ನಟಿ ಕಂಗನಾ ರನೌತ್ (Kangana Ranaut) ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ (bollywood Actress). ಹೌದು, ತನ್ನ ನೇರವಾದ ಮತ್ತು ದಿಟ್ಟವಾದ ಮಾತುಗಳಿಂದ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ ಕಂಗನಾ. ಈಗ ಮತ್ತೊಮ್ಮೆ ಅವರು ಸುದ್ದಿಯಲ್ಲಿರುವುದು ತಮ್ಮ ಹಳೆಯ ಸ್ನೇಹಿತ ಮತ್ತು ಮೆಂಟರ್ ಅಂತ ಒಬ್ಬ ಜನಪ್ರಿಯ ನಟನ ಹೆಸರು ಹೇಳಿದ್ದಕ್ಕೆ. ಮಂಗಳವಾರ ಎಂದರೆ ಏಪ್ರಿಲ್ 18ನೇ ತಾರೀಖು ನಟಿ ಕಂಗನಾ ನಟ ಅಮೀರ್ ಖಾನ್ (Amir Khan) ಅವರ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ (Social Media) ಆಘಾತಕಾರಿ ಹೇಳಿಕೆವೊಂದನ್ನು ಪೋಸ್ಟ್ ಮಾಡಿದ್ದಾರೆ ನೋಡಿ.
ಅಮೀರ್ ಖಾನ್ ಅವರ 'ಸತ್ಯಮೇವ ಜಯತೆ' ಕಾರ್ಯಕ್ರಮದ ಒಂದು ಎಪಿಸೋಡ್ ನ ವಿಡಿಯೋ ಹಂಚಿಕೊಂಡು ಕಂಗನಾ ಅವರು ಅಮೀರ್ ಖಾನ್ ನನಗೆ 'ಒಳ್ಳೆಯ ಸ್ನೇಹಿತ' ಮತ್ತು 'ಮೆಂಟರ್’ ಅಂತ ಹೇಳಿಕೊಂಡಿದ್ದಾರೆ.
ಅಮೀರ್ ಖಾನ್ ಬಗ್ಗೆ ಇನ್ನೇನೆಲ್ಲಾ ಹೇಳಿಕೊಂಡಿದ್ದಾರೆ ನಟಿ ಕಂಗನಾ?
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ ಅವರು "ಕೆಲವೊಮ್ಮೆ ನಾನು, ಅಮೀರ್ ನನ್ನ ಉತ್ತಮ ಸ್ನೇಹಿತರಾಗಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಆ ದಿನಗಳು ಎಲ್ಲಿ ಮಾಯವಾದವು ಅಂತ ನನಗೆ ಆಶ್ಚರ್ಯವಾಗುತ್ತದೆ.
ಇದನ್ನೂ ಓದಿ: ಮೈತುಂಬಾ ಬಟ್ಟೆ ಯಾವಾಗ ಹಾಕ್ತೀರಿ ಎಂದ ನೆಟ್ಟಿಗರು! ಕ್ರಾಪ್ ಟಾಪ್ ಧರಿಸಿ ಉರ್ಫಿ ಕ್ಯಾಟ್ ವಾಕ್
ಒಂದು ವಿಷಯವೆಂದರೆ ಅವರು ನನಗೆ ತುಂಬಾ ವಿಷಯಗಳಲ್ಲಿ ಮಾರ್ಗದರ್ಶನ ನೀಡಿದ್ದಾರೆ ಮತ್ತು ನಾನು ನನ್ನ ಜೀವನದಲ್ಲಿ ಬಹಳಷ್ಟು ಆಯ್ಕೆಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿದ್ದಾರೆ. ಆದರೆ ಹೃತಿಕ್ ನನ್ನ ಮೇಲೆ ಕಾನೂನು ಮೊಕದ್ದಮೆಯನ್ನು ಹೂಡಿದ ನಂತರ ಅಮೀರ್ ತಮ್ಮ ನಿಷ್ಠೆಯನ್ನು ಸ್ಪಷ್ಟಪಡಿಸಿದ್ದಾರೆ. ಈಗ ಇಡೀ ಉದ್ಯಮದ ವಿರುದ್ಧ ಕೇವಲ ಒಬ್ಬ ಮಹಿಳೆ ಅನ್ನೋ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದರು.
ಎಮರ್ಜೆನ್ಸಿ ಚಿತ್ರದ ನಟಿ ಕಂಗನಾ ತಾನು ಮತ್ತು ಹೃತಿಕ್ ಸಂಬಂಧದಲ್ಲಿದ್ದೆವು ಎಂದು ಹೇಳಿಕೊಂಡಿದ್ದು, ಹೃತಿಕ್ ತನ್ನ ವಾದವನ್ನು ವಿರೋಧಿಸುತ್ತಾನೆ. 2016 ರಲ್ಲಿ, ಹೃತಿಕ್ ಕಂಗನಾ ವಿರುದ್ಧ ಕೇಸ್ ದಾಖಲಿಸಿದರು ಮತ್ತು ನಂತರ ಅವರು ಸಾರ್ವಜನಿಕ ವಲಯದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದರು.
ಐಟಂ ಸಾಂಗ್ ಗಳ ಬಗ್ಗೆ ಏನ್ ಹೇಳಿದ್ರು ನಟಿ ಕಂಗನಾ?
ಕಂಗನಾ ಹಂಚಿಕೊಂಡ ವಿಡಿಯೋದ ಬಗ್ಗೆ ಮಾತನಾಡುತ್ತಾ, ಅವರು 'ಐಟಂ ಹಾಡುಗಳ' ವಿರುದ್ಧದ ತಮ್ಮ ನಿಲುವಿನ ಬಗ್ಗೆ ಮತ್ತು 3-4 ವರ್ಷಗಳಲ್ಲಿ ಅವರು ಆರು ಐಟಂ ಹಾಡುಗಳನ್ನು ಹೇಗೆ ನಿರಾಕರಿಸಿದರು ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಈ ಕ್ಲಿಪ್ ನಲ್ಲಿ ನಟಿ ಕಂಗನಾ "ಸ್ನೇಹಿತನ ಮಗಳು ಅಶ್ಲೀಲ ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಪೂರ್ವಾಭ್ಯಾಸ ಮಾಡುತ್ತಿದ್ದಳು. ಅವಳು ಮುದ್ದಾಗಿ ಕಾಣುತ್ತಿದ್ದರೂ, ಅವಳು ಅದನ್ನು ಜನರ ಚಪ್ಪಾಳೆಗಾಗಿ ಮತ್ತೆ ಮಾಡಲು ಬಯಸುತ್ತಾಳೆ ಎಂದು ನಾನು ಭಾವಿಸಿದೆ.
ಅದಕ್ಕಾಗಿ, ನಾನು ಜವಾಬ್ದಾರಳೆಂದು ಭಾವಿಸಿದೆ ಮತ್ತು ಇದೆಲ್ಲದರ ಬಗ್ಗೆ ನಾನು ಅಂದೇ ಒಂದು ಸ್ಪಷ್ಟವಾದ ನಿಲುವನ್ನು ತೆಗೆದುಕೊಂಡೆ. ಕಳೆದ 3-4 ವರ್ಷಗಳಲ್ಲಿ ನಾನು 6 ಐಟಂ ಸಾಂಗ್ ಗಳನ್ನು ನಿರಾಕರಿಸಿದ್ದೇನೆ” ಎಂದು ಹೇಳಿದ್ದಾರೆ.
ಕಂಗನಾ-ಹೃತಿಕ್ ಸಂಬಂಧ ಹಾಳಾಗಿದ್ದು ಹೇಗೆ?
2013 ರಲ್ಲಿ ಬಿಡುಗಡೆಯಾದ ‘ಕ್ರಿಶ್ 3’ ಹಿಂದಿ ಚಿತ್ರದಲ್ಲಿ ಕಂಗನಾ ಮತ್ತು ಹೃತಿಕ್ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ನಂತರ ಒಂದು ಸಂದರ್ಶನದಲ್ಲಿ ನಟ ಹೃತಿಕ್ ಅವರನ್ನು ತನ್ನ 'ಸಿಲ್ಲಿ ಎಕ್ಸ್' ಎಂದು ಉಲ್ಲೇಖಿಸಿದ ನಂತರ ಹೃತಿಕ್ ನಟಿಯ ವಿರುದ್ಧ ಕಾನೂನು ಪ್ರಕರಣ ದಾಖಲಿಸಿದ್ದರು.
ಅದರ ನಂತರ ಅವರ ಸಂಬಂಧವು ಹದಗೆಟ್ಟಿತು. ಹೃತಿಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರೆ, ಇಬ್ಬರೂ 2014 ರಲ್ಲಿ ಪ್ರಣಯ ಸಂಬಂಧ ಹೊಂದಿದ್ದರು ಅಂತ ನಟಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ