಗಿ ನಟಿಸಿದ್ದಾರೆ. ಅವರನ್ನು ಸಿನಿಮಾದಲ್ಲಿ ನೋಡಿದಾಗ ನಿಮಗೆ ಅವರು ಯಂಗ್ ಆಗಿಯೂ ಕಾಣುತ್ತಾರೆ, ಹಾಗೂ ವಯಸ್ಸಾದಂತೆ ಸಹ ಕಾಣುತ್ತಾರೆ. ಇದು ಅವರ ಕಲೆ. ನೀವು ಅವರ ಒಳ್ಳೆಯ ಕೆಲಸವನ್ನು ಕಸಿದುಕೊಳ್ಳುತ್ತಿದ್ದೀರಿ. ಇದು ತಪ್ಪು, ನಾನು ಅವರ ಜಾಗದಲ್ಲಿ ಇದ್ದಿದ್ದರೆ ನಾನು ತುಂಬಾ ವಿಚಲಿತನಾಗಿರುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸುದೀಪ್ ಹಿಂದಿ ಕಲಿತಿದ್ದು ಇವರಿಂದ ಅಂತೆ, ಅಜಯ್ ದೇವಗನ್ ಜೊತೆ ಟ್ವಿಟ್​ ವಾರ್​ ಬಗ್ಗೆ ಕಿಚ್ಚ ಹೇಳಿದ್ದೇನು?

ಇನ್ನು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾವನ್ನು ಬಾಯ್​ಕಾಟ್​ ಮಾಡುವ ಬಗ್ಗೆ ಅಭಿಯಾನ ಸಹ ನಡೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಅಮೀರ್ ಭಾರತದ ಬಗ್ಗೆ ಮಾಡಿದ ಕಾಮೆಂಟ್‌ಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಈ ಸಿನಿಮಾವನ್ನು ನೋಡದಂತೆ ಬೈಕಾಟ್​ ಮಾಡುವಂತೆ ಕರೆ ನೀಡುತ್ತಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್​ ಸಹ ನಟಿಸಿದ್ದಾರೆ.   ರಾಬರ್ಟ್ ಝೆಮೆಕಿಸ್ ಅವರ 1994 ರ ಚಲನಚಿತ್ರದಲ್ಲಿ ಟಾಮ್ ಹ್ಯಾಂಕ್ಸ್ ನಿರ್ವಹಿಸಿದ ಸರಳ, ದಯೆಯ ವ್ಯಕ್ತಿಯ ಪಾತ್ರದಲ್ಲಿ ಆಮಿರ್​  ಖಾನ್​ ಕಾಣಿಸಿಕೊಂಡಿದ್ದು, ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ, ಸಿನಿಮಾ ಬಹಿಷ್ಕಾರ ಮಾಡುವ ಅಭಿಯಾನದ ಬಗ್ಗೆ ಆಮಿರ್​ ಅವರನ್ನು ಪ್ರಶ್ನೆ ಮಾಡಿದಾಗ, 'ದಯವಿಟ್ಟು ನನ್ನ ಚಿತ್ರವನ್ನು ಬಹಿಷ್ಕರಿಸಬೇಡಿ' ಎಂದು ಕೇಳಿಕೊಂಡಿದ್ದಾರೆ.

Actor Aamir Khan starrer Lal Singh Chhadda is a film release put forward by Cinema

2015 ರಲ್ಲಿ ಆಮಿರ್​ ಖಾನ್ ಸಂದರ್ಶನವೊಂದರಲ್ಲಿ, "ನಮ್ಮ ದೇಶವು ತುಂಬಾ ಸಹಿಷ್ಣು ದೇಶ, ಆದರೆ ಕೆಟ್ಟದ್ದನ್ನು ಹರಡುವ ಜನರಿದ್ದಾರೆ" ಎಂದು ಹೇಳಿದ್ದರು. ಅಲ್ಲದೇ, ಅವರ ಪತ್ನಿ ಕಿರಣ್ ರಾವ್ ಅವರು ತಮ್ಮ ಮಕ್ಕಳ ಸುರಕ್ಷತೆಗಾಗಿ ದೇಶವನ್ನು ಬಿಡಲು ಯೋಚಿಸಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದರು.

ಇದನ್ನೂ ಓದಿ: ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಮೇಘನಾ ರಾಜ್​, ಈ ಗೌರವಕ್ಕೆ ಪಾತ್ರರಾದ ಕನ್ನಡದ ಮೊದಲ ನಟಿ

ಆಮಿರ್​ ಖಾನ್ ಪ್ರೊಡಕ್ಷನ್ಸ್, ಕಿರಣ್ ರಾವ್ ಮತ್ತು Viacom 18 ಸ್ಟುಡಿಯೋಸ್ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಮೋನಾ ಸಿಂಗ್ ಮತ್ತು ಚೈತನ್ಯ ಅಕ್ಕಿನೇನಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
Published by:Sandhya M
First published: